Home
ಸುದ್ದಿಜಾಲ

ಈ ನಂಬರ್‌ನಿಂದ ನಿಮಗೆ ವಾಟ್ಸಾಪ್‌ ಮೆಸೇಜ್‌ ಬಂದಿದೆಯಾ? ಕೂಡಲೇ ಚೆಕ್‌ ಮಾಡಿ!

ನಿಮಗೂ ಕೂಡ ಈ ನಂಬರ್‌ನಿಂದ ಸಂದೇಶ ಬಂದಿದೆಯಾ? ಕಡಿಮೆ ಬೆಲೆಯಲ್ಲಿ ನಿಮಗೆ ಐಫೋನ್‌ ಸಿಗಲಿದೆ ಕೂಡಲೇ ಈ ಕರೆ ಮಾಡಿ ಅನ್ನೋ ಸಂದೇಶ ನೋಡಿದ್ದೀರಾ? ಕೂಡಲೇ ಸೈಬರ್‌ ಕ್ರೈಂ ಪೋರ್ಟಲ್‌ನಲ್ಲಿ ರಿಪೋರ್ಟ್‌ ಮಾಡಿರಿ. ಯಾಕಂದ್ರೆ ಸೈಬರ್‌ ವಂಚಕರು ಇದೀಗ ವಾಟ್ಸಾಪ್‌ ಕರೆ ಮೂಲಕ ಹೊಸ ರೀತಿಯ ವಂಚನೆಯನ್ನು ಶುರು ಮಾಡಿಕೊಂಡಿದ್ದಾರೆ.

ಹೌದು, ಸೈಬರ್‌ ವಂಚಕರು ವಾಟ್ಸಾಪ್‌ನಲ್ಲಿ ವಿವಿಧ ರೀತಿಯ ಉಡುಗೊರೆಗಳ ಆಮಿಷವೊಡ್ಡಿ ಹಣ ಲಪಾಟಯಿಸುತ್ತಿರುವುದು ಹೊಸತೇನಲ್ಲ. ಆದರೆ ಈ ಪ್ರಕರಣದಲ್ಲಿ ವಾಟ್ಸಾಪ್‌ಗೆ ಸಂದೇಶ ಬಂದಿರುವ ಸಂಖ್ಯೆ ಬೇರೆ ದೇಶದ ಕೋಡ್‌ ಆಗಿದ್ದು ವಿದೇಶಗಳಲ್ಲಿದ್ದುಕೊಂಡೆ ವಂಚಕರು ಜನರನ್ನು ಯಾಮಾರಿಸುತ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ಕೋಡ್‌? ಯಾವ ನಂಬರ್‌ನಿಂದ ವಾಟ್ಸಾಪ್‌ ಸಂದೇಶ ಬಂದ ಜನರು ಮೋಸ ಹೋಗಿದ್ದಾರೆ? ಇದೆಲ್ಲದರ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಈ ನಂಬರ್‌ನಿಂದ ನಿಮಗೆ ವಾಟ್ಸಾಪ್‌ ಮೆಸೇಜ್‌ ಬಂದಿದೆಯಾ? ಕೂಡಲೇ ಚೆಕ್‌ ಮಾಡಿ!

