Home
ಸುದ್ದಿಜಾಲ

ಸಂಗೀತ ಮೊಬೈಲ್ಸ್‌ನಿಂದ ಇತಿಹಾಸದ ಭರ್ಜರಿ ಆಫರ್ ಘೋಷಣೆ!..ಮೊಬೈಲ್ ಖರೀದಿಗೆ ಬೆಸ್ಟ್ ಟೈಮ್!!

By Bhaskar N J

ಆನ್‌ಲೈನ್ ಮೊಬೈಲ್ ಮಾರುಕಟ್ಟೆಯ ಪೈಪೋಟಿಯಲ್ಲಿಯೂ ಯಶಸ್ವಿ ಆಫ್‌ಲೈನ್ ಮೊಬೈಲ್ ಮಾರಾಟ ಸಂಸ್ಥೆಯಾಗಿರುವ ಸಂಗೀತಾ ಮೊಬೈಲ್ಸ್ ಮೊಬೈಲ್ ಪ್ರಿಯರಿಗೆ ಸೀಮಿತ ಅವಧಿಯ ಭರ್ಜರಿ ಆಫರ್ ಘೋಷಿಸಿದೆ. ಸಂಗೀತ ಮೊಬೈಲ್ಸ್‌ನಲ್ಲಿ ಖರಿದಿಸಿದ ಮೊಬೈಲ್ ಬಿದ್ದು ಒಡೆದರೆ ಅದಕ್ಕೆ ಸಿಗುತ್ತಿದ್ದ ವಾರಂಟಿ ಅವಧಿ ಒಂದು ತಿಂಗಳ ಬದಲು ಒಂದು ವರ್ಷಕ್ಕೆ ವಿಸ್ತರಣೆ ಆಗಿದೆ.

ಬೆಂಗಳೂರಿನ ಗಾಂಧಿ ಬಜಾರ್​ನಲ್ಲಿರುವ ಸಂಗೀತಾ ಪಿಂಕ್ ಶೋರೂಂನಲ್ಲಿ ನಡೆಯ "ಹಾನರ್ 9ಎನ್' ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ಸಂಗೀತ ಮೊಬೈಲ್ಸ್ ಸಂಸ್ಥೆ ಈ ಘೋಷಣೆ ಮಾಡಿದೆ. ಸ್ವಾತಂತ್ರ್ಯೋತ್ಸವ ಕೊಡುಗೆಯಾಗಿ ಸಂಗೀತಾ ಮೊಬೈಲ್ಸ್ ಸಂಸ್ಥೆ ತನ್ನ ಗ್ರಾಹಕರಿಗಾಗಿ ಈ ಅವಕಾಶ ನೀಡುತ್ತಿದೆ ಎಂದು ಸಂಗೀತಾ ಮೊಬೈಲ್ಸ್ನ ಮುಖ್ಯಸ್ಥರು ಹೇಳಿದ್ದಾರೆ.

ಸಂಗೀತ ಮೊಬೈಲ್ಸ್‌ನಿಂದ ಇತಿಹಾಸದ ಭರ್ಜರಿ ಆಫರ್!!.ಮೊಬೈಲ್ ಖರೀದಿಗೆ ಬೆಸ್ಟ್ ಟೈಮ್!!

ಸ್ವಾತಂತ್ರ್ಯೋತ್ಸವ ಕೊಡುಗೆಯಾಗಿ ನೀಡಿರುವ ಈ ಆಫರ್ ಒಂದು ತಿಂಗಳು ಮಾತ್ರ ಲಭ್ಯವಿದೆ ಎಂಬುದನ್ನು ಸಹ ಸಂಗೀತ ಮೊಬೈಲ್ಸ್ ಸ್ಪಷ್ಟಪಡಿಸಿದೆ. ಹಾಗಾದರೆ, ಸಂಗೀತಾ ಮೊಬೈಲ್ಸ್ ನೀಡುತ್ತಿರುವ ಒಂದು ವರ್ಷದ ಕೊಡುಗೆ ಪಡೆಯುವುದು ಹೇಗೆ? ಆನ್‌ಲೈನ್‌ಗಿಂತಲೂ ಸಂಗೀತಾ ಮೊಬೈಲ್ಸ್ ನಲ್ಲಿ ಮೊಬೈಲ್ ಖರೀದಿಸಿದರೆ ಏನೆಲ್ಲಾ ಲಾಭ ಎಂದು ಮುಂದೆ ತಿಳಿಯಿರಿ.

