Home
ಸುದ್ದಿಜಾಲ

ಇನ್ಮುಂದೆ ಬೆಂಗಳೂರಿನೆಲ್ಲೆಡೆ ಉಚಿತ ವೈಫೈ!..ಮೊಬೈಲ್ ಪ್ರಿಯರು ಫುಲ್ ಖುಷ್!!

ಬೆಂಗಳೂರು ಜನತೆಗೆ ಸ್ಪೀಡ್ ಇಂಟರ್‌ನೆಟ್‌ ಸೇವೆ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಉಚಿತ ಬೆಂಗಳೂರು ವೈ-ಫೈ' ಯೋಜನೆಗೆ ಕೊನೆಗೂ ಚಾಲನೆ ನೀಡಲು 'ಬಿಬಿಎಂಪಿ' ಸಿದ್ಧವಾಗಿದೆ. ನಗರದೆಲ್ಲೆಡೆ ಉಚಿತ ವೈ-ಫೈ ಸೇವೆ ಒದಗಿಸಲು ಖಾಸಾಗಿ ಕಂಪೆನಿಗಳಿಗೆ ಅವಕಾಶ ಮಾಡಿಕೊಡಲು 'ಬಿಬಿಎಂಪಿ' ತೀರ್ಮಾನಿಸಿದೆ ಎಂಬ ಸಿಹಿಸುದ್ದಿಯೊಂದು ಹೊರಬಿದ್ದಿದೆ.

ಹೌದು, ಬಿಬಿಎಂಪಿ ಆಯುಕ್ತರು ಟೆಲಿಕಾಂ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ, ನಗರದಲ್ಲಿ ವೈ-ಫೈ ಸೇವೆ ಒದಗಿಸಲು ಖಸಾಗಿ ಸಂಸ್ಥೆಗಳು ಮುಂದಾಗಿವೆ. ಜನವರಿ ಅಂತ್ಯದ ವೇಳೆಗೆ ನಗರದ 800 ಸ್ಥಳಗಳಲ್ಲಿ ಜನರಿಗೆ ಉಚಿತ ವೈ-ಫೈ ಸೇವೆ ದೊರೆಯಲಿದ್ದು, ಏಪ್ರಿಲ್‌ ವೇಳೆಗೆ ನಗರದ 3 ಸಾವಿರ ಸ್ಥಳಗಳಲ್ಲಿ ವೈ-ಫೈ ಸೇವೆ ನೀಡಲು ಕಂಪೆನಿಗಳು ಮುಂದಾಗಿವೆ.

ಇನ್ಮುಂದೆ ಬೆಂಗಳೂರಿನೆಲ್ಲೆಡೆ ಉಚಿತ ವೈಫೈ!..ಮೊಬೈಲ್ ಪ್ರಿಯರು ಫುಲ್ ಖುಷ್!!

ಸರ್ಕಾರದಿಂದ ಇಂಡಸ್ ಟವರ್, ಹನಿಕಾಂಬ್‌, ಡಿ-ವೊಯಾಸ್‌ ಹಾಗೂ ಎಸಿಟಿ ಟೆಲಿಕಾಂ ಸಂಸ್ಥೆಗಳಿಗೆ ನಗರದ 5,938 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಅನುಮತಿ ನೀಡಲಾಗುತ್ತಿದೆ. ಹಾಗಾದರೆ, 'ಉಚಿತ ಬೆಂಗಳೂರು ವೈ-ಫೈ' ಯೋಜನೆ ಹೇಗಿರಲಿದೆ? ಎಷ್ಟು ಡೇಟಾ ಉಚಿತ?,ಇದರಿಂದ ಬಿಬಿಎಂಪಿಗೆ ಏನು ಲಾಭ ಎಂಬುದನ್ನು ಮುಂದೆ ಓದಿ ತಿಳಿಯಿರಿ.

5,938 ಕಡೆಗಳಲ್ಲಿ ಉಚಿತ ವೈ-ಫೈಗೆ ಅನುಮತಿ!

5,938 ಕಡೆಗಳಲ್ಲಿ ಉಚಿತ ವೈ-ಫೈಗೆ ಅನುಮತಿ!

ರಾಜ್ಯ ಸರ್ಕಾರದಿಂದ ಇಂಡಸ್ ಟವರ್, ಹನಿಕಾಂಬ್, ಡಿ-ವೊಯಾಸ್ ಹಾಗೂ ಎಸಿಟಿ ಟೆಲಿಕಾಂ ಸಂಸ್ಥೆಗಳಿಗೆ ಬೆಂಗಳೂರು ನಗರದ 5,938 ಕಡೆಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಹಾಟ್‌ಸ್ಪಾಟ್‌ಗಳನ್ನು ಹಾಕಲು ಅನುಮತಿ ನೀಡುವಂತೆ ಸುತ್ತೋಲೆ ಹೊರಡಿಸಿತ್ತು. ಆ ಹಿನ್ನೆಲೆಯಲ್ಲಿ ಈ ಎಲ್ಲಾ ಸಂಸ್ಥೆಗಳಿಗೆ ಪಾಲಿಕೆಯಿಂದ ಅನುಮತಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸ್ಮಾರ್ಟ್‌ಪೋಲ್‌ ಬದಲಿದೆ ಹಾಟ್‌ಸ್ಪಾಟ್‌ ಅಳವಡಿಕೆ.!

