ನೆಟ್‌ಫ್ಲಿಕ್ಸ್‌ ಪಾಸ್‌ವರ್ಡ್‌ ಶೇರ್‌ ಮಾಡುವ ಮುನ್ನ ಈ ಸ್ಟೋರಿ ಓದಿರಿ!

|

ಇತ್ತೀಚಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಸ್ಟ್ರೀಮಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ನೆಟ್‌ಫ್ಲಿಕ್ಸ‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರಿಗೆ ಹಲವು ಚಂದಾದಾರಿಕೆಯ ಸೇವೆಗಳನ್ನು ನೀಡುತ್ತಾ ಬಂದಿದೆ. ಇದರಿಂದ ನೀವು ಸಿನಿಮಾ, ವೆಬ್‌ ಸಿರೀಸ್‌ ಸೇರಿದಂತೆ ಅನೇಕ ಸ್ಟ್ರೀಮಿಂಗ್‌ ಸೇವೆಗಳಿಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಇನ್ನು ನೆಟ್‌ಫ್ಲಿಕ್ಸ್‌ ಅಕೌಂಟ್‌ ಹೊಂದಿರುವ ಬಳಕೆದಾರರು ತಮ್ಮ ಪಾಸ್‌ವರ್ಡ್‌ ಅನ್ನು ತಮ್ಮ ಸ್ನೇಹಿತರು,ಮನೆಯ ಸದಸ್ಯರ ನಡುವೆ ಹಂಚಿಕೊಳ್ಳುವುದಕ್ಕೆ ಕೂಡ ಅವಕಾಶವಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಅಕೌಂಟ್‌ ಪಾಸ್‌ವರ್ಡ್‌ ಶೇರ್‌ ಮಾಡೋದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅನೇಕ ಜನರು ಒಂದೇ ಅಕೌಂಟ್‌ ಪಾಸ್‌ವರ್ಡ್‌ ಬಳಸಿ ಸ್ಟ್ರೀಮಿಂಗ್‌ ಸೇವೆ ಪಡೆದುಕೊಳ್ಳಬಹುದು. ಇಷ್ಟು ದಿನ ಈ ರೀತಿ ಪಾಸ್‌ವರ್ಡ್‌ ಶೇರ್‌ ಮಾಡುವುದಕ್ಕೆ ಯಾವುದೇ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಆದರೆ ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ ನಿಮ್ಮ ಪಾಸ್‌ವರ್ಡ್ ಅನ್ನು ನೀವು ಬೇರೆಯವರಿಗೆ ಶೇರ್‌ ಮಾಡುವುದಕ್ಕೆ ಕೂಡ ಶುಲ್ಕವನ್ನು ವಿಧಿಸಲು ಮುಂದಾಗಿದೆ. ಹಾಗಾದ್ರೆ ಈ ಹೊಸ ಕ್ರಮವನ್ನು ನೆಟ್‌ಫ್ಲಿಕ್ಸ್‌ ತೆಗೆದುಕೊಳ್ಳಲು ಮುಂದಾಗಿರುವುದು ಯಾಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್‌

ನೆಟ್‌ಫ್ಲಿಕ್ಸ್‌ ತನ್ನ ಹೊಸ ಪೋಸ್ಟ್‌ನಲ್ಲಿ, ನೆಟ್‌ಫ್ಲಿಕ್ಸ್ ಚಿಲಿ, ಕೋಸ್ಟಾ ರಿಕಾ ಮತ್ತು ಪೆರುಗಳಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ ನೀವು ಖಾತೆಗಳ ನಡುವೆ ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡುವ ವಿಧಾನದಲ್ಲಿ ಹೊಸ ಬದಲಾವಣೆ ತರಲು ಮುಂದಾಗಿದೆ. ಕೇವಲ ಒಂದೇ ಚಂದದಾರಿಕೆಯಲ್ಲಿ ಹಲವರು ಉಪಯೋಗ ಪಡೆದುಕೊಳ್ಳುವುದನ್ನು ತಪ್ಪಿಸುವುದಕ್ಕೆ ನೆಟ್‌ಫ್ಲಿಕ್‌ ಮುಂದಾಗಿದೆ. ಇದರಿಂದ ನೀವು ಪಾಸ್‌ವರ್ಡ್‌ ಶೇರ್‌ ಮಾಡುವುದಕ್ಕೂ ಕೂಡ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ಹೇಳಲಾಗಿದೆ. ನೆಟ್‌ಫ್ಲಿಕ್ಸ್ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಈ ಹೊಸ "ಫೀಚರ್ಸ್‌" ಶೀಘ್ರದಲ್ಲೇ ಇತರ ಎಲ್ಲಾ ಪ್ರದೇಶಗಳಲ್ಲೂ ಬರಬಹುದು.

