ಕಾಣೆಯಾದ ಶೇಕ್ಸ್‌ಪಿಯರ್‌ ತಲೆಬುರುಡೆ: ಪತ್ತೆ ಮಾಡಿದ ತಂತ್ರಜ್ಞಾನ

By Suneel
|

ದುರಂತ ನಾಟಕಗಳಿಗೆ ಹೆಸರುವಾಸಿಯಾದ, ನಾಟಕಕಾರ ಮತ್ತು ಕವಿಯೂ ಆದ ಶೇಕ್ಸ್‌ಪಿಯರ್'ರವರ ಸಮಾಧಿ ಬಗ್ಗೆ ಈಗೊಂದು ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ. ಅಚ್ಚರಿ ಮಾಹಿತಿ ಏನಪ್ಪಾ ಅಂದ್ರೆ ಶೇಕ್ಸ್‌ಪಿಯರ್‌ರವರ ಗೋರಿಯಲ್ಲಿ ಅವರ ತಲೆಬುರುಡೆ ಮಾಯವಾಗಿದೆ ಎಂದು ಬ್ರಿಟನ್‌ನ 'ಚಾನೆಲ್‌ 4' ಸಾಕ್ಷ್ಯಚಿತ್ರವಾಗಿ ಪ್ರಸಾರ ಮಾಡಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

1

1

ಬಹುಶಃ ಬಹು ಸಂಖ್ಯಾತರು ಈಗಾಗಲೇ ತಿಳಿದಿರಬುಹುದು. ಇತ್ತೀಚೆಗೆ ಒಂದು ಸಾಕ್ಷ್ಯಚಿತ್ರಕ್ಕಾಗಿ ಶೇಕ್ಸ್‌ಪಿಯರ್‌ ಸಮಾಧಿಯನ್ನು ತನಿಖೆ ಮಾಡಿದಾಗ ಅಲ್ಲಿ ಅವರ ತಲೆಬುರುಡೆಯೇ ಇರಲ್ಲಿಲ್ಲ, ಶೇಕ್ಸ್‌ಪಿಯರ್'ರವರ ಸಮಾಧಿಯಿಂದ ಅವರ ತಲೆಬುರುಡೆ ಅನ್ನು ತೆಗೆಯಲಾಗಿದೆ ಎಂದು ಬ್ರಿಟನ್‌ನ 'ಚಾನೆಲ್‌ 4' ಮಾಹಿತಿ ಬಹಿರಂಗ ಪಡಿಸಿತ್ತು.

2

2

ಅಂದಹಾಗೆ ಶೇಕ್ಸ್‌ಪಿಯರ್‌ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಿಸುವ ಮುನ್ನ ಅವರ ಸಮಾಧಿಯಲ್ಲಿ ತಲೆಬುರುಡೆ ಇದೆಯೋ/ಇಲ್ಲವೋ ಎಂದು ತಿಳಿಯಲು ಸಂಶೋಧಕರೊಬ್ಬರನ್ನು ಕರೆತರಲಾಗಿದ್ದು, ಅವರು ಸಮಾಧಿಯೊಳಗೆ ತಲೆಬುರುಡೆ ಪತ್ತೆಗಾಗಿ 'ನೆಲ ತಳ ಭೇದಿಸಿ ನೋಡುವ ರೆಡಾರ್" ನಿಂದ ಸೂಕ್ಷ್ಮವಾಗಿ ನೋಡಿ ಈ ಮಾಹಿತಿ ನೀಡಿದ್ದಾರೆ.

3

3

ಪುರಾತತ್ವಶಾಸ್ತ್ರಜ್ಞ ಕೆವಿನ್‌ ಕಾಲ್ಸ್ ಮತ್ತು ಭೂಗೋಳಶಾಸ್ತ್ರಜ್ಞ ಎರಿಕಾ ಉತ್ಸಿ'ರವರ EMC ರೆಡಾರ್‌ ಸಂಶೋಧನಾ ತಂಡವು ಇದೇ ಮೊದಲ ಬಾರಿಗೆ ವಿಲಿಯಂ ಶೇಕ್ಸ್‌ಪಿಯರ್‌'ರವರ ತಲೆಬುರುಡೆಯನ್ನು ಸ್ಟ್ರಾಟ್ ಫೊರ್ಡ್ ಅಪಾನ್-ಏವನ್ "ಹೋಲಿ ಟ್ರಿನಿಟಿ ಚರ್ಚ್‌" ಪ್ರದೇಶದ ಸಮಾಧಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪತೆಹಚ್ಚಲು ಅವಕಾಶ ಹೊಂದಿತ್ತು.

