Subscribe to Gizbot

SSCL ಫೇಲಾದ್ರೂ ಅಮೆಜಾನ್‌ಗೆ ಒಂದೂವರೆ ಕೋಟಿ ಟೋಪಿ ಹಾಕಿದ..!

Written By:

ಆತ 10ನೇ ತರಗತಿಯಲ್ಲಿಯೇ ಶಾಲೆ ಬಿಟ್ಟವನು ಆದರೆ ಆತ ಮಾಡಿದ್ದು ಮಾತ್ರವೇ ದೇಶವೇ ಬೆಚ್ಚಿ ಬಿದ್ದ ಮಹಾ ಮೋಸ. ದೇಶಿಯ ಆನ್‌ಲೈನ್ ಮಾರುಕಟ್ಟೆಯ ದೈತ್ಯ ಕಂಪನಿಯಾದ ಅಮೆಜಾನ್‌ಗೆ ತಿಳಿಯದಂತೆ ಅಳೆದ ಆರು ತಿಂಗಳಿನಿಂದ ರೂ.1.3 ಕೋಟಿ ಹಣವನ್ನು ಟೋಪಿ ಹಾಕಿದ ಕರ್ನಾಟಕದ ಚಿಕ್ಕಮಗಳೂರಿನ ದರ್ಶನ್ ಎನ್ನುವಾತ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

SSCL ಫೇಲಾದ್ರೂ ಅಮೆಜಾನ್‌ಗೆ ಒಂದೂವರೆ ಕೋಟಿ ಟೋಪಿ ಹಾಕಿದ..!

ಕೋರಿಯರ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದರ್ಶನ್, ತನ್ನ ಜೊತೆಗೆ ಮೂರು ನಾಲ್ಕು ಹುಡುಗರನ್ನು ಹಾಕಿಕೊಂಡು ಅಮೆಜಾನ್‌ಗೆ ವಂಚನೆ ಮಾಡುವ ಜಾಲವನ್ನು ಸುಸೂತ್ರವಾಗಿ ನಡೆಸುತ್ತಿದ್ದ ಎನ್ನಲಾಗಿದೆ. ಆದರೆ ಆತ ಯಾರಿಗೂ ತಿಳಿಯದೆ ಮಾಡುತ್ತಿದ್ದ ಅವ್ಯವಹಾರ ಕೊನೆಗೂ ಪೊಲೀಸರ ಕಣ್ಣಿಗೆ ಬಿದ್ದು ಜೈಲು ಸೇರುವಂತಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1.3 ಕೋಟಿ ಟೋಪಿ:

1.3 ಕೋಟಿ ಟೋಪಿ:

ಅಮೆಜಾನ್ ನಿಂದ ಕ್ಯಾಷ್ ಆನ್ ಡೆಲಿವರಿ ಬಂದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಿ, ಪಡೆದ ಹಣವನ್ನು ಕಂಪನಿಗೆ ಕಟ್ಟದೆ, ಈಗಾಗಲೇ ಪೇ ಮಾಡಿ ಖರೀಸಿದ ವಸ್ತುಗನ್ನು ಗ್ರಾಹಕರಿಗೆ ನೀಡದೆ ಅವರಿಗೆ ತಲುಪಿಸಲಾಗಿದೆ ಎಂದು ಕಂಪನಿಗೆ ಮೋಸ ಮಾಡಿ ಇಷ್ಟು ಪ್ರಮಾಣದ ಹಣವನ್ನು ಲಪಟಾಯಿಸಿದ್ದಾರೆ ಎನ್ನಲಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ರೂ.25 ಲಕ್ಷದ ವಸ್ತುಗಳು ವಶ:

ರೂ.25 ಲಕ್ಷದ ವಸ್ತುಗಳು ವಶ:

ಪೊಲೀಸರು ದರ್ಶನ್ ಮತ್ತು ಟೀಮ್ ಅನ್ನು ಅರೆಸ್ಟ್ ಮಾಡುವ ಸಂದರ್ಭದಲ್ಲಿ ಅವರಿಂದ ಸುಮಾರು 2.5 ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 21 ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಆಪಲ್ ವಾಚ್‌ಗಳು, ಪೋಡ್ ಗಳು ಸೇರಿದಂತೆ ಹಲವು ವಸ್ತುಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

4,604 ಆರ್ಡರ್‌ನಲ್ಲಿ ವಂಚನೆ:

4,604 ಆರ್ಡರ್‌ನಲ್ಲಿ ವಂಚನೆ:

2017ರ ಸೆಪ್ಟಂಬರ್ ನಿಂದ ಹಿಡಿದು ಫೆಬ್ರವರಿ 2018 ತನಕ ಅಮೆಜಾನ್‌ನಿಂದ ಚಿಕ್ಕಮಗಳೂರಿಗೆ 4,604 ಆರ್ಡರ್ ಗಳು ಬಂದಿದ್ದು, ಇದನ್ನು ಡೆಲಿವರಿ ಮಾಡುವ ಏಕದಂತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದರ್ಶನ, ಅಲ್ಲಿ ತನ್ನ ನಾಲ್ವರು ಸಹಚರರೊಂದಿಗೆ 1.8 ಕೋಟಿಯಷ್ಟು ಮೋಸ ಮಾಡಿದ್ದಾನೆ.

ನಾಲ್ವರ ತಂಡ:

ನಾಲ್ವರ ತಂಡ:

ಅಮೆಜಾನ್‌ನಿಂದ ಬಂದ ಆರ್ಡರ್ ಗಳನ್ನು ತಲುಪಿಸುವ ಕಾರ್ಯಕ್ಕೆ ಏಕದಂತ ಎನ್ನುವ ಕೊರಿಯರ್ ಕಂಪನಿಯೂ ಒಪ್ಪಂದ ಮಾಡಿಕೊಂಡಿತ್ತು. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ದರ್ಶನ್, ಪುನೀತ್, ಸಚಿನ್ ಶೆಟ್ಟಿ, ಅನಿಲ್ ಶೆಟ್ಟಿ ಒಟ್ಟಾಗಿ ಈ ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಸದ್ಯ ಎಲ್ಲರೂ ಬಂದಿಯಾಗಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
School Dropout Defrauded Amazon Of Rs 1.3 Crore In Just 5 Months. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot