ಈ ವಿಷಯ ಗೊತ್ತಾದ್ರೆ?..ಫ್ಲಿಪ್‌ಕಾರ್ಟ್‌ನಲ್ಲಿ ಅಪ್ಪಿತಪ್ಪಿಯೂ ಶಾಪಿಂಗ್ ಮಾಡೊಲ್ಲಾ!!

ಅಮೆರಿಕಾದ ಕಂಪೆನಿ ದಾಖಲಿಸಿದ ಒಂದು ದೂರಿನಿಂದ ಆನ್‌ಲೈನ್ ಶಾಪಿಂಗ್ ಕಂಪೆನಿಗಳ ಬಂಡವಾಳ ಬೀದಿಗೆ ಬಂದಿದೆ.!!

|

ಆನ್‌ಲೈನ್ ಶಾಪಿಂಗ್ ಮಾಡುವುದು ಒಳ್ಳೆಯದೋ ಅಥವಾ ಕೆಟ್ಟದ್ದೋ? ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಸರಿಯಾದ ಉತ್ತರ ಪಡೆಯದ ಗ್ರಾಹಕರಿಗೆ ಖಂಡಿತಾ ಇಂದು ಉತ್ತರ ದೊರೆತಿದೆ.!! ಆನ್‌ಲೈನ್ ಶಾಪಿಂಗ್ ಎಂದಿಗೂ ಗ್ರಾಹಕರ ಪರವಲ್ಲ ಎಂಬುದನ್ನು ಫ್ಲಿಪ್‌ಕಾರ್ಟ್‌ ಸೇರಿ ಕೆಲ ದಿಗ್ಗಜ ಆನ್‌ಲೈನ್ ಶಾಪಿಂಗ್ ಕಂಪೆನಿಗಳು ತೋರಿಸಿಕೊಟ್ಟಿವೆ.!!

ಹೌದು, ಆನ್‌ಲೈನ್ ಶಾಪಿಂಗ್ ಜಾಲತಾಣಗಳು ಜನರಿಗೆ ಮೋಸ ಮಾಡುತ್ತಿರುವ ಘಟನೆ ಗ್ರಾಹಕರಿಗೆ ತಡವಾಗಿ ತಿಳಿದಿದೆ.!! ಅಮೆರಿಕಾದ ಕಂಪೆನಿ ದಾಖಲಿಸಿದ ಒಂದು ದೂರಿನಿಂದ ಆನ್‌ಲೈನ್ ಶಾಪಿಂಗ್ ಕಂಪೆನಿಗಳ ಬಂಡವಾಳ ಬೀದಿಗೆ ಬಂದಿದೆ.!! ಹಾಗಾದರೆ ಏನಿದು ಘಟನೆ? ಆನ್‌ಲೈನ್ ಶಾಪಿಂಗ್ ಮಾಡುವುದು ತಪ್ಪೇ? ಎಂಬುದನ್ನು ಮುಂದೆ ತಿಳಿಯಿರಿ.!!

ಒಂದು ದೂರಿನಿಂದ ಬಂಡವಾಳ ಬಯಲು!!

ಒಂದು ದೂರಿನಿಂದ ಬಂಡವಾಳ ಬಯಲು!!

ಸ್ಕೆಚರ್ಸ್ ಬ್ರ್ಯಾಂಡ್ ಹೆಸರನ್ನು ಬಳಸಿಕೊಂಡು ನಕಲಿ ಉತ್ಪನ್ನಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಫ್ಲಿಪ್‌ಕಾರ್ಟ್ ಸೇರಿ ರೀಟೇಲ್‌ ನೆಟ್‌, ಟೆಕ್‌ ಕನೆಕ್ಟ್‌ನಂತಹ ಜಾಲತಾಣಗಳ ವಿರುದ್ಧ ಅಮೆರಿಕ ಮೂಲದ ಸ್ಕೆಚರ್ಸ್ ಎಂಬ ಹೆಸರಾಂತ ಕಂಪೆನಿ ದೂರನ್ನು ದಾಖಲಿಸಿದಾಗ ಅವುಗಳ ಬಂಡವಾಳ ಬಯಲಾಗಿದೆ.!!

ಮಧ್ಯವರ್ತಿ ಮಾತ್ರವಂತೆ!!

ಮಧ್ಯವರ್ತಿ ಮಾತ್ರವಂತೆ!!

ಸ್ಕೆಚರ್ಸ್ ಕಂಪೆನಿ ಮತ್ತು ಫ್ಲಿಪ್‌ಕಾರ್ಟ್ ಮಧ್ಯೆ ದೆಹಲಿ ಹೈಕೋರ್ಟ್‌ನಲ್ಲಿ ವಾಜ್ಯ ನಡೆಯುತ್ತಿದ್ದು, 'ನಮ್ಮದು ಆನ್‌ಲೈನ್‌ ಮಾರುಕಟ್ಟೆ ವ್ಯವಸ್ಥೆ. ದೇಶದಲ್ಲಿ ಮಾರಾಟಗಾರ ಮತ್ತು ಗ್ರಾಹಕರನ್ನು ಬೆಸೆಯಲು ನೆರವಾಗುತ್ತೇವೆ. ನಾವು ಕೇವಲ ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತೇವೆ'' ಎಂದು ಫ್ಲಿಪ್‌ಕಾರ್ಟ್ ವಕ್ತಾರರು ಹೇಳಿದ್ದಾರೆ.!!

