ಇನ್ಮುಂದೆ ಪತ್ನಿಗೆ ವಿಚ್ಛೇದನ ನೀಡಬೇಕೆಂದರೆ ಪುರುಷರು 'ಟೆಕ್ಸ್ಟ್ ಮೆಸೇಜ್' ಮಾಡಬೇಕು!!
ಇದೇ ಭಾನುವಾರದಿಂದ ಸೌದಿ ಅರೇಬಿಯಾದಲ್ಲಿ ನೂತನ ಕಾನೂನು ಒಂದನ್ನು ಜಾರಿಗೊಳಿಸಿದ್ದು, ಸೌದಿ ಅರೇಬಿಯಾದಲ್ಲಿ ಇನ್ಮುಂದೆ ಪತ್ನಿಗೆ ವಿಚ್ಛೇದನ ನೀಡಬೇಕೆಂದರೆ ಪುರುಷರು ಲಿಖಿತ ಸಂದೇಶದ (ಟೆಕ್ಸ್ಟ್ ಮೆಸೇಜ್) ಮೂಲಕ ಮಾಹಿತಿ ನೀಡಬೇಕು ಎಂದು ಸರ್ಕಾರ ಹೊಸ ಕಾನೂನು ರೂಪಿಸಿದೆ. ಹಾಗಾಗಿ, ಅಲ್ಲಿನ ಜನ ಇನ್ಮುಂದೆ ವಿಚ್ಛೇದನಕ್ಕಾಗಿ ಮೆಸೇಜ್ ಮಾಡಲೇಬೇಕಿದೆ.!
ಹೌದು, ಇದು ತಮಾಷೆಯಾಗಿ ಕಂಡರೂ ಸಹ ನೂತನ ಕಾನೂನು ಸೌದಿಯಲ್ಲಿ ಜಾರಿಗೆ ಬಂದಿದೆ. ಇನ್ಮುಂದೆ ಪತ್ನಿಗೆ ವಿಚ್ಛೇದನ ನೀಡಬೇಕೆಂದರೆ ಅಲ್ಲಿನ ಪುರುಷರು ಲಿಖಿತ ಸಂದೇಶ ಕಳುಹಿಸಲೇಬೇಕಾದ ಕಾನೂನನ್ನು ಜಾರಿಗೊಳಿಸಲಾಗಿದೆ. ಅಲ್ಲಿನ ಮಹಿಳೆಯರಿಗೆ ತಮ್ಮ ವಿವಾಹ ಸಂಬಂಧ ಕೊನೆಗೊಂಡಿದ್ದರ ಬಗ್ಗೆ ಮಾಹಿತಿಗಾಗಿ ಇಂತಹ ಕಾನೂನನ್ನು ತರಲಾಗಿದೆ.

ಸೌದಿ ಅರೇಬಿಯಾ ದೇಶದಲ್ಲಿ ಮಹಿಳೆಯರಿಗೆ ತಮ್ಮ ವಿವಾಹ ಸಂಬಂಧ ಕೊನೆಗೊಂಡಿದ್ದರ ಬಗ್ಗೆ ಯಾವ ಮಾಹಿತಿ ಕೂಡ ಇರುತ್ತಿರಲಿಲ್ಲವಾದುದರಿಂದ ಇಂತಹ ಕಾನೂನನ್ನು ತರಲಾಗಿದೆ ಎಂದು ಅಲ್ಲಿನ ಸರ್ಕಾರ ಸ್ಪಷ್ಟಪಡಿಸಿಸಿದೆ. ಇನ್ಮುಂದೆ ನಾಗರೀಕರು ತಮ್ಮ ವೈವಾಹಿಕ ಸ್ಥಿತಿಗತಿ ಬಗ್ಗೆ ತಿಳಿದುಕೊಳ್ಳಲು ಸಚಿವಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಹೇಳಿದೆ.
ಇತ್ತೀಚೆಗೆ, ಮಹಿಳೆಯರು ವಾಹನ ಓಡಿಸುವುದಕ್ಕೆ ಇದ್ದ ನಿರ್ಬಂಧವನ್ನು ತೆಗೆದುಹಾಕಿದ್ದ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸಾಂಪ್ರದಾಯಿಕ ದೇಶದಲ್ಲಿ ಮಹಿಳಾ ಹಕ್ಕುಗಳನ್ನು ರಕ್ಷಿಸುವ ಕುರಿತು ಮಾತನಾಡಿದ್ದರು. ಅದರಂತೆ ನ್ಯಾಯಾಲಯಕ್ಕೆ ತೆರಳಿ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದು ಎಂದು ಸೌದಿ ಸಚಿವಾಲಯ ತಿಳಿಸಿದೆ.

ಬಹುತೇಕ ಅರಬ್ ದೇಶಗಳಲ್ಲಿ ಪುರುಷರು ತಮ್ಮ ಪತ್ನಿಗೆ ಯಾವುದೇ ಮಾಹಿತಿ ನೀಡದೇ ವಿಚ್ಛೇದನ ನೀಡುತ್ತಾರೆ. ತಾವು ವಿಚ್ಛೇದನ ಪಡೆದಿರುವ ಬಗ್ಗೆ ಅಲ್ಲಿನ ಮಹಿಳೆಯರಿಗೆ ಕನಿಷ್ಠ ಮಾಹಿತಿ ಯಾದರೂ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇದೊಂದು ಸಣ್ಣ ಹೆಜ್ಜೆ ಇಟ್ಟಿದೆ. ಅದು ಸರಿಯಾದ ದಿಕ್ಕಿನಲ್ಲಿದೆ ಎಂದು ಗ್ಲೋಬಲ್ ರೈಟ್ಸ್ ಗ್ರೂಪ್‌ನ ಸಾವುದ್ ಅಬು ದಯ್ಯೆಹ್ ಅವರು ಹೇಳಿದ್ದಾರೆ.


Click it and Unblock the Notifications








