ಆಧಾರ್‌ನಿಂದ ಖರೀದಿಸಿದ ಸಿಮ್‌ ಕಾರ್ಡ್ ಡೆಡ್‌ ಆಗುತ್ತಾ..?

|

ಸದ್ಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯಲ್ಲಿ ಜನರನ್ನು ಹೆದರಿಸುವ ಕಾರ್ಯವು ನಡೆಯುತ್ತಿದೆ. ಆಧಾರ್ ಕಾರ್ಡ್ ಅನ್ನು ಎಲ್ಲಾ ಕಡೆಗಳಲ್ಲಿ ಕಡ್ಡಾಯವಲ್ಲ ಎಂದು ಸುಪ್ರೀ ಕೋರ್ಟ್ ತೀರ್ಪು ನೀಡಿದ ಹಿನ್ನಲೆಯಲ್ಲಿ ಹಲವು ಮಂದಿ ಸಿಮ್ ಕಾರ್ಡ್ ಬಳಕೆದಾರರನ್ನು ಹೆದರಿಸುವ ಕಾರ್ಯ ಮಾಡುತ್ತಿದ್ದಾರೆ. ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿ ಸಿಮ್ ಕಾರ್ಡ್ ಪಡೆದುಕೊಂಡಿದ್ದರೆ ನೀವು ಅದನ್ನು ಡಿಸೆಬಲ್ ಮಾಡಿದ ನಂತರದಲ್ಲಿ ಸೇವೆಯೂ ಸ್ಥಗಿತವಾಗಲಿದೆ ಎನ್ನುತ್ತಿದ್ದಾರೆ ಇದು ಸುಳ್ಳು.

ಯಾವುದೇ ಕಾರಣಕ್ಕೂ ನೀವು ನೀಡಿರುವ ಆಧಾರ್ ಕಾರ್ಡ್ ಮಾಹಿತಿಯೂ ಮಿಸ್ ಯೂಸ್ ಆಗುವುದಿಲ್ಲ ಎನ್ನಲಾಗಿದೆ. ಇದೇ ಮಾದರಿಯಲ್ಲಿ ಸಿಮ್ ಕಾರ್ಡ್ ಪಡೆದುಕೊಳ್ಳಲು ನೀವು ನೀಡಿರುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ ದುರಪಯೋಗವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಇದೇ ಮಾದರಿಯಲ್ಲಿ ನೀವು ಸಿಮ್ ಕಾರ್ಡ್ ಖರೀದಿ ಮಾಡಿರುವ ನಂತರದಲ್ಲಿ ಆಧಾರ್ ಕಾರ್ಡ್ ಡಿಸೇಬಲ್ ಮಾಡಿದ ನಂತರದಲ್ಲಿಯೂ ಸಿಮ್ ಕಾರ್ಡ್ ಕಾರ್ಯನಿರ್ವಹಿಸಲಿದೆ.

ಆಧಾರ್‌ನಿಂದ ಖರೀದಿಸಿದ ಸಿಮ್‌ ಕಾರ್ಡ್ ಡೆಡ್‌ ಆಗುತ್ತಾ..?

ಹಲವು ಮಂದಿ ಬಳಕೆದಾರರಿಗೆ ಹೆದರಿಸುವ ಕಾರ್ಯ ಮಾಡಲಾಗುತ್ತಿದೆ. ಆಧಾರ್ ನೀಡಿ ಪಡೆದಿರುವ ಸಿಮ್ ಕಾರ್ಡ್ ಶೀಘ್ರವೇ ಸ್ಥಗಿತವಾಗಲಿದೆ ಎನ್ನುವ ವಿಷಯವು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಬಳಕೆದಾರರು ಯಾವುದೇ ಕಾರಣಕ್ಕೂ ಪಾನಿಕ್ ಆಗುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ನಿಮ್ಮ ಸಿಮ್ ಕಾರ್ಡ್ ಸ್ಥಗಿತವಾಗುದಿಲ್ಲ. ಇದರಿಂದಾಗಿ ನೀವು ಸಿಮ್ ಕಾರ್ಡ್ ಬಳಕೆ ಮಾಡಿಕೊಳ್ಳಲು ಯಾವುದೇ ತೊಂದರೆ ಯಾಗುವುದಿಲ್ಲ.

ಆಧಾರ್ ಕಾರ್ಡ್ ಅನ್ನು ಕೇವಲ ನಿಮ್ಮ ಗುರುತಿನ ಚೀಟಿಯ ಮಾದರಿಯಲ್ಲಿಯೇ ಬಳಕೆ ಮಾಡಿಕೊಳ್ಳಲು ಟೆಲಿಕಾಂ ಕಂಪನಿಗಳು ಮುಂದಾಗಲಿದೆ. ಇದರಿಂದಾಗಿ ಬಳಕೆದಾರರಿಗೆ ಯಾವುದೇ ಮಾದರಿಯಲ್ಲಿಯೂ ತೊಂದರೆಯಾಗುವುದಿಲ್ಲ. ಅಲ್ಲದೇ ನಿಮ್ಮ ಮಾಹಿತಿಯೂ ಯಾವುದೇ ಕಾರಣಕ್ಕೆ ದುರ್ಬಳಕೆ ಯಾಗುವುದಿಲ್ಲ. ಇದರಿಂದಾಗಿ ಕಿಡಿಗೇಡಿಗಳು ಹತ್ತಿಸುತ್ತಿರುವ ವಂದತಿಗಳಿಗೆ ಕಿವಿಗೊಡಬೇಕಾಗಿಲ್ಲ. ಒಟ್ಟಿನಲ್ಲಿ

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಅನೇಕ ಮಂದಿಗೆ ತೊಂದರೆಯನ್ನು ನೀಡಲಿದೆ ಎಂದು ಹಲವು ಮಂದಿ ವಾಟ್ಸ್ಆಪ್ ನಲ್ಲಿ ಹರಿಬಿಡುತ್ತಿದ್ದಾರೆ ಆದರೆ ಇದು ಸುಳ್ಳು, ಆಧಾರ್ ಇಲ್ಲದೇ ಟೆಲಿಕಾಂ ಸೇವೆಯನ್ನುಪಡೆದುಕೊಂಡರು ಯಾವುದೇ ವ್ಯತ್ಯಾಸವಿಲ್ಲ ಹಾಗಾಗಿ ನೀವು ಹೆದರುವ ಅಗತ್ಯತೆ ಇಲ್ಲ.

ನೀವು ಆಧಾರ್ ಕಾರ್ಡ್ ನೀಡಿರುವ ಸಿಮ್ ಕಾರ್ಡ್ ಯಾವುದೇ ಕಾರಣಕ್ಕೂ ಸ್ಥಗಿತವಾಗುವುದಿಲ್ಲ. ಇದರಿಂದಾಗಿ ನೀವು ಯಾವುದೇ ತೊಂದರೆ ಇಲ್ಲದೇ ಸೇವೆಯನ್ನು ಮುಂದುವರೆಸಬಹುದಾಗಿದೆ.

Best Mobiles in India

English summary
SIM cards bought after Aadhaar verification to be disabled? It is a rumour so don't panic, says govt. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X