Microsoft Edge ನಿಂದ ಹೊಸ ಆಫರ್: Chrome ಹುಡುಕಿದರೆ ರಿವಾರ್ಡ್ ಪಾಯಿಂಟ್ಸ್!
ಯಾರಾದರೂ ಹೊಸ ವಿಂಡೋಸ್ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ಖರೀದಿಸಿದಾಗ ಅದರಲ್ಲಿ ಡೀಫಾಲ್ಟ್ ಬ್ರೌಸರ್ ಆಗಿ Microsoft Edge ಇರುತ್ತದೆ. ಆದರೆ, ಲ್ಯಾಪ್‌ಟಾಪ್ ಖರೀದಿಸಿದ ನಂತರ ಬಹುತೇಕ ಬಳಕೆದಾರರು ಮಾಡುವ ಮೊದಲ ಕೆಲಸ ಎಂದರೆ Bing ನಲ್ಲಿ 'Google Chrome' ಅನ್ನು ಹುಡುಕುವುದು ಮತ್ತು ನಂತರ Chrome ಇನ್‌ಸ್ಟಾಲ್ ಮಾಡುವುದು. ಇದರಿಂದ Microsoft Edge ಬಳಕೆಯು ಹೆಚ್ಚು ಪ್ರಗತಿಯನ್ನು ಸಾಧಿಸುತ್ತಿರಲಿಲ್ಲ. ಹಾಗಾಗಿ, ಈ ಪ್ರವೃತ್ತಿಯನ್ನು ತಡೆಯಲು ಮೈಕ್ರೋಸಾಫ್ಟ್ ಕಂಪೆನಿಯು ಹೊಸ ರೀತಿಯ ಪ್ರೋತ್ಸಾಹ ಯೋಜನೆಯನ್ನು ಆರಂಭಿಸಿದೆ.!
ಹೌದು. ಬಳಕೆದಾರರು Bingನಲ್ಲಿ 'Chrome' ಎಂದು ಹುಡುಕಿದಾಗ, Microsoft ಕಂಪನಿಯು ಅವರಿಗೆ 1,300 Microsoft Rewards ಪಾಯಿಂಟ್‌ಗಳು ನೀಡುವ ಆಫರ್ ನೀಡುತ್ತಿದೆ. ಈ ಪಾಯಿಂಟ್‌ಗಳನ್ನು ನಂತರ ಗಿಫ್ಟ್ ಕಾರ್ಡ್‌ಗಳಾಗಿ ಮಾರ್ಪಡಿಸಬಹುದು ಅಥವಾ ತಮ್ಮ ಇಷ್ಟದ ಎನ್‌ಜಿಒಗಳಿಗೆ(NGO) ದಾನವಾಗಿ ನೀಡಬಹುದು. 'Earn 1,300 Microsoft Rewards points by trying Edge' ಎಂಬ ಸಂದೇಶ ಬಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಕ್ಕೆ 'Redeem your points for gift cards or donate to one of over 2 million nonprofits' ಎಂಬ ಸಾಲನ್ನು ಸೇರಿಸಲಾಗಿದೆ.
Microsoft Edge ಬಳಸಲು ಲಂಚ?
ಪ್ರಸ್ತುತ ಇಂಟರ್‌ನೆಟ್ ಪ್ರಪಂಚದಲ್ಲಿ Google Chrome ಪಾಲು ಹೆಚ್ಚಿದೆ. Similarweb ವರದಿಯ ಪ್ರಕಾರ, Google Chrome ಪ್ರಸ್ತುತ ಪಿಸಿ ಬ್ರೌಸರ್ ಮಾರುಕಟ್ಟೆಯಲ್ಲಿ 69.3% ಹಂಚಿಕೆ ಹೊಂದಿದೆ, ಆದರೆ Microsoft Edge ಕೇವಲ 15.48% ಹಂಚಿಕೆ ಹೊಂದಿದೆ. ಈ ಅಂತರವನ್ನು ಕಡಿಮೆ ಮಾಡಲು ಮೈಕ್ರೋಸಾಫ್ಟ್ ಹೊಸ ಮಾರ್ಗಗಳನ್ನು ಅನುಸರಿಸುತ್ತಿದೆ. ಇದರಲ್ಲಿ ಈ ಹೊಸ ರೀತಿಯ ಪ್ರೋತ್ಸಾಹ ಯೋಜನೆಯು ಕೂಡ ಒಂದಾಗಿದೆ. ಇದು ಒಂದು ರೀತಿಯಲ್ಲಿ Google Chrome ಬಳಸಲು ಇಚ್ಚಿಸುವ ಗ್ರಾಹಕರಿಗೆ ಲಂಚವನ್ನು ನೀಡಿ Microsoft Edge ಬಳಸಲು ಪ್ರೇರೇಪಿಸಿದಂತಿದೆ. ಆದರೆ, ಲವರಿಗೆ ಈ ಆಫರ್ ಬದಲು ಬಿಂಗ್‌ನಲ್ಲಿ ಪ್ರಚಾರ ಸಂದೇಶ ಮಾತ್ರ ಕಾಣಿಸಿದ್ದು, 'All you need is right here. Microsoft Edge runs on the same technology as Chrome, with the added trust of Microsoft' ಎಂದು ಹೇಳಲಾಗಿದೆ.

