ವಾಟ್ಸಾಪ್ Vs ಸಿಗ್ನಲ್: ಗೌಪ್ಯತೆ ಮತ್ತು ಸುರಕ್ಷತೆ ವಿಚಾರದಲ್ಲಿ ಯಾವುದು ಉತ್ತಮ?

|

ಕಳೆದ ಕೆಲವು ದಿನಗಳಿಂದ ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿ ಹಾಗೂ ಸೇವಾ ನಿಯಮದ ಬಗ್ಗೆ ಚರ್ಚೆ ಆಗ್ತಿದೆ. ವಾಟ್ಸಾಪ್ ಹೊಸ ಗೌಪ್ಯತೆ ನೀತಿ ಕೆಲವು ಕಾರಣಗಳಿಂದ ವಿವಾದವನ್ನು ಸಹ ಹುಟ್ಟುಹಾಕಿದೆ. ಅದರಲ್ಲೂ ವಾಟ್ಸಾಪ್‌ನ ಹೊಸ ನಿಯಮವನ್ನು ನಿರಾಕರಿಸುವ ಅವಕಾಶವನ್ನು ಬಳಕೆದಾರರಿಗೆ ನೀಡದಿರುವುದು ಹೆಚ್ಚು ಹಿನ್ನಡೆಗೆ ಕಾರಣವಾಗಿದೆ. ಈ ಸನ್ನಿವೇಶದಲ್ಲಿ, ವಾಟ್ಸಾಪ್‌ ಬಳಕೆದಾರರು ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳತ್ತ ಮುಖ ಮಾಡುತ್ತಿದ್ದಾರೆ.

ವಾಟ್ಸಪ್‌

ಹೌದು, ವಾಟ್ಸಪ್‌ನ ಹೊಸ ಸೇವಾ ನಿಯಮವನ್ನ ಬಳಕೆದಾರರು ಒಪ್ಪಿಕೊಳ್ಳಲೇಬೇಕು ಎಂಬ ನಿಯಮದ ಬಗ್ಗೆ ಬಳಕೆದಾರರು ಅಸಮಾಧಾನ ಹೊಂದಿದ್ದಾರೆ. ಇದರಿಂದಾಗಿ ಹೆಚ್ಚಿನ ಜನರು ವಾಟ್ಸಾಪ್‌ ಬಿಟ್ಟು ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ ಸಿಗ್ನಲ್‌ ಕಡೆಗೆ ಒಲವು ತೋರುತ್ತಿದ್ದಾರೆ. ಇನ್ನು ಸಿಗ್ನಲ್ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ, ವಿಶೇಷವಾಗಿ ಬಳಕೆದಾರರ ಡೇಟಾದ ಗೌಪ್ಯತೆ ಮತ್ತು ಸುರಕ್ಷತೆಯಲ್ಲಿ ಇದು ಮುಂಚೂಣಿಯಲ್ಲಿದೆ. ಹಾಗಾದ್ರೆ ವಾಟ್ಸಾಪ್ ಮತ್ತು ಸಿಗ್ನಲ್ ಅಪ್ಲಿಕೇಶನ್‌ಗಳ ನಡುವೆ ಇರುವ ವಿಶೇಷತೆ ಏನು? ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್ Vs ಸಿಗ್ನಲ್: ಭದ್ರತಾ ನೀತಿ

ವಾಟ್ಸಾಪ್ Vs ಸಿಗ್ನಲ್: ಭದ್ರತಾ ನೀತಿ

ಮೆಸೇಜಿಂಗ್‌ ಅಪ್ಲಿಕೇಶನ್‌ಗಳಲ್ಲಿ ಸುರಕ್ಷತೆ ಅನ್ನೊದು ಅತಿ ಅವಶ್ಯಕವಾಗಿದೆ. ಸದ್ಯ ಸುರಕ್ಷತೆಯ ವಿಚಾರಕ್ಕೆ ಬಂದರೆ ವಾಟ್ಸಾಪ್ ಮತ್ತು ಸಿಗ್ನಲ್ ಎರಡೂ ಕೆಲವು ಉತ್ತಮ ಸೆಕ್ಯುರ್ ಫೀಚರ್ಸ್‌ಗಳನ್ನು ಹೊಂದಿವೆ. ಎರಡೂ ಪ್ಲಾಟ್‌ಫಾರ್ಮ್‌ಗಳು ಎಲ್ಲಾ ಸಂದೇಶಗಳಿಗೆ ಮತ್ತು ಕರೆಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಹೊಂದಿವೆ. ಆದಾಗ್ಯೂ, ವಾಟ್ಸಾಪ್ ಬ್ಯಾಕಪ್‌ಗಳನ್ನು ಎನ್‌ಕ್ರಿಪ್ಟ್ ಮಾಡುವುದಿಲ್ಲ, ಅದು ಕ್ಲೌಡ್-ಟು-ಲೋಕಲ್ ಆಗಿದೆ. ಆದರೆ ಸಿಗ್ನಲ್ ತನ್ನ ಸೆಕ್ಯುರ್‌ ಲೆಯರ್‌ ಮೂಲಕ ವಾಟ್ಸಾಪ್ ಅನ್ನು ಮೀರಿಸುತ್ತದೆ. ಇದೇ ಕಾರಣಕ್ಕೆ ಸಿಗ್ನಲ್‌ ಅಪ್ಲಿಕೇಶನ್‌ ವಾಟ್ಸಾಪ್‌ಗಿಂತ ಉತ್ತಮವಾದ ಸೆಕ್ಯುರ್‌ ಫೀಚರ್ಸ್‌ ಅನ್ನು ಹೊಂದಿದೆ.