4

4

ರೆಡಾರ್‌ನಲ್ಲಿ 'ಹೋಲಿ ಟ್ರಿನಿಟಿ' ಯಲ್ಲಿನ ಸಮಾಧಿಯಲ್ಲಿ ತಲೆಬುರುಡೆ ಇರುವ ಬಗ್ಗೆ ಸ್ಕ್ಯಾನ್ ಮಾಡಿದಾಗ ಗೋರಿಯಲ್ಲಿ ತಲೆಬುರುಡೆ ಇಲ್ಲ ಎಂದು ಹೇಳಲಾಗಿದೆ. ಅಲ್ಲದೇ ಇತಿಹಾಸದಲ್ಲಿ ಒಂದು ಮಾಹಿತಿ ಇದ್ದು, ಶೇಕ್ಸ್‌ಪಿಯರ್‌ರವರ ತಲೆಬುರುಡೆಯನ್ನು ಇಲ್ಲಿಂದ ತೆಗೆದುಕೊಂಡು ಹೋಗಿರುವುದಾಗಿ ಹೇಳಿದ್ದಾರೆ.

5

5

ಕೋಲ್‌ನ ಪತ್ತೆಯ ನಂತರ ಉತ್ಸಿ ಮತ್ತು ಅವರ ತಂಡ 'ಚಾನೆಲ್‌ 4'ge ಮಾಹಿತಿ ನೀಡಿ ಅದು 'ಚಾನೆಲ್‌ 4' ಸಾಕ್ಷ್ಯಚಿತ್ರ "ecret History: Shakespeare's Tomb"ಹೆಸರಿನಲ್ಲಿ ಮಾರ್ಚ್‌26 ರಂದು ಪ್ರಸಾರವಾಗಿದೆ.

6

6

ಉತ್ಸಿ'ರವರು ಶೇಕ್ಸ್‌ಪಿಯರ್‌'ರವರ ತಲೆಬುರುಡೆ ಪತ್ತೆಗೆ ಬಳಸಿದ ಜಿಪಿಆರ್(Ground Penetrating radar-GPR), GroundVue3 ಎಂದು ಪ್ರತಿಕ್ರಿಯೆ ನೀಡಿದೆ. ಈ ಸಾಧನವು x-ray ಕಿರಣಗಳನ್ನು ಬಳಸಿಕೊಳ್ಳುತ್ತದೆ. ಜಿಪಿಆರ್ ವಿಮಾನದಲ್ಲಿ ಬಳಸುವ ರೆಡಾರ್‌ನಂತೆಯೇ ಹೋಲಿಕೆಯಾಗಿದ್ದು, ನೆಲದ ತಳದಲ್ಲಿ ವಸ್ತುಗಳನ್ನು ಪತ್ತೆ ಹಚ್ಚಲು ಕಂಡುಹಿಡಿಯಲಾಗುತ್ತದೆ.

