ನಿಮ್ಮ ಕಣ್ಣಿನಲ್ಲಿಯೇ ತಿಳಿಯಲಿದೆ ಹೃದಯದ ಕಾಯಿಲೆ.. ಇದು ವೈದ್ಯಕೀಯ ಲೋಕದ ಅಚ್ಚರಿ!
AI ಟೆಕ್ನಾಲಜಿ ಇಂದು ಎಲ್ಲಾ ವಲಯದಲ್ಲಿಯು ಸದ್ದು ಮಾಡ್ತಿದೆ. AI ಚಾಲಿತ ಡಿವೈಸ್‌ಗಳು ಸಾಕಷ್ಟು ಸಂಚಲನ ಸೃಷ್ಟಿಸಿದ್ದು ಕಾರ್ಪೋರೇಟ್ ವಲಯದಿಂದ ಹಿಡಿದು ವೈದ್ಯಕೀಯ ವಲಯದವರೆಗೂ ತನ್ನ ಪ್ರಭಾವವನ್ನು ವ್ಯಾಪಿಸಿಕೊಳ್ಳುತ್ತಿದೆ. ಇದೀಗ ವಿಜ್ಞಾನಿಗಳು ಹೊಸ AI ಟೂಲ್ ಒಂದನ್ನು ಅಭಿವೃದ್ದಿಪಡಿಸಿದ್ದು, ವೈದ್ಯಕೀಯ ವಲಯವೇ ಅಚ್ಚರಿ ಪಡುವಂತೆ ಮಾಡಿದೆ.
ಹೌದು, AI ಟೆಕ್ನಾಲಜಿ ಆಧಾರಿತ ಹೊಸ ಟೂಲ್ ಒಂದನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ. ಇದು ಇಡೀ ವೈದ್ಯಕೀಯ ಲೋಕದ ಅಚ್ಚರಿ ಎನ್ನಲಾಗಿದ್ದು, ಹೃದಯ ವೈಫಲ್ಯ ಸೇರಿದಂತೆ ಅನೇಕ ಆರೋಗ್ಯ ಪರಿಸ್ಥಿತಿಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಪತ್ತೆಹಚ್ಚಲು ಸಮರ್ಥವಾಗಿದೆ. ಅಷ್ಟೇ ಅಲ್ಲ ಕೇವಲ ಕಣ್ಣಿನ ಕಾಯಿಲೆಗಳ ಮೂಲಕವೇ ಹೃದಯದ ಆರೋಗ್ಯವನ್ನು ಅಳೆಯಬಲ್ಲ ಸಾಮರ್ಥ್ಯವನ್ನು AI ಟೂಲ್ ಒಂದಿದೆ ಎನ್ನಲಾಗಿದೆ. ಹಾಗಾದ್ರೆ ಈ ಹೊಸ AI ಟೂಲ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಿಜ್ಞಾನಿಗಳು ಹೊಸದಾಗಿ ಅಭಿವೃದ್ಧಿ ಪಡಿಸಿರುವ RETFound ಎನ್ನುವ AI ಟೂಲ್ ಭಾರಿ ಸಂಚಲನ ಸೃಷ್ಟಿಸಿದೆ. ಕೇವಲ ಕಣ್ಣಿನ ಮೂಲಕವೇ ನಿಮ್ಮ ಹೃದಯದ ಕಾಯಿಲೆ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಪಡೆದಿದೆ ಎನ್ನಲಾಗಿದೆ. ಈ AI-ಚಾಲಿತ ಡಿವೈಸ್ ವ್ಯಕ್ತಿಗಳ ಅಕ್ಷಿಪಟಲದ ಚಿತ್ರಗಳ ವಿಶ್ಲೇಷಣೆಯ ಮೂಲಕ ಕಣ್ಣಿನ ಕಾಯಿಲೆಗಳಿಂದ ಹೃದಯ ವೈಫಲ್ಯ ಮತ್ತು ಪಾರ್ಕಿನ್ಸನ್ ಕಾಯಿಲೆಯವರೆಗಿನ ಆರೋಗ್ಯ ಪರಿಸ್ಥಿತಿಗಳ ವ್ಯಾಪ್ತಿಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ನಿರ್ಣಯಿಸಲಿದೆ ಎಂದು ವರದಿಯಾಗಿದೆ.
ಇದಲ್ಲದೆ RETFound AI ಟೂಲ್ ಆಟೋ-ಮೇಲ್ವಿಚಾರಣೆಯ ಲರ್ನಿಂಗ್ ವಿಧಾನವನ್ನು ಬಳಸಿಕೊಂಡು ಟ್ರೈನಿಂಗ್ ಪಡೆದಿದೆ. RETFound ಚಿತ್ರಗಳ ಕಾಣೆಯಾದ ಭಾಗಗಳನ್ನು ನಿಖರವಾಗಿ ಸ್ಕ್ಯಾನ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಮೂಲಕ ವ್ಯಕ್ತಿಯ ಹೃದಯರಕ್ತನಾಳದ ಆರೋಗ್ಯದ ಒಳನೋಟಗಳನ್ನು ಪಡೆಯಲು ಸಾಧ್ಯವಾಗಲಿದೆ. ರೆಟಿನಾಗಳ ವಿಶಿಷ್ಟತೆಯು ದೇಹದ ಚಿಕ್ಕ ರಕ್ತನಾಳಗಳ ನೇರ ನೋಟವನ್ನು ಒದಗಿಸುವ ಸಾಮರ್ಥ್ಯದಲ್ಲಿದೆ ಎಂದು ಹೇಳಲಾಗಿದೆ. ಜೊತೆಗೆ ಇದು ಸಂಕೀರ್ಣವಾದ ಕ್ಯಾಪಿಲ್ಲರಿ ನೆಟ್ವರ್ಕ್ ಅನ್ನು ರೂಪಿಸುತ್ತದೆ. ಇದರಿಂದ ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಪರಿಸ್ಥಿತಿಗಳನ್ನು ರೆಟಿನಾದ ಚಿತ್ರಗಳ ಮೂಲಕ ನೇರವಾಗಿ ವೀಕ್ಷಿಸಬಹುದು ಎಂದು ವರದಿಯಾಗಿದೆ
ಇನ್ನು ರೆಟಿನಾಗಳು ಕೇಂದ್ರ ನರಮಂಡಲದೊಂದಿಗೆ ಹೋಲಿಕೆಗಳನ್ನು ಹಂಚಿಕೊಳ್ಳುತ್ತವೆ. ಜೊತೆಗೆ ಕೆಲವು ಅಂಶಗಳಲ್ಲಿ ಮೆದುಳನ್ನು ಹೋಲುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹೋಲಿಕೆಯು ನರ ಅಂಗಾಂಶವನ್ನು ನಿರ್ಣಯಿಸಲು ರೆಟಿನಾದ ಚಿತ್ರಗಳನ್ನು ಬಳಸುವುದಕ್ಕೆ ಅನುಮತಿಸುತ್ತದೆ. ಇದೆಲ್ಲದರ ನಡುವೆಯು ಈ ಸ್ಕ್ಯಾನ್‌ಗಳ ವ್ಯಾಖ್ಯಾನಕ್ಕೆ ಸಾಮಾನ್ಯವಾಗಿ ವಿಶೇಷ ಪರಿಣತಿಯ ಅಗತ್ಯವಿರುತ್ತದೆ ಅದಕ್ಕೆ ತಕ್ಕಂತೆ RETFound AI ಟೂಲ್ ಅಗತ್ಯ ಟ್ರೈನಿಂಗ್ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಸದ್ಯ RETFound AI ಟೂಲ್ ಈಗಾಗಲೇ ಲೇಬಲ್ ಮಾಡದ ಡೇಟಾ ಮೂಲಕ ಸಾಮಾನ್ಯ ರೆಟಿನಾ ಹೇಗಿರಲಿದೆ, ಸಮಸ್ಯೆ ಇರುವ ರೆಟಿನಾ ಹೇಗಿರಲಿದೆ ಅನ್ನೊದನ್ನ ಗುರುತಿಸುವ ಸಾಮರ್ಥ್ಯ ಪಡೆದಿದೆ. ಈ ಡೇಟಾವನ್ನು ಬಳಸಿಕೊಂಡು ವ್ಯಕ್ತಿಯ ಕಣ್ಣಿನ ರೆಟಿನಾದಲ್ಲಿ ಯಾವುದಾದರೂ ಅಸಹಜತೆ ಕಾಣುತ್ತಿದೆಯಾ ಅನ್ನೊದನ್ನ ನಿರ್ಣಯಿಸಲಿದೆ. ಇದಕ್ಕಾಗಿ ರೆಟಿನಾದ ಸ್ಕ್ಯಾನ್‌ಗಳನ್ನು ಬಳಸಿಕೊಂಡು ವಿಶ್ಲೇಷಿಸುವ ಸಾಮರ್ಥ್ಯವನ್ನು RETFound AI ಟೂಲ್ ಹೊಂದಿದೆ.
ಇಷ್ಟೆಲ್ಲಾ ಸಾಮರ್ಥ್ಯಗಳನ್ನು RETFound AI ಟೂಲ್ ಹೊಂದಿರುವುದರಿಂದ ಕಣ್ಣಿನ ಮೂಲಕವೇ ನಿಮ್ಮ ಹೃದಯದ ಸಮಸ್ಯೆಯನ್ನು ಪತ್ತೆ ಹಚ್ಚಲಿದೆ. ಇದರಿಂದ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಮಾಡಲು ಸಾಧ್ಯವಾಗಲಿದೆ. ಸದ್ಯ ಸಂಚಲನ ಸೃಷ್ಟಿಸಿರುವ RETFound AI ಟೂಲ್ ಇನ್ನಷ್ಟು ಅಭಿವೃದ್ದಿಯ ನಂತರ ಎಲ್ಲಾ ಕಡೆ ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಯಿದೆ. ಒಂದು ವೇಳೆ RETFound AI ಟೂಲ್ ಬಳಕೆಗೆ ಬಂದರೆ ವೈದ್ಯಕೀಯ ಲೋಕದಲ್ಲಿ ಹೊಸ ಕ್ರಾಂತಿಯಾಗುವುದು ಪಕ್ಕಾ ಎನ್ನಲಾಗಿದೆ.


Click it and Unblock the Notifications








