ಜಪಾನಿನಲ್ಲಿ ಕಳ್ಳ ಫೋಟೊಗಳ ಸುನಾಮಿ

Posted By:

 

ಜಪಾನಿನಲ್ಲಿ ಕಳ್ಳ ಫೋಟೊಗಳ ಸುನಾಮಿ
ಜಪಾನ್ ಭೂಕಂಪದ ದಾಳಿಗೆ ತತ್ತರಿಸಿದ್ದಾಯಿತು. ಇದೀಗ ಮೊಬೈಲ್ ಕ್ಯಾಮೆರಾಗಳು ಜಪಾನ್ ದೇಶವನ್ನು ಭಯದಿಂದ ತತ್ತರಿಸುವಂತೆ ಮಾಡುತ್ತಿದೆ! ಹೌದು ಮೊಬೈಲ್ ಕ್ಯಾಮೆರಾದಲ್ಲಿರುವ ಆಧುನಿಕ ತಂತ್ರಜ್ಞಾನವೆ ಇದೆಕ್ಕೆಲ್ಲಾ ಕಾರಣ.

ಮೊಬೈಲ್ ನಲ್ಲಿ ಮತ್ತೊಬ್ಬರ ಅರಿವಿಗೆ ಬಾರದಂತೆ ಫೋಟೊ ತೆಗೆಯುವುದು ಅಪರಾಧ. ಒಂದು ವೇಳೆ ತೆಗೆದರೆ ಶಿಕ್ಷೆ ಗ್ಯಾರಂಟಿ. ಇಂತಹ ಅಪರಾಧವನ್ನು ತಡೆಯಲು ಮೊಬೈಲ್ ನಲ್ಲಿ ಫೋಟೊ ತೆಗೆದರೆ ಶಬ್ದ ಬರುವ ಹಾಗೆ ತಯಾರಿಸಲಾಗಿರುತ್ತದೆ. ಆದರೆ ಮುಂದುವರೆದ ತಂತ್ರಜ್ಞಾನದಿಂದಾಗಿ ನಿಶ್ಯಬ್ದವಾಗಿ ಚಿತ್ರೀಕರಣ ಮಾಡುವಂತಹ ಮೊಬೈಲ್ ಈಗ ಲಭ್ಯವಿದೆ.

ಆದರೆ ಸೈಲೆಂಟ್ ಅಪ್ಲಿಕೇಶನ್ ಇರುವ ಮೊಬೈಲ್ ಜಪಾನಿನಲ್ಲಿ ಸೆಕ್ಸ್ ಸಂಬಂಧಿ ವೀಡಿಯೊಗಳಿಗೆ ಹೆಚ್ಚು ಬಳಕೆಯಾಗುತ್ತಿದ್ದು ಡಿಜಿಟಲ್ ಲೋಕದಲ್ಲಿ ಈ ಸುದ್ದಿ ಚಳಿಜ್ವರ ಬರಿಸುವಂತೆ ಮಾಡಿದೆ. ಈ ರೀತಿ ಕ್ಯಾಮೆರಾದ ದುರ್ಬಳಕೆಯಿಂದಾಗಿ ಡಿಜಿಟಲ್ ತಂತ್ರಜ್ಞಾನ ಉಪಯೋಗದ ವಸ್ತುವಿನ ಬದಲು ಒಂದು ಶಾಪವಾಗಿ ಪರಿಣಮಿಸಿದೆ.ಕಳೆದ 5 ವರ್ಷಗಳ ಹಿಂದೆಗೆ ಹೋಲಿಸಿದರೆ ಈ ರೀತಿಯ ಮೊಬೈಲ್ ಸಂಬಂಧಿ ಅಪರಾಧಗಳು 60%ನಷ್ಟು ಅಧಿಕವಾಗಿದೆ ಎಂದು ಮರ್ಕ್ಯೂರಿ ನ್ಯೂಸ್ ನ ವರದಿ ಮಾಡಿದೆ.

ಈ ರೀತಿಯ ಸೆಕ್ಸ್ ಸಂಬಂಧಿ ವಿಷಯಗಳು ಮೊಬೈಲ್ ನಲ್ಲಿ ಹರಿದಾಡುವುದರಿಂದ ಅದು ಯುವ ಜನತೆಯನ್ನು ತಪ್ಪು ದಾರಿಗೆ ಎಳೆದೊಯ್ಯುತ್ತಿದೆ. ಮಾರುಕಟ್ಟೆಯಲ್ಲಿ ದೊರೆಯುವ ಆಂಡ್ರಾಯ್ಡ್ ಮುಂತಾದ ಆಧುನಿಕ ತಂತ್ರಜ್ಞಾನದ ಮೊಬೈಲ್ ಗಳಲ್ಲಿ ಸೈಲೆಂಟ್ ಕ್ಯಾಮೆರಾ ಅಪ್ಲಿಕೇಶನ್ ಗಳಿದ್ದು ಇದನ್ನು ಬಳಸಿ ನಗ್ನ ಚಿತ್ರ ತೆಗೆದು ಅದನ್ನು ಎಂ. ಎಂ.ಎಸ್ ಮಾಡುವುದು, ಅದನ್ನು ಇ ಮೇಲ್ ನಲ್ಲಿ ಕಳುಹಿಸುವುದು ಈ ರೀತಿಯ ಅಪರಾಧಗಳು ಯಥೇಚ್ಚವಾಗಿ ನಡೆಯುತ್ತಿವೆ.

ಇದರ ಬಗ್ಗೆ ಎಚ್ಚೆತ್ತು ಕೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ, ಆದ್ದರಿಂದ ಸೈಲೆಂಟ್ ಫೋಟೊಗ್ರಫಿ ಅಪ್ಲಿಕೇಶನ್ ತೆಗೆದು ಕ್ಯಾಮೆರಾ ದುರ್ಬಳಕೆಯನ್ನು ನಿಯಂತ್ರಣದಲ್ಲಿಡಬೇಕೆಂದು ಜಪಾನಿನ ಅಕಾಡೆಮಿಗಳು ಒತ್ತಾಯ ಮಾಡುತ್ತಿವೆ.

ಈ ಸಮಸ್ಯೆ ಜಪಾನಿನಲ್ಲಿ ಮಾತ್ರವಲ್ಲಾ ಎಲ್ಲ ಕಡೆಯೂ ಕಂಡು ಬರುತ್ತಿವೆ. ಆದ್ದರಿಂದ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಅದರಿಂದ ವಿನಾಶ ತಪ್ಪಿದ್ದಲ್ಲ, ಇದರ ಬಗ್ಗೆ ಜನರು ಮತ್ತು ಸರ್ಕಾರ ಎಚ್ಚೆತ್ತು ಕೊಳ್ಳಬೇಕು.

Read In English

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot