ಐಫೋನ್ ಬಳಕೆದಾರರಿಗೆ ಮಾತ್ರವೇ ಆಫರ್!..ಫೊಟೊ ಚಿತ್ರಿಸಿ ಭಾರೀ ಬಹುಮಾನ ಗೆಲ್ಲಿ!!

|

ಜನಪ್ರಿಯ ಆಪಲ್ ಕಂಪೆನಿ ಯಾವತ್ತಿಗೂ ಅತ್ಯುತ್ತಮ ಬ್ರ್ಯಾಂಡ್ ಎಂಬುದರಲ್ಲೀ ಎರಡು ಮಾತಿಲ್ಲ. ಆದರೆ, ಆಪಲ್ ತನ್ನ ಐಫೊನ್‌ಗಳಲ್ಲಿ ಉತ್ತಮ ಕ್ಯಾಮೆರಾ ಸಾಮರ್ಥ್ಯವನ್ನು ನೀಡುವುದಿಲ್ಲ ಎಂಬ ಮಾತಿದೆ. ಆದರೆ, ಇದನ್ನು ಹೋಗಲಾಡಿಸುವ ಸಲುವಾಗಿಯೋ ಏನೋ, ಆಪಲ್ ತನ್ನ ಐಫೋನ್ ಬಳಕೆದಾರರಿಗೆ ಫೋಟೋ ತೆಗೆಯುವ ಸ್ಪರ್ಧೆಯನ್ನು ಆಯೋಜಿಸಿ ಗಮನಸೆಳೆದಿದೆ.

ಹೌದು, ನೀವು ಐಫೋನ್​ ಬಳಕೆದಾರರಾಗಿದ್ದರೆ ನಿವೀಗ ಆಪಲ್‌ನಿಂದ ಬಹುಮಾನ ಗೆಲ್ಲುವ ಅವಕಾಶವಿದೆ. ನಿಮ್ಮ ಐಫೋನ್​ನಲ್ಲಿ ಅತ್ಯುತ್ತಮ ಫೋಟೊ ಚಿತ್ರಿಸಿ ಗೆದ್ದರೆ ಆಪಲ್ ಬಾರೀ ಬಹುಮಾನವನ್ನು ನೀಡುವುದಾಗಿ ತಿಳಿಸಿದೆ. ಈ ಮೂಲಕ ಐಫೋನ್ ಎಷ್ಟು ಚೆಂದದ ಫೋಟೊಗಳನ್ನು ಚಿತ್ರಿಸಬಲ್ಲದು ಎಂದು ಮೊಬೈಲ್ ಪ್ರಿಯರಿಗೆ ತೋರಿಸಲು ಕಂಪೆನಿ ಮುಂದಾಗಿದೆ.

ಐಫೋನ್ ಬಳಕೆದಾರರಿಗೆ ಮಾತ್ರವೇ ಆಫರ್!..ಫೊಟೊ ಚಿತ್ರಿಸಿ ಭಾರೀ ಬಹುಮಾನ ಗೆಲ್ಲಿ!!

ಜನವರಿ 22 ರಿಂದಲೇ ಆಪಲ್‌ನ ಈ ಚಾಲೆಂಜ್ ಆರಂಭವಾಗಿದ್ದು, ನೀವು ಕೂಡ ಇದರಲ್ಲಿ ಸುಲಭವಾಗಿ ಭಾಗವಹಿಸಿ ಬಹುಮಾನವನ್ನು ಪಡೆಯಬಹುದಾಗಿದೆ. ಹಾಗಾದರೆ, ಆಪಲ್ ಕಂಪೆನಿ ತನ್ನ ಐಫೋನ್ ಬಳಕೆದಾರರಿಗೆ ಆಯೋಜಿಸಿರುವ ಫೋಟೊ ಸ್ಪರ್ಧೆ ಯಾವುದು?, ಐಪೋನ್ ಬಳಕೆದಾರರು ಭಾಗವಹಿಸುವುದು ಹೇಗೆ ಎಂಬುದನ್ನು ಮುಂದದಿ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಶಾಟ್​ ಆನ್​ ಐಫೋನ್ ಚಾಲೆಂಜ್

ಶಾಟ್​ ಆನ್​ ಐಫೋನ್ ಚಾಲೆಂಜ್

ರೆ, ಆಪಲ್ ತನ್ನ ಐಫೊನ್‌ಗಳಲ್ಲಿ ಉತ್ತಮ ಕ್ಯಾಮೆರಾ ಸಾಮರ್ಥ್ಯವನ್ನು ಸಾಬೀತು ಪಡಿಸುವ ಸಲುವಾಗಿಯೇ ಏನೋ 'ಶಾಟ್​ ಆನ್​ ಐಫೋನ್ ಚಾಲೆಂಜ್'​​ ಎಂಬ ಹೊಸ ಸ್ಪರ್ಧೆಯನ್ನು ಪ್ರಾರಂಭಿಸಿದ್ದು. ಈ ಸ್ಪರ್ಧೆಯ ಮೂಲಕ ವಿಶ್ವದಾದ್ಯಂತ ಆಪಲ್ ಬಳಕೆದಾರರಿಂದ ಚಿತ್ರಿಸಿದ ಅತ್ಯುತ್ತಮ 10 ಫೋಟೋಗಳನ್ನು ಆಯ್ಕೆ ಮಾಡಿ ಉತ್ತಮ ಬಹುಮಾನವನ್ನು ನೀಡುತ್ತಿದೆ.

