ಸ್ಕಾಗನ್‌ ಕಂಪೆನಿಯ ಫಾಲ್‌ಸ್ಟಾರ್‌ 3 ಸ್ಮಾರ್ಟ್‌ವಾಚ್‌ ಲಾಂಚ್‌!

|

ತಂತ್ರಜ್ಞಾನ ಮುಂದುವರೆದಂತೆ ಇಂದು ಎಲ್ಲರ ಕೈನಲ್ಲೂ ಸ್ಮಾರ್ಟ್‌ಫೋನ್‌ಗಳು ಬಂದು ಸೇರಿವೆ, ಹಾಗೇಯೆ ಸಮಯವನ್ನ ಮಾತ್ರ ಸೂಚಿಸುತ್ತಿದ್ದ ವಾಚ್‌ ಇಂದು ಮಲ್ಟಿ ಟಾಸ್ಕಿಂಗ್‌ ಕಾರ್ಯನಿರ್ವಹಿಸುವ ಸ್ಮಾರ್ಟ್‌ವಾಚ್‌ ಆಗಿ ಬದಲಾಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಬೇಡಿಕೆ ಹೆಚ್ಚಾದಂತೆ ಸ್ಮಾರ್ಟ್‌ವಾಚ್‌ಗಳಿಗೂ ಕೂಡ ಬಾರಿ ಬೇಡಿಕೆ ಇದೆ. ಸದ್ಯ ಈಗಾಗ್ಲೆ ಹಲವು ಮಾದರಿಯ ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಇದೀಗ ಸ್ಕಾಗನ್‌ ಫಾಲ್‌ಸ್ಟಾರ್‌ ಕಂಪೆನಿ ತನ್ನ ಹೊಸ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಿದ್ದು, ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

ಹೌದು

ಹೌದು, ಡೆನ್ಮಾರ್ಕ್‌ ಮೂಲದ ಎಲೆಕ್ಟ್ರಾನಿಕ್ಸ್‌ ಆಕ್ಸೆಸರಿಸ್ ಕಂಪೆನಿ ಸ್ಕಾಗೆನ್‌ ತನ್ನ ಹೊಸ ಫಾಲ್‌ಸ್ಟಾರ್‌ 3 ಸ್ಮಾರ್ಟ್‌ವಾಚ್‌ ಅನನ್ಉ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಸ್ವಿಮ್ಮಿಂಗ್‌ ಫ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಗೂಗಲ್‌ನ ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ನಲ್ಲಿ ಸ್ಪೀಕರ್ ವ್ಯವಸ್ಥೆಯನ್ನ ಸಹ ನೀಡಲಾಗಿದ್ದು, ಕರೆಗಳನ್ನು ಸಹ ಸ್ವೀಕರಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ ಬೆಲೆ 21,995ರೂ ಎನ್ನಲಾಗ್ತಿದೆ.

ಸ್ಕಾಗನ್‌ ಫಾಲ್‌ಸ್ಟಾರ್‌ 3 ಸ್ಮಾರ್ಟ್‌ವಾಚ್‌

ಸ್ಕಾಗನ್‌ ಫಾಲ್‌ಸ್ಟಾರ್‌ 3 ಸ್ಮಾರ್ಟ್‌ವಾಚ್‌

ಸ್ಕಾಗನ್‌ ಫಾಲ್‌ಸ್ಟಾರ್‌ 3 ಸ್ಮಾರ್ಟ್‌ವಾಚ್‌ 1.3 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, ಸ್ವಿಮ್ಮಿಂಗ್‌ ಪ್ರೂಪ್‌ ಹೊಂದಿರುವ ಟಚ್‌ಸ್ಕ್ರೀನ್‌ ಅನ್ನು ಹೊಂದಿದೆ. ಇದರಿಂದ ಅಂಡರ್‌ವಾಟರ್‌ನಲ್ಲಿಯೂ ಕೂಡ ಈ ಸ್ಮಾರ್ಟ್‌ವಾಚ್‌ ಕಾರ್ಯನಿರ್ವಹಿಸಲಿದ್ದು, ಕರೆಗಳನ್ನು ಸಹ ಸ್ವೀಕರಿಸಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 42MM ಕೇಸ್‌ ಅನ್ನು ಒಳಗೊಂಡಿದ್ದು, ಗನ್‌ಮೆಟಲ್ ಗೇಜ್ ಮೆಶ್, ಲೆದರ್ ಮತ್ತು ಸಿಲ್ಕೋನ್ ಮೆಶ್‌ ಆಯ್ಕೆಗಳಲ್ಲಿ ಸ್ಮಾರ್ಟ್‌ವಾಚ್‌ನ ಸ್ಟ್ರಾಪ್‌ಗಳನ್ನು ಬದಲಾಯಿಸಬಹುದು.

