Home
ಸುದ್ದಿಜಾಲ

ಭಾರತದ ಸ್ವಾವಲಂಬಿ ಸೆಮಿಕಂಡಕ್ಟರ್‌ ಕನಸ್ಸಿಗೆ ಭಾರಿ ಹಿನ್ನಡೆ! ಮುರಿದು ಬಿತ್ತು 1.54 ಲಕ್ಷ ಕೋಟಿ ಡೀಲ್‌!

ಸೆಮಿಕಂಡಕ್ಟರ್‌ ವಲಯದಲ್ಲಿ ಭಾರತ ಸ್ವಾವಲಂಬಿಯಾಗುವ ಕನಸ್ಸಿಗೆ ಕೈ ಜೋಡಿಸಲು ಬಂದಿದ್ದ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪೆನಿ ಬಿಗ್‌ಶಾಕ್‌ ನೀಡಿದೆ. ಭಾರತದ ವೇದಾಂತ ಕಂಪೆನಿಯೊಂದಿಗೆ ಗುಜರಾತ್‌ನಲ್ಲಿ ಜಂಟಿ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಒಪ್ಪಂದಕ್ಕೆ ಮುಂದಾಗಿದ್ದ ಫಾಕ್ಸ್‌ಕಾನ್‌ ಕಂಪೆನಿ ತನ್ನ ಡೀಲ್‌ ಅನ್ನು ರದ್ದು ಮಾಡಿಕೊಂಡಿದೆ.

ಹೌದು, ಭಾರತದ ವೇದಾಂತ ಕಂಪೆನಿಯ ಜೊತೆಗೆ ಫಾಕ್ಸ್‌ಕಾನ್‌ ಕಂಪೆನಿ ಮಾಡಿಕೊಂಡಿದ್ದ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಡೀಲ್‌ ರದ್ದಾಗಿದೆ. ಈ ಮೂಲಕ ಭಾರತದಲ್ಲಿ ಸೆಮಿಕಂಡಕ್ಟರ್‌ ತಯಾರಿಸುವ ಕನಸಿನ ಯೋಜನೆಗೆ ಹಿನ್ನಡೆಯಾಗಿದೆ. ಕಳೆದ ವರ್ಷ ಫಾಕ್ಸ್‌ಕಾನ್‌ ಮತ್ತು ವೇದಾಂತ ಎರಡೂ ಕಂಪೆನಿಗಳು ಗುಜರಾತ್‌ನಲ್ಲಿ 1.54 ಲಕ್ಷ ಕೋಟಿ ರೂಪಾಯಿ ಹೂಡಿಕೆಯ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ಅನ್ನು ಸ್ಥಾಪನೆ ಮಾಡುವುದಕ್ಕೆ ಒಪ್ಪಂದ ಮಾಡಿಕೊಂಡಿದ್ದವು. ಹಾಗಾದ್ರೆ ಈ ಡೀಲ್‌ ಕ್ಯಾನ್ಸಲ್‌ ಆಗಲು ಕಾರಣವೇನು? ಇದರ ಬಗ್ಗೆ ಭಾರತ ಸರ್ಕಾರ ಹೇಳಿದ್ದೇನು? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದ ಸ್ವಾವಲಂಬಿ ಸೆಮಿಕಂಡಕ್ಟರ್‌ ಕನಸ್ಸಿಗೆ ಭಾರಿ ಹಿನ್ನಡೆ!

ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಬೃಹತ್‌ ಹಬ್‌ ಆಗಿ ಬೆಳೆಯುವ ಕನಸ್ಸು ಕಂಡಿದ್ದ ಭಾರತಕ್ಕೆ ಆರಂಭಿಕ ಹಿನ್ನಡೆಯಾಗಿದೆ. ಭಾರತ ಸೆಮಿಕಂಡಕ್ಟರ್‌ ವಲಯದಲ್ಲಿ ಸ್ವಾವಲಂಬಿಯಾಗುವ ಕನಸ್ಸಿಗೆ ತೈವಾನ್‌ ಮೂಲದ ಫಾಕ್ಸಕಾನ್‌ ಕಂಪೆನಿ ಕೈ ಜೋಡಿಸುವುದಾಗಿ ಹೇಳಿತ್ತು. ಅದರಂತೆ ಭಾರತದಲ್ಲಿ ವೇದಾಂತ ಜೊತೆ ಜಂಟಿ ಉದ್ಯಮವಾಗಿ ಸೆಮಿ ಕಂಡಕ್ಟರ್‌ ತಯಾರಿಸುವ ಮಹತ್ವದ ಡೀಲ್‌ ಮಾಡಿಕೊಂಡಿತ್ತು. ಆದರೆ ಈ ಡೀಲ್‌ ಇದೀಗ ಕ್ಯಾನ್ಸಲ್‌ ಮಾಡಿಕೊಂಡಿರುವುದಾಗಿ ಫಾಕ್ಸ್‌ಕಾನ್‌ ಕಂಪೆನಿ ಹೇಳಿದೆ.

