ವಿಜ್ಞಾನಿಗಳ ಈ ಪ್ರಯತ್ನಕ್ಕೆ ಸಲಾಂ ಎನ್ನಲೇಬೇಕು!..ಅಂಗೈಯಲ್ಲಿಯೇ ಆರೋಗ್ಯ ಮಾಹಿತಿ!
ಟೆಕ್ನಾಲಜಿ ಮುಂದುವರೆದಂತೆ ಸ್ಮಾರ್ಟ್‌ಫೋನ್ ವಿನ್ಯಾಸ ಹಾಗೂ ಬಳಕೆಯ ವಿಧಾನಗಳು ಬದಲಾಗುತ್ತ ಬಂದಿವೆ. ಅದರಲ್ಲೂ ಸ್ಮಾರ್ಟ್‌ಫೊನ್ ಕ್ಯಾಮೆರಾ ಬಳಸಿಕೊಂಡು ನಮ್ಮ ದೇಹದ ಆರೋಗ್ಯ ಮಟ್ಟವನ್ನು ಅಳೆಯುವ ಮಟ್ಟಿಗೆ ತಂತ್ರಜ್ಞಾನ ಬದಲಾಗಿದೆ. ಇದೀಗ ವಿಜ್ಞಾನಿಗಳು ಮೊಬೈಲ್ ಕ್ಯಾಮೆರಾ ಮೂಲಕ ದೇಹದ ರಕ್ತದೊತ್ತಡ ಅಳೆಯುವುದನ್ನು ಅಭಿವೃದ್ಧಿಪಡಿಸಿದ್ದಾರೆ.
ಹೌದು, ಅಂಗೈ ಅಗಲದ ಸ್ಮಾರ್ಟ್‌ಫೋನ್ ಮೂಲಕ ನಿಮ್ಮ ಬೆರಳ ತುದಿಯಲ್ಲಿ ರಕ್ತದೊತ್ತಡ ಮೇಲ್ವಿಚಾರಣೆ ಮಾಡಲು ಅನುಕೂಲವಾಗುವ ಕ್ಲಿಪ್ ಅನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಫ್ಲ್ಯಾಶ್ ಅನ್ನು ಬಳಸುವ ಸರಳವಾದ ಕಡಿಮೆ ವೆಚ್ಚದ ಕ್ಲಿಪ್ ಇದಾಗಿದೆ ಎಂದು ವರದಿಯಾಗಿದೆ. ಹಾಗಾದ್ರೆ ಈ ಹೊಸ ತಂತ್ರಜ್ಞಾನದಿಂದ ಏನೆಲ್ಲಾ ಉಪಯೋಗವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ವಿಜ್ಞಾನಿಗಳ ಹೊಸ ಸಂಶೋದನೆ: ಸ್ಮಾರ್ಟ್‌ಫೋನ್ ಮೂಲಕವೇ ನಮ್ಮ ಆರೋಗ್ಯಮಟ್ಟವನ್ನು ಪರಿಶೀಲಿಸಿಕೊಳ್ಳುವ ತಂತ್ರಜ್ಞಾನ ದಿನೇದಿನೇ ಸಾಕಷ್ಟು ಅಪ್ಡೇಟ್ ಆಗುತ್ತಿದೆ. ಅದರಂತೆ ಪ್ರಸ್ತುತ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಕಡಿಮೆ ವೆಚ್ಚದ ಕ್ಲಿಪ್ ಹೊಸ ಸೇರ್ಪಡೆಯಾಗಿದೆ. ಇದರಿಂದ ಕಡಿಮೆ ವೆಚ್ಚದ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಕೂಡ ನಿಮ್ಮ ರಕ್ತದೊತ್ತಡವನ್ನು ಅಳೆಯಲು ಸಾಧ್ಯವಾಗಲಿದೆ. ಪ್ರಸ್ತುತ ಈ ತಂತ್ರಜ್ಞಾನವನ್ನು ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ (UC) ಸ್ಯಾನ್ ಡಿಯಾಗೋ, US ನಲ್ಲಿ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.
ಇನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಹೊಸ ಕ್ಲಿಪ್ ಕಸ್ಟಮ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಈ ಕ್ಲಿಪ್ ತಯಾರಿಸಲು ಸುಮಾರು 80 ಸೆಂಟ್ಸ್ (5.6ರೂ.) ವೆಚ್ಚವಾಗುತ್ತದೆ ಎನ್ನಲಾಗಿದೆ. ಇದೇ ಕ್ಲಿಪ್ ಅನ್ನು ಸ್ಕೇಲ್‌ನಲ್ಲಿ ತಯಾರಿಸಿದಾಗ ಪ್ರತಿಯೊಂದಕ್ಕೂ 10 ಸೆಂಟ್‌ಗಳಷ್ಟು (0.7ರೂ) ವೆಚ್ಚವಾಗಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಜರ್ನಲ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ವಿವರಿಸಲಾದ ಈ ತಂತ್ರಜ್ಞಾನವು ನಿಯಮಿತ ರಕ್ತದೊತ್ತಡದ ಮೇಲ್ವಿಚಾರಣೆಯನ್ನು ಸುಲಭವಾಗಿ ಮಾಡಲು ಅವಕಾಶ ನೀಡಲಿದೆ.

