ಇತಿಹಾಸದಲ್ಲಿ ಗೂಢಚಾರಿಕೆ ಮಾಡಿದ್ದ ಈ 'ರಿಯಲ್ ಗ್ಯಾಜೆಟ್ಸ್' ಈಗ ಮ್ಯೂಸಿಯಂನಲ್ಲಿವೆ!!

By Bhaskar N J

    ಹಾಲಿವುಡ್ ಬಾಂಡ್ ಸಿನಿಮಾಗಳನ್ನು ನೋಡಿದವರಿಗೆ ಆ ಕಾಲದಲ್ಲಿಯೇ ಅಂತಹ ಗ್ಯಾಜೆಟ್ಸ್ ಎಲ್ಲವೂ ಇದ್ದವೇ ಎಂಬ ಅನುಮಾನ ಒಮ್ಮೆ ಮೂಡದೇ ಇರಲು ಸಾಧ್ಯವಿಲ್ಲ. ಆ ಸಿನಿಮಾಗಳ ನಾಯಕನ ವಾಚ್ ಅದ್ಬುತವನ್ನು ಸೃಷ್ಟಿಸಿದರೆ, ಅವನ ಕಾರಂತೂ ಮಾಯವಾಗಬಲ್ಲದು. ಹೀಗೆ ಜೇಮ್ಸ್ ಬಾಂಡ್ ಸಿನಿಮಾ ಎಂದರೆ ಭವಿಷ್ಯದ ಗ್ಯಾಜೆಟ್ಸ್ ನೋಟ ಎನ್ನಬಹದು.

    ಆದರೆ, ಹಾಲಿವುಡ್ ಬಾಂಡ್ ಸಿನಿಮಾಗಳನ್ನು ತೆಗೆಯಲು ಮೂಲ ಪ್ರೇರಣೆಯೇ ಗೂಢಚಾರಿಕೆ ಮಾಡಿದ್ದ ಗ್ಯಾಜೆಟ್ಸ್‌ಗಳು ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. 1960 ರಿಂದ 1980ನೇ ದಶಕದ ಮಧ್ಯದಲ್ಲಿ ಅಮೆರಿಕಾ, ರಷ್ಯಾ ಸೇರಿದಂತೆ ಹಲವು ರಾಷ್ಟ್ರಗಳು ಇಂತಹ ಹತ್ತು ಹಲವು ಗ್ಯಾಜೆಟ್‌ಗಳನ್ನು ಕಂಡುಹಿಡಿದು ಗೂಢಚಾರಿಕೆ ನಡೆಸಿದ್ದರು ಎನ್ನುವುದಕ್ಕೆ ಇಂದು ಸಾಕ್ಷಿಗಳಿವೆ.

    ಇತಿಹಾಸದಲ್ಲಿ ಗೂಢಚಾರಿಕೆ ಮಾಡಿದ್ದ ಈ 'ರಿಯಲ್ ಗ್ಯಾಜೆಟ್ಸ್' ಈಗ ಮ್ಯೂಸಿಯಂನಲ್ಲಿವೆ!

    ವಾಶಿಂಗ್ಟನ್‌ನಲ್ಲಿರುವ ಸಿಐಎ ಮ್ಯೂಸಿಯಮ್‌ನಲ್ಲಿ ಅಡಕವಾಗಿರುವ ಇತಿಹಾಸದ ಕಾರ್ಯಾಚರಣೆಗಳಿಗೆ ಬಳಸಲಾದ ಗ್ಯಾಜೆಟ್‌ಗಳ ವಿವರಗಳನ್ನು ನಾವು ನಿಮಗೆ ನೀಡುತ್ತಿದ್ದೇವೆ. ಸ್ಪೈ ಕ್ಯಾಮೆರಾದಂತ ಗ್ಯಾಜೆಟ್‌ಗಳನ್ನು ಸಹ ಬಳಸಿ ಗೂಢಚಾರಿಕೆಯನ್ನು ಮಾಡಿರುವ ಆ ವಿಶಿಷ್ಟ ಇತಿಹಾಸದ ಗ್ಯಾಜೆಟ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    ಪೈಪ್ ರೇಡಿಯೊ

