Home
ಸುದ್ದಿಜಾಲ

OTP ವಂಚನೆಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆ ಸಂದೇಶ ನೀಡಿದ SBI ಬ್ಯಾಂಕ್‌ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ಈ ಸ್ಟೋರಿಯನ್ನು ಓದಲೇಬೇಕು. ಎಸ್‌ಬಿಐ ತನ್ನ ಗ್ರಾಹಕರಿಗೆ ಅನಧಿಕೃತ ವಹಿವಾಟು ನಿಲ್ಲಿಸುವುದಕ್ಕಾಗಿ ಹೊಸ ಸೂಚನೆಯನ್ನು ನೀಡಿದೆ. ನಿಮಗೆ ಹಣದ ಅವಶ್ಯಕತೆ ಇದ್ದು ಎಸ್‌ಬಿಐ ಬ್ಯಾಂಕ್‌ ATM ನಿಂದ ಹಣವನ್ನು ಡ್ರಾ ಮಾಡುವ ವಿಚಾರದಲ್ಲಿ ಹೊಸ ಅಪ್ಡೇಟ್‌ ಮಾಹಿತಿಯನ್ನು ನೀಡಿದೆ. SBI ತನ್ನ ಖಾತೆದಾರರನ್ನು ರಕ್ಷಿಸಲು OTP ಆಧಾರಿತ ವಿಥ್‌ ಡ್ರಾ ವ್ಯವಸ್ಥೆಯನ್ನು ಕಳೆದ ವರ್ಷವೇ ಪರಿಚಯಿಸಿದೆ. ಆದರೂ ಈ ವಿಚಾರದ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಅದನ್ನು ತಿಳಿಸುವುದಕ್ಕಾಗಿ ಎಸ್‌ಬಿಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ ಮೂಲಕ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಎಸ್‌ಬಿಐ

ಹೌದು, ಎಸ್‌ಬಿಐ ತನ್ನ ಗ್ರಾಹಕರಿಗೆ ಹೊಸ ಸೂಚನೆಯನ್ನು ನೀಡಿದೆ. OTP ಆಧಾರಿತ ಮನಿ ವಿಥ್‌ ಡ್ರಾ ವ್ಯವಸ್ಥೆಯು ಹೇಗೆ ಕಾರ್ಯನಿರ್ವಹಿಸುತ್ತದೆ ಅನ್ನೊದರ ಬಗ್ಗೆ SBI ತನ್ನ ಗ್ರಾಹಕರಿಗೆ ಮಾಹಿತಿ ನೀಡಿದೆ. ಹಣ ಡ್ರಾ ಮಾಡುವಾಗ ನಡೆಯುವ ವಂಚನೆ ಪ್ರಕರಣಗಳನ್ನು ತಡೆಯುವುದಕ್ಕಾಗಿ ಹೊಸ ಹೆಜ್ಜೆಯನ್ನು ಎಸ್‌ಬಿಐ ಇಟ್ಟಿದೆ. ನೀವು ಹಣ ಡ್ರಾ ಮಾಡುವ ಸಮಯದಲ್ಲಿ ಹೇಗೆ ನಡೆದುಕೊಳ್ಳಬೇಕು ಅನ್ನೊ ಮಾಹಿತಿಯನ್ನು ಸಹ ನೀಡಿದೆ. ಹಾಗಾದ್ರೆ ಎಸ್‌ಬಿಐ ತನ್ನ ಗ್ರಾಹಕರಿಗೆ ನೀಡಿದ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಸ್‌ಬಿಐ

ಎಸ್‌ಬಿಐ ತನ್ನ ಗ್ರಾಹಕರಿಗೆ ಒಟಿಪಿ ಆಧಾರತಿ ಸೇವೆಯಲ್ಲಿ ಹೇಗೆ ಹಣ ಡ್ರಾ ಮಾಡುವುದು ಅನ್ನೊದನ್ನ ತಿಳಿಸಿದೆ. ಮೊದಲಿಗೆ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುವುದು ಮತ್ತು ಗ್ರಾಹಕರು ATM ನಿಂದ ಹಣವನ್ನು ಪಡೆಯಲು ಈ OTP ಅನ್ನು ಬಳಸಬಹುದು ಎಂದು ಬ್ಯಾಂಕ್ ತಿಳಿಸಿದೆ. OTP ನಾಲ್ಕು-ಅಂಕಿಯ ಸಂಖ್ಯೆಯಾಗಿದ್ದು ಅದು ಒಂದೇ ವಹಿವಾಟಿಗೆ ಬಳಕೆದಾರರನ್ನು ದೃಢೀಕರಿಸುತ್ತದೆ. ಈ ವಿಧಾನದಿಂದ ಅಕ್ರಮವಾಗಿ ಹಣ ವಿಥ್‌ ಡ್ರಾ ಮಾಡುವುದನ್ನು ತಡೆಯಲಿದೆ.

