ಭಾರತದಲ್ಲಿ ಸ್ಕಲ್‌ಕ್ಯಾಂಡಿಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದಂತೆ ಇಯರ್‌ಫೋನ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಇಯರ್‌ಫೋನ್‌ಗಳನ್ನು ಪರಿಚಯಿಸುತ್ತಿವೆ. ಆದರೂ ಬಳಕೆದಾರರು ಮಾತ್ರ ಬ್ರಾಂಡ್‌ ಕಂಪೆನಿಗಳ ಇಯರ್‌ಫೋನ್‌ಗಳನ್ನೇ ಖರೀದಿಸುತ್ತಾರೆ. ಇವುಗಳಲ್ಲಿ ಸ್ಕಲ್‌ಕ್ಯಾಂಡಿ ಸಂಸ್ಥೆ ಕೂಡ ಒಂದಾಗಿದೆ. ಸದ್ಯ ಇದೀಗ ಸ್ಕಲ್‌ ಕ್ಯಾಂಡಿ ಹೊಸ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸ್ಕಲ್‌ಕ್ಯಾಂಡಿ

ಹೌದು, ಸ್ಕಲ್‌ಕ್ಯಾಂಡಿ ಸಂಸ್ಥೆ ಹೊಸ ಡೈಮ್ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ಇನ್ನು ಈ ಇಯರ್‌ಬಡ್ಸ್‌‌ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಬಜೆಟ್ ಸ್ನೇಹಿಯಾದ ಈ ಟ್ರೂಲಿ ವಾಯರ್‌‌ಲೆಸ್ ಸ್ಟಿರಿಯೊ ಇಯರ್‌ಬಡ್‌ಗಳು ಮೂರು ಬಣ್ಣಗಳ ಆಯ್ಕೆಗಳಲ್ಲಿ ಬರಲಿದೆ. ಇನ್ನುಳಿದಂತೆ ಈ ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಕಲ್‌ಕ್ಯಾಂಡಿ

ಸ್ಕಲ್‌ಕ್ಯಾಂಡಿ ಡೈಮ್ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್‌ 6ಎಂಎಂ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು ಫ್ರಿಕ್ವೆನ್ಸಿ ರೆಸ್ಪಾನ್ಸ್‌ ವ್ಯಾಪ್ತಿಯನ್ನು 20Hz ನಿಂದ 20,000Hz ವರೆಗೆ ಹೊಂದಿದೆ. ಇನ್ನು ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಅನ್ನು ಹೊಂದಿದೆ. ಪ್ರತಿ ಇಯರ್‌ಬಡ್‌ನಲ್ಲಿ ಭೌತಿಕ ಗುಂಡಿಗಳನ್ನು ಹೊಂದಿರಲಿದೆ. ಇದರ ಮೂಲಕ ನಿಮ್ಮ ಜೋಡಿಯಾಗಿರುವ ಫೋನ್ ಅನ್ನು ತೆಗೆದುಕೊಳ್ಳದೆಯೇ ನೀವು ವಾಲ್ಯೂಮ್‌ ಅನ್ನು ಕಂಟ್ರೋಲ್‌ ಮಾಡಬಹುದಾಗಿದೆ. ಅಲ್ಲದೆ ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಬದಲಾಯಿಸಬಹುದು ಮತ್ತು ಕರೆಗಳನ್ನು ತೆಗೆದುಕೊಳ್ಳಬಹುದಾಗಿದೆ.

ವಾಯರ್‌ಲೆಸ್‌

ಡೈಮ್‌ ಟ್ರೂ ವಾಯರ್‌ಲೆಸ್‌ ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್‌ನಲ್ಲಿ ಮೈಕ್ರೊಫೋನ್ ಇದ್ದು, ಸ್ಕಲ್‌ಕ್ಯಾಂಡಿ ಡೈಮ್ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳನ್ನು ಪ್ರತ್ಯೇಕವಾಗಿ ಬಳಸಲು ಅನುಮತಿಸುತ್ತದೆ. ಜೊತೆಗೆ ಐಪಿಎಕ್ಸ್ 4 ಬೆವರು ಮತ್ತು ನೀರಿನ ಪ್ರತಿರೋಧವನ್ನು ಒಳಗೊಂಡಿದೆ. ಇದಲ್ಲದೆ ಚಾರ್ಜಿಂಗ್ ಕೇಸ್‌ನ ಕಾರ್ ಕೀ ಫೋಬ್‌ನ ಗಾತ್ರದ ಬಗ್ಗೆ ಇರುತ್ತದೆ. ಸ್ಕಲ್‌ಕ್ಯಾಂಡಿ ಡೈಮ್ ಟ್ರೂ ವೈರ್‌ಲೆಸ್ ಇಯರ್‌ಬಡ್ಸ್ ಚಾರ್ಜಿಂಗ್ ಕೇಸ್‌ ಲಗತ್ತಿಸಲಾದ ಲ್ಯಾನ್ಯಾರ್ಡ್ ಅನ್ನು ಹೊಂದಿದೆ, ಇದರಿಂದ ನೀವು ಅದನ್ನು ನಿಮ್ಮ ಕೀಚೈನ್ ಸೆಟ್‌ಗೆ ಸೇರಿಸಬಹುದಾಗಿದೆ.

ಸ್ಕಲ್‌ಕ್ಯಾಂಡಿ

ಇನ್ನು ಸ್ಕಲ್‌ಕ್ಯಾಂಡಿ ಡೈಮ್ ಟ್ರೂ ವಾಯರ್‌ಲೆಸ್ ಇಯರ್‌ಬಡ್ಸ್‌ ಪ್ರತಿ ಇಯರ್‌ಬಡ್‌ನಲ್ಲಿ 20mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಕಾಂಪ್ಯಾಕ್ಟ್ ಚಾರ್ಜಿಂಗ್ ಸಂದರ್ಭದಲ್ಲಿ 150mAh ಬ್ಯಾಟರಿಯನ್ನು ಹೊಂದಿವೆ. ಇನ್ನು ಈ ಇಯರ್‌ಬಡ್ಸ್‌ಗಳು ಸ್ವತಃ 3.5 ಗಂಟೆಗಳ ಕಾಲ ಉಳಿಯಬಹುದು. ಜೊತೆಗೆ ಇದರ ಚಾರ್ಜಿಂಗ್‌ ಕೇಸ್‌ 8.5 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಸಿಂಗಲ್‌ ಚಾರ್ಜ್‌ನಲ್ಲಿ ಒಟ್ಟು 12 ಗಂಟೆಗಳ ಕಾಲ ಪ್ಲೇ ಬ್ಯಾಕ್‌ ಅನ್ನು ನೀಡಲಿದೆ. ಸದ್ಯ ಈ ಇಯರ್‌ಬಡ್‌ಗಳ ಬೆಲೆ 2,249 ರೂ ಆಗಿದ್ದು, ಸ್ಕಲ್‌ಕ್ಯಾಂಡಿ ಇಂಡಿಯಾ ವೆಬ್‌ಸೈಟ್‌ನಲ್ಲಿ ಏಪ್ರಿಲ್ 4 ರಿಂದ ಖರೀದಿಗೆ ಲಭ್ಯವಾಗಲಿದೆ.

Best Mobiles in India

Read more about:
English summary
Skullcandy Dime True Wireless Earbuds With IPX4 Rating Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X