ಬೋಳು ತಲೆಗೆ ರಾಮಬಾಣ..! ಬಂದಿದೆ ಎಲೆಕ್ಟ್ರಾನಿಕ್‌ ಟೋಪಿ..!

By Gizbot Bureau
|

ಬೋಳು ತಲೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೀರಾ..? ಇನ್ಮುಂದೆ ಬೊಕ್ಕ ತಲೆಯ ಬಗ್ಗೆ ಚಿಂತೆ ಬೇಡ. ಕೂದಲಿಲ್ಲದ ಖಾಲಿ ತಲೆ ತುಂಬಾ ಕೂದಲು ಸೃಷ್ಟಿಸುವುದು ಈಗ ಸುಲಭವಾಗಿದೆ. ಹೌದು, ಇಲಿಗಳ ಮೇಲೆ ಮಾಡಿದ ಪ್ರಯೋಗ ಯಶಸ್ವಿಯಾಗಿದ್ದು, ಕಡಿಮೆ ವೆಚ್ಚದ ಹಾಗೂ ಆಕ್ರಮಣಕಾರಿಯಲ್ಲದ ಕೂದಲು ಬೆಳವಣಿಗೆ ಉತ್ತೇಜಿಸುವ ತಂತ್ರಜ್ಞಾನವನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಟೋಪಿ ಜೊತೆ ಧರಿಸಬಹುದಾದ ಎಲೆಕ್ಟ್ರಾನಿಕ್‌ ಸಾಧನವು ಉಪಯುಕ್ತವಾಗಿದೆ ಎಂದಿರುವ ವಿಜ್ಞಾನಿಗಳು, ದೇಹದ ದಿನನಿತ್ಯದ ಚಲನೆಯಿಂದ ಶಕ್ತಿಯನ್ನು ಸಂಗ್ರಹಿಸುವ ಸಾಧನಗಳ ಆಧಾರದ ಮೇಲೆ ಎಸಿಎಸ್‌ ನ್ಯಾನೋ ಜರ್ನಲ್‌ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ.

ಸುಪ್ತ ಕಿರುಚಿಲಗಳ ಸಂಯೋಜನೆ

ಸುಪ್ತ ಕಿರುಚಿಲಗಳ ಸಂಯೋಜನೆ

ಕೂದಲು ಬೆಳವಣಿಗೆಯ ತಂತ್ರಜ್ಞಾನ ಸೌಮ್ಯ ಚರ್ಮ, ಕಡಿಮೆ-ಆವರ್ತನದ ವಿದ್ಯುತ್ ಪಲ್ಸ್‌ಗಳಿಂದ ಉತ್ತೇಜಿಸುತ್ತದೆ. ಇದು ಕೂದಲಿನ ಉತ್ಪಾದನೆಯನ್ನು ಪುನಃ ಸಕ್ರಿಯಗೊಳಿಸಲು ಸುಪ್ತ ಕಿರುಚೀಲಗಳನ್ನು ಸಂಯೋಜಿಸುವ ಕಾರ್ಯವನ್ನು ಮಾಡುತ್ತದೆ. ಕೂದಲು ಪುನರುತ್ಪಾದನೆಗೆ ಈ ವಿಧಾನ ಬಹಳ ಪ್ರಾಯೋಗಿಕ ಪರಿಹಾರವಾಗಿದೆ ಎಂದು ಭಾವಿಸುತ್ತೇನೆ ಎಂದು ಯುಎಸ್‌ನ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕ್ಸುಡಾಂಗ್ ವಾಂಗ್ ಹೇಳಿದ್ದಾರೆ.

ಆರಂಭಿಕ ಹಂತದಲ್ಲಿ ಯಶಸ್ವಿ

ಆರಂಭಿಕ ಹಂತದಲ್ಲಿ ಯಶಸ್ವಿ

ಎಲೆಕ್ಟ್ರಾನಿಕ್‌ ಸಾಧನ ನಯವಾದ ಚರ್ಮದಲ್ಲಿನ ಕೂದಲು ಕಿರುಚೀಲಗಳನ್ನು ಹೊಸದಾಗಿ ಮೊಳಕೆಯೊಡೆಯಲು ಕಾರಣವಾಗುವುದಿಲ್ಲ. ಬದಲಾಗಿ ಸುಪ್ತವಾಗಿದ್ದ ಕೂದಲು ಉತ್ಪಾದಿಸುವ ರಚನೆಗಳನ್ನು ಪುನಃ ಸಕ್ರಿಯಗೊಳಿಸುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಮಾದರಿಯನ್ನು ಆರಂಭಿಕ ಹಂತಗಳಲ್ಲಿ ಬಳಸಬಹುದಾಘಿದ್ದು, ಹಲವಾರು ವರ್ಷಗಳಿಂದ ಬೋಳು ತಲೆ ಹೊಂದಿರುವ ಯಾರಿಗಾದರೂ ಕ್ಯಾಸ್ಕೇಡಿಂಗ್ ಒತ್ತಡ ನೀಡುವುದಿಲ್ಲ ಎಂದಿದ್ದಾರೆ.