+92 ನಿಂದ ಶುರುವಾಗುವ ಸಂಖ್ಯೆಯಿಂದ ನಿಮಗೆ ಉಡುಗೊರೆಗಳು, ಆಫರ್‌ಗಳು ಸಿಗಲಿವೆ ಅನ್ನೊ ವಾಟ್ಸಾಪ್‌ ಸಂದೇಶ ಬಂದಿದೆಯಾ, ಹಾಗಾದ್ರೆ ಕೂಡಲೇ ಈ ಸಂದೇಶವನ್ನು ರಿಪೋರ್ಟ್‌ ಮಾಡಿ. ಏಕೆಂದರೆ +92 ಅನ್ನೊದು ಪಾಕಿಸ್ತಾನ ದೇಶದ ಕೋಡ್‌ ಆಗಿದೆ. ಪಾಕಿಸ್ತಾನದಿಂದ ವರ್ಕ್‌ ಆಗುವ +92 ನಂಬರ್‌ಗಳಿಂದ ವಾಟ್ಸಾಪ್‌ಗೆ ಸಂದೇಶಗಳು ಬರುತ್ತಿದ್ದು ಇದರಲ್ಲಿ ಐಫೋನ್‌ 14 ನಿಮಗೆ ಉಚಿತವಾಗಿ ಸಿಗಲಿದೆ ಎಂದು ಹೇಳಲಾಗುತ್ತದೆ. ಇದನ್ನು ನಂಬಿ ಸಂದೇಶವನ್ನು ಕ್ಲಿಕ್‌ ಮಾಡಿದರೆ ನಿಮ್ಮ ಬ್ಯಾಂಕ್‌ ಖಾತೆಗೆ ವಂಚಕರು ಕನ್ನ ಹಾಕಲಿದ್ದಾರೆ.

ಇನ್ನು ಇತ್ತೀಚಿಗೆ ಅಹಮದಾಬಾದ್‌ನಲ್ಲಿ ಕೂಡ ಇದೇ ಮಾದರಿಯ ಪ್ರಕರಣವೊಂದು ವರದಿಯಾಗಿದೆ. ಈ ಪ್ರಕರಣದಲ್ಲಿ ದುಬೈನಿಂದ ನಿಮಗೆ ಉಚಿತವಾಗಿ ಐಫೋನ್‌ 14 ಅನ್ನು ನೀಡುವುದಾಗಿ ಹೇಳಿ ಸಂತ್ರಸ್ಥನನ್ನು ವಂಚಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇನ್‌ಸ್ಟಾಗ್ರಾಮ್‌ ಮೂಲಕ ಸಂತ್ರಸ್ಥನಿಗೆ ವಂಚಿಸಲಾಗಿದ್ದು, ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಇನ್ನು ಈ ಸಂದೇಶದಲ್ಲಿ ಉಚಿತ ಐಫೋನ್‌ 14 ಅನ್ನು ಗೆದ್ದಿದ್ದೀರಿ, ಕೇವಲ 3,000 ರೂಪಾಯಿ ಶುಲ್ಕವನ್ನು ಪಾವತಿಸಿ ಎಂದು ಹೇಳಿ ವಂಚಿಸಲಾಗಿದೆ.

70,000 ಮೌಲ್ಯದ ಐಫೋನ್‌ 14 ಉಚಿತವಾಗಿ ಸಿಗಲಿದೆ ಅನ್ನೊ ಆಸೆಗೆ ವಂಚಕರು ನೀಡಿದ ಸಂಖ್ಯೆಗೆ UPI ಮೂಲಕ ಟೋಕನ್ ಶುಲ್ಕವಾಗಿ 3,000 ರೂ.ಪಾವತಿಸಿದ್ದಾನೆ. ನಂತರ ವಂಚಕರು ಐಫೋನ್‌ 14 ಡೆಲಿವರಿ ಮಾಡುವುದಕ್ಕೆ 8,000 ರೂ.ಗೆ ಬೇಡಿಕೆ ಇಟ್ಟಿದ್ದು, ಸಂತ್ರಸ್ತನಿಂದ ಹಣ ಪಡೆದುಕೊಂಡಿದ್ದಾರೆ. ಆದರೆ ಇದೇ ಸಮಯದಲ್ಲಿ ಸಂತ್ರಸ್ಥನ ಬ್ಯಾಂಕ್‌ ಅಕೌಂಟ್‌ನಿಂದ 6.76 ಲಕ್ಷ ರೂ.ಗಳು ಡೆಬಿಟ್‌ ಆಗಿರುವುದು ಕಂಡುಬಂದಿದೆ. ತಕ್ಷಣವೇ ವಂಚಕರ ಸಂಖ್ಯೆಗೆ ಕರೆ ಮಾಡಲು ಸಂತ್ರಸ್ಥನು ಪ್ರಯತ್ನಿಸಿದ್ದಾನೆ, ಆ ನಂಬರ್‌ ಸ್ವಿಚ್ ಆಫ್ ಆಗಿದೆ. ಕೂಡಲೇ ತಾನು ಮೋಸ ಹೋಗಿರುವುದು ಸಂತ್ರಸ್ಥನಿಗೆ ಗೊತ್ತಾಗಿದೆ.

