Home
ಸುದ್ದಿಜಾಲ

ಸಿಂಗಲ್‌ ಕ್ಯೂಆರ್‌ ಕೋಡ್‌ ಪಾವತಿಯನ್ನ ಪರಿಚಯಿಸಿದ ಪೈನ್‌ಲ್ಯಾಬ್ಸ್‌!

ಇಂದಿನ ಡಿಜಟಲ್‌ ಯುಗದಲ್ಲಿ ಹಲವು ಮಾದರಿಯ ಡಿಜಿಟಲ್‌ ಪೆಮೆಂಟ್‌ಆಪ್‌ಗಳು ಲಭ್ಯವಿದೆ. ಸದ್ಯ ಎಲ್ಲಾ ಮಾದರಿಯ ಆಪ್‌ಗಳಲ್ಲೂ ಬಗೆ ಬಗೆಯ ಕ್ಯೂಆರ್‌ ಕೋಡ್‌ಗಳಿರುತ್ತಿದ್ದವು. ಇದರಿಂದ ಕೆಲವು ಕಡೆ ವ್ಯಾಪಾರಿಗಳಿಗೆ ಅನಾನುಕೂಲ ಉಂಟಾಗುತ್ತಿತ್ತು. ಆದರೆ ಇನ್ಮುಂದೆ ಇಂತಹ ಸನ್ನಿವೇಶಗಳು ಎದುರಾಗುವುದಿಲ್ಲ ಯಾಕೆಂದರೆ ಇದಕ್ಕೆ ಪರಿಹಾರವಾಗಿ ಭಾರತದ ಪ್ರಮುಖ ವಾಣಿಜ್ಯ ವಾಪಾರಿ ಸಂಸ್ಥೆಯಾದ ಪೈನ್‌ ಲ್ಯಾಬ್ಸ್‌ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಮತ್ತು ಭಾರತ್ ಕ್ಯೂಆರ್ ಪಾವತಿಗಳನ್ನು ಒಂದೇ ಹಂತದಲ್ಲಿ ಸ್ವೀಕರಿಸುವ ಪೇಪರ್ ಪಿಓಎಸ್ (ಫೇಮೆಂಟ್‌ ಆಪರೇಟಿಂಗ್‌ ಸಿಸ್ಟಂ) ಅನ್ನು ಪರಿಚಯಿಸಿದೆ.

ದೇಶದ

ಹೌದು, ದೇಶದ ಪ್ರಮುಖ ವಾಣಿಜ್ಯ ವಾಪಾರಿ ವೇದಿಕೆಯಾದ ಪೈನ್‌ ಲ್ಯಾಬ್ಸ್‌ ಒಂದೇ ಹಂತದಲ್ಲಿ ವಿಲೀನಗೊಂಡ ಎಲ್ಲಾ ಮಾದರಿಯ ಸ್ಥಿರ ಕ್ಯೂಆರ್ ಪಾವತಿಗಳನ್ನ ಸ್ವೀಕರಿಸುವ ಪಿಒಎಸ್‌ ಅನ್ನ ಪರಿಚಯಿಸಿದ್ದು. ಇದು ವ್ಯಾಪಾರಿಗಳಿಗೆ ತುಂಬಾ ಅನುಕೂಲಕರವಾಗಿದೆ. ಇದರಿಂದಾಗಿ ಅಮೆಜಾನ್ ಪೇ, ಗೂಗಲ್ ಪೇ, ಫೋನ್‌ಪೇ, ಯೋನೊ ಸೇರಿದಂತೆ ವಿವಿಧ ರೀತಿಯ ಯುಪಿಐ ಮತ್ತು ಭಾರತ್ ಕ್ಯೂಆರ್ ಪಾವತಿಗಳಲ್ಲಿ ಪಾವತಿಗಳನ್ನು ಸ್ವೀಕರಿಸಲು ವ್ಯಾಪಾರಿಗಳು ‘ಪೇಪರ್ ಪಿಓಎಸ್' ಅನ್ನು ಬಳಸಬಹುದಾಗಿದೆ.

ಬಳಸುವುದರಿಂದ

ಪೈನ್ ಲ್ಯಾಬ್ಸ್ ಕೌಂಟರ್‌ಟಾಪ್‌ನಲ್ಲಿ ಪಿಒಎಸ್ ಯಂತ್ರಗಳನ್ನು ಬಳಸುವುದರಿಂದ ಪ್ಲುಟಸ್ ಮತ್ತು ಪ್ಲುಟಸ್ ಸ್ಮಾರ್ಟ್ ವ್ಯಾಪಾರಿಗಳು, ಗ್ರಾಹಕರಿಗೆ ಚಾರ್ಜ್ ಸ್ಲಿಪ್ ಅನ್ನು ಮುದ್ರಿಸಬಹುದಾಗಿದೆ, ಹೀಗಾಗಿ, ಇದು ತಕ್ಷಣವೇ ಗ್ರಾಹಕರ ವ್ಯವಹಾರವನ್ನು ದೃಪಡಿಸುತ್ತದೆ. ಇನ್ನು "ಪೇಪರ್ ಪಿಒಎಸ್ ನಮ್ಮ ಹೊಸ ಮಾದರಿಯ ಆವಿಷ್ಕಾರವಾಗಿದ್ದು, ದೇಶದಲ್ಲಿ ಎಲೆಕ್ಟ್ರಾನಿಕ್ ಪಾವತಿ ಸ್ವೀಕಾರದ ಬೆಳವಣಿಗೆಯನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ಪೇಪರ್‌

