ಚಾರ್ಟರ್ಡ್ ಅಕೌಂಟೆಂಟ್‌ಗೆ 10,000 ರೂ. ವಂಚಿಸಿದ ಓಲಾ ಡ್ರೈವರ್!

|

ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿರುವ ಓಲಾ ಚಾಲಕನೋರ್ವ ಚಾರ್ಟರ್ಡ್ ಅಕೌಂಟೆಂಟ್‌ ಆಗಿರುವ ವ್ಯಕ್ತಿಯೋರ್ವರಿಗೆ ಪಂಗನಾಮ ಹಾಕಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ. ಚಾರ್ಟರ್ಡ್ ಅಕೌಂಟೆಂಟ್‌ ಆಗಿರುವ ವಿರಾಜ್ ಪ್ರಸಾದ್ ಎಂಬುವವರು ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿ ಹಂಚಿಕೊಂಡು ಓಲಾ ಮನಿ ಅಕೌಂಟಿನಿಂದ 10,000 ರೂ ಕಳೆದುಕೊಂಡಿದ್ದಾರೆ. ಇದಾದ ನಂತರ ತಕ್ಷಣವೇ ಓಲಾ ಆಪ್‌ ನಿಷ್ಕ್ರಿಯಗೊಂಡಿದೆ.!

ಹೌದು, ವಿರಾಜ್ ಪ್ರಸಾದ್ ಅವರು ಒಬೆರಾಯ್ ಸ್ಪ್ಲೆಂಡರ್‌ನಿಂದ ತಮ್ಮ ಕಚೇರಿಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆಯಲ್ಲಿ ಚಾಲಕ ಎಲ್ಲಿಗೆ ತಲುಪಿದ್ದಾನೆ ಎಂದು ತಿಳಿಯಲು ಅವನಿಗೆ ಕರೆ ಮಾಡಿದಾಗ, ಜಾಗ ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಓಲಾ ಕಳುಹಿಸಿದ ಒಟಿಪಿ ಹಂಚಿಕೊಳ್ಳುವಂತೆ ಕೇಳಿದ್ದಾನೆ. ಇದನ್ನು ನಂಬಿದ ವಿರಾಜ್ ಪ್ರಸಾದ್ ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿಯನ್ನು ಹಂಚಿಕೊಂಡಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್‌ಗೆ 10,000 ರೂ. ವಂಚಿಸಿದ ಓಲಾ ಡ್ರೈವರ್!

ಇದಾದ ಕೆಲವೇ ಸಮಯದ ಬಳಿಕ ವಿರಾಜ್ ಪ್ರಸಾದ್ ಅವರ ಓಲಾ ಮನಿ ಅಕೌಂಟಿನಿಂದ 10,000 ರೂ ಕಳೆದುಕೊಂಡಿರುವುದು ಪ್ರಸಾದ್‌ಗೆ ಅವರಿಗೆ ತಿಳಿದಿದೆ. ವಿಷಯವೇನೆಂದರೆ, ಡ್ರೈವರ್ ಜೊತೆಗೆ ವಿರಾಜ್ ಪ್ರಸಾದ್ ಅವರು ಹಂಚಿಕೊಂಡಿರುವ ಒಟಿಪಿಯು ಪ್ರಯಾಣ ಆರಂಭಕ್ಕೆ ಮೊದಲು ಕಳುಹಿಸಿದ ಒಟಿಪಿಯಾಗಿದೆ. ಓಲಾ ಚಾಲಕನು ವಿರಾಜ್ ಪ್ರಸಾದ್ ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಓಲಾ ಮನಿಯನ್ನು ವರ್ಗಾಯಿಸಿಕೊಂಡಿದ್ದಾನೆ.

ಇದಾದ ನಂತರ ಈ ಬಗ್ಗೆ ದೂರು ದಾಖಲಾಗಿದೆ. ಈಗ ಓಲಾ ಚಾಲಕನ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. 'ಮತ್ತೊರ್ವ ವ್ಯಕ್ತಿಯ ಫೋನ್‌ ನಂಬರ್‌ಗೆ ಹೊಸದಾಗಿ ಓಲಾ ಆಪ್‌ ಡೌನ್‌ಲೋಡ್‌ ಮಾಡಿಕೊಂಡರೂ ದುರ್ಬಳಕೆ ತಡೆಯುವುದಕ್ಕಾಗಿ ಮೂಲ ನೋಂದಾಯಿತ ಫೋನ್ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ. ಹೀಗಾಗಿ ಒಟಿಪಿಯನ್ನು ಯಾರ ಜತೆಗೂ ಹಂಚಿಕೊಳ್ಳಬಾರದು. ಒಟಿಪಿ ಇಲ್ಲದೆ ಇಂತಹ ವಂಚನೆ ಪ್ರಕರಣ ಅಸಾಧ್ಯ ಎಂದು ಸೈಬರ್ ಭದ್ರತಾ ತಜ್ಞರು ಹೇಳಿದ್ದಾರೆ.

ಚಾರ್ಟರ್ಡ್ ಅಕೌಂಟೆಂಟ್‌ಗೆ 10,000 ರೂ. ವಂಚಿಸಿದ ಓಲಾ ಡ್ರೈವರ್!

ಗ್ರಾಹಕರು ತಮ್ಮ ಸುರಕ್ಷತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ನಾವು ನಿರಂತರವಾಗಿ ಮಾಹಿತಿಗಳನ್ನು ನೀಡುತ್ತಲೇ ಇದ್ದೇವೆ. ಲಾಗಿನ್ ವಿವರ, ಒಟಿಪಿಯಂತಹ ತಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾರ ಜತೆಗೂ ಹಂಚಿಕೊಳ್ಳಬಾರದು ಎಂದು ತಿಳಿಸುತ್ತಲೇಇದ್ದೇವೆ. ನಾವು ಯಾವತ್ತೂ ಅಂತಹ ಮಾಹಿತಿಗಳನ್ನು ಕೇಳುವುದಿಲ್ಲ. ಓಲಾ ಕಂಪನಿಯವರೇ ಎಂದು ಹೇಳಿಕೊಂಡು ಯಾರಾದರೂ ಕೇಳಿದರೂ ಮಾಹಿತಿಗಳನ್ನು ನೀಡಬಾರದು ಎಂದು ಓಲಾ ಅಧಿಕಾರಿಯೋರ್ವರು ತಿಳಿಸಿದ್ದಾರೆ.

Best Mobiles in India

Read more about:
English summary
finance professional lost Rs 14000 in a fraud involving the app of a ...share Ola OTP with driver, lose e-wallet money. t0 know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X