ಆಪಲ್ 'ಮ್ಯಾಕ್‌ಬುಕ್‌' ಬಳಕೆದಾರರಿಗೆ ಸಿಹಿಸುದ್ದಿ!!

|

ಗ್ಯಾಜೆಟ್ ಬಳಕೆದಾರರ ಓವರ್ ಸ್ಕ್ರೀನ್ ಟೈಮ್ ತಡೆಯಲು ಟೆಕ್ ಕಂಪೆನಿಗಳು ಪರಿಚಯಿಸುತ್ತಿರುವ 'ಸ್ಕ್ರೀನ್ ಟೈಮ್' ಆಯ್ಕೆ ಇದೀಗ ಮ್ಯಾಕ್‌ಬುಕ್‌ಗಳಿಗೂ ಬರಲಿದೆ ಎಂದು ಆಪಲ್ ಕಂಪೆನಿ ತಿಳಿಸಿದೆ. ಇಲ್ಲಿಯವರೆಗೂ ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದ ಈ ಜನಪ್ರಿಯ ಫೀಚರ್ ಅನ್ನು ಮ್ಯಾಕ್‌ಬುಕ್‌ಗಳಿಗೂ ತರುತ್ತಿರುವುದಾಗಿ ಆಪಲ್ ಕಂಪೆನಿ ಅಧಿಕಾರಿಗಳು ತಿಳಿಸಿದ್ದಾರೆ.

ಐಫೋನ್‌ನಲ್ಲಿ ಬಳಕೆದಾರರರಿಗೆ ಸಿಕ್ಕಿದ್ದ ಸ್ಕ್ರೀನ್ ಟೈಮ್ ಆಯ್ಕೆ ಲಭ್ಯವಿದ್ದು, ಬಳಕೆದಾರರ ಚಟುವಟಿಕೆ ಪರಿಶೀಲಿಸಲು ಮತ್ತು ಎಷ್ಟು ಸಮಯ ಅವರು ಯಾವ ಆಪ್‌ ಬಳಸಿದರು ಮತ್ತಿತರ ವಿವರ ಕಲೆಹಾಕಲು ಈ ಫೀಚರ್ ಸಹಾಯಕವಾಗಲಿದೆ. ಬಳಕೆದಾರರ ಯಾವೆಲ್ಲ ಸೇವೆ ಬಳಸಿದ ಮತ್ತು ಎಷ್ಟು ಸಮಯ ಕಳೆದ ಎನ್ನುವ ಬಗ್ಗೆ ಈ ಫೀಚರ್ ನಿಖರವಾದ ಮಾಹಿತಿ ನೀಡುತ್ತದೆ.

ಆಪಲ್ 'ಮ್ಯಾಕ್‌ಬುಕ್‌' ಬಳಕೆದಾರರಿಗೆ ಸಿಹಿಸುದ್ದಿ!!

ಮ್ಯಾಕ್ ಒಎಸ್ 10.15 ಮತ್ತು ಐಒಎಸ್ 13 ರ ಪರಿಚಯದೊಂದಿಗೆ, ಮ್ಯಾಕ್‌ ಓಎಸ್ ಬಳಸುವ ಮ್ಯಾಕ್‌ಬುಕ್ ಮತ್ತು ಐಮ್ಯಾಕ್ ಸಿಸ್ಟಂಗಳಲ್ಲೂ ಈ ಆಯ್ಕೆಯನ್ನು ಒದಗಿಸಲಾಗಿದೆ. ಜತೆಗೆ ಸಿರಿ ಶಾರ್ಟ್‌ಕಟ್ ಕೂಡ ಲಭ್ಯವಾಗಲಿದೆ. ಈ ಅಪ್‌ಡೇಟ್‌ನೊಂದಿಗೆ ಮ್ಯಾಕ್‌ಬುಕ್‌ ಮತ್ತು ಐಫೋನ್‌ಗಳಲ್ಲಿ ಮತ್ತಷ್ಟು ಹೆಚ್ಚಿನ ವೈಶಿಷ್ಟ್ಯಗಳನ್ನು ಅನಾವರಣಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸುಮಾರು ಎರಡು ವರ್ಷಗಳವರೆಗೆ ಅಭಿವೃದ್ಧಿ ಹೊಂದಿದ ಮ್ಯಾಕ್ ಒಎಸ್ 10.15 ಹೊಸ ಆವೃತ್ತಿಯು ಸಿರಿ ಶಾರ್ಟ್‌ಕಟ್‌ಗಳಿಗೆ ಬೆಂಬಲವನ್ನು ನೀಡುತ್ತದೆ. ಇದು ಆಪಲ್ ಐಒಎಸ್ 12 ರಲ್ಲಿ ಪರಿಚಯಿಸಲ್ಪಟ್ಟಿದ್ದ ಸೇವೆಯಾಗಿದ್ದು, ಬಳಕೆದಾರರಿಗೆ ಅಪ್ಲಿಕೇಶನ್ಗಳಲ್ಲಿ ಕಾರ್ಯಗತಗೊಳ್ಳುವ ಕಾರ್ಯಗಳಿಗಾಗಿ ಕಸ್ಟಮ್ ಧ್ವನಿ ಶಾರ್ಟ್‌ಕಟ್‌ಗಳನ್ನು ರಚಿಸಲು ಅನುಮತಿಸುವ ಫೀಚರ್ ಆಗಿದೆ.

ಆಪಲ್ 'ಮ್ಯಾಕ್‌ಬುಕ್‌' ಬಳಕೆದಾರರಿಗೆ ಸಿಹಿಸುದ್ದಿ!!

ಸ್ಕ್ರೀನ್ ಟೈಂ ಎಂಬುದು ಆಪ್ ಲಿಮಿಟ್ ಹಾಗು ಸ್ವಯಂ ನಿಯಂತ್ರಣಕ್ಕಾಗಿ ಇರುವ ನೂತನ ಫೀಚರ್ ಆಗಿದ್ದು, ಗ್ಯಾಜೆಟ್‌ಗಳನ್ನು ಹೆಚ್ಚು ಬಳಸುವ ಜನ ಆಪ್‌ಗಳು, ಜಾಲತಾಣ ಅಥವಾ ಗೇಮಿಂಗ್ ಅನ್ನು ವಿಪರೀತವಾಗಿ ಬಳಸುತ್ತಿದ್ದೇವೆ ಎಂಬ ಬಗ್ಗೆ ಮಾಹಿತಿ ಪಡೆಯಲು ಅನುಕೂಲವಾಗಲಿದೆ. ಇದರಿಂದ ಅವರು ಓವರ್ ಸ್ಕ್ರೀನ್ ಟೈಮ್ ಸಮಸ್ಯೆಯಿಂದ ಹೊರಬರಬಹುದಾಗಿದೆ.

Best Mobiles in India

English summary
Apple introduced Siri Shortcuts and Screen Time for iPhones with iOS 12. These iPhone features are expected to arrive for laptops and PCs with the upcoming macOS 10.15 (macbook) update. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X