ಮೊಬೈಲ್‌ಗಳ ಮೇಲೆ ಒಂದು ವರ್ಷ ವಾರಂಟಿ!

ಮೊಬೈಲ್‌ಗಳ ಮೇಲೆ ಒಂದು ವರ್ಷ ವಾರಂಟಿ!

ಸ್ವಾತಂತ್ರ್ಯೋತ್ಸವ ಕೊಡುಗೆಯಾಗಿ ಈ ತಿಂಗಳು ಮೊಬೈಲ್ ಕೊಳ್ಳುವವರಿಗೆ ಒಂದು ವರ್ಷದ ವಾರಂಟಿಯ ಲಾಭ ಸಿಗಲಿದೆ. ಮೊಬೈಲ್ ಬಿದ್ದು ಒಡೆದರೆ ಇಲ್ಲವೇ ಬೇರೆ ಯಾವುದೇ ವಿಧದಲ್ಲಿ ಹಾನಿಗೆ ಒಳಗಾದರೆ ಸಂಸ್ಥೆ ಅದರ ಜವಾಬ್ದಾರಿಯನ್ನು ವರ್ಷದವರೆಗೂ ಹೊರಲಿದೆ ಎಂದು ಸಂಗೀತ ಮೊಬೈಲ್ಸ್ ಸ್ಪಷ್ಟಪಡಿಸಿದೆ.

364ನೇ ದಿನದಂದು ಕೂಡ ವಾಪಸ್!

364ನೇ ದಿನದಂದು ಕೂಡ ವಾಪಸ್!

ಮೊಬೈಲ್ ಬಿದ್ದು ಒಡೆದರೆ ಇಲ್ಲವೇ ಬೇರೆ ಯಾವುದೇ ವಿಧದಲ್ಲಿ ಹಾನಿಗೆ ಒಳಗಾದರೆ ಸಂಸ್ಥೆ ಅದರ ಜವಾಬ್ದಾರಿಯನ್ನು ವರ್ಷದವರೆಗೂ ಹೊರಲಿದೆ ಎಂದು ತಿಳಿಸಿದ ಸಂಗೀತಾ ಮೊಬೈಲ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಎಲ್. ಸುಭಾಷ್‍ಚಂದ್ರ ಅವರು 364ನೇ ದಿನ ಮೊಬೈಲ್ ಹಾಳಾದರೂ, ಮೊಬೈಲ್ ವಾಪಸ್ ತಂದು ಈ ಸೇವೆಯ ಲಾಭ ಪಡೆಯಬಹುದು ಎಂದು ಹೇಳಿದ್ದಾರೆ.

ಆನ್‌ಲೈನ್ vs ಆಫ್‌ಲೈನ್!

ಆನ್‌ಲೈನ್ vs ಆಫ್‌ಲೈನ್!

ಜನರು ಆನ್‌ಲೈನ್ ಮಾರುಕಟ್ಟೆಯಲ್ಲಿ ಮೊಬೈಲ್ ಖರೀದಿಸಿದರೆ ಕಡಿಮೆ ಬೆಲೆಗೆ ಸಿಗುತ್ತಿದೆ ಎಂದು ಅಂದುಕೊಂಡಿದ್ದಾರೆ. ಆದರೆ, ಎರಡೂ ಕಡೆ ಒಂದೇ ಬೆಲೆ ಇರುವ ಸ್ಮಾರ್ಟ್‌ಪೋನ್‌ಗಳು ಕೂಡ ನಮ್ಮಲ್ಲಿವೆ. ಉದಾಹರಣೆಗೆ ಇಂದು ಬಿಡುಗಡೆಯಾದ "ಹಾನರ್ 9ಎನ್' ಆಫ್‌ಲೈನ್‌ನಲ್ಲಿಯೂ ಎರಡೂ ಕಡೆ ಒಂದೇ ಬೆಲೆ ಮತ್ತು ಸೇವೆಗಳು ಹೆಚ್ಚಿವೆ ಎಂದು ಸುಭಾಷ್‍ಚಂದ್ರ ಅವರು ಹೇಳಿದ್ದಾರೆ.

