ಸೆನ್ಹೈಸರ್ ಮೊಮೆಂಟಮ್ 2 ಇಯರ್‌ಬಡ್ಸ್ ಬಿಡುಗಡೆ!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಇಯರ್‌ಫೋನ್‌ ಕೊಡುವ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ವೈವಿದ್ಯಮಯ ಇಯರ್‌ಫೋನ್‌, ಇಯರ್‌ಬಡ್ಸ್‌ಗಳ ಜಮಾನ. ಗ್ರಾಹಕರು ಕೂಡ ತಮಗಿಷ್ಟವಾದ ಇಯರ್‌ಫೋನ್‌ಗಳನ್ನ ಖರೀದಿಸುತ್ತಿದ್ದಾರೆ. ಸದ್ಯ ಈಗಾಗ್ಲೆ ಹಲವು ಕಂಪೆನಿಗಳು ಭಿನ್ನ ಮಾದರಿಯ ಇಯರ್‌ಬಡ್ಸ್‌ ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಸನ್ಹೈಸರ್‌ ಕಂಪೆನಿ ಕೂಡ ಒಂದಾಗಿದ್ದು, ಇದೀಗ ತನ್ನ ಹೊಸ ಮಾದರಿಯ ವಾಯರ್‌ಲೆಸ್‌ ಇಯರ್‌ಬಡ್‌ಗಳನ್ನ ಬಿಡುಗಡೆ ಮಾಡಿದೆ.

ಹೌದು

ಹೌದು, ಜರ್ಮನ್ ಮೂಲದ ಆಡಿಯೊ ಬ್ರಾಂಡ್ ಸೆನ್ಹೈಸರ್ ಇತ್ತೀಚೆಗೆ ತನ್ನ ಜನಪ್ರಿಯ ಮೊಮೆಂಟಮ್ ಟ್ರೂ ವಾಯರ್‌ಲೆಸ್‌ ಇಯರ್‌ಬಡ್‌ಗಳ ಅಪ್ಡೇಟ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇನ್ನು ಈ ಹೊಸ ಮಾದರಿಯ ಸೆನ್ಹೈಸರ್ ಮೊಮೆಂಟಮ್ ಟ್ರೂ ವಾಯರ್‌ಲೆಸ್ 2 ಇಯರ್‌ಬಡ್‌ಗಳು ಆಕರ್ಷಕ ಫೀಚರ್ಸ್‌ಗಳ ಜೊತೆಗೆ, ನಾಯಿಸ್‌ ಕ್ಯಾನ್ಸೆಲೇಶನ್‌ ಆಕ್ಟಿವ್‌ ಮತ್ತು ಉತ್ತಮ ಬ್ಯಾಟರಿ ಬಾಳಿಕೆ ಯನ್ನು ಒಳಗೊಂಡಿದೆ.

ನಾಯಿಸ್‌

ಇದು‌ ನಾಯಿಸ್‌ ಕ್ಯಾನ್ಸೆಲೇಶನ್‌ ಇಯರ್‌ಬಡ್‌ಗಳಲ್ಲಿ ಹೊಸ ಮಾದರಿಯ ಅಪ್ಡೇಟ್ ಅನ್ನು ಹೊಂದಿದೆ. ಸೆನ್ಹೈಸರ್ ಮೊಮೆಂಟಮ್ ಟ್ರೂ ವಾಯರ್‌ಲೆಸ್ 2 ಇಯರ್‌ಬಡ್‌ ಟ್ರಾನ್ಸ್‌ಪರೆಂಟ್‌ ಹಿಯರಿಂಗ್ ಮೋಡ್ ಅನ್ನು ಒಳಗೊಂಡಿದೆ. ಇದನ್ನ ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿನ ಅಪ್ಲಿಕೇಶನ್‌ಗಳ ಮೂಲಕ ಕಾನ್ಫಿಗರ್ ಮಾಡಬಹುದಾಗಿದೆ. ಇನ್ನು ಈ ಫೀಚರ್ಸ್‌ ಹೊರಾಂಗಣದಲ್ಲಿ ಜಾಗೃತಿ ಕಾಪಾಡಿಕೊಳ್ಳಲು ಕೆಲವು ಎಕ್ಸ್ಟ್ರಾನಲ್‌ ಆಡಿಯೊ ಬಡ್ಸ್‌ ಗೆ ಅವಕಾಶ ಮಾಡಿಕೊಡಲಿದೆ.