ಎಸ್‌ಬಿಐ

ಇನ್ನು ಈ OTP ಆಧಾರಿತ ಮನಿ ವಿಥ್‌ ಡ್ರಾ ಸೇವೆ ಎಸ್‌ಬಿಐ ಗ್ರಾಹಕರು ಎಸ್‌ಬಿಐ ಎಟಿಎಂಗಳಿಂದ 10,000ರೂ. ಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡುವಾಗ ಅನ್ವಯಿಸಲಿದೆ. ಈ ಸೌಲಭ್ಯವು ಕಳೆದ ವರ್ಷ ಜನವರಿಯಿಂದಲೇ ಸಕ್ರಿಯವಾಗಿದೆ. ಆದರೂ ಹೆಚ್ಚಿನ ಜನರು ಈ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡಿಲ್ಲ. ಆದರಿಂದ ಎಸ್‌ಬಿಐ ತನ್ನ ಗ್ರಾಹರಿಗೆ ಎಚ್ಚರಿಕೆಯ ಸಂದೇಶಗಳನ್ನು ಆಗಾಗ ಕಳುಹಿಸುತ್ತಿರುತ್ತದೆ. ಈ ಮೂಲಕ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಗಮನವನ್ನು ನೀಡುತ್ತಾ ಬಂದಿದೆ. ವಂಚನೆಗಳು ಮತ್ತು ಅದನ್ನು ತಪ್ಪಿಸುವ ಮಾರ್ಗಗಳ ಬಗ್ಗೆ ತನ್ನ ಗ್ರಾಹಕರಿಗೆ ತಿಳಿಸುವಲ್ಲಿ ಮತ್ತು ಎಚ್ಚರಿಸುವಲ್ಲಿ ಎಸ್‌ಬಿಐ ತುಂಬಾ ಸಕ್ರಿಯವಾಗಿದೆ.

ಎಸ್‌ಬಿಐ

ಇದಲ್ಲದೆ ಎಸ್‌ಬಿಐ ಬ್ಯಾಂಕ್‌ನಲ್ಲಿನ ವಹಿವಾಟುಗಳ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರೂ ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ವಿನಂತಿಸಿದೆ. ಎಸ್‌ಬಿಐ ಕಸ್ಟಮರ್‌ ಕೇರ್‌ ಹೆಸರಿನಲ್ಲಿ ಬರುವ ಕರೆಗಳ ಬಗ್ಗೆ ಎಚ್ಚರದಿಂದಿರಿ. ಏಕೆಂದರೆ ಕಸ್ಟಮರ್‌ ಕೇರ್‌ ಸಂಖ್ಯೆಗಳ ಬಗ್ಗೆ ದೃಡೀಕರಣಕ್ಕಾಗಿ SBI ಯ ಅಧಿಕೃತ ವೆಬ್‌ಸೈಟ್ ಅನ್ನು ನೋಡುವುದು ಸೂಕ್ತ. ಅಲ್ಲದೆ ನಿಮ್ಮ ಗೌಪ್ಯ ಬ್ಯಾಂಕಿಂಗ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಹೋಗಬಾರದು ಎಂದು ವಿನಂತಿಸಿದೆ. ನಿಮಗೆ ಮಾಹಿತಿ ಬೇಕಿದ್ದರೆ SBI ಯ ಅಧಿಕೃತ ವೆಬ್‌ಸೈಟ್ ಅನ್ನು ಲಿಂಕ್ https://sbi.co.in/. ಅನ್ನು ಕ್ಲಿಕ್ ಮಾಡುವ ಮೂಲಕ ಪ್ರವೇಶಿಸಬಹುದು ಎಂದು ಸೂಚಿಸಿದೆ.

ಎಸ್‌ಬಿಐ

ಇನ್ನು ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಎಸ್‌ಬಿಐ ಬ್ಯಾಂಕ್‌ ದೇಶದಲ್ಲಿ ನಾಲ್ಕನೇ ಮಾರುಕಟ್ಟೆ ಪಾಲನ್ನು ಹೊಂದಿರುವ ಅತಿದೊಡ್ಡ ಬ್ಯಾಂಕ್ ಆಗಿದೆ. ದೇಶದಲ್ಲಿ ತನ್ನ 11 ಅಂಗಸಂಸ್ಥೆಗಳ ಮೂಲಕ ಬ್ಯಾಂಕ್‌ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇದರಲ್ಲಿ ಎಸ್‌ಬಿಐ ಅಂಗಸಂಸ್ಥೆಗಳಾದ SBI ಜನರಲ್ ಇನ್ಶೂರೆನ್ಸ್, SBI ಲೈಫ್ ಇನ್ಶುರೆನ್ಸ್, SBI ಮ್ಯೂಚುಯಲ್ ಫಂಡ್, SBI ಕಾರ್ಡ್, ಗಳು ಸೇರಿವೆ. ಇದಲ್ಲದೆ ಬ್ಯಾಂಕ್ ಜಾಗತಿಕವಾಗಿ 32 ದೇಶಗಳಲ್ಲಿ 233 ಕಚೇರಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. ಸದ್ಯ ಎಸ್‌ಬಿಐ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹೊಸ ಸೂಚನೆಗಳು ಹಾಗೂ ಸುದಾರಿತ ಸೇವೆಗಳನ್ನು ನೀಡುವ ಮೂಲಕ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಿದೆ.

Best Mobiles in India

English summary
SBI OTP fraud alert has just been released by the lender. SBI has alerted its customers and has asked them to visit the official website.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+