Subscribe to Gizbot

ಪೋಲಿ ವೆಬ್ಸೈಟುಗಳಿಗಿಂತಾ ಡೇಂಜರಸ್ ಯಾವುದು?

Posted By: Varun
ಪೋಲಿ ವೆಬ್ಸೈಟುಗಳಿಗಿಂತಾ ಡೇಂಜರಸ್ ಯಾವುದು?

ಅಂತರ್ಜಾಲದಲ್ಲಿ ಸಾಮಾನ್ಯವಾಗಿ ವೆಬ್ಸೈಟುಗಳನ್ನು ಕ್ಲಿಕ್ ಮಾಡಿದರೆ ವೈರಸ್ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಡೌನ್ಲೋಡ್ ಮಾಡಿದಾಗಲೂ ಎಚ್ಚರದಿಂದಿರಬೇಕು. ಹ್ಯಾಕರುಗಳು ಎಂತೆಂತಹ ವೆಬ್ಸೈಟುಗಳನ್ನೇ ಹ್ಯಾಕ್ ಮಾಡಿ ವೈರಸ್,ಮಾಲ್ವೇರ್ಗಳನ್ನು ಹರಡಿದ್ದಾರೆ.ಇನ್ನು, ಜಾಸ್ತಿ ಜನ ಮುಗಿಬಿದ್ದು ಸರ್ಫ್ ಮಾಡುವ ಪೋಲಿ ವೆಬ್ಸೈಟುಗಳು ಈ ಹ್ಯಾಕರುಗಳಿಗೆ ಸುಲಭವಲ್ಲವೆ. ಹೆಚ್ಚು ಕಂಪ್ಯೂಟರುಗಳಿಗೆ ಹರಡಬಹುದು. ಹಾಗಾಗಿ ನಾವು ಸಾಮಾನ್ಯಾವಾಗಿ ಅಂದುಕೊಳ್ಳುವುದೇನೆಂದರೆ ಪೋಲಿ ವೆಬ್ಸೈಟುಗಳು ಜಾಸ್ತಿ ವೈರಸ್ ಹರಡುತ್ತವೆ ಎಂದು.

ಆದರೆ ಇದಕ್ಕೆ ವ್ಯತಿರಿಕ್ತವಾದಂಥ ಅಚ್ಚರಿಯ ವರದಿಯೊಂದನ್ನು ವಿಶ್ವವಿಖ್ಯಾತ ವೈರಸ್-ವಿರೋಧೀ ತಂತ್ರಾಂಶ ಒದಗಿಸುವ "ಸಿಮಾನ್ಟೆಕ್" ಬಿಡುಗಡೆಮಾಡಿದೆ. ಅದರ ಪ್ರಕಾರ ಅತ್ಯಂತ ಹೆಚ್ಚುಮಾಲ್ವೇರ್ ಗಳನ್ನು ಹರಡುವುದು ಪೋಲಿ ವೆಬ್ಸೈಟುಗಳಲ್ಲ, ಬದಲಾಗಿ ಧಾರ್ಮಿಕ ವಬ್ಸೈಟುಗಳು!

ಹೌದು. ಧಾರ್ಮಿಕ ವಿಷಯಗಳು ಹಾಗು ಸಿದ್ಧಾಂತಗಳನ್ನು ಪ್ರಚಾರ ಮಾಡುವ ವೆಬ್ಸೈಟುಗಳು, ಪೋಲಿ ವೆಬ್ಸೈಟಿಗಿಂತಲೂ ಮೂರು ಪಟ್ಟು ಹೆಚ್ಚು ವೈರಸ್ ಹರಡುವ ತಾಣಗಳಾಗಿವೆಯಂತೆ.ಅದೂ ಅಲ್ಲದೆ ಟಾಪ್ ವೈರಸ್ ಹರಡುವ ವೆಬ್ಸೈಟ್ ಗಳಲ್ಲಿ, ಮೊದಲ 5 ವೆಬ್ಸೈಟುಗಳು ಧಾರ್ಮಿಕ ವೆಬ್ಸೈಟುಗಳೇ ಆಗಿವೆಯಂತೆ.

ಸಿಮಾನ್ಟೆಕ್ ಕಂಪನಿಯ ಪ್ರಕಾರ ಪೋಲಿ ವೆಬ್ಸೈಟುಗಳು ಇಂಟರ್ನೆಟ್ ನಿಂದಲೇ ಹಣ ಮಾಡುವುದರಿಂದ, ತಮ್ಮ ವೆಬ್ಸೈಟುಗಳನ್ನು ಚೊಕ್ಕವಾಗಿ ಇಟ್ಟುಕೊಳ್ಳುವುದು ಅನಿವಾರ್ಯ. ಹಾಗಾಗಿ ಅವುಗಳು ಆಗಾಗ ತಮ್ಮ ಸೈಟ್ ಗಳುಮಾಲ್ವೇರ್ ರಹಿತವಾಗಿರುವಂತೆ ಎಚ್ಚರಿಕೆ ವಹಿಸುತ್ತವೆ. ಅದೇ ಧಾರ್ಮಿಕ ವೆಬ್ಸೈಟುಗಳು ಮುಖ್ಯವಾಗಿ ತಮ್ಮ ವಿಚಾರಧಾರೆ ಹಾಗು ಸಿದ್ಧಾಂತಗಳ ಪ್ರಚಾರದಲ್ಲಿ ಇರುವುದರಿಂದ ಹೆಚ್ಚಾಗಿ ತಮ್ಮ ಸೈಟುಗಳ ಸುರಕ್ಷತೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾಗಿ ಅವುಗಳು ಹ್ಯಾಕರುಗಳ ಪಾಲಿಗೆ ಸುಲಭ ತುತ್ತಾಗುತ್ತವೆ.

ಸಿಮಾನ್ಟೆಕ್, ಸುಮಾರು 200ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ಜಾಗತಿಕ ಗುಪ್ತಚರ ಜಾಲಬಂಧಗಳ ಮೂಲಕ ವಿಶ್ಲೇಷಣೆ ಮಾಡಿ ಈ ವರದಿ ಪ್ರಕಟಿಸಿದೆ. ಇದೇ ವರದಿಯ ಪ್ರಕಾರ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಮೂಲಕ ಇಂಟರ್ನೆಟ್ ಬಳಸುವ ಬಳಕೆದಾರರನ್ನು ಹ್ಯಾಕರುಗಳು ತಮ್ಮ ಮುಂದಿನ ಟಾರ್ಗೆಟ್ ಮಾಡಿಕೊಳ್ಳಬಹುದೆಂದೂ ಎಚ್ಚರಿಸಿದೆ.

ಹಾಗಾಗಿ ನೀವುಗಳೂ ಮುಂದೆ ಯಾವುದೇ ಧಾರ್ಮಿಕ ವೆಬ್ಸೈಟುಗಳು ಚೆಕ್ ಮಾಡುವ ಮುನ್ನ ಮುನ್ನೆಚರಿಕೆ ವಹಿಸುವುದು ಉತ್ತಮ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot