ಇನ್ಮುಂದೆ ಶಾದಿ.ಕಾಮ್ ಅಕೌಂಟ್ ತೆರೆಯಲು ''ಆಧಾರ್ ಕಾರ್ಡ್'' ಕಡ್ಡಾಯ!!
ಶಾದಿ.ಕಾಮ್, ಭಾರತ್ ಮ್ಯಾಟ್ರಿಮೋನಿ, ಜೀವನ್ ಸತಿ, ಲವ್ ವಿವಾಹ್ ಹೀಗೆ ಹತ್ತಾರು ಆನ್‌ಲೈನ್ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು ಉತ್ತಮ ಸಂಗಾತಿಗಳನ್ನು ಕೂಡಿಸಲು ಸಹಾಯ ಮಾಡುತ್ತಿವೆ. ಆದರೆ, ಈ ಎಲ್ಲಾ ಆನ್‌ಲೈನ್ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳ ಬಹುದೊಡ್ಡ ತೊಂದರೆ ಎಂದರೆ, ಅವುಗಳಲ್ಲಿ ಇರುವ ಸಾವಿರಾರು ಫೇಕ್ ಅಕೌಂಟ್‌ಗಳು.
ಹೌದು, ಇದೊಂದೇ ಕಾರಣದಿಂದ ಆನ್‌ಲೈನ್ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳನ್ನು ಬಹುತೇಕರು ನಂಬಲು ಸಾಧ್ಯವಾದ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ, ಇದಕ್ಕೆ ಪರಿಹಾರ ಹುಡುಕಿರುವ ಶಾದಿ.ಕಾಮ್, ವೆಬ್‌ಸೈಟ್ ಹೊಸದೊಂದು ಯೋಜನೆ ಜಾರಿಗೆ ತಂದಿದೆ. ತನ್ನ ವೆಬ್‌ಸೈಟ್‌ನಲ್ಲಿ ಅಕೌಂಟ್ ತೆರೆಯುವವರಿಗೆ ಆಧಾರ್ ಕಾರ್ಡ್ ನಂಬರ್ ಅನ್ನು ಕಡ್ಡಾಯಗೊಳಿಸಿದೆ.

ಈ ಮೂಲಕ ಆನ್‌ಲೈನ್ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಭಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವವರಿಗೆ ವಿಶ್ವಾಸವನ್ನು ತುಂಬುವ ಕೆಲಸಕ್ಕೆ ಶಾದಿ.ಕಾಮ್ ಕೈ ಹಾಕಿದೆ. ಹಾಗಾದರೆ, ಏನಿದು ಕುತೋಹಲದ ಸ್ಟೋರಿ? ಆಧಾರ್ ಕಾರ್ಡ್ ನಂಬರ್ ನೀಡುವುದು ಕಡ್ಡಾಯವಾಗಿದ್ದು ಏಕೆ? ಶಾದಿ.ಕಾಮ್ ಈ ಬಗ್ಗೆ ಹೇಳುತ್ತಿರುವುದು ಏನು ಎಂಬುದನ್ನು ಮುಂದೆ ತಿಳಿಯಿರಿ.!

ಶಾದಿ.ಕಾಮ್‌ನಲ್ಲಿನ್ನು ಆಧಾರ್ ಕಡ್ಡಾಯ!
ಭಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಶಾದಿ.ಕಾಮ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಅಕೌಂಟ್ ತೆರೆಯಲು ಇನ್ಮುಂದೆ ಆಧಾರ್ ನಂಬರ್ ಅನ್ನು ರಿಜಿಸ್ಟರ್ ಮಾಡಿಕೊಳ್ಳಬೇಕಿದೆ. ಇದರಿಂದ ಆಧಾರ್ ವೆರಿಫೈ ಮಾಡಿರುವ ಖಾತೆಗಳು ಇವು ಎಂದು ಶಾದಿ.ಕಾಮ್ ಬಳಕೆದಾರರಿಗೆ ವಿಶ್ವಾಸ ಮೂಡಲಿದೆ ಎಂದು ಶಾದಿ.ಕಾಮ್ ಹೇಳಿದೆ.