ಏನಿದು ಡೀಲ್‌?
ಭಾರತದಲ್ಲಿ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಅನ್ನು ಪ್ರಾರಂಭಿಸುವ ಉದ್ದೇಶದಿಂದ ತೈವಾನ್‌ನ ಫಾಕ್ಸ್‌ಕಾನ್ ಕಂಪೆನಿ ಭಾರತದ ವೇದಾಂತ ಲಿಮಿಟೆಡ್‌ನೊಂದಿಗೆ 1.54 ಲಕ್ಷ ಕೋಟಿ ರೂಪಾಯಿ ಡೀಲ್‌ ಮಾಡಿಕೊಂಡಿತ್ತು. ಎರಡೂ ಕಂಪನಿಗಳು ಜಂಟಿಯಾಗಿ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಉತ್ಪಾದನಾ ಘಟಕಗಳನ್ನು ಸ್ಥಾಪಿಸಬೇಕಿತ್ತು. ಆದರೆ ವೇದಾಂತದೊಂದಿಗೆ ನಾವು ಜಂಟಿ ಉದ್ಯಮದಲ್ಲಿ ಮುಂದುವರಿಯುವುದಿಲ್ಲ ಎಂದು ಫಾಕ್ಸ್‌ಕಾನ್‌ ಕಂಪೆನಿ ಹೇಳಿದೆ. ಆದರೆ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಗುರಿಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ತಿಳಿಸಿದೆ. ಈ ಡೀಲ್‌ ಕ್ಯಾನ್ಸಲ್‌ ಆಗುವುದಕ್ಕೆ ಕಾರಣ ಏನು ಅನ್ನೊದು ಇನ್ನು ಕೂಡ ಬಹಿರಂಗವಾಗಿಲ್ಲ.

ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಪ್ರಾರಂಭವಾದರೆ ಮೊಬೈಲ್‌ಗಳಿಗೆ ಬೇಕಾಗುವ ಡಿಸ್‌ಪ್ಲೆ, ಚಿಪ್‌ಸೆಟ್‌ಗಳು ಇಲ್ಲಿಯೆ ತಯಾರಾಗಲಿವೆ. ಇದರಿಂದ ಆಮದು ವೆಚ್ಚ ಕಡಿಮೆ ಆಗಲಿದ್ದು ಮೊಬೈಲ್‌ ವಲಯದಲ್ಲಿ ಹೊಸ ಕ್ರಾಂತಿಯಾಗಲಿದೆ ಎಂದು ನಂಬಲಾಗಿದೆ. ಸದ್ಯ ವೇದಾಂತ ಜೊತೆಗೆ ಡೀಲ್‌ ಮುರಿದುಕೊಂಡಿರುವ ಫಾಕ್ಸ್‌ಕಾನ್‌ ಸ್ಥಳಿಯ ಪಾಲುದಾರರೊಂದಿಗೆ ಭಾರತದಲ್ಲಿ ಸೆಮಿಕಂಡಕ್ಟರ್‌ ಪ್ಲ್ಯಾಂಟ್‌ ಸ್ಥಾಪಿಸುವ ಪ್ಲಾನ್‌ ಅನ್ನು ಮುಂದುವರೆಸುವುದಾಗಿ ಹೇಳಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.

ಭಾರತದ ಸ್ವಾವಲಂಬಿ ಸೆಮಿಕಂಡಕ್ಟರ್‌ ಕನಸ್ಸಿಗೆ ಭಾರಿ ಹಿನ್ನಡೆ!

ಇನ್ನು ಈ ಹಿಂದೆ ಫಾಕ್ಸ್‌ಕಾನ್‌ ಕಂಪೆನಿ ಮತ್ತು ವೇದಾಂತ ಕಂಪೆನಿಯ ಜೊತೆಗೆ ನಡೆದಿದ್ದ ಜಂಟಿ ಉದ್ಯಮದಲ್ಲಿ ವೇದಾಂತ ಕಂಪೆನಿ 60% ಪಾಲು ಹೊಂದಿತ್ತು. ಇದರಲ್ಲಿ ಫಾಕ್ಸ್‌ಕಾನ್ 40% ಪಾಲನ್ನು ಹೊಂದಿತ್ತು. ಈ ಎರಡೂ ಕಂಪನಿಗಳು ಒಟ್ಟಾಗಿ ಮುಂದಿನ ಎರಡು ವರ್ಷಗಳಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಬಯಸಿದ್ದವು. ಇದರಿಂದ ಭಾರತದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಕೂಡ ಇಡಲಾಗಿತ್ತು. ಆದರೆ ಇದೀಗ ಡೀಲ್‌ ಕ್ಯಾನ್ಸಲ್‌ ಆಗಿದೆ. ಆದರೆ ಫಾಕ್ಸ್‌ಕಾನ್‌ ಕಂಪೆನಿ ವೇದಾಂತ ಜೊತೆಗಿನ ಡೀಲ್‌ ಕ್ಯಾನ್ಸಲ್‌ ಮಾಡಿಕೊಂಡಿರುವ ಕ್ರಮವು ಭಾರತದ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಪ್ಲಾಂಟ್ ಗುರಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

Best Mobiles in India

English summary
semiconductor : Foxconn has withdrawn from a $19.5 billion semiconductor joint venture with Vedanta
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+