ಎರಡು ದಿನ ಸಮುದ್ರದ ಆಳದಲ್ಲಿದ್ದ ಐಫೋನ್‌ 7 ಹೇಗಿತ್ತು ಗೊತ್ತಾ?

By GizBot Bureau
|

ಒಂದು ವೇಳೆ ನಿಮ್ಮ ಫೋನ್ ಅಚಾನಕ್ ಆಗಿ ಬಕೆಟ್ ನಲ್ಲಿರುವ ನೀರಿನಲ್ಲೋ ಅಥವಾ ಮಳೆಯ ನೀರಿನಲ್ಲೋ ಬಿದ್ದು ಒದ್ದೆಯಾಯ್ತು ಅಂದುಕೊಳ್ಳೋಣ. ನಿಮಗೆ ಏನನ್ನಿಸುತ್ತದೆ. ಅಯ್ಯೋ ಮೊಬೈಲ್ ಹಾಳಾಯ್ತಲ್ಲ ಅಂತ ಬೇಸರವಾಗುತ್ತಲ್ಲ. ಹೆಚ್ಚಾಗಿ ಎಲ್ಲಾ ಫೋನ್ ಗಳು ಜಸ್ಟ್ ನೀರಿಗೆ ಬಿತ್ತು ಅಂದರೆ ಅದು ಡೆಡ್ ಅಂತಲೇ ಅರ್ಥ. ಆದರೆ ಇಲ್ಲೊಂದು ಫೋನ್ ಇದೆ. ಬರೋಬ್ಬರಿ ಎರಡು ದಿನ ಸಮುದ್ರದಲ್ಲೇ ಇತ್ತು. ಆದರೂ ಸ್ವಲ್ಪವೂ ಹಾಳಾಗಿಲ್ಲ!

ಯಾವುದು ಆ ಫೋನ್ ಎಂದು ಕೇಳುತ್ತಿದ್ದೀರಾ? ಅದುವೇ ಆಪಲ್ ಐಫೋನ್ ಗಳು. ಆಪಲ್ ಫೋನ್ ಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ ಮತ್ತು ಉತ್ತಮ ಪ್ರದರ್ಶನ ನೀಡುತ್ತದೆ ಎಂಬ ಕಾರಣಕ್ಕೆ ಪ್ರಸಿದ್ಧಿಯಾಗಿರುವ ಫೋನ್ ಗಳು. ಈ ವಿಚಾರಕ್ಕೆ ಪುಷ್ಠಿ ನೀಡುವ ಮತ್ತೊಂದು ಘಟನೆ ಇತ್ತೀಚೆಗಷ್ಟೇ ಸಂಭವಿಸಿದೆ. ಆಪಲ್ ಐಫೋನ್ ಗಳು ಕೊಟ್ಟ ಬೆಲೆಗೆ ತಕ್ಕ ಫೋನ್ ಗಳು ಎಂಬುದನ್ನು ಮತ್ತೊಮ್ಮೆ ರುಜುವಾತು ಪಡಿಸಿವೆ.

ಎರಡು ದಿನ ಸಮುದ್ರದ ಆಳದಲ್ಲಿದ್ದ ಐಫೋನ್‌ 7 ಹೇಗಿತ್ತು ಗೊತ್ತಾ?

ಡಿಜಿಟೈಮ್ಸ್ ಒಂದರ ವರದಿಯ ಪ್ರಕಾರ ಆಪಲ್ ಐಫೋನ್ 7 ಸಮುದ್ರದ ಆಳದ ತಟದಲ್ಲಿ ಇತ್ತು ಮತ್ತು ಅದರ ಬ್ಯಾಟರಿ ಸಂಪೂರ್ಣ ಒದ್ದೆಯಾಗಿತ್ತು. ಆದರೂ ಕೂಡ ಫೋನ್ ಇನ್ನೂ ಕೂಡ ಕಾರ್ಯ ನಿರ್ವಹಿಸುತ್ತಿತ್ತಂತೆ. ಅದಕ್ಕಿಂತ ಮುಖ್ಯವಾಗಿ ಸಾಗರದ ಆಳದಲ್ಲೂ ಕೂಡ ಆಪಲ್ ಫೋನ್ ಸಿಗ್ನಲ್ ಗಳನ್ನು ಪಡೆದುಕೊಳ್ಳುತ್ತಿತ್ತು. ಸ್ಕೂಬಾ ಡೈವರ್ ಗಳು ಸಮುದ್ರ ಆಳದಲ್ಲಿ ಹುಡುಕಾಟ ನಡೆಸುವಾಗ ಟೆಕ್ಸ್ಟ್ ಮೆಸೇಜ್ ಬಂದು ಫೋನ್ ಮಿನುಗಿದ್ದರಿಂದ ಅವರಿಗೆ ಹುಡುಕಲು ಸುಲಭವಾಯಿತಂತೆ.