ವಾಯರ್‌ಲೆಸ್

ಈ ಹೊಸ ವಾಯರ್‌ಲೆಸ್ ಇಯರ್‌ ಬಡ್‌ನಲ್ಲಿ 2mm ಸಣ್ಣ ದೇಹ ರಚನೆ ಮತ್ತು ಬ್ಲೂಟೂತ್ 5.1 ಅನ್ನು ಒಳಗೊಂಡಿವೆ. ಇದಲ್ಲದೆ, SBC, AAC ಮತ್ತು ಆಪ್ಟಿಎಕ್ಸ್ ಕೊಡೆಕ್‌ಗಳಿಗೆ ಇದು ಬೆಂಬಲವನ್ನು ನೀಡಲಿದೆ. ಆದರೆ ಈ ಹಿಂದಿನ ಆವೃತ್ತಿಯಲ್ಲಿ ಇದ್ದ ಆಪ್ಟಿಎಕ್ಸ್ LL ಬೆಂಬಲವನ್ನು ಕೈ ಬಿಡಲಾಗಿದೆ. ಇನ್ನು ಈ ಇಯರ್‌ಬಡ್‌ ನ ಪ್ರಮುಖ ಸುದಾರಣೆ ಅಂದರೆ ಅದು ಬ್ಯಾಟರಿ ಬಾಳಿಕೆ. ಈ ಹಿಂದಿನ ಇಯರ್‌ಬಡ್‌ ಆವೃತ್ತಿಯಲ್ಲಿ ಒಂದೇ ಚಾರ್ಜ್‌ನಲ್ಲಿ 4 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಾಗಿತ್ತು. ಆದರೆ ಈ ಹೊಸ ಮಾದರಿಯಲ್ಲಿ, ಬಳಕೆದಾರರು 7 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆದುಕೊಳ್ಳಲಿದ್ದಾರೆ.

ಸೆನ್ಹೈಸರ್

ಇನ್ನು ಸೆನ್ಹೈಸರ್ ಮೊಮೆಂಟಮ್ 2 ಇಯರ್‌ಬಡ್ಸ್‌ನ ಹೊಸ ಆವೃತ್ತಿಯಲ್ಲಿ ಬ್ಯಾಟರಿ ಪ್ಯಾಕ್‌ಅಪ್‌ ಜೊತೆಗೆ ಇತರೆ ಫೀಚರ್ಸ್‌ಗಳು ಕೂಡ ಉತ್ತಮವಾಗಿವೆ. ಈ ಹಿಂದಿನ ಆವೃತ್ತಿಯ ಇಯರ್‌ಬಡ್‌ ಸಿಂಗಲ್‌ ಚಾರ್ಜ್‌ನಲ್ಲಿ 12 ಗಂಟೆಗಳ ಚಾರ್ಜಿಂಗ್‌ ನೀಡಿದರೆ. ಹೊಸ ಆವೃತ್ತಿಯಲ್ಲಿ 28 ​​ಗಂಟೆಗಳವರೆಗೆ ತನ್ನ ಚಾರ್ಜಿಂಗ್‌ ಸಾಮರ್ಥ್ಯವನ್ನ ವಿಸ್ತರಿಸಿಕೊಂಡಿದೆ. ಹಾಗೇ ನೋಡಿದ್ರೆ ಸೋನಿ wf-1000xm 3 ಇಯರ್‌ಬಡ್ಸ್‌ 6 ಗಂಟೆ ಚಾರ್ಜಿಂಗ್‌ ಮತ್ತು 24 ಗಂಟೆಗಳ ಬಾಳಿಕೆಯನ್ನ ನೀಡಲಿದೆ. ಇದಕ್ಕೆ ಪೈಫೋಟಿ ನೀಡುವುದಕ್ಕಾಗಿ ಈ ಹೊಸ ಅಪ್ಡೇಟ್ ಅನ್ನ ಸನ್ಹೈಸರ್‌ ಕಂಪೆನಿ ಬಿಡುಗಡೆ ಮಾಡಿದೆ.

ಮೊಮೆಂಟಮ್

ಸದ್ಯ ಸೆನ್ಹೈಸರ್ ಮೊಮೆಂಟಮ್ ಟ್ರೂ ವಾಯರ್‌ಲೆಸ್‌ 2 ಇಯರ್‌ ಬಡ್ಸ್‌ ಐಪಿಎಕ್ಸ್ 4 ಸ್ಪ್ಲಾಶ್ ಪ್ರತಿರೋಧ ಗುಣವನ್ನ ಹೊಂದಿದೆ. ಅಲ್ಲದೆ ವಾಯ್ಸ್‌ ಅಸಿಸ್ಟೆಂಟ್‌ಗೆ ಬೆಂಬಲಿಸುವ ಆಯ್ಕೆಗಳನ್ನು ಸಹ ಒಳಗೊಂಡಿದೆ. ಇನ್ನು ಈ ಇಯರ್‌ ಬಡ್‌ಗಳ ಬೆಲೆ $ 300 (ಸುಮಾರು 22,187 ರೂ.) ಆಗಿದ್ದು, ಇದೇ ಏಪ್ರಿಲ್ ನಿಂದ ಖರೀದಿಸಬಹುದಾಗಿದೆ. ಇದು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
The Sennheiser Momentum 2 claims to offer 7 hours of battery life on a single charge and up to 28 hours with the case.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X