ಜ.22 ರಿಂದ ಫೆ.7 ರವರೆಗೆ

ಜ.22 ರಿಂದ ಫೆ.7 ರವರೆಗೆ

ಆಪಲ್ 'ಶಾಟ್​ ಆನ್​ ಐಫೋನ್ ಚಾಲೆಂಜ್'​​ ಅನ್ನು ಇದೇ ಜನವರಿ ರಿಂದ ಆರಂಭಿಸಿದೆ. ಇನ್ನು ಫೋಟೊ ಈ ಸ್ಪರ್ಧೆ ಫೆಬ್ರವರಿ 7 ರವರೆಗೆ ನಡೆಯಲಿದ್ದು, ಫೆಬ್ರವರಿ ತಿಂಗಳ ಅಂತ್ಯದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದ ಟಾಪ್ 10 ವಿಜೇತ ಫೋಟೊ ಈ ಸ್ಪರ್ಧೆಯಲ್ಲಿ ಗೆದ್ದ ಫೋಟೊಗಳ ಮಾಲಿಕರಿಗೆ ಉತ್ತಮ ಬಹುಮಾನವನ್ನು ಆಪಲ್ ನೀಡಲಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?

ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?

ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಿಮ್ಮ ಐಫೋನಿನಿಂದ ಚಿತ್ತಿಸಿದ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರೆ ಸಾಕಿ. ಆಪಲ್ ತಿಳಿಸಿರುವಂತೆ #ShotOniPhone ಎಂಬ ಹ್ಯಾಶ್​​ ಟ್ಯಾಗ್​​ನೊಂದಿಗೆ ಇನ್​ಸ್ಟಾಗ್ರಾಂ ಅಥವಾ ಟ್ವಿಟ್ಟರ್​​ನಲ್ಲಿ ನಿಮ್ಮದೇ ಸ್ವಂತ ಚಿತ್ರವನ್ನು ಪೋಸ್ಟ್​ ಮಾಡಬೇಕು. ಜೊತೆಗೆ ಕೆಲವು ನಿಯಮಗಳನ್ನು ಸಹ ಪಾಲಿಸಲೇಬೇಕು ಎಂದು ತಿಳಿಸಿದೆ.

ಸ್ಪರ್ಧೆಯ ನಿಯಮಗಳು!

ಸ್ಪರ್ಧೆಯ ನಿಯಮಗಳು!

'ಶಾಟ್​ ಆನ್​ ಐಫೋನ್ ಚಾಲೆಂಜ್' ಸ್ಪರ್ಧೆಗೆ ನೀವು ಹಾಕುವ ಎಲ್ಲಾ ಚಿತ್ರಗಳು ಐಫೋನ್ಗಳ​ ಕ್ಯಾಮೆರಾದಲ್ಲೇ ತೆಗೆದಿದ್ದಾಗಿರಬೇಕು. ಬೇರೆ ಸಾಫ್ಟ್​​ವೇರ್ ಅಥವಾ ಆಪ್​​ ಬಳಸಿ ಸ್ವಲ್ಪವೇ ಫೋಟೊ ಎಡಿಟ್ ಮಾಡಿದ್ದರೆ ಅಂತಹ ಪೋಟೊಗಳನ್ನು ನಿರಾಕರಿಸಲಾಗುತ್ತದೆ. ಇತರರ ಫೋಟೊಗಳನ್ನು ಕದ್ದು ಪೋಸ್ಟ್ ಮಾಡಿದವರನ್ನು ಸಹ ಕಂಪೆನಿ ನಿರಾಕರಿಸುವುದಾಗಿ ತಿಳಿಸಿದೆ.

ಚಿತ್ರಗಳ ಪ್ರದರ್ಶನ!

ಚಿತ್ರಗಳ ಪ್ರದರ್ಶನ!

ಇನ್ನು ಈ ಆಪಲ್ 'ಶಾಟ್​ ಆನ್​ ಐಫೋನ್ ಚಾಲೆಂಜ್'​​ ಸ್ಪರ್ಧೆಯಲ್ಲಿ ಗೆದ್ದ ಟಾಪ್ 10 ವಿಜೇತ ಫೋಟೊಗಳ ಮಾಲಿಕರಿಗೆ ಬಹುಮಾನ ಮಾತ್ರವಲ್ಲದೆ, ಚಿತ್ರ ಪ್ರದರ್ಶನವನ್ನು ಸಹ ಆಪಲ್ ಏರ್ಪಡಿಸಲಿದೆ. ಈ ಸ್ಪರ್ಧೆಯಲ್ಲಿ ಗೆದ್ದ ಫೋಟೋಗಳು ಆಪಲ್ ರಿಟೇಲ್​ ಸ್ಟೋರ್​ ಮತ್ತು ಆಪಲ್‌ನ ಅಫಿಷಿಯಲ್ ವೆಬ್‌ಸೈಟ್‌ನಲ್ಲಿ ಹೆಸರಿನ ಸಮೇತವಾಗಿ ಆನ್​ಲೈನ್​ಗಳಲ್ಲಿ ಕಾಣಿಸಿಕೊಳ್ಳಲಿವೆ.

Most Read Articles
Best Mobiles in India

English summary
Apple is kicking off 2019 by celebrating the most stunning photographs captured on iPhone, the world’s most popular camera, by inviting iPhone users to submit their best shots.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X