ಇದಲ್ಲದೆ ಪೇಪರ್‌ ಪಿಒಎಸ್‌ ಯುಪಿಐ ಮತ್ತು ಭಾರತ್ ಕ್ಯೂಆರ್ ಮೂಲಕ ಎಲ್ಲಾ ಪಾವತಿಗಳನ್ನು ಸ್ವೀಕರಿಸಲು ಮಾತ್ರವಲ್ಲ, ಇದು ವಹಿವಾಟು ವೆಚ್ಚವನ್ನೂ ಉಳಿಸುತ್ತದೆ "ಎಂದು ಪೈನ್ ಲ್ಯಾಬ್ಸ್‌ನ ಚೀಫ್‌ ಪ್ರಾಡಕ್ಟ್‌ ಆಫೀಸರ್‌ ವೆಂಕಟ್ ಪರುಚುರಿ ಹೇಳಿದ್ದಾರೆ. ಇನ್ನು ಪೇಪರ್ ಪಿಒಎಸ್ ವ್ಯಾಪಾರಿಗಳಿಗೆ ವಹಿವಾಟಿನ ಬಗ್ಗೆ ಇನ್‌ಸೈಡ್‌ ಡಿಟೇಲ್ಸ್‌ ಹಾಗೂ ಕ್ಯಾನ್ಸಲ್‌ ಮಾಹಿತಿ, ಡಿಡಕ್ಷನ್‌ ಮಾಹಿತಿ ಎಲ್ಲಾ ವಹಿವಾಟುಗಳನ್ನ ಒಂದೇ ಕಡೇ ತಿಳಿಸುತ್ತದೆ.

ಮತ್ತು

ಇನ್ನು ಪೇಪರ್ ಪಿಓಎಸ್ ಸ್ಟಿಕ್ಕರ್ ಅನ್ನು ವ್ಯಾಪಾರಿಯ ಹೆಸರು / ಅಂಗಡಿಯ ಹೆಸರು ಮತ್ತು ಕ್ಯೂಆರ್ ಸ್ಟಿಕ್ಕರ್‌ನಲ್ಲಿರುವ ವ್ಯಾಪಾರಿ ಲೊಗೊದೊಂದಿಗೆ ಕಸ್ಟಮೈಸ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಇದಲ್ಲದೆ ಯಾವುದೇ ಯುಪಿಐ / ಭಾರತ್ ಕ್ಯೂಆರ್ ಅಪ್ಲಿಕೇಶನ್ ಬಳಸಿ ಪೈನ್ ಲ್ಯಾಬ್ಸ್ ಪೇಪರ್ ಪಿಒಎಸ್ನಲ್ಲಿ ಕ್ಯೂಆರ್ ಅನ್ನು ಸ್ಕ್ಯಾನ್ ಮಾಡಿ. ನಂತರ ಗ್ರಾಹಕನು ತನ್ನ ಅಪ್ಲಿಕೇಶನ್‌ನಲ್ಲಿ ಮೊತ್ತವನ್ನು ನಮೂದಿಸ ಬೇಕು ಅಲ್ಲದೆ ತನ್ನ ವಹಿವಾಟನ್ನು ಅಧಿಕೃತಗೊಳಿಸಲು ಅಪ್ಲಿಕೇಶನ್‌ನಲ್ಲಿ ಯುಪಿಐ / ಭಾರತ್ ಕ್ಯೂಆರ್ ಕೂಡ್‌ ಅನ್ನ ಎಂಟರ್‌ ಮಾಡಿದರೆ, ಪೈನ್ ಲ್ಯಾಬ್ಸ್ ಪಿಒಎಸ್ ಟರ್ಮಿನಲ್‌ಗಳನ್ನು ಹೊಂದಿರುವ ವ್ಯಾಪಾರಿಗಳು ಪೇಪರ್ ಪಿಒಎಸ್ ವಹಿವಾಟುಗಳಿಗೆ ಚಾರ್ಜ್ ಸ್ಲಿಪ್ ಅನ್ನು ಮುದ್ರಿಸಬಹುದಾಗಿದೆ.

Best Mobiles in India

English summary
Merchants can use 'Paper POS' to accept payments across different kinds of UPI and Bharat QR payments.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+