Carvaan GX01: Saregama ಕಂಪೆನಿಯಿಂದ ಹೊಸ ಇಯರ್‌ಫೋನ್ ಲಾಂಚ್!
ಈಗಾಗ್ಲೆ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ವೈವಿಧ್ಯ ಬಗೆಯ ಇಯರ್‌ಫೋನ್‌ಗಳು ಲಭ್ಯ ಇವೆ. ಸ್ಮಾರ್ಟ್‌ಫೊನ್‌ಗಳ ಭರಾಟೆ ಹೆಚ್ಚಾದಷ್ಟು ಇಯರ್‌ಫೋನ್‌ಗಳ ಮಾರುಕಟ್ಟೆ ಕೂಡ ವಿಸ್ತಾರವಾಗುತ್ತಲೇ ಇದೆ. ಇದೀಗ Saregama ಕಂಪೆನಿ ಕಾರ್ವಾನ್ ಬ್ರಾಂಡ್‌ನ ಕಾರ್ವಾನ್ GX01 ಇಯರ್‌ಫೋನ್‌ಗಳನ್ನ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದ್ದು, ಈ ಇಯರ್‌ಫೋನ್ ಭಾರತದಲ್ಲಿ 1,599,ರೂ ಬೆಲೆಯನ್ನ ಹೊಂದಿದೆ.

ಹೌದು, Saregama ಕಂಪೆನಿಯ ಕಾರ್ವಾನ್GX01 ಇಯರ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಹೊಸ ವಿನ್ಯಾಸದ ಈ ಇಯರ್‌ಫೋನ್ ಮಾರುಕಟ್ಟೆಯಲ್ಲಿ ಸೌಂಡ್ ಮಾಡುವ ಸೂಚನೆ ನೀಡಿದೆ. ಈ ಇಯರ್‌ಫೋನ್‌ಗಳು Saregama ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದ್ದು, ಆಸಕ್ತ ಖರೀದಿದಾರರು ಇತರೆ ಮಾರಾಟ ಮಳಿಗೆಗಳ ಮೂಲಕವೂ ಖರೀದಿಸಬಹುದಾಗಿದೆ. ಅಲ್ಲದೆ ಈ ಹೊಸ ಕಾರ್ವಾನ್ GX01 ವೈರ್ಡ್ ಇಯರ್‌ಫೋನ್‌ಗಳನ್ನು ನಿರ್ದಿಷ್ಟವಾದ ವರ್ಧಿತ ಆರಲ್ ಅನುಭವ ನೀಡುವ ನಿಟ್ಟಿನಲ್ಲಿ ವಿನ್ಯಾಸ ಗೊಳಿಸಲಾಗಿದೆ ಎಂದು ಕಂಪೆನಿ ಹೇಳಿದೆ.

ಇನ್ನು ಈ ಹೊಸ ಇಯರ್‌ಫೋನ್‌ಗಳು 14.2mm ಸೌಂಡ್ ಡ್ರೈವರ್, ಕಾರ್ವಾನ್ ಸಿಗ್ನೇಚರ್ ಸೌಂಡ್ ಅನ್ನು ಹೊಂದಿವೆ. ಅಲ್ಲದೆ ಅತ್ಯುತ್ತಮವಾದ ಸೌಂಡ್ ಸಿಸ್ಟಂ ಅನ್ನು ಹೊಂದಿದ್ದು, ಈ ಇಯರ್‌ಫೋನ್‌ಗಳ ಮೈಕ್ರೊಫೋನ್ ಕ್ರಿಸ್ಟಲ್ ಕ್ಲಿಯರ್ ಆಡಿಯೊವನ್ನು ನೀಡಲಿದೆ ಎಂದು ಹೇಳಲಾಗಿದೆ. ಇದು ಹೊಸ ಮಾದರಿಯ ವಿನ್ಯಾದ ವರ್ಗಕ್ಕೆ ಸೇರುವ ಇಯರ್‌ಫೋನ್ ಆಗಿದ್ದು ಎಲ್ಲಾ ವಯೋಮಾನದವರನ್ನು ಆಕರ್ಷಿಸುತ್ತದೆ ಎಂದು Saregama ಕಂಪೆನಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ಮೆಹ್ರಾ ತಿಳಿಸಿದ್ದಾರೆ.