+92 ದೇಶದ ಕೋಡ್ ಪಾಕಿಸ್ತಾನಕ್ಕೆ ಸಂಬಂಧಿಸಿದ್ದು, ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚಕರ ಜಾಲ ಸಕ್ರಿಯವಾಗಿದೆ. ಆದರೆ ಪೊಲೀಸರ ಪ್ರಕಾರ ಅಹಮದಾಬಾದ್‌ನಲ್ಲಿ ನಡೆದಿರುವ ಘಟನೆಯಲ್ಲಿ ಯಾವುದೇ ಪಾಕಿಸ್ತಾನಿ ವ್ಯಕ್ತಿಯ ಭಾಗಿಯಾಗಿಲ್ಲ. ಆದರೆ ವಂಚಕರು ಸಂತ್ರಸ್ಥನಿಗೆ ವಂಚನೆ ಮಾಡಲು ವರ್ಚುವಲ್ ಸಂಖ್ಯೆಯನ್ನು ಬಳಸಿದ್ದಾರೆ ಎನ್ನಲಾಗಿದೆ. ಈ ವಂಚಕರು "ಬಡೆ ಭಾಯ್ ಮತ್ತು ಛೋಟೆ ಭಾಯ್" ಸಂಭಾಷಣೆಯನ್ನು ಬಳಸಿಕೊಂಡು ಮೋಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ದುಬೈನ ಹೆಸರಾಂತ ಅಂಗಡಿಯಿಂದ ಕರೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ವರ್ಚುವಲ್ ನಂಬರ್‌ ಸ್ಕ್ಯಾಮ್‌ನಿಂದ ಸುರಕ್ಷಿತವಾಗಿರುವುದು ಹೇಗೆ?
ವಾಟ್ಸಾಪ್‌ನಲ್ಲಿ ಬರುವ ಯಾವುದೇ ಉಚಿತ ಆಫರ್‌ಗಳ ಸಂದೇಶಗಳನ್ನು ನಂಬಬೇಡಿ. ಅನಾಮಿಕ ವ್ಯಕ್ತಿಗಳಿಂದ ಬರುವ ವಾಟ್ಸಾಪ್‌ ಸಂದೇಶಗಳನ್ನು ನಂಬಬೇಡಿ. ಲಾಭದಾಯಕ ಕೊಡುಗೆಗಳನ್ನು ನೀಡುವ ಕರೆಗಳು ಮತ್ತು ಸಂದೇಶಗಳ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ.

ಸ್ಕ್ಯಾಮ್‌ರ್‌ಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
* ನಿಮ್ಮ ಮೊಬೈಲ್‌ನಲ್ಲಿ ಯಾವುದೇ ವೈಯುಕ್ತಿಕ ಮಾಹಿತಿಯನ್ನು ಶೇರ್‌ ಮಾಡಬೇಡಿ.
* ಕಾಲ್‌ ಮಾಡುವವರು ಯಾರು ಎಂಬುದರ ಬಗ್ಗೆ ಎಚ್ಚರಿಕೆ ವಹಿಸಿ
* ಅನುಮಾನಾಸ್ಪದ ಕರೆಗಳನ್ನು ಬ್ಲಾಕ್‌ ಮಾಡಿರಿ

Best Mobiles in India

English summary
Scammers WhatsApp calls from numbers starting with the +92 country code: Beware
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+