ಸೆರಿಸ್ ಹರ್ಸೆ ಅನ್ನೋ ಯುಕೆಯ ಸ್ಕೂಬಾ ಡೈವರ್ ಆ ಬೆಳಕಿನ ಪ್ರತಿಫಲವನ್ನೇ ಗಮನಿಸಿ ಸಮುದ್ರದಾಳದಲ್ಲಿ ಅದು ಏನು ಎಂದು ಹತ್ತಿರ ಹೋಗಿ ಗಮನಿಸಿದರಂತೆ. ಆಗ ಆಕೆಗೆ ಆಶ್ಚರ್ಯವಾಯಿತಂತೆ. ಯಾಕೆಂದರೆ ಅದು ಆಪಲ್ ಐಫೋನ್ 7 ಆಗಿತ್ತು ಮತ್ತು ಅದು ಸಮುದ್ರದಾಳದಲ್ಲೂ ಕೂಡ ಸಿಗ್ನಲ್ ಗಳನ್ನು ಪಡೆದು ಟೆಕ್ಸ್ಟ್ ಮೆಸೇಜ್ ಗಳನ್ನು ರಿಸೀವ್ ಮಾಡುತ್ತಿತ್ತು ಜೊತೆಗೆ ಬೆಳಕು ಕೂಡ ಬರುತ್ತಿತ್ತು. ಅದಾಗಲೇ ಆ ಫೋನ್ ಸಮುದ್ರಕ್ಕೆ ಬಿದ್ದು 48 ಘಂಟೆಗಳು ಕಳಿದ್ದಿದ್ದವಂತೆ. ಆದರೂ ಕೂಡ ಬ್ಯಾಟರಿ ಚಾರ್ಜ್ ಶೇಕಡಾ 84 ರಷ್ಟಿತ್ತು ಮತ್ತು ಸಿಗ್ನಲ್ ಗಳನ್ನು ಅದು ಪಡೆಯುತ್ತಿತ್ತು.

ಎರಡು ದಿನ ಸಮುದ್ರದ ಆಳದಲ್ಲಿದ್ದ ಐಫೋನ್‌ 7 ಹೇಗಿತ್ತು ಗೊತ್ತಾ?

ಈ ಸ್ಮಾರ್ಟ್ ಫೋನ್ ಕೆನಡಾದ ಭೇಟಿಗಾರರೊಬ್ಬರು ಕಯಾಕಿಂಗ್ ಮಾಡುವಾಗ ಈ ಫೋನನ್ನು ಕಳೆದುಕೊಂಡಿದ್ದರಂತೆ. ಅಚಾನಕ್ ಆಗಿ ಫೋನ್ ಸಮುದ್ರಕ್ಕೆ ಬಿದ್ದಿದೆ ಮತ್ತು ಆತ ಅದು ಕಳೆದೇ ಹೋಯ್ತು ಮತ್ತೆ ಸಿಗುವುದಿಲ್ಲ ತನಗೆ ಎಂದೇ ಭಾವಿಸಿದ್ದರಂತೆ. ಆದರೆ ಸೆರಿಸ್ ಆ ಫೋನ್ ಸಿಕ್ಕಿದ ಮೇಲೆ ಅದು ಕೆನಡಾದ ವ್ಯಕ್ತಿಯದ್ದು ಎಂದು ಕಂಡುಹಿಡಿದಿದ್ದಾರೆ ಮತ್ತು ಅವರಿಗೆ ಪುನಃ ಕೊಟ್ಟಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವೆಂದರೆ ಫೋನಿನ ಮಾಲೀಕ ಆ ಫೋನಿಗೆ ರಕ್ಷಣಾ ಕವಚವನ್ನು ಹಾಕಿದ್ದರು ಮತ್ತು ಅದು ಎಂತಹ ಕಠಿಣ ಪರಿಸ್ಥಿತಿಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿತ್ತು. ಆ ರಕ್ಷಣಾ ಕವಚ ಎರಡು ದಿನ ಫೋನ್ ಗಟ್ಟಿಮುಟ್ಟಾಗಿ ಇರುವಂತೆ ಮಾಡಿತ್ತು. ಆಪಲ್ ಐಫೋನ್ 7 IP67 ಜೊತೆಗೆ ಜಲ ನಿರೋಧಕ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಇಂತಹ ಯಾವುದೇ ಸಂದರ್ಬದಲ್ಲೂ ಕೂಡ ರಕ್ಷಣಾತ್ಮಕವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಇದೇ ಕಾರಣಕ್ಕೆ ಆಪಲ್ ಫೋನ್ ಗಳು ಇಂದಿಗೂ ಗ್ರೇಟ್ ಅನ್ನಿಸಿಕೊಳ್ಳೋದು.

Best Mobiles in India

English summary
Scuba diver finds iPhone 7 in sea after 2 days in perfect working condition. to know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X