ಸೆನ್‌ಹೈಸರ್ ಕಂಪೆನಿಯ HD450 BT, HD350 BT ವಾಯರ್‌ಲೆಸ್ ಹೆಡ್‌ಫೋನ್‌ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಹೊಸ ಮಾದರಿಯ ಇಯರ್‌ಫೋನ್‌, ವಾಯರ್‌ಲೆಸ್‌ ಹೆಡ್‌ಫೋನ್‌ಗಳು ಲಬ್ಯವಿವೆ. ಟೆಕ್‌ ವಲಯದಲ್ಲಿ ಹೆಡ್‌ಫೋನ್‌ಗಳ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿದ್ದು ಉತ್ತಮ ಬೇಡಿಕೆಯನ್ನ ಹೊಂದಿದೆ. ಇನ್ನು ಈಗಾಗ್ಲೆ ಹಲವು ಮಾದರಿಯ ಹೆಡ್‌ಫೋನ್‌ ಲಭ್ಯವಿದೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕಂಪೆನಿಗಳ ಹೆಡ್‌ಫೋನ್‌ಗಳನ್ನ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಸೆನ್ಹೈಸರ್ ಕಂಪೆನಿ ಕೂಡ ಒಂದಾಗಿ್ದು, ಈಗಾಗಲೇ ಹಲವು ಹೆಡ್‌ಫೊನ್‌ಗಳನ್ನ ಪರಿಚಯಿಸಿದ್ದು, ಇದೀಗ ತನ್ನ ಹೊಸ ವಾಯರ್‌ಲೆಸ್‌ ಹೆಡ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ.

ಜರ್ಮನ್

ಹೌದು, ಜರ್ಮನ್ ಮೂಲದ ಜನಪ್ರಿಯ ಹೆಡ್‌ಫೋನ್ ತಯಾರಕ ಕಂಪೆನಿ ಸನ್ಹೈಸರ್‌ ಭಾರತದ ಮಾರುಕಟ್ಟೆಗೆ ತನ್ನ ಎರಡು ಹೊಸ ವಾಯರ್‌ಲೆಸ್ ಹೆಡ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳಲ್ಲಿ ಸೆನ್‌ಹೈಸರ್ HD450BT ಮತ್ತು HD350 BT ಎಂದು ಹೆಸರಿಸಲಾಗಿದೆ. ಇನ್ನು ಈ ಹೆಡ್‌ಫೋನ್‌ಗಳು ಹೊಸ ಮಾದರಿಯ ವಿನ್ಯಾಸವನ್ನ ಹೊಂದಿದ್ದು, ಇವುಗಳಲ್ಲಿ HD350BT ಬೆಲೆ ರೂ. 7,490 ಮತ್ತು HD450BT ಬೆಲೆ 14,990 ರೂ, ಆಗಿದೆ. ಇನ್ನು ಇವುಗಳ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿ.

ಹೆಡ್‌ಫೊನ್‌ಗಳು

ಇನ್ನು ಈ ಹೆಡ್‌ಫೊನ್‌ಗಳು 30 ಗಂಟೆಗಳ ಬ್ಯಾಟರಿ ಅವಧಿಯನ್ನ ಹೊಂದಿದ್ದು, HD350BT 300mAh ಬ್ಯಾಟರಿ ಪ್ಯಾಕ್ಅಪ್‌ ಹೊಂದಿದ್ದರೆ, HD450BT 600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಲ್ಲದೆ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಅನ್ನು ಬೆಂಬಲಿಸುತ್ತದೆ. ಜೊತೆಗೆ ಈ ಹೆಡ್‌ಫೋನ್‌ಗಳು ಎಎಸಿ, ಆಪ್ಟಿಎಕ್ಸ್, ಆಪ್ಟಿಎಕ್ಸ್ ಲೋ ಲ್ಯಾಟೆನ್ಸಿ ಬ್ಲೂಟೂತ್ ಕೋಡೆಕ್‌ಗಳನ್ನು ಸಹ ಬೆಂಬಲಿಸುತ್ತವೆ. ಇದಲ್ಲದೆ ಇತರ ಸೆನ್‌ಹೈಸರ್ ವೈರ್‌ಲೆಸ್ ಹೆಡ್‌ಫೋನ್‌ಗಳಂತೆ, ಸೆನ್‌ಹೈಸರ್ HD450 BT ಮತ್ತು HD350 BTಯು ಸಹ ಸೆನ್‌ಹೈಸರ್ ಸ್ಮಾರ್ಟ್ ಕಂಟ್ರೋಲ್ ಅಪ್ಲಿಕೇಶನ್ ಹೊಂದಿದ್ದು, ಇದನ್ನ ಬಲಸುವ ಮೂಲಕ ಹೆಡ್‌ಫೋನ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ.

