Home
ಸುದ್ದಿಜಾಲ

ಮೈಕ್ರೋಸಾಫ್ಟ್‌ ಸ್ಕೈಪ್ ಸೇವೆ ಸ್ಥಗಿತ: ತಿಳಿಯಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ!

ತಂತ್ರಜ್ಞಾನದ ಜಗತ್ತಿನಲ್ಲಿ ಕ್ಷಿಪ್ರ ಬದಲಾವಣೆಗಳು ಸಾಮಾನ್ಯ. ಅದರ ಭಾಗವಾಗಿ, ಮೈಕ್ರೋಸಾಫ್ಟ್ ತನ್ನ ಜನಪ್ರಿಯ ವಿಡಿಯೋ ಕರೆ ವೇದಿಕೆಯಾದ 'ಸ್ಕೈಪ್' (microsoft Skype) ಅನ್ನು ಇದೇ ಮೇ 5 ರಂದು ಸ್ಥಗಿತಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.! ಹೌದು, 2003 ರಲ್ಲಿ ಪ್ರಾರಂಭವಾದ ಸ್ಕೈಪ್, ಎರಡು ದಶಕಗಳ ಕಾಲ ವಿಡಿಯೋ ಕರೆಗಳಿಗಾಗಿ ವಿಶ್ವದಾದ್ಯಂತ ಪ್ರಮುಖ ವೇದಿಕೆಯಾಗಿತ್ತು. ಆದರೆ ವಾಟ್ಸಾಪ್ ಮತ್ತು ಫೇಸ್‌ಟೈಮ್‌ನಂತಹ ಇತರ ಅಪ್ಲಿಕೇಶನ್‌ಗಳ ಆಗಮನ ಮತ್ತು ಅವುಗಳ ಜನಪ್ರಿಯತೆಯಿಂದಾಗಿ ಸ್ಕೈಪ್ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಾ ಬಂದಿತು. ಇದೀಗ ಮೇ 5 ರಂದು ಕೊನೆಯಾಗುತ್ತಿದೆ.

ಮೈಕ್ರೋಸಾಫ್ಟ್ ಈ ನಿರ್ಧಾರವನ್ನು ಪ್ರಕಟಿಸಿದ್ದು, ತನ್ನ ಇತರ ಸಂವಹನ ವೇದಿಕೆಗಳನ್ನು ಸರಳಗೊಳಿಸುವ ಮತ್ತು ಮೈಕ್ರೋಸಾಫ್ಟ್ ಟೀಮ್ಸ್‌ನಂತಹ ಆಧುನಿಕ ವೇದಿಕೆಗಳ ಮೇಲೆ ಗಮನ ಕೇಂದ್ರೀಕರಿಸುವ ಸಲುವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ, "ನಮ್ಮ ಉಚಿತ ಗ್ರಾಹಕ ಸಂವಹನ ಕೊಡುಗೆಗಳನ್ನು ಗ್ರಾಹಕರ ಅಗತ್ಯಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತೆ ಮಾಡಲು, ನಾವು ಮೇ 2025 ರಲ್ಲಿ ಸ್ಕೈಪ್ ಅನ್ನು ಸ್ಥಗಿತಗೊಳಿಸುತ್ತೇವೆ ಮತ್ತು ನಮ್ಮ ಆಧುನಿಕ ಸಂವಹನ ಮತ್ತು ಸಹಯೋಗ ಕೇಂದ್ರವಾದ ಮೈಕ್ರೋಸಾಫ್ಟ್ ಟೀಮ್ಸ್ (ಉಚಿತ) ಮೇಲೆ ಗಮನ ಹರಿಸುತ್ತೇವೆ" ಎಂದು ಹೇಳಿದೆ.

ಈ ಬದಲಾವಣೆಯು ಅಸ್ತಿತ್ವದಲ್ಲಿರುವ ಸ್ಕೈಪ್ ಬಳಕೆದಾರರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಸಹಜವಾದ ಪ್ರಶ್ನೆ. ಮೈಕ್ರೋಸಾಫ್ಟ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸ್ಕೈಪ್ ಬಳಕೆದಾರರು ಟೀಮ್ಸ್‌ಗೆ ವಲಸೆ ಹೋಗುವಾಗ ಯಾವುದೇ ತೊಂದರೆ ಅನುಭವಿಸುವುದಿಲ್ಲ ಎಂದು ಭರವಸೆ ನೀಡಿದೆ. ಸ್ಕೈಪ್ ಐಡಿಗಳನ್ನು ಟೀಮ್ಸ್ ವೇದಿಕೆಯಲ್ಲಿ ಲಾಗಿನ್ ಆಗಲು ಬಳಸಬಹುದು ಮತ್ತು ಚಾಟ್‌ಗಳು ಹಾಗೂ ಸಂಪರ್ಕಗಳನ್ನು ಸುಲಭವಾಗಿ ವರ್ಗಾಯಿಸಿಕೊಳ್ಳಬಹುದು. ಈ ಪರಿವರ್ತನೆಗೆ ಸಾಕಷ್ಟು ಸಮಯಾವಕಾಶ ನೀಡುವ ಸಲುವಾಗಿ ಕಂಪನಿಯು ಈ ವರ್ಷದ ಆರಂಭದಲ್ಲಿಯೇ ಈ ನಿರ್ಧಾರವನ್ನು ಪ್ರಕಟಿಸಿತ್ತು.

