ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ
ಡ್ರೈವಿಂಗ್ ಮಾಡುತ್ತಿರುವಾಗ ಎಷ್ಟು ಜನ ಫೋನ್ ಬಳಸುತ್ತೀರಿ ಹೇಳಿ? ಎಲ್ಲರೂ ಫೋನ್ ಬಳಸುವವರೇ ಆದರೆ ಚಾಲನೆಯಲ್ಲಿರುವಾಗ ಫೋನ್ ಬಳಸುವುದರಿಂದ ಉಂಟಾಗುವ ಅಪಾಯವೇನು ಎಂಬುದನ್ನು ಇಂದಿಲ್ಲಿ ವೀಡಿಯೊದ ಮೂಲಕ ನಾವು ತಿಳಿಸಲಿದ್ದೇವೆ. ಇದರ ಜೊತೆಗೆ ಒಂದು ಅಧ್ಯನವನ್ನೂ ನಡೆಸಲಾಗಿದ್ದು ಹದಿಹರೆಯವರು ಚಾಲನೆಯಲ್ಲಿರುವಾಗ ಹೆಚ್ಚು ಫೋನ್ ಬಳಕೆ ಮಾಡುತ್ತಿದ್ದು ಇದರಿಂದ 2,200 ಅಪಘಾತಗಳು ಉಂಟಾಗಿದೆ ಎಂಬುದಾಗಿ ತಿಳಿಸಲಾಗಿದೆ.
ಇದನ್ನೂ ಓದಿರಿ: ಸ್ಮಾರ್ಟ್‌ಫೋನ್‌ನಿಂದ ಕ್ಯಾನ್ಸರ್ ಅಧ್ಯಯನಗಳಿಂದ ಸಾಬೀತು
ಅಮೇರಿಕಾದ ಆಟೊಮೊಬೈಲ್ ಅಸೊಸಿಯೇಶನ್ ಫೌಂಡೇಶನ್ ಹೆಚ್ಚಿನ ರಸ್ತೆ ಅಪಘಾತಗಳಿಗೆ ಹದಿಹರೆಯದ ಯುವಕರ ಫೋನ್ ಬಳಕೆಯೂ ಕಾರಣವಾಗಿದ್ದು ಚಾಲನೆ ಮಾಡುತ್ತಿರುವಾಗ ಅಜಾಗರೂಕತೆಯಿಂದ ಮೊಬೈಲ್‌ಗಳನ್ನು ಬಳಸುವುದು ಇದಕ್ಕೆ ಕಾರಣವಾಗಿದೆ ಎಂದಿದೆ.
ಹೆಚ್ಚು ಕಡಿಮೆ ಹದಿನಾರರಿಂದ ಹತ್ತೊಂಬತ್ತರ ಹರೆಯದವರು ಈ ಮೊಬೈಲ್ ಫೋನ್‌ಗಳನ್ನು ಬಳಸಿ ರಸ್ತೆ ಅಪಘಾತಕ್ಕೆ ಕಾರಣರಾಗಿದ್ದು, ಸಾವಿನ ಸಂಖ್ಯೆ ಅಧಿಕವಾಗುತ್ತಿದೆ. 2007 ರಿಂದ 2012 ರವರೆಗೆ ಕಾರು ಕ್ಯಾಮೆರಾಗಳ ಮೂಲಕ 2,200 ವೀಡಿಯೊಗಳನ್ನು ಮಾಡಲಾಗಿದ್ದು ಅಪಘಾತದ ಮುನ್ನ ಇದು ರೆಕಾರ್ಡ್ ಅನ್ನು ಮಾಡಿದೆ ಅಂತೆಯೇ ಸಾಮಾನ್ಯ ಅಂತರದಿಂದ ಕಾರು ಅಪಘಾತ ಸಂಭವಿಸಿದೆ ಎಂಬುದಾಗಿ ತಿಳಿಸಿದೆ. ಇತರ ಪ್ರಯಾಣಿಕರೊಂದಿಗೆ ಚಾಲಕರು ಮಾತನಾಡುತ್ತಿರುವುದು 11 ಶೇಕಡಾದಷ್ಟು ಅಪಘಾತಗಳನ್ನು ಉಂಟುಮಾಡಿದೆ ಎಂಬುದಾಗಿ ತಿಳಿಸಿದೆ. ಉಳಿದ 12 ಶೇಕಡಾದಷ್ಟು ಅಪಘಾತಗಳು ನಡೆದಿರುವುದು ಯುವಕರು ಕಾರು ಚಾಲನೆ ಮಾಡುತ್ತಿರುವಾಗ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಆಗಿದೆ. ಕರೆ ಅಥವಾ ಸಂದೇಶಗಳನ್ನು ಕಳುಹಿಸುವಲ್ಲಿ ಅವರು ವ್ಯಸ್ತರಾಗಿರುವುದು ಇದಕ್ಕೆ ಕಾರಣವಾಗಿದೆ. ಮೊಬೈಲ್ ಬಳಕೆ, ಪ್ರಯಾಣಿಕರು ಸಂವಹನ ಮಾಡುವುದು, ಅಂತೆಯೇ ಚಾಲಕರ ಸೆಲ್ಫಿಯನ್ನು ಅವರು ತೆಗೆಯುತ್ತಿರುವಾಗ ಗಮನ ಬೇರೆಡೆ ಹೋಗಿ ಅಪಘಾತಗಳು ಸಂಭವಿಸುತ್ತಿದೆ ಎಂಬುದಾಗಿ ಚಾಲಕರು ತಿಳಿಸಿದ್ದಾರೆ. ಇನ್ನು ಕೆಲವರು ಮ್ಯೂಸಿಕ್ ಸ್ಟ್ರೀಮಿಂಗ್ ಸೈಟ್‌ಗಳಾದ ಸ್ಪೋಟಿಫೈಯನ್ನು ಕೇಳುತ್ತಿದ್ದು ಇದರಿಂದ ಕೂಡ ಅಪಘಾತವುಂಟಾಗಿದೆ ಎಂಬುದಾಗಿ ತಿಳಿಸಿದ್ದಾರೆ. ಅಂತೂ ತಂತ್ರಜ್ಞಾನದ ಅತಿ ಹೆಚ್ಚು ಬಳಕೆ ಇವರುಗಳ ಪ್ರಾಣಕ್ಕೆ ಕಂಟಕವಾಗಿದ್ದು ಇದನ್ನು ತಡೆಗಟ್ಟಲು ಆದಷ್ಟು ಹದಿಹರೆಯವರೇ ಗಮನ ಹರಿಸಬೇಕಾಗಿದೆ. ಫೋನ್‌ನಲ್ಲಿ ಕರೆಮಾಡುವುದು, ಸಂದೇಶ ರವಾನೆ, ಸಾಮಾಜಿಕ ತಾಣಗಳ ವೀಕ್ಷಣೆ ಹೀಗೆ ಚಾಲನೆ ಮಾಡುತ್ತಿರುವಾಗ ಇತರ ಮನರಂಜನಾ ಚಟುವಟಿಕೆಗಳನ್ನು ನಡೆಸುವುದರಿಂದ ಗಮನ ಬೇರೆಡೆ ಹರಿದು ಜೀವವನ್ನೇ ಬಲಿ ತೆಗೆದುಕೊಂಡು ಬಿಡುತ್ತದೆ ಎಂಬುದಾಗಿ ಈ ಅಧ್ಯಯನ ತಿಳಿಸಿದೆ. ಮಹಿಳೆಯರಿಗಿಂತ ಪುರುಷ ಚಾಲಕರೂ ಬಿರುಸಾದ ಡ್ರೈವಿಂಗ್ ಅನ್ನು ನಡೆಸುತ್ತಿದ್ದು ಅದರಲ್ಲೂ ಚಾಲನೆ ಮಾಡುವಾಗ ಫೋನ್ ಬಳಕೆಯಿಂದ ಹೆಚ್ಚಿನ ಅಪಘಾತಗಳು ನಡೆಯುತ್ತಿದೆ ಎನ್ನಲಾಗಿದೆ. ವಾಹನ ಚಾಲನೆ ಮಾಡುವಾಗ ಆದಷ್ಟು ಜಾಗರೂಕತೆಯಿಂದ ವಾಹನ ಚಲಾಯಿಸುವುದು ಹೆಚ್ಚಿನ ಅಪಘಾತಗಳಿಂದ ರಕ್ಷಿಸಲಿದೆ. ಎಂಬುದು ಈ ಅಧ್ಯಯನಗಳಿಂದ ತಿಳಿದು ಬಂದಿರುವ ಅಂಶವಾಗಿದೆ. ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ
#1

#2

#3

#4

#5

#6

#7

#8

#9

#10
#11


Click it and Unblock the Notifications