ಸ್ಕಾಗನ್‌ ಫಾಲ್‌ಸ್ಟಾರ್‌ 3 ವಿಶೇಷತೆ

ಸ್ಕಾಗನ್‌ ಫಾಲ್‌ಸ್ಟಾರ್‌ 3 ವಿಶೇಷತೆ

ಈ ಸ್ಮಾರ್ಟ್‌ವಾಚ್‌ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 3100 ಪ್ರೊಸೆಸರ್ ಹೊಂದಿದ್ದು, ಗೂಗಲ್‌ನ ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 1GB RAM ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬಿಟ್‌ ಟ್ರ್ಯಾಕಿಂಗ್‌, ಗೂಗಲ್ ಅಸಿಸ್ಟೆಂಟ್ ಸಪೋರ್ಟ್, ಗೂಗಲ್ ಪೇ, ಜಿಪಿಎಸ್ ಮತ್ತು ಗೂಗಲ್ ಪ್ಲೇ ಸ್ಟೋರ್‌ ಅಪ್ಲಿಕೇಶನ್‌ಗಳನ್ನು ಒಳಗೊಂಡಿರಲಿದೆ. ಇದರಲ್ಲಿ ಬಳಕೆದಾರರು ತಮ್ಮ ಆಸಕ್ತಿಗೆ ಅನುಗುಣವಾದ ಇತರೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಹ ಅವಕಾಶವನ್ನ ನೀಡಲಾಗಿದೆ. ಜೊತೆಗೆ ಇತರೆ ಅಪ್ಲಿಕೇಶನ್‌ಗಳಲ್ಲಿಯೂ ಸಹ ಮ್ಯೂಸಿಕ್‌ ಅನ್ನು ಪ್ಲೇ ಮಾಡುವ ಅವಕಾಶವನ್ನ ಕಲ್ಪಿಸಲಾಗಿದೆ.

ಸ್ಮಾರ್ಟ್‌ವಾಚ್‌ನ ವಿನ್ಯಾಸ

ಸ್ಮಾರ್ಟ್‌ವಾಚ್‌ನ ವಿನ್ಯಾಸ

ಇದೀಗ ಬಿಡುಗಡೆಯಾಗಿರುವ ಸ್ಕಾಗನ್‌ ಸ್ಮಾರ್ಟ್‌ವಾಚ್‌ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ವಾಚ್‌ ಹಾಗೂ ಫೋಸಿಲ್‌ ಜೆನ್‌ 5 ಸ್ಮಾರ್ಟ್‌ವಾಚ್‌ಗಳಿಗೆ ಪ್ರತಿಸ್ಫರ್ಧಿಯಾಗಿ ಲಾಂಚ್‌ ಆಗಿದೆ ಎಂದು ಹೇಳಲಾಗ್ತಿದೆ. ವಿನ್ಯಾಸ ಹಾಗೂ ಕಾರ್ಯವೈಖರಿ ಈ ಎರಡು ಸ್ಮಾರ್ಟ್‌ವಾಚ್‌ಗಳಿಗೆ ಬಹುತೇಕ ಹೋಲಿಕೆಯನ್ನ ಈ ಸ್ಮಾರ್ಟ್‌ವಾಚ್‌ ಹೊಂದಿದ್ದು, ಮಾರುಕಟ್ಟೆಯಲ್ಲಿ ಹೇಗೆ ಪೈಪೋಟಿ ನೀಡಲಿದೆ ಅನ್ನೊದನ್ನ ನೋಡಬೇಕಿದೆ.

ಬ್ಯಾಟರಿ ಮತ್ತು ಬೆಲೆ

ಬ್ಯಾಟರಿ ಮತ್ತು ಬೆಲೆ

ಈ ಸ್ಮಾರ್ಟ್‌ವಾಚ್‌ ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 24 ಗಂಟೆಗಳ ಬಾಳಿಕೆ ಬರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಇದು ಮ್ಯಾಗ್ನೆಟಿಕ್ ಚಾರ್ಜರ್‌ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ಮ್ಯೂಸಿಕ್‌ ಪ್ಲೇ ಬ್ಯಾಕ್‌ನಲ್ಲಿ ಉತ್ತಮ ಬ್ಯಾಕ್‌ಅಪ್‌ ಸಿಗಲಿದೆ ಎಂದು ಹೇಳಲಾಗ್ತಿದೆ. ಸದ್ಯ ಸ್ಕಾಗನ್‌ ಫಾಲ್‌ಸ್ಟಾರ್‌ 3 ಸ್ಮಾರ್ಟ್‌ವಾಚ್‌ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ 21,995ರೂ ಆಗಿದೆ.

Best Mobiles in India

English summary
Skagen Falster 3 smartwatch is said to deliver a 24-hour battery life on a single charge.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X