ನೆಟ್‌ಫ್ಲಿಕ್ಸ್

ಇನ್ನು ನಾವು ನಮ್ಮ ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ ಯೋಜನೆಗಳಲ್ಲಿ ಪ್ರತ್ಯೇಕ ಪ್ರೊಫೈಲ್‌ಗಳಲ್ಲಿ ಪಾಸ್‌ವರ್ಡ್‌ ಶೇರ್‌ ಮಾಡುವುದಕ್ಕೆ ಅವಕಾಶ ನೀಡಿದ್ದೇವೆ. ಆದರೆ ನೆಟ್‌ಫ್ಲಿಕ್ಸ್ ಅನ್ನು ಯಾವಾಗ ಮತ್ತು ಹೇಗೆ ಹಂಚಿಕೊಳ್ಳಬಹುದು ಎಂಬುದರ ಕುರಿತು ಕೆಲವು ಗೊಂದಲಗಳನ್ನು ಜನರು ಹೊಂದಿದ್ದಾರೆ. ಏಕೆಂದರೆ ಹೆಚ್ಚಿನ ಜನರು ತಮ್ಮ ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡುವುದರಿಂದ ಚಲನಚಿತ್ರಗಳಲ್ಲಿ ಹೂಡಿಕೆ ಮಾಡುವ ನಮ್ಮ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ನೆಟ್‌ಫ್ಲಿಕ್ಸ್ ಹೇಳಿಕೊಂಡಿದೆ.

ಏನೆಲ್ಲಾ ಬದಲಾಗುತ್ತಿದೆ?

ಏನೆಲ್ಲಾ ಬದಲಾಗುತ್ತಿದೆ?

ನೆಟ್‌ಫ್ಲಿಕ್ಸ್ ಶೇರ್‌ ಅನ್ನು ನಿಯಂತ್ರಿಸಲು ಹೊಸದಾಗಿ 'ಹೆಚ್ಚುವರಿ ಸದಸ್ಯರನ್ನು ಸೇರಿಸಿ' ಮತ್ತು 'ಹೊಸ ಖಾತೆಗೆ ಪ್ರೊಫೈಲ್ ಅನ್ನು ವರ್ಗಾಯಿಸಿ' ಎಂಬ ಎರಡು ಹೊಸ ಫೀಚರ್ಸ್‌ ಪರಿಚಯಿಸುತ್ತಿದೆ. ಈ ಎರಡು ಫೀಚರ್ಸ್‌ ವಿವರ ಇಲ್ಲಿದೆ ಓದಿರಿ.
* ಹೆಚ್ಚುವರಿ ಸದಸ್ಯರನ್ನು ಸೇರಿಸಿ: ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ ನೆಟ್‌ಫ್ಲಿಕ್ಸ್ ಪ್ಲಾನ್‌ಗಳ ಸದಸ್ಯರು ಅವರು ವಾಸಿಸದ ಜಾಗದಲ್ಲಿ ಇಬ್ಬರಿಗೆ ಸಬ್‌-ಅಕೌಂಟ್‌ಗಳನ್ನು ಸೇರಿಸಲು ಸಾಧ್ಯವಾಗುತ್ತದೆ. ತಮ್ಮ ಪ್ರೊಫೈಲ್‌ಗಳ ಮೂಲಕ ಶಿಪಾರಸ್ಸು ಮಾಡುವ ಮೂಲಕ ಸದಸ್ಯರನ್ನು ಸೇರಿಸಬಹುದಾಗಿದೆ. ನೀವು ಶಿಪಾರಸ್ಸು ಮಾಡಿದ ನಂತರ ಸೇರ್ಪಡೆ ಆಗುವ ಸದಸ್ಯರ ಉಪ-ಖಾತೆಗಳು ತಮ್ಮದೇ ಆದ ಲಾಗಿನ್ ಮತ್ತು ಪಾಸ್‌ವರ್ಡ್ ಅನ್ನು ಸಹ ಹೊಂದಿರುತ್ತವೆ.

*ಹೊಸ ಖಾತೆಗೆ ಪ್ರೊಫೈಲ್ ಅನ್ನು ವರ್ಗಾಯಿಸಿ: ಬೇಸಿಕ್, ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ ಯೋಜನೆಗಳ ಸದಸ್ಯರು ತಮ್ಮ ಖಾತೆಯನ್ನು ಶೇರ್‌ ಮಾಡುವ ಜನರಿಗೆ ಪ್ರೊಫೈಲ್ ಮಾಹಿತಿಯನ್ನು ಹೊಸ ಖಾತೆಗೆ ವರ್ಗಾಯಿಸಲು ಸಕ್ರಿಯಗೊಳಿಸಬಹುದು. ಇದು ಬಳಕೆದಾರರು ತಮ್ಮ ವೀಕ್ಷಣೆಯ ಹಿಸ್ಟರಿ, ಮೈ ಲಿಸ್ಟ್‌ ಮತ್ತು ವೈಯಕ್ತೀಕರಿಸಿದ ಶಿಫಾರಸುಗಳನ್ನು ಇರಿಸಿಕೊಳ್ಳಲು ಅನುಮತಿಸುತ್ತದೆ.

Best Mobiles in India

English summary
Sharing Netflix Password With Your Friend Will Soon Be An Expensive Affair

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X