ಆನ್‌ಲೈನ್ ಗ್ರಾಹಕರಿಗೆ ಚೆಂಬು?

ಆನ್‌ಲೈನ್ ಗ್ರಾಹಕರಿಗೆ ಚೆಂಬು?

ಇಂದಿಗೂ ಫ್ಲಿಪ್‌ಕಾರ್ಟ್ ಸೇರಿ ರೀಟೇಲ್‌ ನೆಟ್‌, ಟೆಕ್‌ ಕನೆಕ್ಟ್‌ನಂತಹ ಜಾಲತಾಣಗಳಲ್ಲಿ ಗ್ರಾಹಕರು ಶಾಪಿಂಗ್ ಮಾಡುತ್ತಿರುವುದೇ ದೊಡ್ಡ ಹಾಗೂ ನಂಬಿಕಸ್ಥ ಕಂಪೆನಿಗಳು ಎಂಬ ನಂಬಿಕೆಯಿಂದ. ಆದರೆ, ಫ್ಲಿಪ್‌ಕಾರ್ಟ್ ನಾವು ಕೇವಲ ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದು ಗ್ರಾಹಕರಿಗೆ ಒಮ್ಮೆಲೆ ಭಯ ಉಂಟಾಗಿದೆ.!!

ಮಾರಾಟಗಾರರ ಮೇಲೆ ನಿಯಂತ್ರಣ?

ಮಾರಾಟಗಾರರ ಮೇಲೆ ನಿಯಂತ್ರಣ?

ಫ್ಲಿಪ್‌ಕಾರ್ಟ್ ನಾವು ಕೇವಲ ಮಧ್ಯವರ್ತಿಯಾಗಿ ಮಾತ್ರ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ ನಂತರ ಇತರ ಆನ್‌ಲೈನ್ ಕಂಪೆನಿಗಳು ಇದೇ ಕೆಲಸವನ್ನು ಮಾಡುತ್ತಿವೆ ಎಂದು ವರದಿಗಳು ಹೇಳುತ್ತಿವೆ.! ಇದರಿಂದ ಇತರ ಮಾರಾಟಗಾರರ ಮೇಲೆ ಆನ್‌ಲೈನ್ ಶಾಪಿಂಗ್ ಕಂಪೆನಿಗಳ ನಿಯಂತ್ರಣ ಹೇಗಿದೆ ಎಂಬುದರ ಮೇಲೆ ಅಪನಂಬಿಕೆ ಉಂಟಾಗಿದೆ.!!

ಹಾಗಾದರೆ ನಿಮ್ಮ ವಸ್ತು ಕೂಡ ನಕಲಿಯೇ?

ಹಾಗಾದರೆ ನಿಮ್ಮ ವಸ್ತು ಕೂಡ ನಕಲಿಯೇ?

ಆಪಲ್ ಫೋನಿನಂತೆಯೇ ಡ್ಯೂಪ್ಲಿಕೇಟ್ ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಒಂದು ವೇಳೆ ಡ್ಯೂಪ್ಲಿಕೇಟ್ ಸ್ಕೆಚರ್ಸ್ ಶೂಗಳು ಮಾರಾಟವಾಗಿದ್ದರೆ, ಇನ್ನು ಆನ್‌ಲೈನ್‌ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳೇ ಹೆಚ್ಚು ಮಾರಾಟವಾಗುತ್ತಿರುವುದರಿಂದ ಗ್ರಾಹಕರು ಖರೀದಿಸುತ್ತಿರುವ ಹಲವು ವಸ್ತುಗಳು ನಕಲಿ ವಸ್ತುಗಳಾಗಿರುವ ಸಂಭವವಿರುತ್ತದೆ.!!

ಹೆಚ್ಚು ಜನ ಗ್ರಾಹಕರಿಂದ ಆರೋಪ!!

ಹೆಚ್ಚು ಜನ ಗ್ರಾಹಕರಿಂದ ಆರೋಪ!!

ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯುವ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತಿರುವುದು ನಿಜ. ಆದರೆ, ಫ್ಲಿಪ್‌ಕಾರ್ಟ್ ಯಾವ ಆಧಾರದಲ್ಲಿ ಮಾರಾಟಗಾರರಿಗೆ ಮಾರಲು ಅನುಮತಿ ನೀಡಿದೆ? ಕಡಿಮೆ ಬೆಲೆಗೆ ನೀಡುವ ಅವರು ಗುಣಮಟ್ಟ ಕಾಯ್ದುಕೊಳ್ಳುವನೆ? ಎಂಬ ಆತಂಕ ನಮ್ಮನ್ನು ಕಾಡುತ್ತಿದೆ. ಹಾಗಾಗಿ, ದಯವಿಟ್ಟು ಆನ್‌ಲೈನ್ ಶಾಪಿಂಗ್ ಮಾಡಬೇಡಿ ಎಂದುಹೆಚ್ಚು ಜನ ಗ್ರಾಹಕರು ಹೇಳಿದ್ದಾರೆ.!!

ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!ಬೆಂಗಳೂರಿನಲ್ಲಿ ಗೂಗಲ್ ಕೆಲಸಗಳಿಗಾಗಿ ಈಗಲೇ ಅರ್ಜಿ ಸಲ್ಲಿಸಿ!!..ಎಲ್ಲಾ ಮಾಹಿತಿ ತಿಳಿಯಿರಿ!!

Best Mobiles in India

English summary
US based, atleisure brand Skechers has filed a case against Flipkart's four sellers over selling fake products under its brand on huge discounts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X