ವಾಟ್ಸಾಪ್ Vs ಸಿಗ್ನಲ್: ಗ್ರೂಪ್‌ ಕಾಲ್‌

ವಾಟ್ಸಾಪ್ Vs ಸಿಗ್ನಲ್: ಗ್ರೂಪ್‌ ಕಾಲ್‌

ವಾಟ್ಸಾಪ್‌ನ ಪ್ರಮುಖ ಫೀಚರ್ಸ್‌ಗಳಲ್ಲಿ ಗ್ರೂಪ್‌ ಕಾಲ್‌ ಫೀಚರ್ಸ್‌ ಸಾಕಷ್ಟು ವಿಶೇಷತೆ ಎನಿಸುತ್ತೆ. ಇದರಲ್ಲಿ ಗೂಪ್‌ ಆಡಿಯೋ ಮತ್ತು ವಿಡಿಯೋ ಕೂಡ ಸೇರಿದೆ. ಇದಲ್ಲದೆ, ವಾಟ್ಸಾಪ್ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದ್ದು, ಸ್ಟೇಟಸ್‌ನಂತಹ ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿದೆ. ಇಲ್ಲಿ, ಬಳಕೆದಾರರು ಯಾವುದೇ ಸಂದೇಶ, ಆಲೋಚನೆಗಳು, ಲಿಂಕ್‌ಗಳು, ಮೀಡಿಯಾ(ಇಮೇಜ್‌, ವಿಡಿಯೋ) ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. ಈ ಸ್ಟೇಟಸ್‌ ವಿಷಯಗಳು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಆದರೆ ಸಿಗ್ನಲ್, ಅಪ್ಲಿಕೇಶನ್‌ ಈ ಫೀಚರ್ಸ್‌ಗಳನ್ನು ಹೊಂದಿಲ್ಲ. ಗ್ರೂಪ್‌ ಕ್ರಿಯೆಟ್‌ ಮಾಡುವುದಕ್ಕೆ ಮತ್ತು ಕರೆಗಳನ್ನು ಮಾಡುವುದಕ್ಕೆ ಒಂದು ಆಯ್ಕೆಯನ್ನು ಹೊಂದಿದೆ. ಆದರೆ ಸ್ಟೇಟಸ್‌ ಫೀಚರ್ಸ್‌ ಅನ್ನು ಇದು ಹೊಂದಿಲ್ಲ.

ವಾಟ್ಸಾಪ್ Vs ಸಿಗ್ನಲ್: ಬ್ರಾಡ್ಕಾಸ್ಟ್ ಮೆಸೇಜಿಂಗ್

ವಾಟ್ಸಾಪ್ Vs ಸಿಗ್ನಲ್: ಬ್ರಾಡ್ಕಾಸ್ಟ್ ಮೆಸೇಜಿಂಗ್

ಸಿಗ್ನಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರದ ಮತ್ತೊಂದು ಫೀಚರ್ಸ್‌ ಅಂದರೆ ಅದು ಬ್ರಾಡ್ಕಾಸ್ಟ್‌ ಮೆಸೇಜಿಂ್‌ ಫೀಚರ್ಸ್‌. ವಾಟ್ಸಾಪ್ ಬ್ರಾಡ್ಕಾಸ್ಟ್ ಮೆಸೇಜಿಂಗ್ ಕಳುಹಿಸುವ ಆಯ್ಕೆಯನ್ನು ಹೊಂದಿದೆ. ಇದರಲ್ಲಿ ನಿರ್ದಿಷ್ಟ ಜನರು ಹಲವಾರು ಜನರನ್ನು ಏಕಕಾಲದಲ್ಲಿ ತಲುಪುತ್ತಾರೆ. ಬಳಕೆದಾರರು ಮಲ್ಟಿ ಬ್ರಾಡ್‌ಕಾಸ್ಟ್‌ ಪಟ್ಟಿಯನ್ನು ಸಹ ರಚಿಸಬಹುದು. ಆದರೆ, ಸಿಗ್ನಲ್ ಈ ಫೀಚರ್ಸ್‌ ಅನ್ನು ಹೊಂದಿಲ್ಲ.