    1960 ರ ಈ ಪೈಪ್‌ನಲ್ಲಿ ರೇಡಿಯೊ ರಿಸೀವರ್ ಇದೆ. ದವಡೆಯ ಮೂಳೆಗಳ ಮೂಲಕ ಕಿವಿಯನ್ನು ಧ್ವನಿಯು ತಲುಪಿಸುತ್ತಿತ್ತಂತೆ.

    ಸಿಗರೇಟ್ ಪ್ಯಾಕ್‌ನಲ್ಲಿ ಕ್ಯಾಮೆರಾ

    35 ಎಮ್‌ಎಮ್ ಟೆಸಿನಾ ಫಿಲ್ಮ್ ಕ್ಯಾಮೆರಾ ಈ ಸಿಗರೇಟ್ ಕೇಸ್‌ನಲ್ಲಿ ಕುಳಿತುಕೊಳ್ಳುತ್ತದೆ. 1060 ರ ಅತಿ ಸಣ್ಣ ಮತ್ತು ಗಂಭೀರ ಕ್ಯಾಮೆರಾ ಇದಾಗಿದೆ.

    ಸಂದೇಶ ಕಳುಹಿಸುವ ಪಾರಿವಾಳ

    ವಿಶ್ವಯುದ್ಧ ಎರಡರ ಸಮಯದಲ್ಲಿ ಈ ಹಗುರ ಕ್ಯಾಮೆರಾಗಳನ್ನು ಪಾರಿವಾಳಗಳ ಕಾಲಿಗೆ ಸಿಕ್ಕಿಸಿ ಕಳುಹಿಸುತ್ತಿದ್ದರು. ಪಾರಿವಾಳ ಹಾರಿದಂತೆಲ್ಲಾ ಕ್ಯಾಮೆರಾ ಫೋಟೋಗಳನ್ನು ಕ್ಲಿಕ್ಕಿಸುತ್ತಿತ್ತು.

    ಇನ್‌ಸೆಕ್ಟೋಪ್ಟರ್

    ಫೇಕ್ ಮೈಕ್ರೋಫೋನ್ ಗಾತ್ರದ ಜೀವಿಗಳನ್ನು ಗೂಢಚಾರಿಕೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಸಣ್ಣ ಇಂಜಿನ್ ಅನ್ನು ಬಳಸಿಕೊಂಡು, 650 ಫೀಟ್ ಎತ್ತರವನ್ನು 60 ಸೆಕೆಂಡ್‌ಗಳಲ್ಲಿ ಇವುಗಳು ಪ್ರಯಾಣಿಸುತ್ತಿದ್ದವು.

    ಡೆಡ್ ಡ್ರಾಪ್ ಸ್ಲೈಕ್

    1960 ರಲ್ಲಿ ಅನ್ವೇಷಣೆಯಾದ ಫೀಲ್ಮ್ ಹಿಡಿದಿಡುವ ಸ್ಪೈಕ್. ಇದರಲ್ಲಿ ರಹಸ್ಯವಾಗಿ ಫಿಲ್ಮ್‌ಗಳನ್ನು ಗೂಢಚಾರಿಕೆದಾರರ ಎತ್ತಿಡುತ್ತಿದ್ದರು.