ಅಲ್ಲದೆ, ಈ ವಲಸೆ ಪ್ರಕ್ರಿಯೆಯುದ್ದಕ್ಕೂ ಅಗತ್ಯ ಬೆಂಬಲ ಲಭ್ಯವಿರುತ್ತದೆ ಮತ್ತು ಎರಡೂ ಪ್ಲಾಟ್‌ಫಾರ್ಮ್‌ಗಳು ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿರುವುದರಿಂದ ಬಳಕೆದಾರರಿಗೆ ಇದು ಕಷ್ಟಕರವೆನಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.ಇನ್ನು ಪಾವತಿಸಿದ ಸ್ಕೈಪ್ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಸಂಬಂಧಿಸಿದಂತೆ, ಮೈಕ್ರೋಸಾಫ್ಟ್ ಹೊಸ ಬಳಕೆದಾರರಿಗೆ ಸ್ಕೈಪ್ ಕ್ರೆಡಿಟ್ ಮತ್ತು ಕರೆ ಮಾಡುವ ಯೋಜನೆಗಳ ಲಭ್ಯತೆಯನ್ನು ಸ್ಥಗಿತಗೊಳಿಸಿದೆ. ಆದರೆ, ಪ್ರಸ್ತುತ ಚಂದಾದಾರರು ತಮ್ಮ ಅಸ್ತಿತ್ವದಲ್ಲಿರುವ ಕ್ರೆಡಿಟ್ ಮತ್ತು ಸಕ್ರಿಯ ಚಂದಾದಾರಿಕೆಗಳನ್ನು ಟೀಮ್ಸ್ ಮೂಲಕ ಬಳಸುವುದನ್ನು ಮುಂದುವರಿಸಬಹುದು.

ಮೈಕ್ರೋಸಾಫ್ಟ್‌ ಸ್ಕೈಪ್ ಸೇವೆ ಸ್ಥಗಿತ: ತಿಳಿಯಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ!

ಸೇವೆ ಸ್ಥಗಿತಗೊಂಡ ನಂತರವೂ ಉಳಿದಿರುವ ಸ್ಕೈಪ್ ಕ್ರೆಡಿಟ್ ಲಭ್ಯವಿರುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಪಾವತಿಸಿದ ಬಳಕೆದಾರರು ಸ್ಕೈಪ್ ವೆಬ್ ಪೋರ್ಟಲ್ ಮೂಲಕ ಅಥವಾ ಮೈಕ್ರೋಸಾಫ್ಟ್ ಟೀಮ್ಸ್‌ನಲ್ಲಿರುವ ಸ್ಕೈಪ್ ಡಯಲ್ ಪ್ಯಾಡ್‌ನಂತಹ ಹಿಂದಿನ ಪ್ರೀಮಿಯಂ ಸೇವೆಗಳನ್ನು ಪಡೆಯಬಹುದು.ಮೈಕ್ರೋಸಾಫ್ಟ್ ಸ್ಕೈಪ್ ಅನ್ನು ಸ್ಥಗಿತಗೊಳಿಸುತ್ತಿರುವುದು ಒಂದು ದೊಡ್ಡ ಬದಲಾವಣೆಯಾಗಿದ್ದರೂ, ಬಳಕೆದಾರರಿಗೆ ಟೀಮ್ಸ್‌ನಂತಹ ಪರ್ಯಾಯ ಆಯ್ಕೆಗಳು ಲಭ್ಯವಿವೆ.

ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ಶಿಫಾರಸು ಮಾಡುತ್ತಿದ್ದರೂ, ಜೂಮ್, ಗೂಗಲ್ ಮೀಟ್ ಮತ್ತು ವಾಟ್ಸಾಪ್‌ನಂತಹ ಇತರ ಜನಪ್ರಿಯ ವೇದಿಕೆಗಳು ಸಹ ಅತ್ಯುತ್ತಮ ವಿಡಿಯೋ ಮತ್ತು ಧ್ವನಿ ಕರೆ ಸೌಲಭ್ಯಗಳನ್ನು ಒದಗಿಸುತ್ತವೆ. ಪ್ರತಿಯೊಬ್ಬ ಬಳಕೆದಾರನು ತನ್ನ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತವಾದ ಅಪ್ಲಿಕೇಶನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬದಲಾವಣೆಯು ಅಂತಿಮವಾಗಿ ಬಳಕೆದಾರರಿಗೆ ಹೆಚ್ಚು ಆಧುನಿಕ ಮತ್ತು ಸಮಗ್ರ ಸಂವಹನ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ.

Best Mobiles in India

English summary
Microsoft will permanently close Skype on May 5, 2025, to focus on Microsoft Teams.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+