Microsoft Edge: ಅತ್ಯುತ್ತಮವಾದರೂ ದೂರವಿದೆಯೇ?
Microsoft ತನ್ನ Edge ಬ್ರೌಸರ್ ಅನ್ನು ನಿಯಮಿತವಾಗಿ ಅಪ್‌ಡೇಟ್ ಮಾಡುತ್ತಿದೆ. ಇತ್ತೀಚಿಗೆ ಇದರ AI ವೈಶಿಷ್ಟ್ಯಗಳು, ಮತ್ತು ಭದ್ರತಾ ಸೌಲಭ್ಯಗಳು ಹೆಚ್ಚು ಗಮನಸೆಳೆದಿವೆ. ಆದರೂ ಸಹ Microsoft Edge ತನ್ನ ಮಾರುಕಟ್ಟೆ ವ್ಯಾಪ್ತಿಯನ್ನು ಹೆಚ್ಚಾಗಿ ವಿಸ್ತರಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಎಂದರೆ, Google Chrome ಈಗಾಗಲೇ ಹೆಚ್ಚು ಜನರನ್ನು ಆಕ್ರಮಿಸಿಕೊಂಡಿದೆ. ಇದನ್ನು ಮುರಿಯುವ ಸಲುವಾಗಿ Microsoft ಈ ಹೊಸ ಪ್ರೋತ್ಸಾಹ ಯೋಜನೆಯನ್ನು ತಂದಿರಬಹುದು. ಹಾಗಾದರೆ, Microsoft Edge ಇದೀಗ ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ಸಹ ನೋಡೋಣ ಬನ್ನಿ.
Microsoft Edge: ಪ್ರಮುಖ ವೈಶಿಷ್ಟ್ಯಗಳು
1. ಬಿಲ್ಟ್-ಇನ್ VPN ಮತ್ತು ಟ್ರ್ಯಾಕರ್ ಬ್ಲಾಕಿಂಗ್: Microsoft Edgeನಲ್ಲಿ ಉಚಿತ ಸುರಕ್ಷಿತ ನೆಟ್‌ವರ್ಕ್ VPN ಇದೆ, ಇದು ಬ್ರೌಸಿಂಗ್ ವೇಳೆ ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತದೆ. ಜೊತೆಗೆ, ಥರ್ಡ್ ಪಾರ್ಟಿ ಟ್ರ್ಯಾಕರ್‌ಗಳನ್ನು ತಡೆಯುವ ವೈಶಿಷ್ಟ್ಯ ಕೂಡ ಇದೆ.
2. Microsoft Rewards ಪಾಯಿಂಟ್ ಸಿಸ್ಟಮ್: ಪ್ರತಿ ಸರ್ಚ್, ಶಾಪಿಂಗ್ ಅಥವಾ ವೆಬ್‌ಸೈಟ್ ವೀಕ್ಷಣೆಗೆ ಬಳಕೆದಾರರು ಪಾಯಿಂಟ್ ಗಳಿಸಬಹುದು, ನಂತರ ಅವುಗಳನ್ನು ಗಿಫ್ಟ್ ಕಾರ್ಡ್‌ಗಳು, ಗೇಮ್ ಪಾಸ್ ಸಬ್‌ಸ್ಕ್ರಿಪ್ಷನ್, ಅಥವಾ ದಾನ ರೂಪದಲ್ಲಿ ಬಳಸಬಹುದು.
3. AI ಸಹಾಯಕ ವೈಯಕ್ತಿಕ ಅನುಭವ: ಹೊಸ Copilot ಮತ್ತು AI ಚಾಟ್ ಸೈಡ್‌ಬಾರ್ ಬಳಕೆದಾರರಿಗೆ ನೇರವಾಗಿ ವೆಬ್ ಪುಟದಲ್ಲೇ ಮಾಹಿತಿ ಸಾರಾಂಶ, ಇಮೇಲ್ ರಚನೆ ಅಥವಾ ವಿಷಯ ಸಂಪಾದನೆ ಮಾಡಲು ಸಹಾಯ ಮಾಡುತ್ತದೆ.