    ಶತ್ರುಗಳನ್ನು ಪತ್ತೆಹಚ್ಚುವ ಡಿವೈಸ್

    ಮಣ್ಣಿನಲ್ಲಿ ಬ್ಲೆಂಡ್ ಮಾಡಿರುವ, ಈ ಸಾಧನವು 1,000 ಫೀಟ್ ದೂರದಿಂದ ಶತ್ರುಗಳನ್ನು ಪತ್ತೆಹಚ್ಚುತ್ತದೆ. ವೈಬ್ರೇಶನ್ ಅನ್ನು ಇದು ಪಡೆದುಕೊಂಡ ಕೂಡಲೇ, ಬಿಲ್ಟ್ ಇನ್ ಆಂಟೆನಾ ಟ್ರಾನ್ಸ್‌ಮಿಟ್ಸ್, ರೇಡಿಯೊ ಸಿಗ್ನಲ್‌ಗಳ ಮೂಲಕ ಸಿಐಎಗೆ ಎಚ್ಚರಿಕೆಯನ್ನು ಕಳುಹಿಸುತ್ತದೆ.

    ಸೀಕ್ರೇಟ್ ಕೋಡ್ ಹೊಂದಿರುವ ಕಾಂಪ್ಯಾಕ್ಟ್

    ರಹಸ್ಯ ಕೋಡ್‌ಗಳನ್ನು ಒಳಗೊಂಡಿರುವ ಈ ಕಾಂಪ್ಯಾಕ್ಟ್ ಸಿಐಎಗಳಿಗೆ ಸಹಾಯ ಮಾಡುತ್ತಿತ್ತು.

    ಯುಎಸ್ ಆರ್ಮಿ ಲ್ಯಾನ್ಸಟಿಕ್ ಕಂಪಾಸ್

    ಇತರ ಕಂಪಾಸ್‌ಗಳಂತೆ, ಈ ಆಲೈವ್ ಲೆನ್ಸಾಟಿಕ್ ಕಂಪಾಸ್ ಹಿಂಭಾಗದಲ್ಲಿ ಅಯಸ್ಕಾಂತೀಯ ಲೆನ್ಸ್ ಅನ್ನು ಒಳಗೊಂಡಿದೆ. 1950 ರಲ್ಲಿ ಯುಎಸ್ ಸೇನೆಯು ಇದನ್ನು ಬಳಸಿಕೊಂಡಿತ್ತು ಎನ್ನಲಾಗಿದೆ.

    ಚಾರ್ಲಿ ರೊಬೋಟ್ ಮೀನು

    1990 ರಲ್ಲಿ, ಸಿಐಎ ಚಾರ್ಲಿ ಎಂಬ ರೊಬೋಟ್ ಮೀನನ್ನು ಅಭಿವೃದ್ಧಿಪಡಿಸಿದ್ದು, ಇದು ನೀರಿನಾಳದಲ್ಲಿ ಶತ್ರುಗಳ ವಸ್ತುಗಳ ಸಿಗ್ನಲ್‌ಗಳನ್ನು ಪಡೆದುಕೊಳ್ಳುತ್ತಿತ್ತು. ರೇಡಿಯೊ ರಿಮೋಟ್‌ನಿಂದ ಇದನ್ನು ನಿಯಂತ್ರಿಸಲಾಗುತ್ತಿತ್ತು, ಮತ್ತು ದೇಹದಲ್ಲಿ ಇದು ಮೈಕ್ರೋಫೋನ್ ಅನ್ನು ಹೊಂದಿತ್ತು

    ಹ್ಯಾಂಡ್ ಕ್ರ್ಯಾಂಕ್ ಡ್ರಿಲ್

    ಈ ಪರಿಕರವನ್ನು ಬಳಸಿಕೊಂಡು, ಗೋಡೆಗಳಲ್ಲಿ ತೂತುಗಳನ್ನು ಮಾಡಿ ಮೈಕ್ರೋಫೋನ್ ಅನ್ನು ಇದರಲ್ಲಿ ಇರಿಸಲಾಗುತ್ತಿತ್ತು.