7

7

ಜಿಪಿಆರ್‌ಆಪ್ಟಿಕಲ್‌ ತಂತ್ರಗಾರಿಕೆಯು ಅಲ್ಲಾ, ಹಾಗೂ ಮೆಡಿಕಲ್‌ ಸ್ಕ್ಯಾನರ್ ತರಹವು ಅಲ್ಲಾ. ಅಲ್ಲದೇ ಇದು ಚಿತ್ರಗಳನ್ನು ಸಹ ತೋರಿಸುವುದಿಲ್ಲ. ಜಿಪಿಆರ್‌ನ ವಿದ್ಯುತ್ಕಾಂತೀಯ ಸಂಕೇತದ ಭಾಗವು ತಳಭಾಗದಲ್ಲಿ ಏನಾದರು ವಸ್ತುಗಳನ್ನು ಪತ್ತೆ ಹಚ್ಚಿದರೆ, ಭೇಟಿಯಾದರೆ ಅದನ್ನು ಸ್ವೀಕೃತ ಆಂಟೆನಾಗೆ ಸಂಕೇತಗಳ ಮೂಲಕ ತಲುಪಿಸುತ್ತದೆ. ರಿಯಲ್‌ ಟೈಮ್‌ನಲ್ಲಿ ಎರಡು ರೀತಿಯ ಡೇಟಾಗಳು ಸ್ಕ್ರೀನ್‌ನಲ್ಲಿ ಪ್ರದರ್ಶಿತವಾಗುತ್ತವೆ. ನಂತರದಲ್ಲಿ ಮೂರು ಆಯಾಮನ ಚಿತ್ರಗಳು ಡೇಟಾವನ್ನು 3D ಡೇಟಾಗೆ ವ್ಯವಸ್ಥೆಗೊಳಿಸಿ ಪಕ್ಷಿನೋಟವನ್ನು ಜಿಪಿಆರ್‌ ನೀಡುತ್ತದೆ ಎಂದು ಉತ್ಸಿ'ರವರು Gizmag'ಗೆ ಹೇಳಿದ್ದಾರೆ.

8

8

ಜಿಪಿಆರ್ ರೆಡಾರ್‌ನಲ್ಲಿ ಉತ್ಸಿ'ರವರು ಒಮ್ಮೆ ಸಮಾಧಿಯ ಆಳವನ್ನು ತಿಳಿದರೆ ಉತ್ತಮ ರೆಶಲ್ಯೂಶನ್‌ ಗೆ ವ್ಯವಸ್ಥೆಗೊಳಿಸಿಕೊಳ್ಳಲು ಸಾಧ್ಯವಂತೆ. ಅಲ್ಲದೇ ಉತ್ಸಿ'ರವರು ಸಮಾಧಿಯ ಪ್ರದೇಶದ ಮ್ಯಾಪ್‌ಗಾಗಿ 1.5GHz ನಿಂದ 4GHz ವರೆಗೂ ಸಹ ಆಂಟೆನಾ ಸಂಕೇತಗಳನ್ನು ಬಳಸುತ್ತಾರಂತೆ.

9

9

ಉತ್ಸಿ'ರವರು ತಮ್ಮ ಪ್ರಯತ್ನದಿಂದ ನಡೆಸಿದ ಸಂಶೋಧನೆಯಲ್ಲಿ ಶೇಕ್ಸ್‌ಪಿಯರ್‌'ರವರ ಗೋರಿಯಲ್ಲಿ ಯಾವುದೇ ಸರಕುಗಳು ಇಲ್ಲ ಎಂದು ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ನಿಂದ ಗೂಗಲ್‌ನಿಂದ "ಏರಿಯಾ 6" ನಿಗೂಢತೆ ಬಯಲು: ಡ್ರೋನ್‌ಗಳ ಪರೀಕ್ಷೆ

ಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟುಜೇಮ್ಸ್‌ ಬಾಂಡ್‌ ಸಿನಿಮಾಗಳ ಯಶಸ್ಸಿನ ಗುಟ್ಟು ರಟ್ಟು

ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?ಇಂಟರ್ನೆಟ್‌ನಲ್ಲಿ ವೈರಲ್‌ ಆದ ಹುಲಿ ಯಾವುದು ಗೊತ್ತಾ?

ವಿದ್ಯೆ ತಲೆಗೆ ಹತ್ತದಿದ್ದರೂ ಯಶಸ್ಸು ಕೈ ಬಿಡಲಿಲ್ಲವಿದ್ಯೆ ತಲೆಗೆ ಹತ್ತದಿದ್ದರೂ ಯಶಸ್ಸು ಕೈ ಬಿಡಲಿಲ್ಲ

Best Mobiles in India

English summary
Shakespeare’s missing skull – the tech behind the investigation. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X