ಎಸ್‌ಬಿಐ ಬ್ಯಾಂಕ್‌ ಗ್ರಾಹಕರೇ ಈ ಸ್ಟೋರಿ ಓದಿರಿ! ಎಸ್‌ಬಿಐ ನೀಡಿದ ಸಂದೇಶ ಏನು!

|

ಇತ್ತೀಚಿನ ದಿನಗಳಲ್ಲಿ ಬ್ಯಾಕ್‌ ಖಾತೆಯ ಕೆವೈಸಿ ಪರಿಶೀಲನೆಯ ನೆಪದಲ್ಲಿ ನಿಮ್ಮ ಖಾತೆಯ ಮಾಹಿತಿ ಕದಿಯುವ ಸ್ಕ್ಯಾಮ್‌ಗಳು ನಡೆಯುತ್ತಲೇ ಇದೆ. ಇದೇ ಕಾರಣಕ್ಕೆ ಇದೀಗ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಆನ್‌ಲೈನ್ ಆಲರ್ಟ್‌ ಕಳುಹಿಸಿದೆ. ನಮ್ಮ ಎಲ್ಲಾ ಖಾತೆದಾರರು ಸುರಕ್ಷಿತವಾಗಿರಲು ಗಮನಹರಿಸಬೇಕು ಎಂದು ಹೇಳಿದೆ. ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ಯಾವುದೇ ತಪ್ಪುಗಳು ತುಂಬಾ ದುಬಾರಿಯಾಗಬಹುದು. ಖಾತೆದಾರರು ಏನು ಮಾಡಬಾರದು ಎಂಬುದರ ಬಗ್ಗೆ ಎಸ್‌ಬಿಐ ಮಾಹಿತಿ ನೀಡಿದೆ.

ಎಸ್‌ಬಿಐ

ಹೌದು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಆನ್‌ಲೈನ್ ಸೇವೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿವೆ. ಲಾಕ್‌ಡೌನ್‌ಗಳು ಮತ್ತು ಹಣವನ್ನು ನಿರ್ವಹಿಸಲು ಹೆಚ್ಚಿನ ಸಂಖ್ಯೆಯ ಜನರು ತಮ್ಮ ಹಣಕಾಸಿನ ವಹಿವಾಟುಗಳನ್ನು ನಡೆಸಲು ಯುಪಿಐ ಪಾವತಿಯಂತಹ ಆನ್‌ಲೈನ್‌ ಸೇವೆಗಳ ಮೊರೆ ಹೋಗಿದ್ದಾರೆ. ಇದೇ ಸಮಯದಲ್ಲಿ ಎಸ್‌ಬಿಐ ಹೆಸರಿನಲ್ಲಿ ನಕಲಿ ಆಪ್‌ಗಳು, ಲಿಂಕ್‌ಗಳ ಮೂಲಕ ಆನ್‌ಲೈನ್‌ ಬ್ಯಾಂಕಿಂಗ್‌ ಉಪಯೋಗಿಸುವ ಖಾತೆದಾರರಿಗೆ ಮೋಸ ಮಾಡುತ್ತಿದ್ದಾರೆ. ಹಾಗಾದ್ರೆ ಗ್ರಾಹಕರ ಸುರಕ್ಷತೆಗಾಗಿ ಎಸ್‌ಬಿಐ ಗ್ರಾಹಕರಿಗೆ ಯಾವ ಸಂದೇಶ ನೀಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಸ್‌ಬಿಐ

ಎಸ್‌ಬಿಐ ಆನ್‌ಲೈನ್ ತನ್ನ ಬ್ಯಾಂಕ್ ಖಾತೆದಾರರಿಗೆ ಯಾವುದೇ ಸಂದರ್ಭದಲ್ಲೂ ಯಾಮಾರದಂತೆ ಎಚ್ಚರಿಕೆ ನೀಡಿದೆ. ಕೆಲವು ಅಪರಿಚಿತ ವ್ಯಕ್ತಿಗಳು ವಾಟ್ಸಾಪ್, ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಅಥವಾ ಫೋನ್‌ನಲ್ಲಿ ನಿಮ್ಮ ಮಾಹಿತಿ ಕದಿಯಲು ಪ್ರಯತ್ನಿಸಬಹುದು ಆದರಿಂದ ಅವರು ಹೇಳಿದ ಹಾಗೇ ಮಾಡಬೇಡಿ. ಈ ರೀತಿ ಕಂಡುಬರುವ ಜನರು ನಿಮ್ಮ ಖಾತೆಯ ಹಣಕ್ಕೆ ಕನ್ನಹಾಕುವ ಸಾದ್ಯತೆ ಇರಲಿದೆ.

ಬ್ಯಾಂಕ್

ಅಲ್ಲದೆ ಖಾತೆದಾರರು ತಮ್ಮ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಯಾರೊಂದಿಗೂ ಹಚ್ಚಿಕೊಳ್ಳಬಾರದು. ಫೋನ್‌ ಮೂಲಕ, ಯಾವುದೇ ಎಸ್‌ಎಂಎಸ್‌ ಮೂಲಕ ಬ್ಯಾಂಕ್‌ ನಿಮ್ಮ ಕೆವೈಸಿ ದಾಖಲಾತಿ ಕೇಳುವುದಿಲ್ಲ. ಒಂದು ವೇಳೆ ನೀವು ನಿಮ್ಮ ಖಾತೆಯ ಮಾಹಿತಿಯನ್ನು ಅನಾಮಿಕ ವ್ಯಕ್ತಿ ಕೇಳಿದ ತಕ್ಷಣ ನೀಡಿದರೆ ಪಾಸ್‌ವರ್ಡ್ ಅಥವಾ ಒಟಿಪಿ ಸೇರಿದಂತೆ ರಹಸ್ಯವಾದ ಮಾಹಿತಿಯನ್ನು ನೀಡಿದರೆ, ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಎಸ್‌ಬಿಐ

ಇದಲ್ಲದೆ ಎಸ್‌ಬಿಐ ಟ್ವಿಟರ್‌ನಲ್ಲಿ ಕೂಡ ಆಲರ್ಟ್‌ ನೀಡಿದೆ. ವಂಚಕರ ಸರಳ ಮೋಡಸ್ ಕಾರ್ಯಾಚರಣೆಯನ್ನು ಎಸ್‌ಬಿಐ ಬಹಿರಂಗಪಡಿಸಿದೆ. ಬ್ಯಾಂಕ್‌ ಸಿಬ್ಬಂದಿಯ ಹೆಸರು ಹೇಳಿಕೊಂಡು ಖಾತೆದಾರರಿಂದ ಬ್ಯಾಂಕ್ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ನಿಮ್ಮ ವೈಯಕ್ತಿಕ ವಿವರಗಳನ್ನು ಪಡೆಯಲು ಮುಂದಾಗುತ್ತಾರೆ. ಈ ಮೂಲಕ ನಿಮ್ಮನ್ನು ಸುಲಭವಾಗಿ ಮೋಸ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಸೈಬರ್ ಅಪರಾಧಗಳನ್ನು ಇಲ್ಲಿ ವರದಿ ಮಾಡಿ: http://cybercrime.gov. ಸೈನ್. ಎಂದು ಹೇಳಿದೆ.

Best Mobiles in India

English summary
SBI online warning for account holders: People should become instantly aware that someone is looking to steal their personal bank details when they are approached online.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X