ಸಿಗ್ನಲ್ ಚಾಟ್‌ಗಳನ್ನು ಟ್ರಾನ್ಸಫರ್ ಮಾಡುವುದು ಈಗ ಇನ್ನಷ್ಟು ಸುಲಭ!
ಇತ್ತೀಚಿನ ದಿನಗಳಲ್ಲಿ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಜೋರಾಗಿಯೇ ಇದೆ. ಇದೇ ಕಾರಣಕ್ಕೆ ಸ್ಮಾರ್ಟ್‌ಫೋನ್ ಪ್ರಿಯರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬದಲಾಯಿಸಿ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ಬದಲಾಗುತ್ತಿದ್ದಾರೆ. ಇನ್ನು ಹೊಸ ಸ್ಮಾರ್ಟ್‌ಫೋನ್‌ಗೆ ಬದಲಾದಾಗ ಹಳೆಯ ಸ್ಮಾರ್ಟ್‌ಫೋನ್‌ನಲ್ಲಿರುವ ನಿಮ್ಮ ಡೇಟಾ ಬ್ಯಾಕ್‌ಅಪ್ ಅನ್ನು ಮಾಡಿಕೊಳ್ಳುವುದಕ್ಕೆ ಗೂಗಲ್ ಬ್ಯಾಕಪ್ ಸಹಾಯಕವಾಗಲಿದೆ. ಇನ್ನು ನಿಮ್ಮ ಫೋನ್‌ನಲ್ಲಿರುವ ವಾಟ್ಸಾಪ್ ಚಾಟ್‌ಗಳನ್ನು ಕ್ಲೌಡ್‌ಗೆ ಬ್ಯಾಕಪ್ ಮಾಡಲು ಅನುಮತಿಸುತ್ತದೆ. ಆದೇ ರೀತಿ ಸಿಗ್ನಲ್ ಅಪ್ಲಿಕೇಶನ್ ನಿಮ್ಮ ಚಾಟ್‌ಗಳನ್ನು ವೈಫೈ ಮೂಲಕ ಹೊಸ ಫೋನ್‌ಗೆ ವರ್ಗಾಯಿಸುವ ಸಾಮರ್ಥ್ಯವನ್ನು ನೀಡಿದೆ.

ಹೌದು, ವಾಟ್ಸಾಪ್‌ನ ಹೊಸ ಸೇವಾ ನಿಯಮದ ವಿವಾದದ ನಂತರ ಜನಪ್ರಿಯತೆ ಪಡೆದುಕೊಂಡಿರುವ ಸಿಗ್ನಲ್ ಅಪ್ಲಿಕೇಶನ್ ಹೊಸ ಫೀಚರ್ಸ್ ಅನ್ನು ಪರಿಚಯಿಸಿದೆ. ಸಿಗ್ನಲ್ ಈಗ ನಿಮ್ಮ ಚಾಟ್‌ಗಳನ್ನು ವೈ-ಫೈ ನೆಟ್‌ವರ್ಕ್ ಮೂಲಕ ಹೊಸ ಫೋನ್‌ಗೆ ವರ್ಗಾಯಿಸುವ ಸಾಮರ್ಥ್ಯವನ್ನು ನೀಡಿದೆ. ಹಾಗಾದ್ರೆ ವೈಫೈ, ನೆಟ್‌ವರ್ಕ್ ಮೂಲಕ ಸಿಗ್ನಲ್ ಚಾಟ್ ಅನ್ನು ಟ್ರಾನ್ಸಫರ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸಿಗ್ನಲ್ ಅಪ್ಲಿಕೇಶನ್ ಗೌಪ್ಯತೆಯ ದೃಷ್ಟಿಯಿಂದ ಹೆಚ್ಚಿನ ಜನರನ್ನು ಆಕರ್ಷಿಸಿರುವ ಮೆಸೇಜಿಂಗ್ ಅಪ್ಲಿಕೇಶನ್. ಇದು ಗೌಪ್ಯತೆ ಉದ್ದೇಶಗಳಿಗಾಗಿ ಬಳಕೆದಾರರು ತಮ್ಮ ಚಾಟ್‌ಗಳನ್ನು ಕ್ಲೌಡ್‌ಗೆ ಬ್ಯಾಕಪ್ ಮಾಡಲು ಸಿಗ್ನಲ್ ಇನ್ನೂ ಅನುಮತಿಸುವುದಿಲ್ಲ. ಆದರೆ ಅಪ್ಲಿಕೇಶನ್‌ನ ಐಒಎಸ್ ಆವೃತ್ತಿಯು ವೈಫೈ ನೆಟ್‌ವರ್ಕ್ ಬಳಸಿ ಬಳಕೆದಾರರು ತಮ್ಮ ಎಲ್ಲಾ ಚಾಟ್‌ಗಳನ್ನು ಹಳೆಯ ಐಫೋನ್‌ನಿಂದ ಹೊಸ ಐಫೋನ್‌ಗೆ ವರ್ಗಾಯಿಸಲು ಅನುಮತಿಸುತ್ತದೆ. ಜೊತೆಗೆ ನಿಮ್ಮ ಅಪ್ಲಿಕೇಶನ್ ಹಳೆಯ ಐಫೋನ್‌ನಲ್ಲಿ ಅದು ಪೂರ್ಣಗೊಂಡ ನಂತರ ಅದನ್ನು ನಿಷ್ಕ್ರಿಯಗೊಳಿಸುತ್ತದೆ.

