ಸೆನ್ಹೈಸರ್ ಸಂಸ್ಥೆಯಿಂದ ಹೊಸ ಹೆಡ್‌ಫೋನ್ ಬಿಡುಗಡೆ: 50 ಗಂಟೆಗಳ ಪ್ಲೇ ಬ್ಯಾಕ್ ಟೈಂ!
ಜನಪ್ರಿಯ ಹೆಡ್‌ಫೋನ್ ತಯಾರಕ ಕಂಪೆನಿಗಳಲ್ಲಿ ಸನ್ಹೈಸರ್ ಸಂಸ್ಥೆ ಕೂಡ ಒಂದಾಗಿದೆ. ತನ್ನ ವಿಬಿನ್ನ ಶೈಲಿಯ ಹೆಡ್‌ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸದಾಗಿ ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಹೆಡ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಟಚ್ ಗೆಸ್ಚರ್ ನಿಯಂತ್ರಣಗಳನ್ನು ಮತ್ತು ಐಷಾರಾಮಿ ನಿರ್ಮಾಣವನ್ನು ಬೆಂಬಲಿಸಲಿದೆ.
ಹೌದು, ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಹೆಡ್‌ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಇನ್ನು ಹೆಡ್‌ಫೋನ್ ಟಚ್ ಪ್ಯಾನಲ್‌ನೊಂದಿಗೆ ಟಚ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಇದಲ್ಲದೆ ಹೆಡ್‌ಫೋನ್‌ಗಳು 50 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಹೆಡ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಫೀಚರ್ಸ್ ಹೇಗಿದೆ?
ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಹೆಡ್‌ಫೋನ್ 37mm ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದೆ. ಇದು 2,402 MHz ನಿಂದ 2,480 MHz ಟ್ರಾನ್ಸ್‌ಮಿಷನ್ ಫ್ರೀಕ್ವೆನ್ಸಿ ಹೊಂದಿದ್ದು, 10Hz ನಿಂದ 22kHz ಆವರ್ತನ ಶ್ರೇಣಿ, 106 dB SPL ಸ್ಪೀಕರ್ ಸೆನ್ಸಿಟಿವಿಟಿಯನ್ನು ಒಳಗೊಂಡಿದೆ. ಈ ಹೊಸ ಹೆಡ್‌ಫೋನ್ ಟಚ್ ಗೆಸ್ಚರ್ ಕಂಟ್ರೋಲ್‌ಗಳು ಮತ್ತು ಐಷಾರಾಮಿ ನಿರ್ಮಾಣವನ್ನು ಬೆಂಬಲಿಸಲಿದೆ.
ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಪ್ಯಾನಲ್ ಟಚ್ ಕಂಟ್ರೋಲ್‌ಗಳಿಗೆ ಬೆಂಬಲವನ್ನು ನೀಡಲಿದೆ. ಈ ಹೆಡ್‌ಫೋನ್ 800mAh ಬ್ಯಾಟರಿಯನ್ನು ಹೊಂದಿದ್ದು, USB ಟೈಪ್ C ಪೋರ್ಟ್ ಚಾರ್ಜಿಂಗ್ ಬೆಂಬಲಿಸಲಿದೆ. ಇದು ಒಟ್ಟು ಚಾರ್ಜಿಂಗ್‌ನಲ್ಲಿ 50 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದ್ದು, ತ್ವರಿತ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದು ಸುಮಾರು 10 ನಿಮಿಷಗಳಲ್ಲಿ 5 ಗಂಟೆಗಳ ಪ್ಲೇಬ್ಯಾಕ್ ಸಮಯವನ್ನು ಒದಗಿಸುತ್ತದೆ.