ಈ ಇಯರ್ ಫೋನ್ ವೈ-ಫೈ ಸಂಪರ್ಕವನ್ನು ಬೆಂಬಲಿಸಲಿದ್ದು, 150 ಕ್ಕೂ ಹೆಚ್ಚು ಆಡಿಯೊ ಸ್ಟೇಷನ್‌ಗಳಿಗೆ ಅವಕಾಶ ನೀಡಲಿದೆ. ಅಲ್ಲದೆ ಇದು ಭಕ್ತಿ, ಮನರಂಜನೆ, ಸಂಗೀತ, ಆರೋಗ್ಯ, ಮಕ್ಕಳು, ಕ್ರೀಡೆ, ಸುದ್ದಿ ಮತ್ತು ಜೀವನ ಶೈಲಿಯಂತಹ ಇತರೆ ಎಲ್ಲಾ ಪ್ರಕಾರಗಳನ್ನು ಹೊಂದಿದ್ದು, ಎಲ್ಲಾ ವಿಭಾಗಕ್ಕೂ ತನ್ನದೇ ಆದ ಮಹತ್ವವನ್ನ ನೀಡಿದೆ. ಇನ್ನು ವೈ-ಫೈ ಆಧಾರಿತ ಆಡಿಯೋ ಸ್ಟೇಷನ್‌ಗಳನ್ನ ಆನಂದಿಸಲು ಗ್ರಾಹಕರು Saregama ಕಾರ್ವಾನ್ ಅಪ್ಲಿಕೇಶನ್ ಬಳಸಿ ಕಾರ್ವಾನ್ ಅನ್ನು ಯಾವುದೇ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಿಸಬಹುದಾಗಿದೆ.

ಇನ್ನು ಕಾರ್ವಾನ್ ಬ್ರಾಂಡ್‌ನ ಇಯರ್‌ಫೊನ್ ಉತ್ತಮಧ್ವನಿ ಸ್ಪಷ್ಟತೆ, ಸಂಗೀತದ ಮಾದುರ್ಯವನ್ನ ಆನಂದಿಸುವ ಅವಕಾಶವನ್ನ ನೀಡಲಿದ್ದು, ಸದ್ಯ ಅಸ್ತಿತ್ವದಲ್ಲಿರುವ ಇತರೆ ಕಂಪೆನಿಗಳ ಇಯರ್‌ಫೋನ್‌ಗಳಿಗೆ ಬಾರಿ ಪೈಪೋಟಿ ನೀಡಲಿದೆ ಎಂದು ಹೇಳಲಾಗ್ತಿದೆ. ಈ ಹಿಂದೆ Saregama ಕಂಪೆನಿ 2019 ರಲ್ಲಿ ಕಾರ್ವಾನ್ 2.0. ಸ್ಪೀಕರ್ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿತ್ತು. ಇದೀಗ ಇಯರ್‌ಫೋನ್ ಬಿಡುಗಡೆ ಮಾಡಿರುವುದರಿಂದ ಇನ್ನೂ ಹೆಚ್ಚಿನ ಸೌಂಡ್ ಮಾಡಲಿದೆ ಎಂದು ಹೇಳಲಾಗ್ತಿದೆ.

ಸದ್ಯ ಈ ಇಯರ್‌ಫೋನ್‌ಗಳ ಸ್ಪೀಕರ್ ಪುನರ್ ಭರ್ತಿ ಮಾಡಬಹುದಾದ ಬ್ಯಾಟರಿ ಪ್ಯಾಕ್‌ಆಪ್ ಅನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 5-6 ಗಂಟೆಗಳ ಬಾಳಿಕೆಯನ್ನು ನೀಡುತ್ತದೆ. ಇನ್ನು ಈ ಇಯರ್‌ಫೋನ್‌ಗಳನ್ನ ಕಪ್ಪು ಮತ್ತು ಬಿಳಿ ಸೇರಿದಂತೆ ಎರಡು ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದಾಗಿದ್ದು, ಕಾರ್ವಾನ್GX01 ಮೂರು ವಿಭಿನ್ನ ಗಾತ್ರದ ಇಯರ್‌ಬಡ್‌ಗಳೊಂದಿಗೆ ಬರುತ್ತದೆ.


Click it and Unblock the Notifications








