Just In
- 9 min ago
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- 53 min ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 1 hr ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 3 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
Don't Miss
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Movies
ನನ್ನ ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ: ಬಾಯ್ಫ್ರೆಂಡ್ ನೀಡಿದ ಚಿತ್ರಹಿಂಸೆ ಬಿಚ್ಚಿಟ್ಟ 'ನಮ್ಮಣ್ಣ' ನಾಯಕಿ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಟಿಕ್ ಟಾಕ್' ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್!!
ಇದೇ ಏಪ್ರಿಲ್ 24 ಒಳಗೆ ಭಾರತದಲ್ಲಿ ಟಿಕ್ ಟಾಕ್ ಬಳಕೆಗೆ ನಿಷೇಧ ಹೇರುವ ಕುರಿತು ಮಹತ್ವದ ನಿರ್ಣಯವೊಂದು ಹೊರಬೀಳುವ ಸಂಭವವಿದ್ದು, ದೇಶದಲ್ಲಿ ಟಿಕ್‌ಟಾಕ್ ಆಪ್ ಅನ್ನು ಬಳಕೆ ಮಾಡಲು ಸಾಧ್ಯವೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.! ಏಕೆಂದರೆ, ಟಿಕ್ ಟಾಕ್ ಬಳಕೆಗೆ ನಿಷೇಧ ಹೇರುವ ಕುರಿತಂತೆ ಮತ್ತೊಮ್ಮೆ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಅರ್ಜಿಯನ್ನು ಕೂಡಲೇ ಇತ್ಯರ್ಥಪಡಿಸುವಂತೆ ಮದ್ರಾಸ್ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ.
ಹೌದು, ಅಶ್ಲೀಲ ವಿಚಾರಗಳ ಹರಿದಾಡುವಿಕೆ ಆತಂಕಕ್ಕೆ ಕಾರಣವಾಗಿರುವ ಟಿಕ್ ಟಾಕ್ ಆಪ್ ಅನ್ನು ನಿಷೇಧ ಮಾಡಿ ಎಂದು ಮದ್ರಾಸ್ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಇದಾದ ನಂತರ ಸಲ್ಲಿಕೆಯಾಗಿದ್ದ ಮೇಲ್ಮನವಿ ಪರೀಶಿಲಿಸಿದ್ದ ಸುಪ್ರೀಂ ಕೋರ್ಟ್, ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತ್ತು. ಆದರೆ, ಇದೀಗ ನಿಗದಿತ ಸಮಯದ ಒಳಗಾಗಿ ಟಿಕ್ ಟಾಕ್ ಬಳಕೆಗೆ ನಿಷೇಧ ಹೇರುವ ಕುರಿತ ಅರ್ಜಿ ಇತ್ಯರ್ಥಪಡಿಸುವಂತೆ ನಿರ್ದೇಶನವನ್ನು ನೀಡಿದೆ.

ಸೋಮವಾರ ಈ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠವು ಒಂದು ವೇಳೆ ನಿಗದಿತ ಅವಧಿಯೊಳಗೆ ಮದ್ರಾಸ್ ಹೈಕೋರ್ಟ್ ಟಿಕ್ ಟಾಕ್ ಕುರಿತ ಅರ್ಜಿಯನ್ನು ಇತ್ಯರ್ಥಪಡಿಸಲು ತಿಳಿಸಿದೆ. ಇದೇ ಏಪ್ರಿಲ್ 24 ಅವಧಿಯ ಒಳಗಾಗಿ ಮದ್ರಾಸ್ ಹೈಕೋರ್ಟ್ ಮತ್ತೊಮ್ಮೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತೀರ್ಮಾನಿಸುವಲ್ಲಿ ವಿಫಲವಾದರೆ ಆಗ ಆಪ್ ವಿರುದ್ಧದ ನಿಷೇಧದ ಆದೇಶ ತೆರವಾಗಲಿದೆ ಎಂದು ಪೀಠ ಹೇಳಿದೆ.
ಜನಪ್ರಿಯ ವಿಡಿಯೋ ಸಾಮಾಜಿಕ ಜಾಲತಾಣ ಆಪ್ ಆಗಿ ಗುರುತಿಸಿಕೊಂಡಿದ್ದ ಚೀನಾ ಮೂಲದ ಟಿಕ್ ಟಾಪ್ ಮೊಬೈಲ್ ಆಪ್ ಅನ್ನು ಗೂಗಲ್ ಸಂಸ್ಥೆ ಬ್ಲಾಕ್ ಮಾಡಿದೆ. ಟಿಕ್ ಟಾಕ್ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಟಿಕ್ ಟಾಕ್ ಮಾತೃ ಸಂಸ್ಥೆ ಬೈಟ್‌ಡ್ಯಾನ್ಸ್ ಮಾಡಿದ ಮನವಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಗೂಗಲ್ ಕ್ರಮ ಕೈಗೊಂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೂಗಲ್ ಸಂಸ್ಥೆ ತಾನು ಇಲ್ಲಿನ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವದಾಗಿ ತಿಳಿಸಿದೆ.

ಆದರೆ, ಅಶ್ಲೀಲ, ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು ಇರುವುದರಿಂದ ಟಿಕ್ ಟಾಕ್ ಆಪ್ ಅನ್ನು ನಿಷೆಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ನೀಡಿದ ದೂರಿನ ಮೇಲೆ ಟಿಕ್ ಟಾಕ್ ಅನ್ನು ನಿಷೇಧಿಸಲಾಗಿದೆ. ಮದ್ರಾಸ್ ಹೈಕೋರ್ಟ್‌ನ ಪೀಠವು ಟಿಕ್ ಟಾಕ್ ಅನ್ನು ನಿಷೇಧಿಸಿ ಇಂತಹದೊಂದು ಮಹತ್ತರ ಆದೇಶವನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಹೊರಡಿಸಿರುವುದರಿಂದ ಇದು ಟಿಕ್‌ಟಾಕ್‌ಗೆ ನುಂಗಲಾರದ ತುತ್ತಾಗಿದೆ. .
ಟಿಕ್ ಟಾಕ್‌ನಲ್ಲಿ ಅಶ್ಲೀಲ ಹಾಗೂ ಅಸಭ್ಯ ವೀಡಿಯೋಗಳು ಇವೆ. ಇಂತಹ ಆಪ್‌ಗಳು ಯುವಕರ ಭವಿಷ್ಯ ಹಾಗೂ ಮಕ್ಕಳ ಮನೋಭಾವ ಹಾಳು ಮಾಡುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದು, ಕೇಂದ್ರ ಸರ್ಕಾರ ಟಿಕ್ ಟಾಕ್ ಡೌನ್‌ಲೋಡ್ ಮಾಡುವುದನ್ನು ತಡೆಯಬೇಕಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಇದರಿಂದಾಗಿ ವಿಶ್ವದ್ಯಾಂತ 50 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದು, ಭಾರತದಲ್ಲೇ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್ ಮೇಲೆ ತೂಗುಗತ್ತಿ ತೂಗುತ್ತಿದೆ.
ಓದಿರಿ: ಕತ್ತಲಲ್ಲಿ 30 ನಿಮಿಷ ಮೊಬೈಲ್ ಬಳಸಿದರೆ ಏನಾಗಲಿದೆ?..ಸಂಶೋಧನೆ ಹೇಳಿದ್ದು ಹೀಗೆ!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470