ಶಾದಿ.ಕಾಮ್ ಆಧಾರ್ ತಂದಿದ್ದೇಕೆ?
ಶಾದಿ.ಕಾಮ್ ತನ್ನ ವೆಬ್‌ಸೈಟ್‌ನಲ್ಲಿ ಆಧಾರ್ ಅನ್ನುಅಳವಡಿಸಿಕೊಳ್ಳಲು ಆನ್‌ಲೈನ್ ಸಮೀಕ್ಷೆ ಪ್ರಭಾವ ಬೀರಿದೆ. ಶೇ. 91% ರಷ್ಟು ಮಹಿಳೆಯರು ಪರಿಶೀಲಿಸಿದ ಪ್ರೊಫೈಲ್‌ಗಳಿಗೆ ನಮ್ಮ ಆದ್ಯತೆ ಇದೆ ಎಂದು ಹೇಳಿದರೆ,ಶೇ 82% ರಷ್ಟು ಮಹಿಳೆಯರು ತಾವು ಪರಿಶೀಲಿಸಿದ ಪ್ರೊಫೈಲ್ಗೆ ತಲುಪುವ ಸಾಧ್ಯತೆಯಿದೆ ಎಂದು ತಿಳಿಸಿರುವುಕ್ಕಾಗಿ ಶಾದಿ.ಕಾಮ್ ಆಧಾರ್ ಅನ್ನು ತಂದಿದೆ.

ಆಧಾರ್ ಇಲ್ಲದಿದ್ದರೆ?
ಶಾದಿ.ಕಾಮ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಅಕೌಂಟ್ ತೆರೆಯಲು ಈಗಾಗಲೇ ಪಾನ್ ನಂಬರ್, ವೋಟರ್ ಐಡಿಯಂತಹ ಅಧಿಕೃತ ಮಾಹಿತಿಗಳನ್ನು ಪಡೆಯಲಾಗುತ್ತಿದೆ. ಆದರೆ, ಇದರ ಜೊತೆಗೆ ಆಧಾರ್ ಕಾರ್ಡ್ ನಂಬರ್ ಅನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆಧಾರ್ ನಂಬರ್ ಇಲ್ಲದೇ ಶಾದಿ.ಕಾಮ್ ಅಕೌಂಟ್ ತೆರೆಯಲು ಸಾಧ್ಯವಿಲ್ಲ.

ಶಾದಿ.ಕಾಮ್ ಹೇಳುವುದೇನು?
ಶಾದಿ.ಕಾಂ ಸಿಇಒ ಗೌರವ್ ರಾಕ್ಷಿತ್ ಅವರ ಪ್ರಕಾರ, ಬಳಕೆದಾರರಲ್ಲಿ ವಿಶ್ವಾಸ ದೃಢೀಕರಿಸುವಂತ ಪ್ರೊಫೈಲ್‌ಗಳನ್ನು ಆಧಾರ್ ಪರಿಶೀಲನೆ ವಿಧಾನಗಳ ಪಟ್ಟಿಗೆ ಸೇರಿಸುವುದು ಒಂದು ಪೂರ್ವ ನಿದರ್ಶನವಾಗಿದೆ, ಇದು ವೈವಾಹಿಕ ವೆಬ್‌ಸೈಟ್‌ಗಳನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ.

ಆಧಾರ್ ಫೋಟೊ ಹಾಕಲ್ಲ!
ಶಾದಿ.ಕಾಮ್ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಅಕೌಂಟ್ ತೆರೆಯಲು ಆಧಾರ್ ನಂಬರ್ ಅನ್ನು ಮಾತ್ರ ನೀಡಬಹುದಾಗಿದೆ. ಈ ದಾಖಲೆಯು ಶಾದಿ.ಕಾಮ್ ಮ್ಯಾಟ್ರಿಮೋನಿ ವೆಬ್‌ಸೈಟ್ ಧೃಡೀಕರಿಸಿದ ದಾಖಲೆಯಷ್ಟೆ ಆಗಿರುವುದರಿಂದ, ಆಧಾರ್ ಕಾರ್ಡಿನ ಭಾವಚಿತ್ರವನ್ನು ಶಾದಿ. ಕಾಮ್ ಪ್ರಕಟಿಸುತ್ತಿಲ್ಲ.!


Click it and Unblock the Notifications