ವಿಶ್ವದೆಲ್ಲೆಡೆ ಸಿಗ್ನಲ್‌ ಅಪ್ಲಿಕೇಶನ್‌ ಸರ್ವರ್‌ ಡೌನ್‌! ಕಾರಣ ಏನು?

|

ವಾಟ್ಸಾಪ್‌ಗೆ ಪರ್ಯಾಯ ಎಂದೇ ಟ್ರೆಂಡ್‌ ಆಗಿರುವ ಸಿಗ್ನಲ್‌ ಅಪ್ಲಿಕೇಶನ್‌ ಜಾಗತಿಕವಾಗಿ ಸರ್ವರ್‌ ಸಮಸ್ಯೆ ಎದುರಿಸುತ್ತಿದೆ. ಸಾವಿರಾರು ಬಳಕೆದಾರರು ಸೈಟ್ ಸ್ಥಿತಿ ಟ್ರ್ಯಾಕರ್ ಡೌನ್‌ಡೆಟೆಕ್ಟರ್‌ಗೆ ದೋಷಗಳನ್ನು ವರದಿ ಮಾಡುತ್ತಿದ್ದಾರೆ. ನೀವು ಸಿಗ್ನಲ್‌ ಅಪ್ಲಿಕೇಶನ್ ತೆರೆಯಬಹುದು ಮತ್ತು ಸಂದೇಶಗಳನ್ನು ಕಳುಹಿಸಬಹುದಾದರೂ, ಇದು ಯಾವುದನ್ನೂ ತಲುಪಿಸಲು ಸಿಗ್ನಲ್‌‌ ಅಪ್ಲಿಕೇಶನ್‌ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಮಸ್ಯೆಗಳು ತಡ ರಾತ್ರಿಯಿಂದಲೂ ಕಾಣಿಸಿಕೊಂಡಿದ್ದು, ಸದ್ಯ ಜಾಗತಿಕವಾಗಿ ಸರ್ವರ್‌ ಫುಲ್‌ ಡೌನ್‌ ಆಗಿದೆ.

ಸಿಗ್ನಲ್‌

ಹೌದು, ವಾಟ್ಸಾಪ್‌ನ ಹೊಸ ಸೇವಾ ನಿಯಮದ ವಿವಾದ ನಂತರ ಜಾಗತಿಕವಾಗಿ ಟ್ರೆಂಡ್‌ ಸೃಷ್ಟಿಸಿರುವ ಸಿಗ್ನಲ್‌ ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿವೆ. ವಾಟ್ಸಾಪ್‌ಗೆ ಪರ್ಯಾಯವಾಗಿ ಸಿಗ್ನಲ್‌ ಅಪ್ಲಿಕೇಶನ್‌ ಬಳಸಲು ಹೆಚ್ಚಿನ ಜನರು ಪ್ರಾರಂಭಿಸಿದ ನಂತರ ಈ ಸಮಸ್ಯೆ ಸೃಷ್ಟಿಯಾಗಿದೆ. ನೀವು ಇದೀಗ ಸಿಗ್ನಲ್ ಅನ್ನು ತೆರೆದರೆ, ಹೊಸ ಬ್ಯಾನರ್ ಅನ್ನು ನೀವು ನೋಡುತ್ತೀರಿ, ಅದು ಅಪ್ಲಿಕೇಶನ್ ಕೆಲವು ತಾಂತ್ರಿಕ ತೊಂದರೆಗಳನ್ನು ಎದುರಿಸುತ್ತಿದೆ ಎಂದು ವಿವರಿಸುತ್ತದೆ. ಆದರೂ ಬ್ಯಾನರ್‌ನಲ್ಲಿ ಯಾವುದೇ ಹೆಚ್ಚುವರಿ ವಿವರಗಳಿಲ್ಲ. ಹಾಗಾದ್ರೆ ಸಿಗ್ನಲ್‌ ಅಪ್ಲಿಕೇಶನ್‌ ಸಮಸ್ಯೆ ಎದುರಿಸಲು ಕಾರಣವೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಿಗ್ನಲ್‌

