Home
ಸುದ್ದಿಜಾಲ

ನಿಮ್ಮ ಬೈಸಿಕಲ್‌ಗೆ ಸುರಕ್ಷೆ ನೀಡುವ ಸ್ಕೈಲಾಕ್

By Shwetha

ನೀವು ಸೈಕಲ್ ಸವಾರರಾಗಿದ್ದರೆ ಸೈಕಲ್ ಕಳುವಾದ ಅನುಭವ ಖಂಡಿತ ನಿಮಗುಂಟಾಗಿರುತ್ತದೆ. ಬೇಸ್‌ಮೆಂಟ್‌ನಲ್ಲಿ ಅಥವಾ ಪಾರ್ಕಿಂಗ್‌ನಲ್ಲಿ ಬೀಗ ಹಾಕಿದ ಸೈಕಲ್ ಅನ್ನು ಕಳುವು ಮಾಡುವ ಭೂಪರೂ ಇದ್ದಾರೆ. ಆದರೆ ನಿಮ್ಮ ಸೈಕಲ್ ಅನ್ನು ಉಳಿಸುವ ಒಂದು ಶಕ್ತಿ ಜನ್ಮ ತಾಳಿದೆ. ಜಾಕ್ ಮತ್ತು ಗೆರಾಡೋ ಸೋಲರ್ ಶಕ್ತಿಯ ಬೈಕ್ ಲಾಕ್ ಆದ ಸ್ಕೈಲಾಕ್ ಅನ್ನು ಹೊರತಂದಿದ್ದು ಖಂಡಿತ ಇದು ನಿಮ್ಮ ಸೈಕಲ್‌ಗೆ ಶ್ರೀರಕ್ಷೆಯಾಗಲಿದೆ.

ಸ್ಕೈಲಾಕ್ ನಲ್ಲಿ ಕಳುವನ್ನು ಸೂಚಿಸುವ ಒಂದು ವ್ಯವಸ್ಥೆಯನ್ನು ರೂಪಿಸಲಾಗಿದ್ದು ಇದು ಬಳಕೆದಾರರ ಫೋನ್‌ಗೆ (ಬ್ಲೂಟೂತ್ ಅಥವಾ ವೈಫೈ ಮೂಲಕ ಸಂಪರ್ಕಪಡಿಸಬೇಕು) ಸಂದೇಶವನ್ನು ಕಳುಹಿಸುತ್ತದೆ. ಮೂರನೇ ವ್ಯಕ್ತಿ ಈ ಸಮಯದಲ್ಲಿ ನಿಮ್ಮ ಸೈಕಲ್ ಅನ್ನು ಸ್ಪರ್ಶಿಸಿದಲ್ಲಿ, ನಿಮಗದು ಗೊತ್ತಾಗಿ ಬಿಡುತ್ತದೆ. ತಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಇದರ ಸಂಪರ್ಕವನ್ನು ಬಳಕೆದಾರರು ಪೇರ್ ಮಾಡಿಕೊಂಡಿರಬೇಕು.

ನಿಮ್ಮ ಬೈಸಿಕಲ್‌ಗೆ ಸುರಕ್ಷೆ ನೀಡುವ ಸ್ಕೈಲಾಕ್

ಸೈಕಲ್ ಸವಾರಿಯನ್ನು ಮಾಡುತ್ತಿರುವವರು ಎಲ್ಲಿಯಾದರೂ ಗಂಭೀತ ಗಾಯಕ್ಕೊಳಗಾದರೂ ಇದು ತುರ್ತು ಸಂದೇಶವನ್ನು ಕಳುಹಿಸಿ ಸವಾರನ ಪ್ರಾಣ ಉಳಿಸಲು ನೆರವಾಗುತ್ತದೆ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಸೂಕ್ತವಾಗಿ ಇದರ ಲಾಕ್ ಸಂಪರ್ಕವನ್ನು ನೀವು ಅನ್ವಯಿಸಿರಬೇಕು. ಇದನ್ನು ನಿಮಗೆ ಚಾರ್ಜ್ ಕೂಡ ಮಾಡಬಹುದಾಗಿದೆ. ಒಂದು ಗಂಟೆಯ ಸೂರ್ಯನ ಬೆಳಕಿನಲ್ಲಿ ಇದರ ಚಾರ್ಜರ್ ಪೂರ್ಣವಾಗಿ ಚಾರ್ಜ್ ಆಗುತ್ತದೆ. ನೀವು ಯುಎಸ್‌ಬಿ ಮೂಲಕ ಕೂಡ ಇದನ್ನು ಚಾರ್ಜ್ ಮಾಡಿಟ್ಟುಕೊಳ್ಳಬಹುದು.

ಜೆಲ್ಲಿ ಬೀನ್ (4.3) ಅಥವಾ ಕಿಟ್‌ಕ್ಯಾಟ್ (4.4) ಉಳ್ಳ ಆಂಡ್ರಾಯ್ಡ್ ಓಎಸ್‌ಗಳಲ್ಲಿ ಸ್ಕೈ ಲಾಕ್ ಅನ್ನು ನಿಮಗೆ ಅನ್ವಯಿಸಬಹುದು. ಐಫೋನ್ ಹಾಗೂ ಐಪ್ಯಾಡ್ ಆವೃತ್ತಿ 7.0 ಮತ್ತು ನಂತರದಲ್ಲೂ ಕೂಡ ಇದರ ಬಳಕೆ ಸಾಧ್ಯ. ಇದನ್ನು ಅಳವಡಿಸುವುದು ಹೇಗೆಂಬ ಮಾಹಿತಿ ಕೆಳಗಿನ ವೀಡಿಯೋದಲ್ಲಿ ನಿಮಗೆ ಲಭ್ಯವಿದ್ದು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

<center>https://skylock.cc/</center>

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+