ಬೃಹತ್‌ ಬ್ಯಾಟರಿ ಬೇಕಿಲ್ಲ

ಬೃಹತ್‌ ಬ್ಯಾಟರಿ ಬೇಕಿಲ್ಲ

ಹೊಸ ಸಾಧನ ಧರಿಸಿದವರ ಚಲನೆಯಿಂದ ಶಕ್ತಿ ಪಡೆಯುವುದರಿಂದ ಬೃಹತ್ ಬ್ಯಾಟರಿ ಪ್ಯಾಕ್ ಅಥವಾ ಸಂಕೀರ್ಣ ಎಲೆಕ್ಟ್ರಾನಿಕ್ಸ್ ಅಗತ್ಯವಿಲ್ಲ ಎಂಬುದನ್ನು ಸಂಶೋಧಕರು ಗಮನಿಸಿದ್ದಾರೆ. ತುಂಬಾ ಕಡಿಮೆ ಪ್ರೊಫೈಲ್ ಹೊಂದಿದ್ದವರಾಗಿದ್ದರೆ ದೈನಂದಿನ ಬೇಸ್‌ಬಾಲ್ ಕ್ಯಾಪ್‌ನ ಕಿರೀಟದ ಕೆಳಗೆ ಸಾಧನವನ್ನು ಧರಿಸಬಹುದು. ನ್ಯಾನೊಜೆನೆರೇಟರ್‌ಗಳು ಎಂದು ಕರೆಯಲ್ಪಡುವ ಸಣ್ಣ ಸಾಧನಗಳು ದಿನನಿತ್ಯದ ಚಲನೆಗಳಿಂದ ಶಕ್ತಿಯನ್ನು ಸಂಗ್ರಹಿಸುತ್ತವೆ. ಮತ್ತು ನಂತರ ಕಡಿಮೆ ಆವರ್ತನದ ಎಲೆಕ್ಟ್ರಿಕ್ ಪಲ್ಸ್‌ಗಳನ್ನು ಚರ್ಮಕ್ಕೆ ರವಾನಿಸುತ್ತವೆ.

ವಿವಿಧ ಕಾರ್ಯಗಳಿಗೂ ಸಹಾಯ

ವಿವಿಧ ಕಾರ್ಯಗಳಿಗೂ ಸಹಾಯ

ವಿದ್ಯುತ್ ಪ್ರಚೋದನೆಯಿಂದ ಸುಪ್ತ ಕಿರುಚೀಲಗಳು ಎಚ್ಚರಗೊಳ್ಳಲಿ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ. ವಿದ್ಯುತ್ ಪ್ರಚೋದನೆ ದೇಹದ ವಿವಿಧ ಕಾರ್ಯಗಳಿಗೆ ಸಹಾಯ ಮಾಡುತ್ತದೆ ಎಂದು ವಾಂಗ್ ಹೇಳಿದ್ದು, ಪರಿಣಾಮಕಾರಿಯಾದ ಪ್ರಚೋದನೆಗಳನ್ನು ಒದಗಿಸುವ ಕಡಿಮೆ ಪ್ರೊಫೈಲ್ ಸಾಧನಗಳಿಗೆ ನಿಜವಾಗಿಯೂ ಇದು ಉತ್ತಮ ಪರಿಹಾರವಲ್ಲ ಎಂದಿದ್ದಾರೆ. ವಿದ್ಯುತ್ ಪಲ್ಸ್‌ಗಳು ನಂಬಲಾಗದಷ್ಟು ಶಾಂತವಾಗಿರುವುದರಿಂದ ಮತ್ತು ನೆತ್ತಿಯ ಹೊರಗಿನ ಪದರಗಳಿಗಿಂತ ಆಳವಾಗಿ ಭೇದಿಸುವುದಿಲ್ಲ.

ಯಾವುದೇ ಅಡ್ಡಪರಿಣಾಮಗಳಿಲ್ಲ

ಯಾವುದೇ ಅಡ್ಡಪರಿಣಾಮಗಳಿಲ್ಲ

ಈ ಸಾಧನಗಳು ಯಾವುದೇ ಅಹಿತಕರ ಅಡ್ಡಪರಿಣಾಮಗಳಿಗೆ ಕಾರಣವಾಗುವುದಿಲ್ಲ ಎಂದು ಸಂಶೋಧಕರು ಹೇಳಿದ್ದು, ಲೈಂಗಿಕ ಅಪಸಾಮಾನ್ಯ ಕ್ರಿಯೆ, ಖಿನ್ನತೆಯಂತಹ ಅಪಾಯಗಳನ್ನು ಹೊಂದಿರುವ ಪ್ರೊಪೆಷಿಯಾದಂಥ ಇತರ ಬೋಳು ಚಿಕಿತ್ಸೆಗಳಿಗಿಂತ ಗಮನಾರ್ಹ ಪ್ರಯೋಜನ ಹೊಂದಿದೆ ಎಂದಿದ್ದಾರೆ.

ಸ್ವಯಂ-ಸಕ್ರಿಯ ವ್ಯವಸ್ಥೆ

ಸ್ವಯಂ-ಸಕ್ರಿಯ ವ್ಯವಸ್ಥೆ

ಕೂದಲುರಹಿತ ಇಲಿಗಳ ಮೇಲಿನ ಪರೀಕ್ಷೆಯಲ್ಲಿ ಈ ವಿಧಾನ ಯಶಸ್ವಿಯಾಗಿದ್ದು, ಬೋಳು ನಿವಾರಕ ಔಷಧಿಗಳಲ್ಲಿ ಕಂಡುಬರುವ ಎರಡು ವಿಭಿನ್ನ ಸಂಯುಕ್ತಗಳಂತೆಯೇ ಈ ಸಾಧನಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಇದು ಸ್ವಯಂ-ಸಕ್ರಿಯ ವ್ಯವಸ್ಥೆ, ತುಂಬಾ ಸರಳ ಮತ್ತು ಬಳಸಲು ಸುಲಭವಾಗಿದೆ. ಶಕ್ತಿಯನ್ನು ತುಂಬಾ ಕಡಿಮೆ ಬಳಸುವುದರಿಂದ ಇದು ಕನಿಷ್ಠ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ವಾಂಗ್ ಹೇಳಿದ್ದಾರೆ.

Best Mobiles in India

English summary
Scientists develop electric hat to reverse baldness

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X