Home
ಸುದ್ದಿಜಾಲ

ವಾಟ್ಸಾಪ್‌ ಮಾದರಿಯಲ್ಲೇ ಚಾಟ್‌ ವಾಲ್‌ಪೇಪರ್‌ ಪರಿಚಯಿಸಿದ ಸಿಗ್ನಲ್‌ ಅಪ್ಲಿಕೇಶನ್‌!

ವಾಟ್ಸಾಪ್‌ಗೆ ಪರ್ಯಾಯವಾಗಿ ಸಾಕಷ್ಟು ಸಂಚಲನ ಸೃಷ್ಟಿಸಿರುವ ಸಿಗ್ನಲ್‌ ಅಪ್ಲಿಕೇಶನ್‌ ತನ್ನ ಫೀಚರ್ಸ್‌ಗಳಿಂದ ಸದ್ದು ಮಾಡ್ತಿದೆ. ಈಗಾಗಲೇ ತನ್ನ ಗೌಪ್ಯತೆಯ ಫೀಚರ್ಸ್‌ಗಳಿಂದ ಸೈ ಎನಿಸಿಕೊಂಡಿರುವ ಸಿಗ್ನಲ್‌ ಅಪ್ಲಿಕೇಶನ್‌ ಇದೀಗ ಚಾಟ್‌ ವಾಲ್‌ಪೇಪರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಸಿಗ್ನಲ್ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗೆ ಅಪ್‌ಡೇಟ್ 5.3 ನೊಂದಿಗೆ ಚಾಟ್ ವಾಲ್‌ಪೇಪರ್‌ಗಳನ್ನು ಸೇರಿಸಿದ್ದು, ವಾಟ್ಸಾಪ್ ನೀಡುವ ಫೀಚರ್ಸ್‌ಗಳಿಗೆ ಹೋಲುವ ಫೀಚರ್ಸ್‌ಗಳ ಪಟ್ಟಿಗೆ ಸೇರಿಸಿದೆ.

ಸಿಗ್ನಲ್‌

ಹೌದು, ಸಿಗ್ನಲ್‌ ಅಪ್ಲಿಕೇಶನ್‌ ವಾಟ್ಸಾಪ್‌ ಮಾದರಿಯಲ್ಲಿಯೇ ಚಾಟ್ ವಾಲ್‌ಪೇಪರ್‌ಗಳನ್ನು ಪರಿಚಯಿಸಿದೆ. ಸಿಗ್ನಲ್ ಬಳಕೆದಾರರಿಗೆ ತಮ್ಮ ಚಾಟ್‌ಗಳಿಗೆ ಪ್ರತ್ಯೇಕ ಬ್ಯಾಕ್‌ಗ್ರೌಂಡ್‌ ಸೆಟ್‌ಮಾಡಲು ಅಥವಾ ಎಲ್ಲಾ ಚಾಟ್‌ಗಳಿಗೆ ಡೀಫಾಲ್ಟ್ ಬ್ಯಾಕ್‌ಗ್ರೌಂಡ್‌ ಬಳಸಲು ಅನುಮತಿಸುತ್ತದೆ. ಸದ್ಯ ಈ ಫೀಚರ್ಸ್‌ ಅನ್ನು ಕಳೆದ ವಾರ ಸಿಗ್ನಲ್‌ನ ಬೀಟಾ ಆವೃತ್ತಿಯಲ್ಲಿ ಗುರುತಿಸಲಾಗಿದೆ. ಇದೀಗ ಅಪ್ಲಿಕೇಶನ್‌ನ ಸ್ಥಿರ ಆವೃತ್ತಿಗೆ ಪ್ರವೇಶಿಸಿದೆ. ಇನ್ನು ಈ ಅಪ್ಲಿಕೇಶನ್‌ಗೆ ಸೇರಿಸಲಾದ ಹೊಸ ಡೇಟಾ ನಿರ್ವಹಣಾ ಆಯ್ಕೆಗಳನ್ನು ವಿವರಿಸುವ ಪೋಸ್ಟ್‌ನ್ನು ಸಿಗ್ನಲ್‌ ಹಂಚಿಕೊಂಡಿದೆ. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಿಗ್ನಲ್‌