“ಹಾನರ್ 9ಎನ್’ ಮೊಬೈಲ್ ಲಾಂಚ್!

“ಹಾನರ್ 9ಎನ್’ ಮೊಬೈಲ್ ಲಾಂಚ್!

ಮೊಬೈಲ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ "ಹಾನರ್ 9ಎನ್' ಸ್ಮಾರ್ಟ್‌ಫೋನ್ ಆಫ್‌ಲೈನಿನಲ್ಲಿ ಇದೀಗ ಲಾಂಚ್ ಆಗಿದೆ. ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ಅವರು ಸಂಗೀತ ಮೊಬೈಲ್ಸ್‌ನಲ್ಲಿ ಮೊಬೈಲ್ ಬಿಡುಗಡೆ ಮಾಡಿ, ನಾವು ನೀಡುವ ಹಣಕ್ಕಿಂತ ಹೆಚ್ಚಿನದನ್ನು "ಹಾನರ್ 9ಎನ್' ಸ್ಮಾರ್ಟ್‌ಫೋನ್ ಹೊಂದಿದೆ ಎಂಬ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಅಷ್ಟಕ್ಕೂ “ಹಾನರ್ 9ಎನ್’ ಮಿಂಚುತ್ತಿರುವುದೇಕೆ?

ಅಷ್ಟಕ್ಕೂ “ಹಾನರ್ 9ಎನ್’ ಮಿಂಚುತ್ತಿರುವುದೇಕೆ?

ಮೊಬೈಲ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಅತ್ಯುತ್ತಮ ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಯಲ್ಲಿ 'ಹಾನರ್ 9ಎನ್' ಮಾರುಕಟ್ಟೆಗೆ ಕಾಲಿಟ್ಟಿದೆ. ಡ್ಯುಯಲ್ ಕ್ಯಾಮೆರಾಗಳು, ಫುಲ್ ವೀವ್ ಡಿಸ್‌ಪ್ಲೇ, ವೇಗದ ಪ್ರೊಸೆಸರ್‌ ಫೀಚರ್ಸ್ ಗ್ರಾಹಕರನ್ನು ಆಕರ್ಷಸಿವೆ. ಹಾಗಾದರೆ, 'ಹಾನರ್ 9ಎನ್' ಸ್ಮಾರ್ಟ್‌ಪೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದೆ ತಿಳಿಯಿರಿ.

'ಹಾನರ್ 9ಎನ್' ಸ್ಮಾರ್ಟ್‌ಫೋನ್ ಖರೀದಿಸಲು ಜನರು ಕ್ಯೂ ನಿಲ್ಲುತ್ತಿರುವುದು ಏಕೆ?

'ಹಾನರ್ 9ಎನ್' ಸ್ಮಾರ್ಟ್‌ಫೋನ್ ಖರೀದಿಸಲು ಜನರು ಕ್ಯೂ ನಿಲ್ಲುತ್ತಿರುವುದು ಏಕೆ?

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ನಿಧಾನವಾಗಿ ಹೆಜ್ಜೆಯೂರುತ್ತಿರುವ ಹುವಾವೆ ಕಂಪೆನಿ ಈಗ ಅತ್ಯುತ್ತಮವಾದ ಮತ್ತೊಂದು ಸ್ಮಾರ್ಟ್‌ಫೋನ್ ಮೂಲಕ ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ. ಆಪಲ್ ನೋಚ್ ಮಾದರಿಯ ಫುಲ್‌ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಮತ್ತು ಹೈ ಎಂಡ್ ಫೀಚರ್ಸ್‌ಗಳನ್ನು ಹೊಂದಿರುವ ಹಾನರ್ ಸರಣಿಯ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಈಗ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬಂದಿದೆ.
ಹೌದು, ಮೊಬೈಲ್ ಗ್ರಾಹಕರ ನಿರೀಕ್ಷೆಗೂ ಮೀರಿ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಭಾರತದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ಆಪಲ್ ನೋಚ್ ಮಾದರಿಯ 5.84 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ, 4 ಇನ್ 1 ಲೈಟ್ ಫ್ಯೂಶನ್ ತಂತ್ರಜ್ಞಾನವಿರುವ 16ಎಂಪಿ ಸಾಮರ್ಥ್ಯದ ಕ್ಯಾಮೆರಾ ಮತ್ತು ಆಕ್ಟ ಕೋರ್ ಹೈಸಿಲಿಕಾನ್ ಕಿರಿನ್ 559 ಪ್ರೊಸೆಸರ್‌ನಂತಹ ಹೈ ಎಂಡ್ ಫೀಚರ್ಸ್‌ಗಳನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಗ್ರೇ, ಬ್ಲೂ ಮತ್ತು ಬ್ಲಾಕ್ ಮೂರು ಬಣ್ಣಗಳಲ್ಲಿ ಮಾರುಕಟ್ಟೆಗೆ ಕಾಲಿಟ್ಟಿರುವ 'ಹಾನರ್ 9ಎನ್' ಸ್ಮಾರ್ಟ್‌ಪೋನ್ ಬೆಲೆ ಕೂಡ ಗ್ರಾಹಕರ ಜೇಬಿಗೆ ಹೊರೆಯಾಗದಂತಿರುವುದರಿಂದ ಪ್ರಸ್ತುತ ಸಮಯದಲ್ಲಿ ಖರಿದಿಸಿಸಬಹುದಾದ ಟಾಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಹಾಗಾದರೆ, ಗ್ರಾಹಕರ ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಬಂದಿರುವ 'ಹಾನರ್ 9ಎನ್' ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿಶೇಷತೆಗಳು ಮತ್ತು ಸ್ಮಾರ್ಟ್‌ಪೋನ್ ಖರೀದಿಸಲೇಬೇಕು ಎನ್ನಲು ಇರಲು ಕಾರಣಗಳೇನು ಎಂಬುದನ್ನು ಮುಂದೆ ತಿಳಿಯಿರಿ.

'ಹಾನರ್ 9ಎನ್' ಡಿಸ್‌ಪ್ಲೇ ಮತ್ತು ವಿನ್ಯಾಸ!

'ಹಾನರ್ 9ಎನ್' ಡಿಸ್‌ಪ್ಲೇ ಮತ್ತು ವಿನ್ಯಾಸ!

ಮೊದಲೇ ಹೇಳಿದಂತೆ ಹಾನರ್ 9ಎನ್' ಸ್ಮಾರ್ಟ್‌ಪೋನ್ ಆಪಲ್ ನೋಚ್ ಮಾದರಿಯ5.84 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. 19:9 ಅನುಪಾತದಲ್ಲಿರುವ ಈ ಡಿಸ್‌ಪ್ಲೇ 2280 x 1080 ಪಿಕ್ಸೆಲ್ಸ್ ಸಾಮರ್ಥ್ಯವನ್ನು ಹೊಂದಿದೆ. ಮೇಲೆ ನೋಚ್ ವಿನ್ಯಾಸವನ್ನು ಹೊಂದಿದ್ದರೂ 79% ಸ್ಕ್ರೀನ್ ಟು ಬಾಡಿ ಬಿಗ್ ಸ್ಕ್ರೀನ್ ವೀವ್ ಅನುಭವವನ್ನು ನೀಡಲಿದೆ. ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ವಿಡಿಯೋ ಮತ್ತು ಗೇಮಿಂಗ್ ಪ್ರಿಯರಿಗೆ!

ವಿಡಿಯೋ ಮತ್ತು ಗೇಮಿಂಗ್ ಪ್ರಿಯರಿಗೆ!

ಹಾನರ್ 9ಎನ್' ಸ್ಮಾರ್ಟ್‌ಪೋನ್ ಬಳಸುವಾಗ, ಒಂದು ಕೈಯಲ್ಲಿ ಆರಾಮವಾಗಿ ಸರಿಹೊಂದುವಂತಹ ಡಿಸ್‌ಪ್ಲೇ ಗಾತ್ರದ ಜೊತೆಗೆ, ವೀಡಿಯೋ ಪ್ಲೇಬ್ಯಾಕ್ ಮತ್ತು ಗೇಮಿಂಗ್ ಅನುಭವಕ್ಕೂ ಸ್ಮಾರ್ಟ್‌ಫೋನ್ ಹೇಳಿಸಿದಂತಿದೆ. ಮೊಬೈಲ್ ಅಂಚಿನ ಕಡಿಮೆ ಅನುಭವವನ್ನು ನೀಡುವ ಡಿಸ್‌ಪ್ಲೇ ಗೇಮಿಂಗ್ ಸಮಯದಲ್ಲಿ ಹೆಚ್ಚುವರಿ ಮಾಹಿತಿಯನ್ನು ಪ್ರದರ್ಶಿಸಲು ಪರಿಣಾಮಕಾರಿಯಾಗಿ ಸಂಘಟಿತವಾಗಿದೆ. ಹಾಗಾಗಿ, ಮೊಬೈಲ್ ಬಳಕೆದಾರರ ಅನುಭವಕ್ಕಾಗಿ ಬಳಕೆಯಾಗುವ ಡಿಸ್‌ಪ್ಲೇ ಇದಾಗಿದೆ ಎಂದು ಹೇಳಬಹುದು.

'ಐ ಕಂಫರ್ಟ್ ವೀವ್'!

'ಐ ಕಂಫರ್ಟ್ ವೀವ್'!

2280 x 1080 ಪಿಕ್ಸೆಲ್ಸ್ ಸಾಮರ್ಥ್ಯವಿರುವ ಈ ಸ್ಮಾರ್ಟ್‌ಫೋನಿನ ಡಿಸ್‌ಪ್ಲೇಯು ಆರಾಮದಾಯಕ ಓದುವಿಕೆ ಅನುಭವ ನೀಡುವ ತಂತ್ರಜ್ಞಾನವನ್ನು ಹೊಂದಿದೆ. ನಿಮ್ಮ ನೆಚ್ಚಿನ ಪುಸ್ತಕಗಳನ್ನು ಓದಲು ನಿಮ್ಮ ಕಣ್ಣುಗಳಿಗೆ ಯಾವುದೇ ಹಾನಿಯಾಗದಂತೆ ತಡೆಯುವ ತಂತ್ರಜ್ಞಾನ ಇದಾಗಿದೆ. ನೇರವಾಗಿ ಸೂರ್ಯನ ಬೆಳಕಿನಲ್ಲಿ ಅನುಕೂಲಕರವಾದ ಬಳಕೆದಾರ ಅನುಭವವನ್ನು ನೀಡುವ ಸಾಮರ್ಥ್ಯವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಅದ್ಬುತ ಮಲ್ಟಿಟಾಸ್ಕ್ ಸಪೋರ್ಟೆಡ್!

ಅದ್ಬುತ ಮಲ್ಟಿಟಾಸ್ಕ್ ಸಪೋರ್ಟೆಡ್!

ಹಾನರ್ 9ಎನ್' ಸ್ಮಾರ್ಟ್‌ಪೋನ್ ಯಾವುದೇ ಸಮಸ್ಯೆಗಳಿಲ್ಲದೆ ಮಲ್ಟಿಟಾಸ್ಕ್ ಕಾರ್ಯನಿರ್ವಹಿಸುತ್ತದೆ. ನೀವು ಆರಾಮವಾಗಿ ಪರದೆಯ ಮೇಲೆ ಎರಡು ಅಪ್ಲಿಕೇಶನ್‌ಳನ್ನು ಬಳಸಬಹುದಾಗಿದೆ. ಉದಾಹರಣೆಗೆ, ನೀವು ವೀಡಿಯೊ ವೀಕ್ಷಿಸುವಾಗಲೂ ಪಠ್ಯವನ್ನು ಟೈಪ್ ಮಾಡಬಹುದು ಅಥವಾ ನಿಮ್ಮ ಫೇಸ್‌ಬುಕ್ ಟೈಮ್ಲೈನ್ ​​ಮೂಲಕ ನೀವು ಸ್ಕ್ರಾಲ್ ಮಾಡುತ್ತಿರುವಾಗಲೂ ಕೂಡ ಟೈಪ್ ಮಾಡಬಹುದು.

ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ:

ಹಾನರ್ 9N ಸ್ಮಾರ್ಟ್‌ಫೋನ್ ಬೆಸ್ಟ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯುವ ಸಲುವಾಗಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ. ಇದು 13 MP ಪ್ರೈಮರಿ ಸೆನ್ಸಾರ್ ನೊಂದಿಗೆ 2 MP ಸೆಕೆಂಡರಿ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರಿಂದಾಗಿ ನೀವು ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಇದಲ್ಲದೇ ಫ್ರಿ ಲೋಡ್ ಕ್ಯಾಮೆರಾ ಆಯ್ಕೆಗಳಿದ್ದು, ಇದು ನಿಮಗೆ ಪ್ರೋ ಮಾದರಿಯಲ್ಲಿ ಫೋಟೋಗಳನ್ನು ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ.

ಸೆಲ್ಫಿಗಾಗಿಯೇ ಬ್ಯೂಟಿಫಿಕೇಷನ್

ಸೆಲ್ಫಿಗಾಗಿಯೇ ಬ್ಯೂಟಿಫಿಕೇಷನ್

ಸ್ಯಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಸೆಲ್ಪಿ ಬ್ಯೂಟಿ ಮೋಡ್ ಅನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಇನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿ ಪಡಿಸಲಾಗಿರುವುದನ್ನು ನೀವು ಕಾಣಬಹುದಾಗಿದೆ. ಮುಂಭಾಗದಲ್ಲಿ 16ವMP ಸೆಲ್ಪೀ ಕ್ಯಾಮೆರಾವನ್ನು ನೀಡಲಾಗಿದೆ. ಇದು ಬೆಸ್ಟ್ ಮಾದರಿಯ ಫೋಟೋಗಳನ್ನು ಸೆರೆಹಿಡಿಯಲು ಹೊಸ ಮಾದರಿಯ ಕ್ಯಾಮೆರಾ UI ಅನ್ನು ಹೊಂದಿದೆ.

ಬೆಸ್ಟ್ ಮೋಡ್‌ಗಳು

ಬೆಸ್ಟ್ ಮೋಡ್‌ಗಳು

ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾದ ಪ್ರೋಟೆಟ್ ಮೋಡ್, ಫೇಸ್ ಐಡಿಟಿಫಿಕೇಷನ್ ಮೋಡ್, ಬೋಕೆ ಮೋಡ್, ಜೆಂಡರ್ ಬ್ಯೂಟಿ ಮೋಡ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ. ಬ್ಯೂಟಿ ಮೋಡ್ ಫೋಟೊವನ್ನು ಎಡಿಟ್ ಮಾಡುವ ಸಂದರ್ಭದಲ್ಲಿ ಮಹಿಳೆಯರಿಗೆ ಬೇರೆ ಮಾದರಿಯಲ್ಲಿ ಮತ್ತು ಪುರುಷರಿಗೆ ಬೇರೆ ಮಾದರಿಯಲ್ಲಿ ಎಫೆಕ್ಟ್ ಅನ್ನು ನೀಡಲಿದೆ. ಇದಲ್ಲದೇ ಫೋಟೋ ಕ್ಲಿಕಿಸಲು ವಿವಿಧ ಮಾದರಿಯ ಅವಕಾಶವನ್ನು ನೀಡಲಾಗಿದೆ.

ಸ್ಮಾರ್ಟ್‌ಫೇಸ್‌ ಲಾಕ್

ಸ್ಮಾರ್ಟ್‌ಫೇಸ್‌ ಲಾಕ್

ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಫೀಂಗರ್ ಪ್ರಿಂಟ್ ಸ್ಕ್ಯಾನರ್ ನೊಂದಿಗೆ ಫೇಸ್‌ ಲಾಕ್ ಆನ್ನು ಸಹ ನೀಡಲಾಗಿದೆ. ನಿಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ಲಾಕ್ ಅನ್ನು ಒಪನ್ ಮಾಡಬಹುದಾಗಿದೆ. ಅಲ್ಲದೇ ನಿಮ್ಮ ಡೇಟಾವನ್ನು ಕೇವಲ ಫೇಸ್‌ಲಾಕ್ ಮೂಲಕ ಮಾತ್ರವೇ ಓಪನ್ ಆಗುವಂತೆ ಮಾಡಬಹುದಾಗಿದೆ.

ವೈ-ಫೈ ಬ್ರಿಡ್ಜ್

ವೈ-ಫೈ ಬ್ರಿಡ್ಜ್

ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನ್ ಇನ್ನಷ್ಟು ವಿಶೇಷತೆಗಳನ್ನು ಹೊಂದಿದೆ. ಇವುಗಳಲ್ಲಿ ಮುಖ್ಯವಾಗಿರುವುದು ವೈ-ಫೈ ಬ್ರಿಡ್ಜ್ ಆಯ್ಕೆಯನ್ನು ಇದರಲ್ಲಿ ಕಾಣಬಹುದಾಗಿದೆ. ವೈ-ಫೈ ಕನೆಕ್ಟಿವಿಟಿಯನ್ನು ಹಾಟ್ ಸ್ಪಾಟ್ ಮಾದರಿಯಲ್ಲಿ ಅದನ್ನು ಸ್ನೇಹಿತರೊಂದಿಗೆ ಶೇರ್ ಮಾಡಬಹುದಾಗಿದೆ. ಅಲ್ಲದೇ ಇದು ಗೇಮಿಂಗ್ ಸಂದರ್ಭದಲ್ಲಿ ನಿಮಗೆ ಸಾಕಷ್ಟು ಸಹಾಯವನ್ನು ಮಾಡಲಿದೆ.

ಡ್ಯುಯಲ್ ಬ್ಲೂಟೂತ್

ಡ್ಯುಯಲ್ ಬ್ಲೂಟೂತ್

ಡ್ಯುಯಲ್ ಬ್ಲೂಟೂತ್ ಸೇವೆಯನ್ನು ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದು ಒಂದೇ ಸಂದರ್ಭದಲ್ಲಿ ಎರಡು ಡಿವೈಸ್‌ಗಳನ್ನು ಕನೆಕ್ಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ. ಒಂದೇ ಸಂದರ್ಭದಲ್ಲಿ ಬ್ಲೂಟೂತ್ ಹೆಡ್ ಸೆಟ್ ಮತ್ತು ಸ್ಮಾರ್ಟ್‌ವಾಚ್ ಎರಡನ್ನು ಒಟ್ಟಿಗೆ ಬಳಸುವ ಅವಕಾಶವನ್ನು ಮಾಡಿಕೊಡಲಿದೆ.

ರೈಡ್ ಮೋಡ್ ಸಹ ಇದೆ

ರೈಡ್ ಮೋಡ್ ಸಹ ಇದೆ

ಇದಲ್ಲದೇ ಹಾನರ್ 9N ಸ್ಮಾರ್ಟ್‌ಫೋನಿನಲ್ಲಿ ಟೂ ವೀಲ್ಹರ್ ರೈಡರ್ಸ್‌ಗಾಗಿಯೇ ರೈಡ್ ಮೋಡ್ ವೊಂದನ್ನು ನೀಡಲಾಗಿದೆ. ಇದರಿಂದಾಗಿ ಟೂ ವೀಲ್ಹರ್ ರೈಡಿಂಗ್ ಸೇಫ್ ಆಗಲಿದೆ. ಇದಲ್ಲದೇ ಪೇಟಿಎಂ ಪೇ ಆಯ್ಕೆಯನ್ನು ನೀಡಲಾಗಿದೆ. ಇದು ಒಂದೇ ಟಚ್ ನಲ್ಲಿ ಪೇಮೆಂಟ್ ಮಾಡುವ ಅವಕಾಶವನ್ನು ನೀಡುತ್ತಿದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಇದೆ ಜುಲೈ 24 ರಂದು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಹಾನರ್ 9N ಸ್ಮಾರ್ಟ್‌ಫೋನ್ 4GBRAM ಮತ್ತು 64GB ಮೆಮೊರಿ ವೆರಿಯಂಟ್‌ನಲ್ಲಿ ಮಾರಾಟಕ್ಕಿದೆ. ಭಾರತದ ನಂ.1 ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ 13,999 ರೂಪಾಯಿಗಳಿಗೆ ಮಾರಾಟಕ್ಕಿರುವ ಈ ಸ್ಮಾರ್ಟ್‌ಪೋನ್ ಖರೀದಿಸಲು ಜನರು ಕ್ಯೂ ನಿಲ್ಲುತ್ತಿದ್ದಾರೆ.

More from GizBot

Best Mobiles in India

English summary
Shraddha Srinath launched HONOR 9N at SANGEETHA MOBILES at Gandhi Bazaar Mai. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+