ಗ್ರಾಹಕರಿಗೆ ತಿಳಿಯದಂತೆ ಮೋಸ!!..ಆನ್‌ಲೈನ್ ಕಂಪೆನಿಗಳಿಗೆ ಸರ್ಕಾರದಿಂದ ಖಡಕ್ ಎಚ್ಚರಿಕೆ!!.

ಗ್ರಾಹಕರಿಂದ ಪಡೆದುಕೊಂಡಿರುವ ಯಾವುದೇ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹಂಚಿಕೊಂಡರೆ ಅಥವಾ ಮಾಹಿತಿಗಳನ್ನು ಮಾರಿಕೊಂಡರೆ ಅಂತಹ ಕಂಪೆನಿಗಳಿಗೆ ಗ್ರಾಹಕ ರಕ್ಷಣಾ ಕಾಯ್ದೆ ಅನುಸಾರ ತೀವ್ರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸರ್ಕಾರ ಎಚ್ಚರ

|

ಖಾಸಾಗಿ ಆನ್‌ಲೈನ್ ಕಂಪೆನಿಗಳು ತಮ್ಮ ಗ್ರಾಹಕರಿಂದ ಪಡೆದುಕೊಂಡಿರುವ ಯಾವುದೇ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹಂಚಿಕೊಂಡರೆ ಅಥವಾ ಮಾಹಿತಿಗಳನ್ನು ಮಾರಿಕೊಂಡರೆ ಅಂತಹ ಕಂಪೆನಿಗಳಿಗೆ ಗ್ರಾಹಕ ರಕ್ಷಣಾ ಕಾಯ್ದೆ ಅನುಸಾರ ತೀವ್ರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.!!

ಭಾರತದ ಇ-ಕಾಮರ್ಸ್ ಕಂಪನಿಗಳು ಸಹ ತಮ್ಮ ಗ್ರಾಹಕರ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಮಾರಾಟ ಮಾಡುತ್ತಿವೆ ಎಂಬುದರ ಬಗ್ಗೆ ದಾಖಲೆ ಬಿಡುಗಡೆ ಮಾಡಿ ಮಾಧ್ಯಮ ವರದಿಗಳು ಬಂದ ನಂತರ ಸರ್ಕಾರ ಈ ಎಚ್ಚರಿಕೆ ನೀಡಿದ್ದು, ಹಾಗಾದರೆ, ಮಾಹಿತಿ ಹಂಚಿಕೊಳ್ಳುವುದಕ್ಕೆ ಸರ್ಕಾರದ ವಿರೋಧ ಏಕೆ? ಇದರಿಂದ ಗ್ರಾಹಕರಿಗೆ ಏನು ನಷ್ಟ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಮಾಹಿತಿ ಹಂಚಿಕೊಳ್ಳುತ್ತಿದ್ದವೇ ಇ-ಕಾಮರ್ಸ್ ಸೈಟ್‌ಗಳು?!

ಮಾಹಿತಿ ಹಂಚಿಕೊಳ್ಳುತ್ತಿದ್ದವೇ ಇ-ಕಾಮರ್ಸ್ ಸೈಟ್‌ಗಳು?!

ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಂತಹ ಎಲ್ಲಾ ಆನ್‌ಲೈನ್ ಮಾರಾಟಗಾರ ಇ-ಕಾಮರ್ಸ್ ಸಂಸ್ಥೆಗಳು ತಾವು ಬಳಕೆದಾರರಿಂದ ಪಡೆದುಕೊಂಡಿದ್ದ ಮಾಹಿತಿಗಳನ್ನು ಇತರರ ಜೊತೆ ಹಂಚಿಕೊಳ್ಳುತ್ತಿವೆ ಮತ್ತು ಮಾರಾಟಮಾಡುತ್ತಿವೆ ಎಂಬ ಬಹುದೊಡ್ಡ ಆಪರೋಪಕ್ಕಡ ಗುರಿಯಾಗಿದ್ದವು.! ಹಾಗಾಗಿ, ಸರ್ಕಾರ ಇವುಗಳಿಗೆ ಎಚ್ಚರಿಕೆ ನೀಡಿದೆ.!!

ಗ್ರಾಹಕರ ಮಾಹಿತಿಗಳನ್ನು ಹಂಚಿಕೊಳ್ಳುವಹಾಗಿಲ್ಲ.!!

ಗ್ರಾಹಕರ ಮಾಹಿತಿಗಳನ್ನು ಹಂಚಿಕೊಳ್ಳುವಹಾಗಿಲ್ಲ.!!

