ಅಮೀರ್ ಖಾನ್ ಗಿಂತಾ "ಸತ್ಯಮೇವ ಜಯತೆ" ಹಿಟ್

By Varun
|
ಅಮೀರ್ ಖಾನ್ ಗಿಂತಾ

ಬಾಲಿವುಡ್ ನ ಖ್ಯಾತ ತಾರೆ, Mr. Perfectionistಅಮೀರ್ ಖಾನ್, ಏನೇ ಮಾಡಿದರೂ ಸುದ್ದಿಯಾಗುತ್ತೆ, ಹಿಟ್ ಆಗುತ್ತೆ. ಕೀರ್ತಿ ಶಿಖರದ ಉತ್ತುಂಗದಲ್ಲಿ ಇರುವಅಮೀರ್ ಖಾನ್ ಈಗ ಮುಟ್ಟಿದ್ದೆಲ್ಲವೂ ಚಿನ್ನ. ತಮ್ಮ ಇಮೇಜ್ ಅನ್ನು ಸಮರ್ಥವಾಗಿ ಬಳಸಿಕೊಳ್ಳುವಅಮೀರ್ ಖಾನ್, ಸಾಮಾಜಿಕ ಜವಾಬ್ದಾರಿ, ಕಳಕಳಿ ಹೊಂದಿರುವ ಬೆರಳೆಣಿಕೆಯಷ್ಟು ನಟರಲ್ಲಿ ಒಬ್ಬರು. ಇದಕ್ಕೆ ಸಾಕ್ಷಿ,ಅವರು ನಟಿಸಿದIncredible India ಜಾಹೀರಾತು ( ಭಾರತಕ್ಕೆ ಬರುವ ಪ್ರವಾಸಿಗರನ್ನು ಹೇಗೆ ನಡೆಸಿಕೊಳ್ಳಬೇಕು ಎಂದು ಬುದ್ಧಿವಾದ ಹೇಳುವಜಾಹೀರಾತು).

ಈಗ ಭಾರತದಲ್ಲಿರುವ ಸಾಮಾಜಿಕ ಸಮಸ್ಯೆಗಳಬಗೆಗೆ ಕುರಿತಾದ, ಅತೀ ಹೆಚ್ಚು TRP ರೇಟಿಂಗ್ ಹೊಂದಿರುವ ಕಾರ್ಯಕ್ರಮ " ಸತ್ಯಮೇವ ಜಯತೆ" ಕೂಡಾ ಇದೇ ರೀತಿಯದಾಗಿದ್ದು, ತಮ್ಮ ಬ್ರ್ಯಾಂಡ್ ವ್ಯಾಲ್ಯೂ ಬಳಸಿಕೊಂಡು ಶುರು ಮಾಡಿದ ಈ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಹಿಟ್ ಆಗಿದೆ ಎಂದರೆ, ಈ ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗಿ, ಅದನ್ನು ತೆಗೆಯುವ ಹೊತ್ತಿಗೆ 30 ಸಾವಿರ ಹಿಟ್ಸ್ ಗಳನ್ನು ಕಂಡಿತ್ತು.

ಈಗ ಅಂತರ್ಜಾಲದಲ್ಲಿ "ಸತ್ಯಮೇವ ಜಯತೆ" ಕಾರ್ಯಕ್ರಮ ಎಷ್ಟರ ಮಟ್ಟಿಗೆ ಕ್ರೇಜ್ ಹುಟ್ಟಿಸಿದೆ ಎಂದರೆ, ಖ್ಯಾತಿಯಲ್ಲಿ ಇದು, ಇದರ ನಿರೂಪಕಅಮೀರ್ ಖಾನ್ ನನ್ನೇ ಮೀರಿಸಿದೆ. ಗೂಗಲ್ ಇಂಡಿಯಾದ ಅಂಕಿ ಅಂಶಗಳ ಪ್ರಕಾರ ಅಂತರ್ಜಾಲಿಗಳುಅಮೀರ್ ಖಾನ್ ನ ಹೆಸರನ್ನು ಗೂಗಲ್ ಸರ್ಚ್ ಮಾಡುವುದಕ್ಕಿಂತಾ ಹೆಚ್ಚಾಗಿ "ಸತ್ಯಮೇವ ಜಯತೆ" ಅನ್ನೇ ಹೆಚ್ಚಾಗಿ ಹುಡುಕುತ್ತಾರಂತೆ!

ಕಳೆದ 7 ದಿನಗಳ ಗೂಗಲ್ ಟ್ರೆಂಡ್ಸ್ ಪ್ರಕಾರ ಈ ಕಾರ್ಯಕ್ರಮದ ಬಗ್ಗೆ ಅತೀ ಹೆಚ್ಚು ಗೂಗಲ್ ಸರ್ಚ್ ಮಾಡುವ ಜನರಲ್ಲಿ ಮಧ್ಯಪ್ರದೇಶದ ಜನರೇ ಜಾಸ್ತಿಯಂತೆ. ಅದರ ನಂತರದ ಸ್ಥಾನದಲ್ಲಿ ಇರುವುದು ರಾಜಸ್ಥಾನ ಹಾಗು ಗುಜರಾತ್ ರಾಜ್ಯದ ಜನತೆ.

ಇಂತಹ ಕಾರ್ಯಕ್ರಮ, ಅಂತರ್ಜಾಲದ ಖ್ಯಾತಿಯಲ್ಲಿಅಮೀರ್ ಖಾನ್ ನನ್ನೇ ಮೀರಿಸಿದೆ ಎಂದರೆ, ಇದರ ಮೌಲ್ಯವನ್ನು, ಪ್ರಯೋಜನವನ್ನು ನೀವೇ ಅಂದಾಜು ಮಾಡಬಹುದು. ಹೀಗಾಗಿ ನಮ್ಮ ಕರ್ನಾಟಕದ ಜನತೆಯೂ ಯಾವುದೇ ಅಡೆತಡೆ ಇಲ್ಲದೆ ಈ ಕಾರ್ಯಕ್ರಮವನ್ನು ಕನ್ನಡದಲ್ಲೇ ನೋಡಿ ಪ್ರಯೋಜನ ಪಡೆಯುವ ದಿನ ಯಾವಾಗ ಬರುತ್ತೆ ಎಂಬುದೇ ನನ್ನ ಪ್ರಶ್ನೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X