ವಾಟ್ಸಾಪ್ Vs ಸಿಗ್ನಲ್: ಗೌಪ್ಯತೆ

ವಾಟ್ಸಾಪ್ Vs ಸಿಗ್ನಲ್: ಗೌಪ್ಯತೆ

ಸುರಕ್ಷತೆಯ ಹೊರತಾಗಿ, ಗೌಪ್ಯತೆ ವಿಚಾರ ಕೂಡ ಸಾಕಷ್ಟು ಮಹತ್ವದ್ದಾಗಿದೆ. ವಾಟ್ಸಾಪ್ನ ಹೊಸ ಗೌಪ್ಯತೆ ನೀತಿಯೇ ಇಂದು ಸಾಕಷ್ಟು ಚರ್ಚೆ ಆಗ್ತಿರೋದು ನಿಮಗೆಲ್ಲಾ ತಿಳಿದೆ ಇದೆ. ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಫೇಸ್‌ಬುಕ್‌ನೊಂದಿಗೆ ಸಾಕಷ್ಟು ಮಾಹಿತಿಯನ್ನು ಹಂಚಿಕೊಳ್ಳಲಿದೆ ಎಂದು ಸೇವಾ ನವೀಕರಣದ ಇತ್ತೀಚಿನ ವಾಟ್ಸಾಪ್ ನಿಯಮವೇ ವಿವಾದಕ್ಕೆ ಕಾರಣವಾಗಿರೋದು. ಈ ನಿಯಮದ ಪಟ್ಟಿಯಲ್ಲಿ ಫೋನ್ ಸಂಖ್ಯೆಗಳು, ಇಮೇಲ್ ವಿಳಾಸಗಳು, ಸ್ಥಳಗಳು ಮತ್ತು ಮುಂತಾದವು ಸೇರಿವೆ. ಆದರೆ ಸಿಗ್ನಲ್ ಗೌಪ್ಯತೆ ವಿಚಾರಕ್ಕೆ ಬಂದಾಗ ವಾಟ್ಸಾಪ್‌ಗಿಂತ ಬಿನ್ನವಾಗಿ ನಿಲ್ಲುತ್ತದೆ. ಸಿಗ್ನಲ್ ಸಹ ಮೊಹರು ಕಳುಹಿಸುವವರು ಎಂಬ ಆಯ್ಕೆಯನ್ನು ಹೊಂದಿದೆ, ಅಲ್ಲಿ ಯಾರಿಗೆ ಸಂದೇಶ ಕಳುಹಿಸುತ್ತಿದೆ, ಗೌಪ್ಯತೆ ಮತ್ತು ಸುರಕ್ಷತೆಯ ಪದರಗಳನ್ನು ತರುತ್ತದೆ ಎಂದು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

ವಾಟ್ಸಾಪ್ Vs ಸಿಗ್ನಲ್: ನೀವು ಯಾವುದನ್ನು ಆರಿಸಬೇಕು?

ವಾಟ್ಸಾಪ್ Vs ಸಿಗ್ನಲ್: ನೀವು ಯಾವುದನ್ನು ಆರಿಸಬೇಕು?

ವಾಟ್ಸಾಪ್‌ಗಿಂತ ಸಿಗ್ನಲ್‌ ಅಪ್ಲಿಕೇಶನ್‌ ಬಿನ್ನವಾಗಿದ್ದರೂ ಸಿಗ್ನಲ್ ಏಕೆ ಜನಪ್ರಿಯವಾಗಿಲ್ಲ, ಎಂದು ನಿಮಗೆ ಅನಿಸಬಹುದು. ಆದರೆ ಭಾರತ, ಯುಎಸ್ ಮತ್ತು ಇತರ ದೇಶಗಳಲ್ಲಿ ವಾಟ್ಸಾಪ್ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆದಾಗ್ಯೂ, ಸಿಗ್ನಲ್‌ನ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಸದ್ಯ ವಾಟ್ಸಾಪ್‌ನ ಹೊಸ ಸೇವಾ ನಿಯಮ ವಿವಾದವನ್ನು ಹುಟ್ಟುಹಾಕಿರುವುದರಿಂದ ಬಳಕೆದಾರರು ಬೇರೆ ಅಪ್ಲಿಕೇಸನ್‌ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಮೇಲಿನ ಎಲ್ಲಾ ಫೀಚರ್ಸ್‌ಗಳನ್ನ ಗಮನಿಸಿದರೆ ಸಿಗ್ನಲ್ ಗೌಪ್ಯತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿದೆ.

Most Read Articles
Best Mobiles in India

English summary
We've listed out a couple of factors as a comparison between WhatsApp and Signal.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X