ಪಿಂಚಣಿದಾರರಿಗೆ ಗುಡ್‌ ನ್ಯೂಸ್‌ ನೀಡಿದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ!

|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಪಿಂಚಣಿ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಪಿಂಚಣಿದಾರರಿಗೆ ಸೇವೆ ನೀಡುವ ಎಸ್‌ಬಿಐ ಪಿಂಚಣಿ ಸೇವಾ ವೆಬ್‌ಸೈಟ್ ಅನ್ನು ಅಪ್ಡೇಟ್‌ ಮಾಡಿದೆ. ಎಸ್‌ಬಿಐ ಪಿಂಚಣಿ ವೆಬ್‌ಸೈಟ್‌ ಆಗಿರುವ ಪಿಂಚಣಿ ಸೇವಾ.ಎಸ್‌ಬಿಐ ಅನ್ನು ಪರಿಷ್ಕರಿಸಿದೆ. ಇದರಿಂದ ಪಿಂಚಣಿದಾರರು ತಮ್ಮ ಕೆಲಸವನ್ನು ವೇಗವಾಗಿ ಮಾಡಲು ನ್ಯಾವಿಗೇಟ್ ಮಾಡುವುದಕ್ಕೆ ಸುಲಭವಾಗಿದೆ. ಪಿಂಚಣಿದಾರರು ತಮ್ಮ ಕಾರ್ಯಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆದುಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಎಸ್‌ಬಿಐ

ಹೌದು, ಎಸ್‌ಬಿಐ ತನ್ನ ಗ್ರಾಹಕರಲ್ಲಿ ಪಿಂಚಣಿದಾರರಿಗೆ ಸಹಾಯ ಮಾಡಲು ಮುಂದಾಗಿದೆ. ಪಿಂಚಣಿಗೆ ಸಂಬಂಧಿಸಿದ ಸೇವೆಯಲ್ಲಿ ಆಗುತ್ತಿದ್ದ ದೋಷವನ್ನು ತಡೆಯುವುದಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಿಂಚಣಿ ಸೇವಾ ವೆಬ್‌ಸೈಟ್ ಅನ್ನು ಅಪ್ಡೇಟ್‌ ಮಾಡಿದೆ. ಈ ಮೂಲಕ ಎಲ್ಲಾ ಎಸ್‌ಬಿಐ ಖಾತೆದಾರರು ತಮ್ಮ ಪಿಂಚಣಿಯನ್ನು ಬ್ಯಾಂಕ್ ಮೂಲಕ ಡ್ರಾ ಮಾಡಿಕೊಳ್ಳುವುದಕ್ಕೆ ಬೇಕಾದ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಎಸ್‌ಬಿಐ ಹೊಸದಾಗಿ ಅಪ್ಡೇಟ್‌ ಮಾಡಿದ ಪಿಂಚಣಿ ಸೇವಾ ವೆಬ್‌ಸೈಟ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಎಸ್‌ಬಿಐ

ಎಸ್‌ಬಿಐ ತನ್ನ ಪಿಂಚಣಿ ಸೇವಾ ವೆಬ್‌ಸೈಟ್ ಅನ್ನು ಹೊಸದಾಗಿ ಅಪ್ಡೇಟ್‌ ಮಾಡಿರುವುದರಿಂದ ಬಳಕೆದಾರರು ಸುಲಭವಾಗಿ ನ್ಯಾವಿಗೇಟ್ ಮಾಡಬಹುದಾಗಿದೆ. ಈ ಹೊಸ ವೆಬ್‌ಸೈಟ್‌ನಲ್ಲಿ ಪಿಂಚಣಿದಾರರು ಮುಖಪುಟದಲ್ಲಿಯೇ ಎಲ್ಲಾ ಸೇವೆಗಳ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ, ನೀವು ಯಾವ ಕೆಲಸ ಬೇಕು ಅದನ್ನು ಮುಖಪುಟದಲ್ಲಿಯೇ ನೋಡಬಹುದು. ಬೇರೆ ಸೇವೆ ಪಡೆಯಲು ಸರ್ಚ್‌ ಮಾಡುವ ಬದಲು, ಎಲ್ಲಾ ಲಿಂಕ್‌ಗಳನ್ನು ಮುಖಪುಟದಲ್ಲಿಯೇ ಲಭ್ಯವಾಗಲಿದೆ. ಅದರಲ್ಲೂ ಪಿಂಚಣಿದಾರರಿಗೆ ಅತ್ಯಂತ ಅಗತ್ಯವಾದ, ಲೈಫ್ ಸರ್ಟಿಫಿಕೇಟ್ ಸಲ್ಲಿಕೆಗೆ ಸಂಬಂಧಿಸಿದ ಮಾಹಿತಿ ಸುಲಭವಾಗಿ ಸಿಗಲಿದೆ.

Penseseva.sbi ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸೇವೆಗಳು!

Penseseva.sbi ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸೇವೆಗಳು!

ಸೇವೆಗಳು
* ಪಿಂಚಣಿ ಸ್ಲಿಪ್ ಡೌನ್‌ಲೋಡ್‌ ಮಾಡುವ ಅವಕಾಶ
* ಪಿಂಚಣಿ ವಹಿವಾಟು ವಿವರ ತಿಳಿಯುವ ಅವಕಾಶ
* ಬಾಕಿ ಲೆಕ್ಕಾಚಾರದ ಹಾಳೆಯನ್ನು ಡೌನ್ಲೋಡ್ ಮಾಡಿ
* ಹೂಡಿಕೆಗೆ ಸಂಬಂಧಿಸಿದ ವಿವರಗಳು
* ಲೈಫ್‌ ಸರ್ಟಿಫಿಕೇಟ್‌ ಸ್ಟೇಟಸ್‌
* ಪೆನ್ಶನ್‌ ಪ್ರೊಫೈಲ್‌ ಡಿಟೈಲ್‌
ಈ ಎಲ್ಲಾ ವಿವರಗಳನ್ನು ನೀವು SBI ಪಿಂಚಣಿ ಸೇವೆ ಲಿಂಕ್‌ನಲ್ಲಿ ಕಾಣಬಹುದಾಗಿದೆ.

