ಥಾಣೆಯಲ್ಲಿ ಬಿಟ್ ಕಾಯಿನ್ಸ್ ಮೂಲಕ 22.59 ಲಕ್ಷ ರೂ. ಲೂಟಿ..!

By Avinash
|

ಭಾರತೀಯ ಸೈಬರ್ ಲೋಕದಲ್ಲಿ ಮತ್ತೊಂದು ಕ್ರೈಂ ವರದಿಯಾಗಿದ್ದು, ಮಹಾರಾಷ್ಟ್ರದ ಥಾಣೆಯಲ್ಲಿ ಬಿಟ್ ಕಾಯಿನ್ಸ್ ಮೂಲಕ 22.59 ಲಕ್ಷ ರೂ. ಅನ್ನು 7 ಜನ ಲೂಟಿ ಮಾಡಿದ್ದಾರೆ. ರಘುವೀರ್ ಕುಲಕರ್ಣಿ ಎಂಬಾತ ಉತ್ತಮ ಆದಾಯ ಬರುತ್ತದೆಂದು ತನ್ನ ಸ್ನೇಹಿತನ ಕಂಪನಿಯಲ್ಲಿ ಬಿಟ್ ಕಾಯಿನ್ ಹೂಡಿಕೆ ಯೋಜನೆಯಲ್ಲಿ ತೊಡಗಿಸಿದ್ದ.

ಥಾಣೆಯಲ್ಲಿ ಬಿಟ್ ಕಾಯಿನ್ಸ್ ಮೂಲಕ 22.59 ಲಕ್ಷ ರೂ. ಲೂಟಿ..!

ಮಹಾರಾಷ್ಟ್ರದ ಖಾಡಾಕ್ ಪದ ಪೊಲೀಸ್ ಠಾಣೆಯಲ್ಲಿ ಚೀಟಿಂಗ್ ಪ್ರಕರಣ ದಾಖಲಾಗಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ. ಫೆಬ್ರವರಿ 2017ರಲ್ಲಿ 22.59 ಲಕ್ಷ ರೂ. ಬಿಟ್ ಕಾಯಿನ್ ನಲ್ಲಿ ತೊಡಗಿಸಿದ್ದ. ಆರೋಪಿಯು ಕಂಪನಿಯಲ್ಲಿ ಸಹಭಾಗಿತ್ವ ಹೊಂದಿದ್ದು, ಕುಲಕರ್ಣಿಗೆ ಯಾವುದೇ ದುಡ್ಡನ್ನು ಕೊಡದೇ ಉದ್ಯಮವನ್ನು ಮುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಟ್ ಕಾಯಿನ್ ಡಿಜಿಟಲ್ ಕರೆನ್ಸಿಯ ಒಂದು ವಿಧವಾಗಿದ್ದು, ಇದು ಸಾಂಪ್ರದಾಯಿಕ ಹಣಕ್ಕಿಂತ ಭದ್ರತಾ ಮತ್ತು ಖಾಸಗಿತನದಲ್ಲಿ ಪರ್ಯಾಯವನ್ನು ನೀಡುತ್ತದೆ. ಆದರೆ, ಬಿಟ್ ಕಾಯಿನ್ ಅಥವಾ ಅಂತಹ ಕ್ರಿಪ್ಟೋ ಕರೆನ್ಸಿಗಳು ಭಾರತದಲ್ಲಿ ಕಾನೂನುಬದ್ಧವಲ್ಲವೆಂದು ಸರ್ಕಾರ ಹೀಗಾಗಲೇ ಸ್ಪಷ್ಟಪಡಿಸಿದೆ.

Best Mobiles in India

Read more about:
English summary
Seven men loot 22.59 lakh via bitcoins in Thane. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X