ಗ್ರಾಹಕರ ಹಿತದೃಷ್ಟಿಯಿಂದ ಯಾವುದೇ ಖಾಸಾಗಿ ಆನ್‌ಲೈನ್ ಕಂಪೆನಿಗಳು ಗ್ರಾಹಕರಿಂದ ಪಡೆದುಕೊಂಡಿರುವ ಯಾವುದೇ ಮಾಹಿತಿಗಳನ್ನು ವಾಣಿಜ್ಯ ಉದ್ದೇಶಗಳಿಗೆ ಹಂಚಿಕೊಳ್ಳುವಹಾಗಿಲ್ಲ. ಗ್ರಾಹಕರ ಮಾಹಿತಿಗಳನ್ನು ಇತರರ ಜೊತೆ ಹಂಚಿಕೊಂಡರೆ ಅದು ಗ್ರಾಹಕರ ಹಿತರಕ್ಷೆಗೆ ಬೀಳುವ ಕೊಡಲಿಪೆಟ್ಟಾಗಿದೆ.! ಹಾಗಾಗಿ, ಸರ್ಕಾರ ಮಾಹಿತಿ ಹಂಚಿಕೆಯನ್ನು ವಿರೋಧಿಸುತ್ತಿದೆ.!!

ಮಾಹಿತಿಗಳನ್ನು ಹಂಚಿಕೊಂಡರೆ ಏನಾಗುತ್ತದೆ?

ಮಾಹಿತಿಗಳನ್ನು ಹಂಚಿಕೊಂಡರೆ ಏನಾಗುತ್ತದೆ?

ಖಾಸಾಗಿ ಆನ್‌ಲೈನ್ ಕಂಪೆನಿಗಳು ತಮ್ಮ ಗ್ರಾಹಕರಿಂದ ಪಡೆದುಕೊಂಡಿರುವ ಮಾಹಿತಿಗಳನ್ನು ಹಂಚಿಕೊಂಡೆ ಅಥವ ಮಾರಾಟ ಮಾಡಿದರೆ ಇಂತಹ ಕಂಪೆನಿಗಳು ಗ್ರಾಹಕರನ್ನು ಮೋಸಮಾಡಬಹುದು. ಅವರ ಆಯ್ಕೆ ಮತ್ತು ಅಭಿಪ್ರಾಯವನ್ನು ತಿಳಿದುಕೊಂಡು ಅವರಿಂದ ಹಣವನ್ನು ಗಳಿಸಲು ಕೆಟ್ಟ ಮಾರ್ಗಗಳನ್ನು ಅವರು ಅನುಸರಿಸಬಹುದು.! ಇನ್ನು ಸೈಬರ್‌ ಹ್ಯಾಕರ್‌ಗಳ ಕೈಗೆ ಸಿಕ್ಕರೆ ಕಥೆ ಮುಗಿದುಹೋದಂತೆ.!!

ಗ್ರಾಹಕರಿಗೂ ಪಡಿಪಾಟಲು!!

ಗ್ರಾಹಕರಿಗೂ ಪಡಿಪಾಟಲು!!

ಈಗಾಗಲೇ ಬಹುತೇಕ ಇಂಟರ್‌ನೆಟ್ ಬಳಕೆದಾರರು ಆನ್‌ಲೈನ್ ಕಂಪೆನಿಗಳ ಜೊತೆ ತಮ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇ-ಮೇಲ್, ಮೊಬೈಲ್‌ ನಂಬರ್‌ಗಳು ಸೇರಿದಂತೆ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ವಿವರಗಳೆಲ್ಲಾ ಈಗಾಗಲೇ ಅವುಗಳ ಕೈಸೇರಿದೆ.! ಇವುಗಳನ್ನು ನಾಶಮಾಡದ ಸ್ಥಿತಿಯಲ್ಲಿ ಗ್ರಾಹಕರಿದ್ದಾರೆ. !!

ನಿಯಮಗಳನ್ನು ರೂಪಿಸಲಿದೆ ಸರ್ಕಾರ.!!

ನಿಯಮಗಳನ್ನು ರೂಪಿಸಲಿದೆ ಸರ್ಕಾರ.!!

ವಿಶ್ವ ವ್ಯಾಪಾರ ಮತ್ತು ಅಭಿವೃದ್ಧಿ ಸಮ್ಮೇಳನ (UNCTAD)ದ ಮಹಾ ಕಾರ್ಯದರ್ಶಿ ಖಾಸಗಿ ಡೇಟಾ ಗ್ರಾಹಕರ ರಕ್ಷಣೆಯ ಅಗತ್ಯದ ಬಗ್ಗೆ ಪ್ರತಿಪಾದಿಸಿದ್ದು, ಗ್ರಾಹಕ ವ್ಯವಹಾರಗಳ ಸಚಿವಾಲಯ ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರ ಪಡೆದ ಬಳಿಕ ಈ ಕುರಿತು ಸಮರ್ಪಕ ನಿಯಮಗಳನ್ನು ರೂಪಿಸಲಿದೆ ಎಂದು ಮೂಲಗಳು ತಿಳಿಸಿವೆ.

ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಟ್ಯಾಗ್ ಮಾಡದಂತೆ ತಡೆಯುವುದು ಹೇಗೆ?

Best Mobiles in India

English summary
The need to protect private data of consumers was flagged by the secretary general of UN Conference on Trade.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X