ವಿಜ್ಞಾನ ಸೂಜಿಗ!..ಕಣ್ ಸಂಜ್ಞೆಗೆ ಜ್ಹೂಮ್ ಆಗುವ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿ!

|

ಮಾನವನ ಕಣ್ಣು ಎಂದು ಕರೆಸಿಕೊಳ್ಳುವ ಕ್ಯಾಮೆರಾವನ್ನೇ ಕಣ್ಣಿನ ಒಳಗೆ ಇಟ್ಟರೆ ಹೇಗೆ?..ಇದೇನು ತಮಾಷೆ ಎಂದುಕೊಳ್ಳಬೇಡಿ. ಏಕೆಂದರೆ, ಇಂತಹದೊಂದು ವೈಜ್ಞಾನಿಕ ಸಂಶೋಧನೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಇದೀಗ ಯಶಸ್ವಿಯಾಗಿದ್ದಾರೆ. ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇಂತಹದೊಂದು ಕಲ್ಪನೆಯನ್ನು ನಿಜವಾಗಿಸಿದ್ದಾರೆ.

ವಿಜ್ಞಾನ ಸೂಜಿಗ!..ಕಣ್ ಸಂಜ್ಞೆಗೆ ಜ್ಹೂಮ್ ಆಗುವ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿ!

ಹೌದು, ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಕಲ್ಪನೆಗಳಿಗಿಂತ ಮುಂದೆ ತೆರಳಿ ಭವಿಷ್ಯದ 'ಕಾಂಟ್ಯಾಕ್ಟ್ ಲೆನ್ಸ್' ಒಂದನ್ನು ರಚಿಸಿದ್ದಾರೆ. ಈ ಕಾಂಟ್ಯಾಕ್ಟ್ ಲೆನ್ಸ್ ಅನ್ನು ಕೇವಲ ಕಣ್ಣಿನ ಚಲನೆಗಳಿಂದ ನಿಯಂತ್ರಿಸಬಹುದಾಗಿದ್ದು, ನೀವು ಎರಡು ಬಾರಿ ಕಣ್ಣು ಮಿಟುಕಿಸಿದರೆ ಸಾಕು ಈ ಕಾಂಟ್ಯಾಕ್ಟ್ ಲೆನ್ಸ್ ಜೂಮ್ ಆಗಲಿದೆ.

ಇದು ಸಂಪೂರ್ಣವಾಗಿ ವೈಜ್ಞಾನಿಕ ವಿಷಯವಾಗಿದ್ದು, ಮಾನವನ ಕಣ್ಣುಗಳು ನಿರ್ದಿಷ್ಟ ರೀತಿಯಲ್ಲಿ ಚಲನೆ ಮಾಡಿದಾಗ (ಮೇಲಕ್ಕೆ, ಕೆಳಕ್ಕೆ, ಎಡಕ್ಕೆ, ಬಲಕ್ಕೆ, ಮಿನುಗುವಂತೆ, ಮಿಣುಕುತ್ತಿರುವಾಗ) ಉತ್ಪತ್ತಿಯಾಗುವ ಎಲೆಕ್ಟ್ರೋಕ್ಯುಲೋ ಗ್ರಾಫಿಕ್ ಸಂಕೇತಗಳನ್ನು ಅಳೆದು ಮತ್ತು ಮೃದುವಾದ ಬಯೋಮಿಮೆಟಿಕ್ ಮಸೂರವನ್ನು ರಚಿಸಿ ಈ ಲೆನ್ಸ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ವಿಜ್ಞಾನ ಸೂಜಿಗ!..ಕಣ್ ಸಂಜ್ಞೆಗೆ ಜ್ಹೂಮ್ ಆಗುವ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿ!

ಮಾನವನ ಕಣ್ಣುಗಳು ನಿರ್ದಿಷ್ಟ ರೀತಿಯಲ್ಲಿ ಚಲನೆ ಮಾಡಿದಾಗ ಉತ್ಪತ್ತಿಯಾಗುವ ಎಲೆಕ್ಟ್ರೋಕ್ಯುಲೋ ಗ್ರಾಫಿಕ್ ಸಂಕೇತಗಳ ಪ್ರಚೋದನೆಗಳಿಗೆ ಬಯೋಮಿಮೆಟಿಕ್ ಮಸೂರವು ನೇರವಾಗಿ ಪ್ರತಿಕ್ರಿಯಿಸುತ್ತದೆ. ಇದರಿಂದ ಉತ್ಪತ್ತಿಯಾಗುವ ಮಸೂರದಲ್ಲಿನ ಸಂಕೇತಗಳನ್ನು ಅವಲಂಬಿಸಿ ಅದರ ನಾಭಿದೂರವನ್ನು ಬದಲಾಯಿಸಲು ಸಾಧ್ಯವಾಯಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಹೊಂದಾಣಿಕೆ ಮಾಡುವ ಕನ್ನಡಕಗಳ ಬಗ್ಗೆ ಮಾತ್ರ ಕೇಳಿದ್ದೆವು. ಆದರೆ, ನಿಮ್ಮ ಕಣ್ ಸಂಜ್ಞೆಯಿಂದಲೇ ಜ್ಹೂಮ್ ಮಾಡುವ ಕಾಂಟ್ಯಾಕ್ಟ್ ಲೆನ್ಸ್ ಇದೀಗ ಅಭಿವೃಧ್ಧಿಯಾಗಿರುವುದು ಆಶ್ಚರ್ಯವೇ ಸರಿ. ಅದರಲ್ಲೂ ನಿರ್ದಿಷ್ಟ ಚಲನೆಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಮೂಲಕವೇ ಈ ರೋಬಾಟಿಕ್ ಲೆನ್ಸ್ ಕೆಲಸ ಮಾಡುವುದು ಭವಿಷ್ಯದಲ್ಲಿ ಮತ್ತಷ್ಟು ಪ್ರಶ್ನೆಗಳಿಗೆ ಉತ್ತರವಾಗಬಹುದು.

