ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 5G ನೆಟ್​ವರ್ಕ್​ ಆರಂಭಿಸಿದ ಚೀನಾ!

|

ಅಮೆರಿಕಾ, ಕೊರಿಯಾ ಮತ್ತು ಜಪಾನ್ ದೇಶಗಳಿಗೆ ಸೆಡ್ಡುಹೊಡೆದು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 5G ತಂತ್ರಜ್ಞಾನವನ್ನು ತಂದಿರುವುದಾಗಿ ನೆರೆರಾಷ್ಟ್ರ ಚೀನಾ ಘೋಷಿಸಿಕೊಂಡಿದೆ. ಇದೇ ಶನಿವಾರದಂದು ಚೀನಾದ ಶಾಂಘೈ ನಗರವು 5ಜಿ ವ್ಯಾಪ್ತಿ ಮತ್ತು ಬ್ರಾಡ್ಬ್ಯಾಂಡ್ ಗಿಗಾಬಿಟ್ ನೆಟ್ವರ್ಕ್ ಹೊಂದಿರುವ ವಿಶ್ವದ ಮೊದಲ ಜಿಲ್ಲೆ ಎಂದು ಚೀನಾದ ಪತ್ರಿಕೆ ವರದಿ ಮಾಡಿದೆ.

ಹೌದು, ಶಾಂಘೈನ ಹಾಂಗ್‌ಕೌ ಜಿಲ್ಲೆಯ 5ಜಿ ನೆಟ್ವರ್ಕ್ ಪ್ರಯೋಗಾಲಯಗಳು ಶನಿವಾರದಿಂದ ಪ್ರಾರಂಭವಾಗಿದ್ದು, ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆಯ ಬೆಂಬಲದೊಂದಿಗೆ 5G ಸೇವೆ ಆರಂಭವಾಗಿದೆ ಎಂದು ಚೀನಾ ಡೈಲಿ ವರದಿ ಮಾಡಿದೆ.ಶಾಂಘೈನ ಹಾಂಗ್‌ಕೌನಲ್ಲಿ 5ಜಿ ಬೇಸ್ ಸ್ಟೇಷನ್ಗಳನ್ನು ಕಳೆದ ಮೂರು ತಿಂಗಳಲ್ಲಿ ನಿಯೋಜಿಸಲಾಗಿತ್ತು ಎಂದು ಚೀನಾ ಡೈಲಿ ಹೇಳಿದೆ.

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 5G ನೆಟ್​ವರ್ಕ್​ ಆರಂಭಿಸಿದ ಚೀನಾ!

5ಜಿ ಮೊಬೈಲ್ ನೆಟ್ವರ್ಕ್ ಪ್ರಾಯೋಗಿಕ ಬಳಕೆ ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆಯ ಬೆಂಬಲದೊಂದಿಗೆ ಶಾಂಘೈ ಹಾಂಗ್‌ಕೌನಲ್ಲಿ ಶನಿವಾರ 5G ಸೇವೆ ಅಧಿಕೃತವಾಗಿ ಆರಂಭಗೊಂಡಿದೆ. ಅಲ್ಲಿಮ ಡೆಪ್ಯುಟಿ ಮೇಯರ್ ವೂ ಕಿಂಗ್ ಹುವಾಯ್ ಸ್ಮಾರ್ಟ್‌ಫೋನಿನಿಂದ 5ಜಿ ವಿಡಿಯೋ ಕರೆ ಮಾಡುವ ಮೂಲಕ 5ಜಿ ಸೇವೆಗೆ ಅಧಿಕೃತ ಚಾಲನೆ ನೀಡಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

5ಜಿ ತಂತ್ರಜ್ಞಾನ ಹೊಸ ತಲೆಮಾರಿನ ಮೊಬೈಲ್ ತಂತ್ರಜ್ಞಾನವಾಗಿದೆ, ಅದರ ಡೌನ್ಲೋಡ್ ಸ್ಪೀಡ್ 4ಜಿ ನೆಟ್ ವರ್ಕ್ ಗಿಂತ 10 ರಿಂದ 100 ಪಟ್ಟು ಹೆಚ್ಚಾಗಿದೆ. ಚೀನಾದಲ್ಲಿ ಸ್ಯಾಮ್‌ಸಂಗ್ ಮತ್ತು ಹುವಾಯಿ ಕಂಪೆನಿಗಳ 5ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿರುವುದರಿಂದ. ಹೊಸ 5G ನೆಟ್‌ವರ್ಕ್ ದೇಶದ ಯುವ ಸಮೂಹವನ್ನು ಆಕರ್ಷಿಸಲಿದೆ ಎಂದು ಹೇಳಲಾಗಿದೆ.

ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 5G ನೆಟ್​ವರ್ಕ್​ ಆರಂಭಿಸಿದ ಚೀನಾ!

ಇದಕ್ಕೂ ಮೊದಲು ಚೀನಾದ ಗುವಾಂಗ್ಡಾಂಗ್​ ಪ್ರಾಂತ್ಯದ ಬಾಯುನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5G ಬೇಸ್​ ಸ್ಟೇಷನ್​ ಅನ್ನು ಪ್ರಾರಂಭಿಸಿದ್ದ ಚೀನಾ, ಇದೇ ಮೊದಲ ಬಾರಿ ಜಿಲ್ಲೆಯೊಂದಕ್ಕೆ 5G ತಂತ್ರಜ್ಞಾನವನ್ನು ಪರಿಚಯಿಸಿ ಆಶ್ಚರ್ಯ ಮೂಡಿಸಿದೆ. ಇತ್ತೀಚಿಗಷ್ಟೇ 5G ಸೇವೆಯನ್ನು ನೀಡುತ್ತಿರುವ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿ ಬಾಯುನ್ ವಿಮಾನ ನಿಲ್ದಾಣ ಪಡೆದಿತ್ತು.

Best Mobiles in India

English summary
Shanghai on Saturday claimed to have the world’s first district with 5G coverage and a broadband gigabit network. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X