ಇತ್ತೀಚಿನ ಬೀಟಾ ಆವೃತ್ತಿಯಲ್ಲಿ ಈ ಹೊಸ ಸಾಮರ್ಥ್ಯವನ್ನು ಸೇರಿಸಲಾಗಿದೆ. ನಿಮ್ಮ ಸಿಗ್ನಲ್ ಮಾಹಿತಿಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹೊಚ್ಚಹೊಸ Android ಫೋನ್‌ಗೆ ವರ್ಗಾಯಿಸಬಹುದಾಗಿದೆ. ಖಾಸಗಿ ಸ್ಥಳೀಯ ವೈಫೈ ಡೈರೆಕ್ಟ್ ಸಂಪರ್ಕದ ಮೂಲಕ ನಿಮ್ಮ ಖಾತೆ ಮತ್ತು ಸಂದೇಶಗಳನ್ನು ಹಳೆಯ ಡಿವೈಸ್‌ನಿಂದ ಹೊಸ ಡಿವೈಸ್‌ಗೆ ಸರಿಸಲು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಮೈಗ್ರೇಷನ್ ಫೀಚರ್ಸ್ ಬಳಸಬಹುದಾಗಿದೆ. ಸದ್ಯ ಈ ಫೀಚರ್ಸ್ ಸ್ಥಳೀಯ ವೈ-ಫೈ ಹಾಟ್‌ಸ್ಪಾಟ್ ಅನ್ನು ರಚಿಸುತ್ತದೆ, ಇದರರ್ಥ ಫೀಚರ್ಸ್ ಕಾರ್ಯನಿರ್ವಹಿಸಲು ನಿಮ್ಮ ಎರಡೂ ಸಾಧನಗಳು ಪರಸ್ಪರ ಹತ್ತಿರದಲ್ಲಿರಬೇಕು. ಟ್ರಾನ್ಸಫರ್ ನಡೆಯುತ್ತಿದೆಯಾ ಅನ್ನೊದನ್ನ ಖಚಿತಪಡಿಸಿಕೊಳ್ಳಲು ಸಹ ಇದರಲ್ಲಿ ಅವಕಾಶ ನೀಡಲಾಗಿದೆ. ಸದ್ಯ ಇದು ಬೀಟಾ ಆವೃತ್ತಿಯಲ್ಲಿದ್ದು, ಕೆಲವು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ.

ನಿಮ್ಮ ಸಿಗ್ನಲ್ ಚಾಟ್‌ಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹೊಚ್ಚಹೊಸ Android ಫೋನ್‌ಗೆ ವರ್ಗಾಯಿಸುವುದಕ್ಕೆ ಇದು ಅವಕಾಶ ನೀಡಲಿದೆ. ನೀವು ಸಿಗ್ನಲ್‌ನ ಬೀಟಾ ಪ್ರೋಗ್ರಾಂಗೆ ದಾಖಲಾಗಿದ್ದರೆ, ಅಪ್ಲಿಕೇಶನ್‌ನಲ್ಲಿನ "ಚಾಟ್ಸ್" ಸೆಟ್ಟಿಂಗ್‌ಗಳಲ್ಲಿ ನೀವು ಹೊಸ "ಟ್ರಾನ್ಸಫರ್ ಅಕೌಂಟ್" ಫೀಚರ್ಸ್ ಅನ್ನು ಕಾಣಬಹುದು. ನೀವು ಮೊದಲು ಹೊಸ ಸಾಧನದಲ್ಲಿ ಸಿಗ್ನಲ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ನಂತರ ವರ್ಗಾವಣೆಯನ್ನು ಟ್ಯಾಪ್ ಮಾಡಿ ಅಥವಾ ಖಾತೆಯನ್ನು ಮರುಸ್ಥಾಪಿಸಿ, ಕೇಳಿದಾಗ Android ಸಾಧನದಿಂದ ವರ್ಗಾವಣೆ ಆಯ್ಕೆಮಾಡಿ, ಮತ್ತು ಅಂತಿಮವಾಗಿ ಮುಂದುವರಿಸಿ ಟ್ಯಾಪ್ ಮಾಡಿ. ಇದು ನಿಮ್ಮ ಖಾತೆಯನ್ನು ನಿಮ್ಮ ಹೊಸ ಸಾಧನಕ್ಕೆ ತಕ್ಷಣ ಸ್ಥಳಾಂತರಿಸುತ್ತದೆ.


Click it and Unblock the Notifications