4. ಪಾಸ್‌ವರ್ಡ್ ಮ್ಯಾನೇಜರ್ ಮತ್ತು ಭದ್ರತಾ ಎಚ್ಚರಿಕೆ: ಪಾಸ್‌ವರ್ಡ್ ಮ್ಯಾನೇಜರ್ ನಿಮ್ಮ ಲಾಗಿನ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ, ಲೀಕ್ ಆಗಿರುವ ಪಾಸ್‌ವರ್ಡ್‌ಗಳ ಬಗ್ಗೆ ಎಚ್ಚರಿಸುತ್ತದೆ.
5. ಕಲೆಕ್ಷನ್ ವೈಶಿಷ್ಟ್ಯ: ಬಳಕೆದಾರರು ತಮ್ಮ ಪ್ರಾಜೆಕ್ಟ್‌ಗಳು, ಶಾಪಿಂಗ್ ಲಿಸ್ಟ್‌ಗಳು ಅಥವಾ ಸಂಶೋಧನಾ ವಿಷಯಗಳನ್ನು ಸುಲಭವಾಗಿ Collections ವಿಭಾಗದಲ್ಲಿ ಉಳಿಸಬಹುದು.
6. ಕಾರ್ಯಕ್ಷಮತೆ ಮತ್ತು ಬ್ಯಾಟರಿ: Edgeನಲ್ಲಿನ Efficiency Mode ಲ್ಯಾಪ್‌ಟಾಪ್‌ಗಳಲ್ಲಿ ಬ್ಯಾಟರಿ ಬಳಕೆಯನ್ನು ಕಡಿಮೆಮಾಡಿ, ಹೆಚ್ಚು ಸಮಯ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.
7. ಶಾಪಿಂಗ್ ಮತ್ತು ಬೆಲೆ ಹೋಲಿಕೆ: AI ಆಧಾರಿತ ಶಾಪಿಂಗ್ ಟೂಲ್‌ಗಳು ಸ್ವಯಂಚಾಲಿತವಾಗಿ ಬೆಲೆ ಹೋಲಿಕೆ, ಕೂಪನ್ ಹುಡುಕಾಟ ಮತ್ತು ಡಿಸ್ಕೌಂಟ್ ಸೂಚನೆಗಳು ನೀಡುತ್ತವೆ.
8. ಉತ್ತಮ ವೇಗ: ಕ್ರೋಮ್‌ನಂತೆಯೇ Chromium Engine ಮೇಲೆ ನಿರ್ಮಿತವಾಗಿರುವುದರಿಂದ, Edge ಕೂಡ ವೇಗವಾಗಿ ಮತ್ತು ನಂಬಿಕೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ.
ಮೈಕ್ರೋಸಾಫ್ಟ್ ಇದೀಗ ತನ್ನ ಎಡ್ಜ್ ಬ್ರೌಸರ್‌ನ ಬಳಕೆಯನ್ನು ಹೆಚ್ಚಿಸಲು ಕೇವಲ ಜಾಹೀರಾತುಗಳಲ್ಲ, ನೇರ ಬಹುಮಾನ ಮತ್ತು AI ವೈಶಿಷ್ಟ್ಯಗಳ ಸಂಯೋಜನೆಯೊಂದಿಗೆ ಹೊಸ ಪ್ರಯತ್ನ ನಡೆಸುತ್ತಿದೆ. ಗಿಫ್ಟ್ ಕಾರ್ಡ್ ಪಾಯಿಂಟ್‌ಗಳು ಮತ್ತು ಬುದ್ಧಿವಂತ ಸಹಾಯಕರಂತಹ ಉಪಕರಣಗಳು ಬಳಕೆದಾರರನ್ನು Edge ಬಳಕೆರಾರರನ್ನು ಉಳಿಸುತ್ತವೆಯೇ ಅಥವಾ ಕ್ರೋಮ್‌ನ ಆಕರ್ಷಣೆಯು ಮುಂದುವರಿಯುತ್ತದೆಯೇ ಎಂಬುದು ಮುಂದೆ ಸ್ಪಷ್ಟವಾಗಲಿದೆ. ಈ ಕುರಿತಂತೆ ನಿಮ್ಮ ಅನಸಿಕೆ ಏನು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








