ದೇವಾಲಯಗಳಿಗೆ ಆನ್‌ಲೈನ್ ದೇಣಿಗೆ ನೀಡುವ ಮುನ್ನ ಇರಲಿ ಎಚ್ಚರ! ಇಲ್ಲದಿದ್ರೆ ಗೋವಿಂದ ಗೋವಿಂದ!
ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಸ್ಕ್ಯಾಮ್ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪವಿತ್ರ ಕ್ಷೇತ್ರಗಳಾದ ದೇವಾಲಯಗಳು ಕೂಡ ಹೊರತಾಗಿಲ್ಲ. ಭಕ್ತರನ್ನೇ ಟಾರ್ಗೆಟ್ ಮಾಡಿರುವ ವಂಚಕರು ಕ್ಯೂಆರ್‌ಕೋಡ್ ಸ್ಕ್ಯಾಮ್ ಮೂಲಕ ಹಣ ಎಗರಿಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೇ ಲೇಟೆಸ್ಟ್ ಉದಾಹರಣೆ ಕೇದಾರನಾಥದಲ್ಲಿ ನಡೆದಿರುವ ಈ ಘಟನೆ ಎಂದರೆ ತಪ್ಪಾಗಲಾರದು.
ಹೌದು, ಉತ್ತರಾಖಂಡದಲ್ಲಿರುವ ಬದರಿನಾಥ ಮತ್ತು ಕೇಂದಾರನಾಥದಂತಹ ಪವಿತ್ರ ಕ್ಷೇತ್ರಗಳಲ್ಲಿ ಕ್ಯೂಆರ್‌ಕೋಡ್ ಸ್ಕ್ಯಾಮ್ ತಲೆ ಎತ್ತಿದೆ. ದೇವಸ್ಥಾನಕ್ಕೆ ಆನ್‌ಲೈನ್‌ನಲ್ಲಿ ದೇಣಿಗೆ ನೀಡುವ ಭಕ್ತರಿಗಾಗಿ ಶ್ರೀ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಕ್ಯೂಆರ್‌ಕೋಡ್‌ಗಳನ್ನು ಸ್ಥಾಪಿಸಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ದೇಣಿಗೆ ನೀಡಬಹುದಾಗಿದೆ. ಹಾಗಾದ್ರೆ ದೇವಸ್ಥಾನದ ಹೆಸರಿನಲ್ಲಿ ವಂಚಕರು ಸ್ಕ್ಯಾಮ್ ನಡೆಸುತ್ತಿರುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್ ಮೂಲಕ ದೇವಸ್ಥಾನಗಳಿಗೆ ದೇಣಿಗೆ ನೀಡುವುದು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿದೆ. ಯುಪಿಐ ಪಾವತಿ ವ್ಯವಸ್ಥೆ ಜನಪ್ರಿಯತೆ ಪಡೆದುಕೊಂಡಂತೆ ದೇವಸ್ಥಾನಗಳಲ್ಲಿ ಕೂಡ ಕ್ಯೂಆರ್‌ಕೋಡ್ ವ್ಯವಸ್ಥೆ ಮೂಲಕ ದೇಣಿಗೆ ನೀಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಭಕ್ತರು ಆನ್‌ಲೈನ್ ಮೂಲಕವೇ ದೇವಸ್ಥಾನಗಳಿಗೆ ದೇಣಿಗೆಯನ್ನು ನೀಡಬಹುದಾಗಿದೆ. ಆದರೆ ಸ್ಕ್ಯಾಮರ್‌ಗಳು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಭಕ್ತರ ದಾರಿಯನ್ನು ತಪ್ಪಿಸುವ ಮೂಲಕ ಹಣ ಎಗರಿಸುತ್ತಿದ್ದಾರೆ. ಇದಕ್ಕೇ ಕೇದಾರನಾಥದಲ್ಲಿ ನಡೆದಿರುವ ಘಟನೆ ಹೊಸ ಉದಾಹರಣೆಯಾಗಿದೆ.
ನಿಜ ಶ್ರೀ ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿಯು (BKTC) ಆನ್‌ಲೈನ್ ಮೂಲಕ ದೇಣಿಗೆ ನೀಡುವ ಭಕ್ತರ ಅನುಕೂಲಕ್ಕಾಗಿ ಕ್ಯೂಆರ್ ಕೋಡ್‌ಗಳನ್ನು ಸ್ಥಾಪಿಸಿದೆ. ಆದರೆ ಆನ್‌ಲೈನ್‌ನಲ್ಲಿ ದೇಣಿಗೆ ನೀಡುವ ಭಕ್ತರನ್ನು ದಾರಿ ತಪ್ಪಿಸುತ್ತಿರುವ ಸ್ಕ್ಯಾಮರ್‌ಗಳು ನಕಲಿ ಕ್ಯೂಆರ್‌ಕೋಡ್‌ಗಳನ್ನು ಹರಿಬಿಡುತ್ತಿದ್ದಾರೆ. ಅನಧಿಕೃತ ಕ್ಯೂಆರ್‌ಕೋಡ್‌ಗಳ ಮೂಲಕ ಭಕ್ತರಿಂದ ದೇಣಿಗೆ ಪಡೆದುಕೊಂಡು ದೇವಸ್ಥಾನಕ್ಕೆ ವಂಚಿಸುತ್ತಿದ್ದಾರೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅನಧಿಕೃತ ಕ್ಯೂಆರ್‌ಕೋಡ್‌ಗಳ ಬಗ್ಗೆ ಎಫ್‌ಐಆರ್ ದಾಖಲಿಸಿದೆ.