ಪಿಂಚಣಿದಾರರಿಗೆ ವಿಸ್ತೃತ ಪ್ರಯೋಜನ

ಪಿಂಚಣಿದಾರರಿಗೆ ವಿಸ್ತೃತ ಪ್ರಯೋಜನ

* ಪಿಂಚಣಿ ಪಾವತಿ ವಿವರಗಳೊಂದಿಗೆ ನಿಮ್ಮ ಮೊಬೈಲ್ ಫೋನ್‌ಗಳಿಗೆ SMS ಆಲರ್ಟ್‌ ಬರಲಿದೆ
* ಜೀವನ್ ಪ್ರಮಾಣ ಸೌಲಭ್ಯ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿದೆ
* ಇಮೇಲ್/ಪಿಂಚಣಿ ಪಾವತಿಸುವ ಶಾಖೆಯ ಮೂಲಕ ಪಿಂಚಣಿ ಸ್ಲಿಪ್ ದೊರೆಯಲಿದೆ
* ಎಸ್‌ಬಿಐ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಜೀವನ ಪ್ರಮಾಣಪತ್ರಗಳನ್ನು ಸಲ್ಲಿಸುವ ಸೌಲಭ್ಯ

ಕುಂದುಕೊರತೆ ಪರಿಹಾರ

ಕುಂದುಕೊರತೆ ಪರಿಹಾರ

* ಯಾವುದೇ ಸಮಸ್ಯೆಯ ಸಂದರ್ಭದಲ್ಲಿ, ಲಾಗ್ ಇನ್ ಮಾಡುವಾಗ, ನೀವು ಸಮಸ್ಯೆ ಇರುವ ಪೇಜ್‌ ಅನ್ನು ಸ್ಕ್ರೀನ್‌ಶಾಟ್ ಜೊತೆಗೆ support.ptensionseva@sbi.co.in ಗೆ ಇಮೇಲ್ ಕಳುಹಿಸಬಹುದು.
* UNHAPPY '' ಎಂದು 8008202020 ಸಂಖ್ಯೆಗೆ SMS ಕಳುಹಿಸಬಹುದು
* ಟೋಲ್‌ಫ್ರೀ ಸಂಖ್ಯೆ 18004253800/1800112211 ಬಳಸಿ 24X7 ಕಸ್ಟಮರ್‌ ಸರ್ವಿಸ್‌ ಮೂಲಕವೂ ಬ್ಯಾಂಕ್ ಅನ್ನು ಸಂಪರ್ಕಿಸಬಹುದು.
* ಬ್ಯಾಂಕ್ ವೆಬ್‌ಸೈಟ್‌ಗಳಾದ bank.sbi/dgm.customer@sbi.co.in/gm.customer@sbi.co.in ನಲ್ಲಿ ದೂರುಗಳನ್ನು ಸಲ್ಲಿಸಬಹುದು.

ಪ್ರೊಸೆಸ್‌

ಪ್ರೊಸೆಸ್‌

ಇನ್ನು ಪಿಂಚಣಿದಾರರು ಈ ವೆಬ್‌ಸೈಟ್‌ನಲ್ಲಿ ತಮ್ಮ ಪಿಂಚಣಿ ವಿವರಗಳನ್ನು ಲಾಗಿನ್ ಮಾಡಬಹುದು ಮತ್ತು ವೀಕ್ಷಿಸಬಹುದು. ಈ ಸೌಲಭ್ಯವನ್ನು ಪಡೆಯಲು, ಮೊದಲು ಪಿಂಚಣಿದಾರರ ಇಮೇಲ್ ಐಡಿಯನ್ನು ಪಿಂಚಣಿ ಅರ್ಜಿಯಲ್ಲಿ ನೋಂದಾಯಿಸಿರಬೇಕು. ಪಿಂಚಣಿ ಅರ್ಜಿಯಲ್ಲಿ ಪಿಂಚಣಿ ಖಾತೆಗೆ ಇ-ಮೇಲ್ ಐಡಿ ಅಪ್ಡೇಟ್‌ ಮಾಡಿದ ನಂತರ, ಪಿಂಚಣಿದಾರರು ಪಿಂಚಣಿ ಸೇವಾ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಲಾಗಿನ್ ಆದ ನಂತರ ಪಿಂಚಣಿದಾರರಿಗೆ ಪ್ರೊಫೈಲ್ ಡಿಟೇಲ್ಸ್, ಪ್ರಮಾಣಪತ್ರದ ವಿವರಗಳು, ವಹಿವಾಟುಗಳಿಗೆ ಕ್ರೆಡಿಟ್ ಮಾಡಲಾಗಿದೆ, ಬಾಕಿ ಲೆಕ್ಕಾಚಾರದ ಹಾಳೆ, ಪಿಂಚಣಿ ಸ್ಲಿಪ್, ನಮೂನೆ 16, ಹೂಡಿಕೆ ವಿವರಗಳು, ಎಲ್ಲಾ ವಿವರಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

Best Mobiles in India

English summary
State Bank of India has announced that a revamped SBI Pension Seva website, pensionseva.sbi, has been rolled out.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X