    ಸಿಲ್ವರ್ ಡಾಲರ್

    ಇದು ಸಾಮಾನ್ಯ ಬೆಳ್ಳಿ ಡಾಲರ್‌ನಂತೆ ಕಂಡರೂ, ಇದು ಸಂದೇಶ ಮತ್ತು ಚಿತ್ರಗಳನ್ನು ಹಿಡಿದಿಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

    ಕಪ್‌ಲಿಂಕ್

    1930 ರಲ್ಲಿ ಸಿಐಎಗಳು ಮಿನಿಯೇಚರ್ ಕಂಪಾಸ್‌ಗಳನ್ನು ಇದರಲ್ಲಿ ಅಡಗಿಸಿಡಲು ಬಳಸಿಕೊಳ್ಳುತ್ತಿದ್ದರು.

    ಎನಿಗ್ಮಾನಗಳನ್ನು ತಯಾರಿಸುವ ಮೆಶೀನ್

    ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿ ಮಿಲಿಟರಿಯು ಮೆಶೀನ್‌ಗಳನ್ನು ಬಳಸಿಕೊಳ್ಳುತ್ತಿದ್ದು ಇದರಲ್ಲಿ ಎನ್‌ಕ್ರಿಪ್ಟ್ ಮಾಡಲಾದ ರಹಸ್ಯ ಸಂದೇಶಗಳಾದ ಎನಿಗ್ಮಾಗಳನ್ನು ರಚಿಸಲು ಬಳಸಿಕೊಳ್ಳುತ್ತಿದ್ದರು. ಇದು ಬೇಧಿಸಲು ಆಗದೇ ಇರುವ ಕೋಡ್‌ಗಳನ್ನು ರಚಿಸುತ್ತಿತ್ತು ಮತ್ತು ಅಕ್ಷರಗಳನ್ನು ಸಿದ್ಧಪಡಿಸುತ್ತಿತ್ತು.

    ಮೈಕ್ರೋಸ್ಕೋಪಿಕ್ ಫೋಟೋಗಳನ್ನು ತೆಗೆಯುವ ಕ್ಯಾಮೆರಾ

    40 ರ ನಂತರದ ಕಾಲದಲ್ಲಿ, ಸಿಐಎ ಈ ಕ್ಯಾಮೆರಾವನ್ನು ಅಭಿವೃದ್ಧಿಪಡಿಸಿದ್ದು ಇದು ರಹಸ್ಯವಾಗಿ ಡಾಕ್ಯುಮೆಂಟ್‌ಗಳು ಮತ್ತು ಫೋಟೋಗಳನ್ನು ವರ್ಗಾಯಿಸುತ್ತಿತ್ತು.

    ಚಿತ್ರಗಳ ಮೂಲಕ ಶತ್ರುಗಳ ಮಾಹಿತಿ

    1960 ರ ವಿಯೇಟ್ನಾಮ್ ಯುದ್ಧ ಸಂದರ್ಭದಲ್ಲಿ, ಸಿಐಎ ಈ ಅಸಾಮಾನ್ಯ ಡಿವೈಸ್ ಅನ್ನು ಅಭಿವೃದ್ಧಿಪಡಿಸಿದ್ದು, ಜನರನ್ನು ಎಣಿಸುವುದು ಮತ್ತು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಪ್ರಯಾಣಿಸುತ್ತಿದ್ದ ಮಾಹಿತಿಯನ್ನು ಒದಗಿಸುತ್ತಿತ್ತು.

    ಬುಲೆಟ್‌ಗಳನ್ನು ಬಂಧಿಸಿಡುವ ಹೆಡ್‌ಫೋನ್ಸ್

    ಈ ಸ್ಟೀಲ್ ಹೆಡ್‌ಫೋನ್‌ಗಳು ಬುಲ್ಲೆಟ್ ಪ್ರೂಫ್ ಆಗಿದ್ದು ಹಲವಾರು ಜನರ ಪ್ರಾಣವನ್ನು ಕಾಪಾಡುವ ಸಾಧನವಾಗಿ ಪರಿಗಣಿತವಾಗಿದೆ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

    English summary
    16 incredible spy gadgets from CIA history. to know more visit to know more visit to kannada.gizbot.com
    Opinion Poll

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more