ಇನ್ನು ಸಿಗ್ನಲ್‌ ಅಪ್ಲಿಕೇಶನ್‌ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಆವೃತ್ತಿ 5.3 ರೊಂದಿಗೆ ಚಾಟ್ ವಾಲ್‌ಪೇಪರ್‌ಗಳನ್ನು ಸೇರಿಸಿದೆ. ಇದನ್ನು ತನ್ನ ಟ್ವೀಟ್ ಮೂಲಕ ಮೆಸೇಜಿಂಗ್ ಸೇವೆ ಸಿಗ್ನಲ್ ಹಂಚಿಕೊಂಡಿದೆ. ಸಿಗ್ನಲ್‌ನ ಪ್ರತಿಸ್ಪರ್ಧಿ ವಾಟ್ಸಾಪ್‌ನಂತೆಯೇ ಚಾಟ್ ವಾಲ್‌ಪೇಪರ್‌ಗಳು, ಬಳಕೆದಾರರಿಗೆ ಚಿತ್ರವನ್ನು ಚಾಟ್‌ಗಳ ಬ್ಯಾಕ್‌ಗ್ರೌಂಡ್‌ ಆಗಿ ಸೆಟ್‌ಮಾಡಲು ಅನುಮತಿಸುತ್ತದೆ. ಸದ್ಯ ವಾಟ್ಸಾಪ್ ಚಾಟ್‌ಗಳಿಗೆ ಕಸ್ಟಮ್ ವಾಲ್‌ಪೇಪರ್ ಬೆಂಬಲವನ್ನು ಸೇರಿಸಿದೆ. ಈಗ ಈ ಮಾದರಿಯನ್ನು ಸಿಗ್ನಲ್‌ಗೆ ಪರಿಚಯಿಸಲಾಗಿದೆ.

ಸಿಗ್ನಲ್

ಸಿಗ್ನಲ್ ಅಪ್ಲಿಕೇಶನ್‌ ಟೆಲಿಗ್ರಾಮ್‌ನ ಮತ್ತೊಂದು ಪ್ರತಿಸ್ಪರ್ಧಿಯಾಗಿರುವುದರಿಂದ ಟೆಲಿಗ್ರಾಮ್‌ನ ಅಧಿಕೃತ ಖಾತೆಯು ಚಾಟ್ ವಾಲ್‌ಪೇಪರ್‌ಗಳ ಬಗ್ಗೆ ಸಿಗ್ನಲ್ ಮಾಡಿದ ಟ್ವೀಟ್‌ಗೆ ಉತ್ತರಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ, ಕರೆಗಳಿಗೆ ಕಡಿಮೆ ಡೇಟಾವನ್ನು ಬಳಸಲು ಅಪ್ಲಿಕೇಶನ್‌ನಲ್ಲಿ ಸೆಟ್ಟಿಂಗ್ ಅನ್ನು ಸೇರಿಸಿದೆ ಎಂದು ಸಿಗ್ನಲ್ ಹಂಚಿಕೊಂಡಿದೆ. ಅಲ್ಲದೆ ಇದನ್ನು ಬಳಕೆದಾರರು ನಿಯಂತ್ರಿಸಬಹುದಾಗಿದೆ. ಇದು ಡೇಟಾ ನಿರ್ವಹಣೆಯ ಒಂದು ಭಾಗವಾಗಿದ್ದು, ಸಿಗ್ನಲ್ ಬಳಕೆದಾರರು ಮೊಬೈಲ್ ಡೇಟಾದಲ್ಲಿ ಮಾತ್ರ, ವೈ-ಫೈ ಅಥವಾ ಮೊಬೈಲ್ ಡೇಟಾದಲ್ಲಿದ್ದಾಗ ಅಥವಾ ಎಂದಿಗೂ ಕರೆ ಮಾಡಲು ಬಯಸಿದರೆ ಆಯ್ಕೆ ಮಾಡಬಹುದು.

ಸಿಗ್ನಲ್‌

ಇನ್ನು ಆಂಡ್ರಾಯ್ಡ್ ಬಳಕೆದಾರರು ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ತಮ್ಮ ಪ್ರೊಫೈಲ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಡೇಟಾ ಮತ್ತು ಸಂಗ್ರಹಣೆಯನ್ನು ಆಯ್ಕೆ ಮಾಡಬಹುದು. ಈ ಆಯ್ಕೆಯನ್ನು ಐಒಎಸ್ ಬಳಕೆದಾರರಿಗೆ ಡೇಟಾ ಬಳಕೆ ಎಂದು ಲೇಬಲ್ ಮಾಡಲಾಗಿದೆ. ಇಲ್ಲಿ, ಅವರು ಮೇಲೆ ತಿಳಿಸಿದ ಮೂರು ಆಯ್ಕೆಗಳೊಂದಿಗೆ ಕರೆಗಳ ವಿಭಾಗಕ್ಕೆ ಕಡಿಮೆ ಡೇಟಾವನ್ನು ಬಳಸಿ ನೋಡಿ.

Best Mobiles in India

English summary
Signal app now supports custom wallpapers on android and iOS.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+