ಸೋಲಾರ್ ಪವರ್‌ ಸಿಮೆಂಟ್‌ನಿಂದ ರೋಡ್‌; ರಾತ್ರಿ ವೇಳೆ ಮಿನುಗುತ್ತೆ ರಸ್ತೆ

Written By:

ರಾತ್ರಿ ವೇಳೆ ರೋಡ್‌ ಕಾಣಲ್ಲ ಅಂತ ರಸ್ತೆ ಬದಿಗಳಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಲೈಟ್‌ ವ್ಯವಸ್ಥೆ ಮಾಡಲಾಗಿರುತ್ತದೆ. ಆದ್ರೆ ಬಲ್ಪ್‌ ಎಷ್ಟು ದಿನ ಅಂತ ಉರಿಯುತ್ತೆ. ಕೆಲವು ಕಂಪನಿಗಳ ಬಲ್ಪ್‌ ಬಹುಬೇಗ ತನ್ನ ಆಯಸ್ಸು ಕಳೆದುಕೊಳ್ಳುತ್ತವೆ. ಲೈಟ್‌ ಕಂಬಕ್ಕೆ ಬಲ್ಪ್‌ ಅಳವಡಿಸುವ ಬದಲು ರೋಡ್‌ ನಿರ್ಮಿಸುವಾಗ ರೋಡ್‌ ಮಟ್ಟದಲ್ಲಿರುವಂತೆ ರೋಡ್‌'ಗೆ ಬಲ್ಪ್ ಅಳವಡಿಸಿದರೆ ಹೇಗಿರುತ್ತೆ? ಆಗ ಅದನ್ನ 'ಬಲ್ಪ್‌ ರೋಡ್‌', 'ಲೈಟ್‌ ರೋಡ್‌', 'ಸೋಲಾರ್‌ ರೋಡ್' ಎಂದು ಕರೆಯಬಹುದು.

'ಲೈಟ್‌ ರೋಡ್‌" ಎಲ್ಲೂ ಕೇಳೇ ಇಲ್‌ವಲ್ಲ. ಅದ್‌ ಹೇಗೆ ಸಾಧ್ಯ ಅಂತಿರಾ? ಇನ್ಮುಂದೆ ಅದು ಸಾಧ್ಯ. ವಿಜ್ಞಾನಿಗಳ ತಂಡವೊಂದು ಸೋಲಾರ್ ಪವರ್‌ನ ಸಿಮೆಂಟ್‌ ಕ್ರಿಯೇಟ್ ಮಾಡಿದ್ದು, ಸಿಮೆಂಟ್‌ ರಾತ್ರಿ ವೇಳೆ ರೋಡ್‌ನಲ್ಲಿ ಲೈಟ್ ಆನ್‌ ಮಾಡುತ್ತದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಜ್ಞಾನಿಗಳು

ವಿಜ್ಞಾನಿಗಳು

1

ಬೀದಿ ದೀಪಗಳ ಮೂಲಕ ರಸ್ತೆಗೆ ಬೆಳಕು ನೀಡುವುದು ಹೆಚ್ಚು ವೆಚ್ಚದಾಯಕ ಮತ್ತು ಹೆಚ್ಚು ವಿದ್ಯುತ್‌ ಅಗತ್ಯವಿರುತ್ತದೆ. ಆದ್ದರಿಂದ ಮೆಕ್ಸಿಕೋದಲ್ಲಿನ ಮೈಕೋವಕಾನ್ನ'ದಲ್ಲಿನ 'ಸ್ಯಾನ್‌ ನಿಕೋಲಸ್‌ ಹಿಡಾಲ್ಗೊ' ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಇದಕ್ಕೊಂದು ಹೊಸ ಪರಿಹಾರವನ್ನು ಕಂಡುಹಿಡಿದಿದ್ದಾರೆ.

ಬೆಳಕು ನೀಡುವ ಸಿಮೆಂಟ್‌

ಬೆಳಕು ನೀಡುವ ಸಿಮೆಂಟ್‌

2

'ಸ್ಯಾನ್‌ ನಿಕೋಲಸ್‌ ಹಿಡಾಲ್ಗೊ' ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಬೆಳಕನ್ನು ನೀಡುವ ಸಿಮೆಂಟ್‌ ಅನ್ನು ಸಂಶೋಧನೆ ಮಾಡಿದ್ದು, ಸಿಮೆಂಟ್ ಸೌರ ಶಕ್ತಿಯನ್ನು ಹಗಲಿನ ವೇಳೆ ಹೀರಿಕೊಂಡು ರಾತ್ರಿ ವೇಳೆಯ ವಾತಾವರಣಕ್ಕೆ ತಕ್ಕಂತೆ ರಸ್ತೆಗಳಲ್ಲಿ ಬೆಳಕನ್ನು ನೀಡುತ್ತದೆ.

100 ವರ್ಷ ಬಾಳಿಕೆ

100 ವರ್ಷ ಬಾಳಿಕೆ

3

"ಫ್ಲೋರೆಸೆಂಟ್‌ ಎಂಬ ಮೆಟೀರಿಯಲ್‌ ಬಳಸಿ ಪ್ಲಾಸ್ಟಿಕ್‌ ಅನ್ನು ಕಳೆದ 3 ವರ್ಷಗಳಿಂದ ಮಾಡಲಾಗುತ್ತಿದೆ. ಈ ಸಿಮೆಂಟ್‌ 100 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಬೆಳಿಕಿನ ತೀವ್ರತೆ ನಿಯಂತ್ರಣ ಇರುವುದರಿಂದ ವಾಹನ ಚಲಿಸುವವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದಿದ್ದಾರೆ. ಸಿಮೆಂಟ್‌ ಹಸಿರು ಮತ್ತು ನೀಲಿ ಬಣ್ಣದ ಬೆಳಕು ನೀಡುತ್ತದೆ " ಎಂದು ಸಂಶೋಧಕರು ಹೇಳಿದ್ದಾರೆ.