ಇದರಿಂದ ಯಾರಿಗೆ ಪ್ರಯೋಜನ: ಇದು ವಯಸ್ಸಾದ ವಯಸ್ಕರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಪ್ರಯೋಜನ ನೀಡಲಿದೆ. ಇನ್ನು "ರಕ್ತದೊತ್ತಡದ ಮಾನಿಟರಿಂಗ್‌ಗೆ ತಡೆಗೋಡೆಯನ್ನು ಕಡಿಮೆ ಮಾಡಲು ನಾವು ಅಗ್ಗದ ಪರಿಹಾರವನ್ನು ರಚಿಸಿದ್ದೇವೆ" ಎಂದು ಯುಸಿ ಸ್ಯಾನ್ ಡಿಯಾಗೋದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಯಿನಾನ್ ಕ್ಸುವಾನ್ ಅಭಿಪ್ರಾಯಪಟ್ಟಿದ್ದಾರೆ. ಇವುಗಳ ವೆಚ್ಚ ಕಡಿಮೆ ಇರುವ ಕಾರಣ ಈ ಕ್ಲಿಪ್‌ಗಳನ್ನು ಯಾರಿಗಾದರೂ ಹಸ್ತಾಂತರಿಸಬಹುದು ಎಂದು ಹೇಳಿದೆ. ಆದರಿಂದ ನೀವು ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಕುಳಿತು ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸಬಹುದು.
ಇದರ ಬಳಕೆ ಹೇಗೆ: ಇನ್ನು ಸ್ಮಾರ್ಟ್‌ವಾಚ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳಿಗಾಗಿ ಇತರ ಕಫ್‌ಲೆಸ್ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಫ್‌ನೊಂದಿಗೆ ಪ್ರತ್ಯೇಕ ಅಳತೆಗಳ ಸೆಟ್‌ಗಳನ್ನು ಪಡೆಯುವುದು ಅಗತ್ಯವಾಗಿದೆ ಎಂದು ಹೇಳಲಾಗಿದೆ. ಅದರಂತೆ ರಕ್ತದೊತ್ತಡವನ್ನು ಅಳೆಯಲು, ಬಳಕೆದಾರರು ಕ್ಲಿಪ್ ಅನ್ನು ಬೆರಳ ತುದಿಯಿಂದ ಒತ್ತಬೇಕಾಗುತ್ತದೆ. ನಂತರ ಕಸ್ಟಮ್ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ನಿಮ್ಮ ರಕ್ತದೊತ್ತಡದ ವಿವರಗಳನ್ನು ತಿಳಿಯಬಹುದು.

ಸದ್ಯ ವಿಜ್ಞಾನಿಗಳು ಅಭಿವೃದ್ದಿಪಡಿಸಿರುವ ಕ್ಲಿಪ್ 3D-ಮುದ್ರಿತ ಪ್ಲಾಸ್ಟಿಕ್ ಅಟ್ಯಾಚ್‌ಮೆಂಟ್ ಆಗಿದ್ದು, ಇದು ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಮತ್ತು ಫ್ಲ್ಯಾಷ್‌ಗೆ ಹೊಂದಿಕೊಳ್ಳುತ್ತದೆ. ಇದು ಪಿನ್‌ಹೋಲ್ ಕ್ಯಾಮೆರಾದಂತೆಯೇ ಆಪ್ಟಿಕಲ್ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಬಳಕೆದಾರರು ಕ್ಲಿಪ್ ಅನ್ನು ಒತ್ತಿದಾಗ, ಸ್ಮಾರ್ಟ್‌ಫೋನ್‌ನ ಫ್ಲ್ಯಾಷ್ ಬೆರಳ ತುದಿಯಲ್ಲಿ ಬೆಳಗಲಿದೆ. ಈ ಬೆಳಕಿನ ಪಿನ್ ಹೋಲ್ ಗಾತ್ರದ ಚಾನಲ್ ಮೂಲಕ ಕ್ಯಾಮೆರಾಗೆ ಕೆಂಪು ವೃತ್ತದ ಚಿತ್ರವಾಗಿ ಪ್ರಕ್ಷೇಪಿಸಲಾಗುತ್ತದೆ.
ಕ್ಲಿಪ್‌ನೊಳಗಿನ ಸ್ಪ್ರಿಂಗ್ ಬಳಕೆದಾರರಿಗೆ ವಿವಿಧ ಹಂತದ ಬಲದೊಂದಿಗೆ ಒತ್ತಲು ಅನುಮತಿಸುತ್ತದೆ. ನೀವು ಎಷ್ಟು ಗಟ್ಟಿಯಾಗಿ ಪ್ರೆಸ್ ಮಾಡುತ್ತಿರೋ ಕ್ಯಾಮೆರಾದಲ್ಲಿ ರೆಡ್ ಸರ್ಕಲ್ ದೊಡ್ಡದಾಗಿ ಕಾಣಿಸಲಿದೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ರೆಡ್ ಸರ್ಕಲ್‌ನ ಗಾತ್ರದ ಆಧಾರದ ಮೆಲೆ ಬಳಕೆದಾರರ ರಕ್ತದೊತ್ತಡವನ್ನು ಅಳೆಯಲಿದೆ.


Click it and Unblock the Notifications