ಸಿಗ್ನಲ್‌ ಅಪ್ಲಿಕೇಶನ್‌ ಜಾಗತಿಕವಾಗಿ ಸರ್ವರ್‌ ಡೌನ್‌ ಸಮಸ್ಯೆಯನ್ನು ಎದುರಿಸುತ್ತಿದೆ. ಸದ್ಯ ಅಪ್ಲಿಕೇಶನ್‌ ತೆರೆದ ಬಳಕೆದಾರರಿಗೆ ಸಾಧ್ಯವಾದಷ್ಟು ಬೇಗ ಸೇವೆಯನ್ನು ಪುನಃಸ್ಥಾಪಿಸಲು ತಂಡವು ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿಯನ್ನು ನೀಡುತ್ತಿದೆ. ಸದ್ಯ ಹೊಸ ಗೌಪ್ಯತೆ ನೀತಿಯನ್ನು ಘೋಷಿಸಿದ ನಂತರ ಜನರು ವಾಟ್ಸಾಪ್‌ ತೊರೆದು ಹೆಚ್ಚಿನ ಜನರು ಸಿಗ್ನಲ್‌ಗೆ ಸೈನ್ ಇನ್ ಆಗುತ್ತಿರುವವರ ಸಂಖ್ಯೆ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಈ ಸಮಸ್ಯೆಯು ಕಾಣಿಸಿಕೊಂಡಿದೆ ಎಂದು ಸಿಗ್ನಲ್‌ ಕಂಪನಿ ದೃಡಪಡಿಸಿದೆ.

ಸಿಗ್ನಲ್

ಕಳೆದ ಏಳು ದಿನಗಳಲ್ಲಿ 17.8 ಮಿಲಿಯನ್ ಬಳಕೆದಾರರಿಂದ ಸಿಗ್ನಲ್ ಅನ್ನು ಡೌನ್‌ಲೋಡ್ ಮಾಡಲಾಗಿದೆ. ಇದು ಹಿಂದಿನ ವಾರಕ್ಕಿಂತ 62 ಪಟ್ಟು ಹೆಚ್ಚಾಗಿದೆ. ಅದರಲ್ಲೂ ಸಿಗ್ನಲ್ ಹೆಚ್ಚಿನ ಸಂಖ್ಯೆಯ ಹೊಸ ಬಳಕೆದಾರರನ್ನು ಪಡೆದ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. ಭಾರತದಲ್ಲೂ ಹೆಚ್ಚಿನ ಜನರು ವಾಟ್ಸಾಪ್‌ ತೊರೆದು ಸಿಗ್ನಲ್‌ ಅಪ್ಲಿಕೇಶನ್‌ ಕಡೆಗೆ ಒಲವು ತೋರುತ್ತಿದ್ದಾರೆ. ಸದ್ಯ ಭಾರತದಲ್ಲೂ ಸಹ ಸಿಗ್ನಲ್‌ ಅಪ್ಲಿಕೇಶನ್‌ ಸಮಸ್ಯೆಯನ್ನು ಎದುರಿಸುತ್ತಿದೆ.

ಸಿಗ್ನಲ್‌

ಇದೀಗ ಸೃಷ್ಟಿಯಾಗಿರುವ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆ ಹರಿಸುವ ಭರವಸೆಯನ್ನು ಸಿಗ್ನಲ್‌ ಸಂಸ್ಥೆ ನೀಡಿದೆ. ಈಗಾಗಲೇ ಇದರಿಂದ ಬಳಕೆದಾರರಿಗೆ ಭಾರಿ ತೊಂದರೆ ಆಗಿದೆ. ಇದನ್ನು ಯಾವ ರೀತಿ ಸಿಗ್ನಲ್‌ ಬಗೆಹರಿಸುತ್ತದೆ ಅನ್ನೊದನ್ನ ಕಾದು ನೋಡಬೇಕಿದೆ. ಸದ್ಯ ವಾಟ್ಸಾಪ್‌ನಿಂದ ಬೆಸೆತ್ತಿರುವ ಜನ ಸಿಗ್ನಲ್‌ ಅಪ್ಲಿಕೇಶನ್‌ ಸಮಸ್ಯೆಯಿಂದ ಕುಡ ಬೆಸೆತ್ತಿದ್ದಾರೆ. ಸಮಸ್ಯೆ ಬೇಗ ಪರಿಹಾರವಾಗದಿದ್ದಲ್ಲಿ ಬಳಕೆದಾರರ ಪ್ರಮಾಣದಲ್ಲಿ ಸಮಸ್ಯೆಯನ್ನು ಸಿಗ್ನಲ್‌ ಸಂಸ್ತೆ ಎದುರಿಸಬೇಕಾದ ಸಾಧ್ಯತೆ ಸೃಷ್ಟಿಯಾದರೆ ಅಚ್ಚರಿಯಿಲ್ಲ.

Most Read Articles
Best Mobiles in India

English summary
Signal is facing an outage globally, thousands of users are reporting errors to site status tracker DownDetector.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X