 Ph.D. ಜೋಸ್ ಕಾರ್ಲೋಸ್ ರೂಬಿಯೊ

Ph.D. ಜೋಸ್ ಕಾರ್ಲೋಸ್ ರೂಬಿಯೊ

4

'9 ವರ್ಷಗಳ ಹಿಂದೆ ಯೋಜನೆ ಪ್ರಾರಂಭಿಸಿದೆ. ಪ್ರಮುಖ ವಿಷಯವೆಂದರೆ ಸಿಮೆಂಟ್‌ ತನ್ನ ಅಪಾರದರ್ಶಕ ಗುಣದಿಂದ ಲೈಟ್‌ ಅನ್ನು ಪಾಸ್‌ ಮಾಡುವುದಿಲ್ಲ. ಆದರೆ ಹಲವು ವರ್ಷಗಳ ಪರಿಶ್ರಮದಿಂದ ಬೆಳಕು ನೀಡುವ ರೀತಿಯಲ್ಲಿ ಸಿಮೆಂಟ್‌ ಅನ್ನು ಕ್ರಿಯೇಟ್‌ ಮಾಡಲಾಗಿದೆ ಎಂದು 'ಸ್ಯಾನ್‌ ನಿಕೋಲಸ್‌ ಹಿಡಾಲ್ಗೊ' ವಿಶ್ವವಿದ್ಯಾನಿಲಯದ 'Ph.D. ಜೋಸ್ ಕಾರ್ಲೋಸ್ ರೂಬಿಯೊ', ಹೇಳಿದ್ದಾರೆ.

ಸಿಮೆಂಟ್‌ ಬಗೆಗಿನ ವಿಶೇಷತೆ

ಸಿಮೆಂಟ್‌ ಬಗೆಗಿನ ವಿಶೇಷತೆ

5

"ಸಾಮಾನ್ಯ ಸಿಮೆಂಟ್‌ ಕೇವಲ ಧೂಳಿನಂತಿರುತ್ತದೆ. ಇದಕ್ಕೆ ನೀರನ್ನು ಸೇರಿಸಿದಾಗ ಬೊಬ್ಬೆಗಳು ಉಕ್ಕೇಳುತ್ತವೆ. ಇದೇ ಸಮಯದಲ್ಲಿ ನೀರು ಮತ್ತು ಸಿಮೆಂಟ್‌ ಮಿಶ್ರಣ ಜೆಲ್‌ ಆಗಿ ಪರಿವರ್ತಿತವಾಗುತ್ತದೆ. ಇದೇ ಸಮಯದಲ್ಲಿ ಸ್ಫಟಿಕ ಪದರಗಳು ರಚನೆ ಆಗುತ್ತದೆ. ಅನಗತ್ಯ ಉಪ ಉತ್ಪನ್ನಗಳು ನಂತರ ಸಿಮೆಂಟ್‌ಗಟ್ಟಿಯಾಗಲು ಕಾರಣವಾಗುತ್ತವೆ", ಎಂದು ಡಾ|| ರುಬಿಯೋ ಹೇಳಿದ್ದಾರೆ.

ಅನಗತ್ಯ ಸ್ಫಟಿಕಗಳು

ಅನಗತ್ಯ ಸ್ಫಟಿಕಗಳು

6

ಡಾ|| ರುಬಿಯೊ ಮತ್ತು ಅವರ ಟೀಮ್‌ ಸಿಮೆಂಟ್‌ನಲ್ಲಿನ ಅನಗತ್ಯ ಸ್ಫಟಿಕಗಳಲ್ಲಿನ ಮೈಕ್ರೋ ರಚನೆಯನ್ನು ಬದಲಾಯಿಸಿ ದ್ರವ ರೂಪದಲ್ಲಿರುವಂತೆ ಕ್ರಿಯೇಟ್ ಮಾಡಿದ್ದಾರೆ. ಈ ಸಿಮೆಂಟ್‌ ಸೌರಶಕ್ತಿಯನ್ನು ಹೀರಿ ರಾತ್ರಿ ವೇಳೆ ಬೆಳಕು ನೀಡಬಲ್ಲದು.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

7

"ಬೆಳಕು ನೀಡುವ ಸಿಮೆಂಟ್‌ ಅನ್ನು ಮರಳು, ಧೂಳು ಮತ್ತು ಜೇಡಿಮಣ್ಣಿನ ಮಿಶ್ರಿತವಾಗಿ ಮಾಡಿರುವುದರಿಂದ ಸಿಮೆಂಟ್‌ ಪರಿಸರ ಸ್ನೇಹಿ ಆಗಿದೆ", ಎಂದು ರುಬಿಯೊ ಹೇಳಿದ್ದಾರೆ. ಸಿಮೆಂಟ್‌ ಕ್ರಿಯೇಟ್‌ ಮಾಡಿರುವ ವಿಜ್ಞಾನಿಗಳ ತಂಡ ಪೇಟೆಂಟ್‌ ಪಡೆದಿದ್ದು, ಅಂತರರಾಷ್ಟ್ರೀಯವಾಗಿ ಈ ಬೆಳವಣಿಗೆ ಕಂಡುಬಂದಿದೆ.

rn

ವೀಡಿಯೋ ನೋಡಿ

8

ವೀಡಿಯೋ ಕೃಪೆ: Trending Genius

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Scientists Have Created Solar-Powered Cement That Can Light Up Roads. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot