Home
ಸುದ್ದಿಜಾಲ

AR laptop: ವಿಶ್ವದ ಮೊದಲ AR ಲ್ಯಾಪ್‌ಟಾಪ್ ಬಗ್ಗೆ ನಿಮಗೆಷ್ಟು ತಿಳಿದಿದೆ! ಫೀಚರ್ಸ್‌ ಕೇಳಿದ್ರೆ ಶಾಕ್‌ ಆಗ್ತೀರಾ!

ಲ್ಯಾಪ್‌ಟಾಪ್‌ ಬಳಸುವವರು ಈ ಸುದ್ದಿ ಕೇಳಿದ್ರೆ ಅಚ್ಚರಿ ಆಗೋದು ಖಂಡಿತ. ಪ್ರಯಾಣಿಸುವಾಗ ಅಥವಾ ಎಲ್ಲಿಗೆ ಬೇಕೆಂದರಲ್ಲಿಗೆ ತೆಗೆದುಕೊಂಡು ಹೋಗುವುದಕ್ಕಾಗಿ ಹೆಚ್ಚಿನ ಜನರು ಕಡಿಮೆ ಗಾತ್ರದ ಲ್ಯಾಪ್‌ಟಾಪ್‌ಗಳನ್ನು ಬಯಸುತ್ತಾರೆ. ಆದರೆ ನೀವು ಇನ್ಮುಂದೆ 100 ಇಂಚಿನ ಲ್ಯಾಪ್‌ಟಾಪ್‌ ಅನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಅದು ಹೇಗೆ ಅನ್ನೊದಕ್ಕೆ ಇಲ್ಲಿದೆ ಉತ್ತರ

ಹೌದು, ವಿಶ್ವದ ಮೊದಲ AR ಲ್ಯಾಪ್‌ಟಾಪ್ ಸ್ಪೇಸ್‌ಟಾಪ್‌ ಅನ್ನು ನಿವು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. "AR ಲ್ಯಾಪ್‌ಟಾಪ್" Spacetop ಅನ್ನು ವಿನ್ಯಾಸಗೊಳಿಸಿದಾಗ ದೃಷ್ಟಿಗೋಚರ ಡೆವಲಪರ್‌ಗಳು ಇಂತಹದೊಂದು ಸುದ್ದಿ ನೀಡಿದ್ದಾರೆ. ಈ ಲ್ಯಾಪ್‌ಟಾಪ್‌ ಅನ್ನು ಒಂದು ಜೋಡಿ AR ಗ್ಲಾಸ್‌ ಮೂಲಕ ನೀವು ಕಾರ್ಯನಿರ್ವಹಿಸಬಹುದಾಗಿದೆ. ಹಾಗಾದ್ರೆ ಸ್ಪೇಸ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

AR laptop: ವಿಶ್ವದ ಮೊದಲ AR ಲ್ಯಾಪ್‌ಟಾಪ್ ಬಗ್ಗೆ ನಿಮಗೆಷ್ಟು ತಿಳಿದಿದೆ!

ಏನಿದು Spacestop?
Spacestop ಎಂಬುದು AR laptop ಆಗಿದ್ದು, ನಿಮ್ಮ ಕೆಲಸದ ಅವಶ್ಯಕತೆಗಾಗಿ ಡಿಸ್‌ಪ್ಲೇಯನ್ನು ವಿಸ್ತರಿಸಲು ನಿಮಗೆ ಅನುಮತಿಸುತ್ತದೆ. ಅಂದರೆ ಇದನ್ನು ನೀವು ಭೌತಿಕವಾಗಿ ತೆಗೆದುಕೊಂಡು ಹೋಗಬೇಕಾದ ಅಗತ್ಯವಿಲ್ಲ, ಬದಲಿಗೆ AR ಗ್ಲಾಸ್‌ ಮೂಲಕವೇ ಲ್ಯಾಪ್‌ಟಾಪ್‌ ಅನ್ನು 100 ಇಂಚಿನ ಗಾತ್ರದವರೆಗೆ ವಿಸ್ತರಿಸಿಕೊಂಡು ಕಾರ್ಯನಿರ್ವಹಿಸಬಹುದು. ಇದು ಸಣ್ಣ ಡಿಸ್‌ಪ್ಲೆ ಗಾತ್ರದ ಲ್ಯಾಪ್‌ಟಾಪ್‌ ಅನ್ನು ತೆಗೆದುಕೊಂಡು ಹೋಗಲು ಬಯಸದ ಉದ್ಯೊಗಿಗಳಿಗೆ ಸೂಕ್ತವಾಗಿದೆ.

https://youtu.be/GSBESw3a_tc

ಇದರ ಕಾರ್ಯನಿರ್ವಹಣೆ ಹೇಗೆ?
ಅಂದರೆ ಈ ಲ್ಯಾಪ್‌ಟಾಪ್‌ ಪ್ರೀಮಿಯರ್ ಪ್ರೊ ನಂತಹ ಹೆವಿ ಡ್ಯೂಟಿ ಅಪ್ಲಿಕೇಶನ್‌ಗಳನ್ನು ಸಹ ರನ್‌ ಮಾಡಲಿದೆ. ಸ್ಪೇಸ್‌ಟಾಪ್ ಎಆರ್ ಲ್ಯಾಪ್‌ಟಾಪ್ ಸಾಕಷ್ಟು ಆಸಕ್ತಿದಾಯಕವಾಗಿದ್ದು, ಸಣ್ಣ ಯಂತ್ರವಾಗಿ ಕಾಣುತ್ತದೆ ಎಂದು ವರದಿಯಾಗಿದೆ. 100-ಇಂಚಿನ ಡಿಸ್‌ಪ್ಲೇಯಾಗಿ ಬಳಸುವುದಕ್ಕೆ ನೀವು ಯಂತ್ರದೊಂದಿಗೆ ಸಾಗಿಸುವ ವರ್ಧಿತ ರಿಯಾಲಿಟಿ ಹೆಡ್‌ಸೆಟ್ ಅನ್ನು ಬಳಸಬೇಕಾಗುತ್ತದೆ. ಇದು ನೇರವಾಗಿ ಲ್ಯಾಪ್‌ಟಾಪ್‌ಗೆ ಪ್ಲಗ್ ಆಗಲಿದ್ದು, ಸುತ್ತಲಿನ ವರ್ಚುವಲ್ ಡಿಸ್‌ಪ್ಲೇಗಳಲ್ಲಿ ನಿಮಗೆ ಅಗತ್ಯವಿರುವ ಎಲ್ಲವನ್ನೂ ಪ್ರೊಜೆಕ್ಟ್ ಮಾಡುವುದಕ್ಕೆ ಅವಕಾಶ ನೀಡಲಿದೆ.

AR laptop: ವಿಶ್ವದ ಮೊದಲ AR ಲ್ಯಾಪ್‌ಟಾಪ್ ಬಗ್ಗೆ ನಿಮಗೆಷ್ಟು ತಿಳಿದಿದೆ!

ಫೀಚರ್ಸ್‌ ಹೇಗಿದೆ?
Spacetop ಸ್ನಾಪ್‌ಡ್ರಾಗನ್ XR2 ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನ ಕಸ್ಟಮ್, ಓಪನ್-ಸೋರ್ಸ್ ಆವೃತ್ತಿಯನ್ನು ರನ್ ಮಾಡುತ್ತದೆ. ಹಾಗೆಯೇ 8GB RAM ಮತ್ತು 128GB ಸ್ಟೋರೇಜ್‌ ಸಾಮರ್ಥ್ಯದಲ್ಲಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ ಐದು ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಹೆಚ್ಚಿನ ಸ್ಕ್ರೀನ್‌ ಅಗತ್ಯವಿರುವವರಿಗೆ ಪೂರ್ಣ ಪ್ರಮಾಣದ AR ಲ್ಯಾಪ್‌ಟಾಪ್ ಸೂಕ್ತವಾಗಿದೆ.

ಇನ್ನು ಇತ್ತೀಚಿನ ದಿನಗಳಲ್ಲಿ AR ಸ್ಮಾರ್ಟ್‌ ಗ್ಲಾಸ್‌ ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಇದರಲ್ಲಿ ARknovv A1 ಸ್ಮಾರ್ಟ್‌ಗ್ಲಾಸ್‌ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಇದು ಸಾಕಷ್ಟು ಹಗುರವಾದ AR ಗ್ಲಾಸ್ ಆಗಿದೆ. ಇದು 3840×1080 ಡ್ಯುಯಲ್-ಐ ರೆಸಲ್ಯೂಶನ್ ಹೊಂದಿದ್ದು, ರೆಟಿನಾ-ಲೆವೆಲ್‌ ಡಿಸ್‌ಪ್ಲೇ ಎಫೆಕ್ಟ್‌ ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್‌ಗ್ಲಾಸ್‌ ಹೆಚ್ಚಿನ-ಬ್ರೈಟ್‌ನೆಸ್‌ ಅನ್ನು ಒಳಗೊಂಡಿದ್ದು, ಆಪ್ಟಿಕಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ಗ್ಲಾಸ್‌ನ ಮತ್ತೊಂದು ವಿಶೇಷತೆ ಎಂದರೆ "ಮ್ಯಾಜಿಕ್ ರಿಂಗ್". ಇದು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ಇಂಟರ್‌ ಆಕ್ಷನ್‌ ಆಕ್ಸಿಸರೀಸ್‌ ಆಗಿದೆ. ಇದು AR ಸ್ಮಾರ್ಟ್‌ಗ್ಲಾಸ್‌ ಆಗಿರುವುದರಿಂದ ಮ್ಯಾಜಿಕ್‌ ರಿಂಗ್‌ ಮೂಲಕ ನೀವು ಡಿಜಿಟಲ್‌ ಪ್ರಪಂಚದಲ್ಲಿರುವಂತೆ ಭಾಸವಾಗಲಿದೆ. ಇನ್ನು ಇದರ AR ವಿಷಯ ಮತ್ತು ಅಪ್ಲಿಕೇಶನ್‌ಗಳ ಮೂಲಕ ತಡೆರಹಿತ ನಿಯಂತ್ರಣ ಮತ್ತು ನ್ಯಾವಿಗೇಷನ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಸ್ಮಾರ್ಟ್‌ಗ್ಲಾಸ್‌ ಸಾಟಿಯಿಲ್ಲದ ವ್ಯೂ ಎಕ್ಸ್‌ಪಿರಿಯನ್ಸ್‌ ಅನ್ನು ಒದಗಿಸಲಿದೆ. ಜೊತೆಗೆ ಹೆಚ್ಚುವರಿಯಾಗಿ, ಎಲೆಕ್ಟ್ರೋಕ್ರೊಮಿಕ್ ಲೆನ್ಸ್‌ಗಳು ಕಣ್ಣುಗಳನ್ನು ದಿನವಿಡೀ ಆರಾಮದಾಯಕವಾಗಿರುವಂತೆ ಮಾಡಲಿವೆ. ಅಂದರೆ ಬಳಕೆದಾರರಿಗೆ ಡಿಜಿಟಲ್‌ ಪ್ರಪಂಚದೊಂದಿಗೆ ಕಮ್ಯೂನಿಕೇಷನ್‌ ಮಾಡಲು ಅವಕಾಶ ನೀಡಲಿದೆ.

Best Mobiles in India

English summary
Spacetop Launched World First AR laptop With No screen: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+