ಇದಲ್ಲದೆ

ಇದಲ್ಲದೆ ಈ ಹೆಡ್‌ಫೋನ್‌ಗಳನ್ನ ಸೆನ್ಹೈಸರ್‌ ಆಪ್‌ ಬಳಸಿ ಕನೆಕ್ಟಿವಿಟ ಆಗಿರುವ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಅಸಿಸ್ಟೆಂಟ್‌ ಮೂಲಕ ನಿಯಂತ್ರಿಸಬಹುದಾಗಿದೆ. ಜೊತೆಗೆ ಗೂಗಲ್‌ ಅಸಿಸ್ಟೆಂಟ್‌ ಬಟನ್ ಅನ್ನು ಸಹ ಹೊಂದಿವೆ. ಇವುಗಳ ಮೂಲಕ ಮ್ಯೂಸಿಕ್‌ ಪ್ಲೇಬ್ಯಾಕ್ ಮತ್ತು ಟ್ರ್ಯಾಕ್‌ ಅನ್ನು ಬದಲಾಯಿಸಬಹುದಾಗಿದೆ. ಅಲ್ಲದೆ ಸೆನ್ಹೈಸರ್ ಎಚ್‌ಡಿ 450 ಬಿಟಿ ಮತ್ತು ಎಚ್‌ಡಿ 350 ಬಿಟಿ ಕ್ರಮವಾಗಿ ಸೆನ್‌ಹೈಸರ್ 4.50 ಬಿಟಿಎನ್‌ಸಿ ಮತ್ತು 4.40 ಬಿಟಿಯ ಆವೃತ್ತಿಯ ಅಪ್ಡೇಟ್‌ ಆವೃತ್ತಿಯಾಗಿವೆ.

ಸನ್ಹೈಸರ್‌

ಇನ್ನು ಈಗಾಗಲೇ ಸನ್ಹೈಸರ್‌ ಕಂಪೆನಿ ಭಾರತದಲ್ಲಿ ಹಲವು ಉತ್ಪನ್ನಗಳನ್ನ ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಇತ್ತೀಚೆಗೆ ಭಾರತದಲ್ಲಿ ಅಂಬಿಯೋ ಸೌಂಡ್‌ಬಾರ್ ಅನ್ನು ರೂ. 1,99,990 ರೂ. ಪ್ರೀಮಿಯಂ ರೇಂಜ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ಸೌಂಡ್‌ಬಾರ್‌ನಲ್ಲಿ 13 ಸ್ಪೀಕರ್ ಡ್ರೈವರ್‌ಗಳು ಮತ್ತು 3 ಡಿ ಸೌಂಡ್ ಇದ್ದು, ಡಾಲ್ಬಿ ಅಟ್ಮೋಸ್ ಆಡಿಯೊ ಫಾರ್ಮ್ಯಾಟ್‌ಗೆ ಬೆಂಬಲ ಕೂಡ ಇದೆ. ಜೊತೆಗೆ ಇದೇ ಕಂಪನಿಯು ಇತ್ತೀಚೆಗೆ ಸೆನ್‌ಹೈಸರ್ ಮೊಮೆಂಟಮ್ ಟ್ರೂ ವಾಯರ್‌ಲೆಸ್ 2 ಇಯರ್‌ಫೋನ್‌ಗಳನ್ನು ಜಾಗತಿಕವಾಗಿ ಬಿಡುಗಡೆ ಮಾಡಿದ್ದನ್ನ ನಾವಿಲ್ಲಿ ಗಮನಿಸಹುದಾಗಿದೆ.

Best Mobiles in India

English summary
Sennheiser HD450BT, HD350BT Wireless Headphones Launched in India, Priced Starting Rs. 7,490.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X