ಇದಲ್ಲದೆ ಬಾಕ್ಸ್‌ನಲ್ಲಿ 3.5 ಎಂಎಂ ಸ್ಟಿರಿಯೊ ಪ್ಲಗ್ ಮತ್ತು ಆಡಿಯೊ ಕೇಬಲ್‌ಗೆ ಸಹ ಬೆಂಬಲವನ್ನು ಪಡೆದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.2. SBC, AAC, aptX, aptX ಅಡಾಪ್ಟಿವ್, mSBC, CVSD ಕೋಡೆಕ್‌ಗಳನ್ನು ಹೊಂದಿದೆ. ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಹೆಡ್‌ಫೋನ್ iOS ಮತ್ತು Android ಡಿವೈಸ್‌ಗಳಿಗಾಗಿ ಸೆನ್ಹೈಸರ್ ಸ್ಮಾರ್ಟ್ ಕಂಟ್ರೋಲ್ ಅಪ್ಲಿಕೇಶನ್ ಹೊಂದಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ.

ಸೆನ್ಹೈಸರ್ ಅಕ್ಸೆಂಟಮ್ ಪ್ಲಸ್ ಬೆಲೆ ಮತ್ತು ಲಭ್ಯತೆ
ಸೆನ್‌ಹೈಸರ್ ಅಸಿಸೆಂಟಮ್ ಪ್ಲಸ್ ಹೆಡ್‌ಫೋನ್ ಭಾರತದಲ್ಲಿ 15,990 ರೂ ಬೆಲೆಯನ್ನು ಹೊಂದಿದೆ. ಇದನ್ನು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಲ್ಲಿ ಫೆಬ್ರವರಿ 14 ರಿಂದ ಖರೀದಿಸಬಹುದಾಗಿದೆ. ಇನ್ನು ಈ ಹೆಡ್‌ಫೋನ್‌ಗಳು ಅಮೆಜಾನ್ ಇಂಡಿಯಾ ಮತ್ತು ಸೆನ್‌ಹೈಸರ್ ಇಂಡಿಯಾದ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದೆ. ಇದರ ಮುಂಗಡ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು 1,000ರೂ ರಿಯಾಯಿತಿಯನ್ನು ಪಡೆಯಲಿದ್ದು, 14,990ರೂ ಗೆ ಖರೀದಿಸಬಹುದಾಗಿದೆ.
ಇನ್ನು ಸೆನ್ಹೈಸರ್ ಕಂಪೆನಿ ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಿದ್ದ ಹೆಡ್‌ಫೋನ್‌ಗಳಲ್ಲಿ ಸನ್ಹೈಸರ್ ಮೊಮೆಂಟಮ್ 4 ವಾಯರ್‌ಲೆಸ್ ಹೆಡ್‌ಫೋನ್ ಕೂಡ ಒಂದಾಗಿದೆ. ಇದು ಪ್ರೀಮಿಯಂ-ಗ್ರೇಡ್ ಕಾರ್ಯಕ್ಷಮತೆ ಮತ್ತು ಪಂಕ್ಷನ್ ನೀಡಲಿದೆ. ಇದು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಹೊಂದಿದೆ. ಅಲ್ಲದೆ AptX ಮತ್ತು aptX ಅಡಾಪ್ಟಿವ್ ಬ್ಲೂಟೂತ್ ಕೊಡೆಕ್‌ಗಳಿಗೆ SBC ಮತ್ತು AAC ಜೊತೆಗೆ ಅಡ್ವಾನ್ಸ್ ಬ್ಲೂಟೂತ್ ಕೊಡೆಕ್ ಬೆಂಬಲವನ್ನು ಕೂಡ ಹೊಂದಿದೆ. ಇನ್ನು ಈ ಹೆಡ್‌ಫೋನ್ ಸ್ಮಾರ್ಟ್ ಕಂಟ್ರೋಲ್ ಅಪ್ಲಿಕೇಶನ್ ಮೂಲಕ ಅಪ್ಲಿಕೇಶನ್ ಬೆಂಬಲವನ್ನು ನೀಡಲಿದೆಈ ಹೆಡ್‌ಫೋನ್‌ಗಳು ಕನೆಕಟಿವಿಟಿಗಾಗಿ ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದ್ದು, ಉತ್ತಮ ಅನುಭವವನ್ನು ನೀಡಲಿವೆ.


Click it and Unblock the Notifications