ವಿಜ್ಞಾನ ಸೂಜಿಗ!..ಕಣ್ ಸಂಜ್ಞೆಗೆ ಜ್ಹೂಮ್ ಆಗುವ ಕಾಂಟ್ಯಾಕ್ಟ್ ಲೆನ್ಸ್ ಅಭಿವೃದ್ಧಿ!

ಇದೇ ರೀತಿಯಲ್ಲಿ ಬ್ರೆಜಿಲ್‌ನ ಹೂಬಾಕ್ಸ್ ರೋಬೊಟಿಕ್ಸ್ ಎಂಬ ನವೋದ್ಯಮವೊಂದು ಹೊಸ ತಂತ್ರಜ್ಞಾನದ ಬೆನ್ನು ಬಿದ್ದಿದ್ದು ಇತ್ತೀಚಿಗಷ್ಟೇ ವರದಿಯಾಗಿತ್ತು. ಇಂಟೆಲ್ ರಿಯಲ್ ಸೆನ್ಸ್ ಫೇಷಿಯಲ್ ರೆಕನೈಸೇಷನ್ ತಂತ್ರಜ್ಞಾನ ಆಧಾರಿತ ಮೊದಲ ಗಾಲಿ ಕುರ್ಚಿಯನ್ನು ಈ ಸಂಸ್ಥೆ ತಯಾರಿಸಿತ್ತು. ಈ ಚೇರ್‌ನಲ್ಲಿ ಹಲವು ಸೆನ್ಸಾರ್‌ಗಳನ್ನು ಅಳವಡಿಸಲಾಗಿದ್ದು, ನಮ್ಮ ಮುಖದ ಲಕ್ಷಣಗಳನ್ನು ಚಲನಗಳನ್ನು ಗಮನಿಸಿ ಬೇಕೆಂದ ಕಡೆಗೆ ಈ ಕುರ್ಚಿ ಚಲಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದರು.

ಬಂತು 'ಫೇಸ್‌ ಪವರ್' ಚೇರ್!..ವಿಜ್ಞಾನಿಗಳು ಇನ್ನು ಏನೇನೆಲ್ಲಾ ಕಂಡುಹಿಡಿಯಬಹುದು?ಬಂತು 'ಫೇಸ್‌ ಪವರ್' ಚೇರ್!..ವಿಜ್ಞಾನಿಗಳು ಇನ್ನು ಏನೇನೆಲ್ಲಾ ಕಂಡುಹಿಡಿಯಬಹುದು?

ಆ ಕುರ್ಚಿಗೆ ವೀಲಿ (wheelie) ಎಂದು ಸಂಶೋಧಕರು ಹೆಸರಿಸಿದ್ದಾರೆ. ಈ ವೀಲಿ ಚೇಲ್ ಇಂಟೆಲ್ ರಿಯಲ್ ಸೆನ್ಸ್ ಫೇಷಿಯಲ್ ರೆಕನೈಸೇಷನ್ ತಂತ್ರಜ್ಞಾನದ ಸಹಾಯದಿಂದ ಕೆಲಸ ಮಾಡಲಿದ್ದು, ಇದನ್ನು 'ಫೇಸ್‌ ಪವರ್' ಎಂಬುದಾಗಿಯೂ ಕರೆಯಬಹುದಾಗಿದೆ. ಮುಖದ ಚಲನೆ ಮತ್ತು ಸಂಜ್ಞೆಗಳಿಂದಲೇ ಪ್ರತಿಯೊಂದು ಚಲನಕ್ಕೂ ಒಂದೊಂದು ಕಮಾಂಡ್ ಕೊಟ್ಟು ಕಾರ್ಯನಿರ್ವಹಿಸುವಂತೆ ಕುರ್ಚಿಯನ್ನು ತಯಾರಿಸಲಾಗಿದೆ. ಉದಾಹರಣೆಗೆ ಕಿರು ನಗೆ ಬೀರಿದರೆ ಸಾಕು ಕುರ್ಚಿ ಮುಂದಕ್ಕೆ ಚಲಿಸುತ್ತದೆ.

Best Mobiles in India

English summary
It is absolutely the stuff of science fiction: a contact lens that zooms on your command. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X