ಸ್ಮಾರ್ಟ್‌ಪೋಲ್‌ ಬದಲಿದೆ ಹಾಟ್‌ಸ್ಪಾಟ್‌ ಅಳವಡಿಕೆ.!

ಈ ಮೊದಲು ನಗರದ ಹತ್ತಾರು ಕಡೆಗಳಲ್ಲಿ ವೈ-ಫೈ ಸ್ಮಾರ್ಟ್‌ಪೋಲ್‌ಗ‌ಳನ್ನು ಅಳವಡಿಸಲಾಘಿತ್ತು. ಆದರೆ, ಪೋಲ್‌ ಅಳವಡಿಕೆಗೆ ಹೆಚ್ಚು ಖರ್ಚಾಗುತ್ತದೆ ಎಂಬ ಕಾರಣದಿಂದ ಹಾಟ್‌ ಸ್ಪಾಟ್‌ ಡಿವೈಸ್‌ಗಳ ಅಳವಡಿಕೆಗೆ ಸಂಸ್ಥೆಗಳು ಮುಂದಾಗಿವೆ. ಟೆಲಿಕಾಂ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ ಬಳಿಕ ಬಿಬಿಎಂಪಿ ಆಯುಕ್ತರು ಇದಕ್ಕೆ ಅನುಮತಿ ನಿಡಿದ್ದಾರೆ ಎಂದು ತಿಳಿದುಬಂದಿದೆ.

ಜನವರಿ ಅಂತ್ಯದಲ್ಲಿ ಸೇವೆ ಆರಂಭ!

ಜನವರಿ ಅಂತ್ಯದಲ್ಲಿ ಸೇವೆ ಆರಂಭ!

ಕೆಲವು ಟೆಲಿಕಾಂ ಸಂಸ್ಥೆಗಳು ಈಗಾಗಲೇ 3 ಸಾವಿರಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಉಚಿತ ವೈ-ಫೈ ಸೇವೆ ಒದಗಿಸುವ ಡಿವೈಸ್‌ ಅಳವಡಿಸಲು ಅನುಮತಿ ಪಡೆದುಕೊಂಡಿವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಜನವರಿ ಅಂತ್ಯದ ವೇಳೆಗೆ 800 ಕಡೆಗಳಲ್ಲಿ ಸೇವೆ ಆರಂಭವಾಗಲಿದೆ. ಜತೆಗೆ ಏಪ್ರಿಲ್‌ ವೇಳೆಗೆ 3 ಸಾವಿರ ಕಡೆಗಳಲ್ಲಿ ಉಚಿತವ ವೈ-ಫೈ ದೊರೆಯಲಿದೆ.

ಅರ್ಧ ಗಂಟೆ ಉಚಿತ ಡೇಟಾ!

ಅರ್ಧ ಗಂಟೆ ಉಚಿತ ಡೇಟಾ!

ಉಚಿತ ವೈ-ಫೈ ಸೇವೆ ಒದಗಿಸಲು ಎಲ್ಲಾ ಟೆಲಿಕಾಂ ಸಂಸ್ಥೆಗಳು ಮುಂದಾಗಿವೆ. ಆದರೆ, ದಿನದ ಮೊದಲ ಅರ್ಧ ಗಂಟೆ ಮಾತ್ರ ಉಚಿತ ಹೈ ಸ್ಪೀಡ್ ಇಂಟರ್‌ನೆಟ್ ವೈ-ಫೈ ಸೇವೆಯನ್ನು ಆ ಕಂಪೆನಿಗಳು ನೀಡಲಿವೆ. ಅದಾದ ಬಳಿಕ ವೈ-ಫೈ ಬಳಸಲು ಇಂತಿಷ್ಟು ಹಣವನ್ನು ಸಂಸ್ಥೆಗಳಿಗೆ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದದ್ದು, ದರದ ಎಷ್ಟಿರಲಿದೆ ಎಂಬ ಮಾಹಿತಿ ಸಧ್ಯಕ್ಕಿಲ್ಲ.

ಪಾಲಿಕೆ ಖಜಾನೆ ಭರ್ತಿ!

ಪಾಲಿಕೆ ಖಜಾನೆ ಭರ್ತಿ!

ಖಾಸಾಗಿ ಸಂಸ್ಥೆಗಳಿಗೆ ನಗರದಲ್ಲಿ ಇಂಟರ್‌ನೆಟ್ ನೀಡಲು ಅನುಮತಿ ನೀಡಿರುವ ಬಿಬಿಎಂಪಿಯ ಖಜಾನೆ ತುಂಬಲಿದೆ. ಉಚಿತ ವೈ-ಫೈ ಸೇವೆ ಒದಗಿಸುವ ಪ್ರತಿಯೊಂದು ಡಿವೈಸ್‌ಗೆ ಸಂಸ್ಥೆಗಳು 73,160 ಕೋಟಿ ರೂ. ಒಎಫ್ಸಿ+ಜಿಎಸ್‌ಟಿ ಶುಲ್ಕ ಪಾವತಿಸಬೇಕರುವುದರಿಂದ, 5,938 ಕಡೆಗಳಲ್ಲಿ ಡಿವೈಸ್‌ ಅಳವಡಿಸಿದರೆ ಪಾಲಿಕೆಗೆ 48 ಕೋಟಿ ರೂ. ಆದಾಯ ಬರಲಿದೆ.

Best Mobiles in India

English summary
Seamless network: 5,938 hotspots to offer free WiFi across Bengaluru. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+