ಇದಲ್ಲದೆ ಇಂತಹ ಆನ್‌ಲೈನ್ ವಂಚನೆಗಳಿಗೆ ಬಲಿಯಾಗದಂತೆ ಭಕ್ತರಿಗೆ ಸಮಿತಿ ಎಚ್ಚರಿಕೆಯನ್ನೂ ನೀಡಿದೆ. ಆನ್‌ಲೈನ್‌ನಲ್ಲಿ ಸ್ಕ್ಯಾನ್ ಮಾಡಲು ಮತ್ತು ದೇಣಿಗೆ ನೀಡಲು ಜನರನ್ನು ಆಹ್ವಾನಿಸುವ QR ಕೋಡ್‌ಗಳನ್ನು ಹೊಂದಿರುವ ನಕಲಿ ಬೋರ್ಡ್‌ಗಳನ್ನು ದೇವಾಲಯದ ಸಮಿತಿಯು ಪತ್ತೆ ಹಚ್ಚಿದೆ. ಅಲ್ಲದೆ ಇವರು ತಮಗೆ ದೇಣಿಗೆ ರೂಪದಲ್ಲಿ ಬರುವ ಹಣವನ್ನು ದೇವಸ್ಥಾನಕ್ಕೆ ನೀಡುತ್ತಿಲ್ಲ, ಬದಲಿಗೆ ತಾವೇ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಇದಲ್ಲದೆ ಭಕ್ತರನ್ನು ನಾವು ಆನ್‌ಲೈನ್ ಪಾವತಿ ಮಾಡುವಂತೆ ರಿಕ್ವೆಸ್ಟ್ ಕೂಡ ಮಾಡಿಲ್ಲ ಎಂಬ ಸತ್ಯವನ್ನು ಟ್ರಸ್ಟ್ ಬಹಿರಂಗಪಡಿಸಿದೆ.
ಸದ್ಯ ಬದರಿನಾಥ್ ಮತ್ತು ಕೇದಾರನಾಥ ದೇವಸ್ಥಾನ ಸಮಿತಿಯು ಕ್ಯೂರ್‌ಕೋಡ್ ಬೋರ್ಡ್‌ಗಳನ್ನು ಅಳವಡಿಸಿಲ್ಲ ಎಂದು ಹೇಳಿದೆ. ಈ ಎರಡೂ ಪವಿತ್ರ ಕ್ಷೇತ್ರಗಳ ಬಾಗಿಲು ತೆರೆದ ದಿನದಂದು ಈ ಬೋರ್ಡ್‌ಗಳು ಕಂಡುಬಂದಿವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬೋರ್ಡ್‌ಗಳನ್ನು ಗಮನಿಸಿದ ಅಧಿಕಾರಿಗಳು ತಕ್ಷಣವೇ ಅವುಗಳನ್ನು ತೆರುವುಗೊಳಿಸಿದ್ದಾರೆ ಎಂದು ಹೇಳಲಾಗಿದೆ. ನಾವು ನಮ್ಮ ಹಣಕಾಸಿನ ವಹಿವಾಟುಗಳಲ್ಲಿ Paytm ಅನ್ನು ಬಳಸುವುದಿಲ್ಲ ಎಂದು ಕೂಡ ಹೇಳಿದ್ದಾರೆ.

ಇನ್ನು ಆನ್‌ಲೈನ್ ದೇಣಿಗೆ ಕೇಳುವ ಕ್ಯೂಆರ್ ಕೋಡ್‌ಗಳಿರುವ ಬೋರ್ಡ್‌ಗಳನ್ನು ಯಾರು ಅಳವಡಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ದೇವಾಲಯ ಆಂತರಿಕ ತನಿಖೆಯನ್ನು ಸಹ ನಡೆಸಿದೆ. ತನಿಖೆ ಪೂರ್ಣಗೊಂಡ ನಂತರ ದೇವಸ್ಥಾನ ಸಮಿತಿಯು ಕೇದಾರನಾಥ ಮತ್ತು ಬದರಿನಾಥ್‌ನಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ. ಇದಲ್ಲದೆ ಆನ್‌ಲೈನ್ ದೇಣಿಗೆಗಳನ್ನು ಕೇಳುವ ಯಾವುದೇ QR ಕೋಡ್ ಚಿಹ್ನೆಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ಭಕ್ತರಿಗೆ ಸೂಚಿಸಿದೆ.


Click it and Unblock the Notifications








