Home
ಸುದ್ದಿಜಾಲ

ವಿಶ್ವದಲ್ಲಿಯೇ ಅತಿ ಚಿಕ್ಕ 4G ಸ್ಮಾರ್ಟ್‌ಫೋನ್‌ ಲಾಂಚ್‌! ಸೈಜ್‌ ನೋಡಿದ್ರೆ ಶಾಕ್‌ ಆಗ್ತೀರಾ?

ಸ್ಮಾರ್ಟ್‌ಫೋನ್‌ ಪ್ರಿಯರು ಈ ಸ್ಟೋರಿಯನ್ನ ಖಂಡಿತ ಓದಲೇಬೇಕು. ಯಾಕಂದ್ರೆ ನೀವು ಈ ಮಾದರಿಯ ಸ್ಮಾರ್ಟ್‌ಫೋನ್‌ ಅನ್ನು ಊಹೆ ಮಾಡಿರೋದಕ್ಕೆ ಸಾಧ್ಯವಿಲ್ಲ. ಇದೇ ಕಾರಣಕ್ಕೆ ಹೇಳೋದು ಸ್ಮಾರ್ಟ್‌ಫೋನ್‌ ವಲಯದಲ್ಲಿ ಏನು ಬೇಕದರೂ ನಡೆಯಬಹುದು ಅಂತಾ. ಇದಕ್ಕೆ ಕೈಗನ್ನಡಿಯಂತೆ ಇದೀಗ ಹೊಸ ಸ್ಮಾರ್ಟ್‌ಫೋನ್‌ ಒಂದು ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅಂದರೆ ಇದು ಕೇವಲ 3 ಇಂಚಿನ ಗಾತ್ರ ಹೊಂದಿದೆ. ಅಷ್ಟೇ ಅಲ್ಲ ವಿಶ್ವದ ಅತಿ ಚಿಕ್ಕ 4G ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

ಸ್ಮಾರ್ಟ್‌ಫೋನ್‌

ಹೌದು, ವಿಶ್ವದಲ್ಲಿಯೇ ಅತಿ ಚಿಕ್ಕ 4G ಸ್ಮಾರ್ಟ್‌ಫೋನ್‌ ಇದೀಗ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಕೇವಲ ಮೂರು ಇಂಚಿನ ಗಾತ್ರ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಚೀನೀ ಒಇಎಂ, ಮೊನಿ ಸಂಸ್ಥೆ ಬಿಡುಗಡೆ ಮಾಡಿದೆ. ಇದನ್ನು ಮೊನಿ ಮಿಂಟ್ ಸ್ಮಾರ್ಟ್ ಫೋನ್ ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಜೊತೆಗೆ 1,250mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ಮೊನಿ ಮಿಂಟ್ ಸ್ಮಾರ್ಟ್‌ಫೋನ್‌ 854 × 450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಪಿಂಟ್ ಸೈಜ್‌ ಡಿಸೈನ್‌ ಅನ್ನು ಹೊಂದಿದೆ. ಹೊರಗಡೆ ಹೋಗುವಾಗ ಕ್ಯಾರಿ ಮಾಡುವುದು ತುಂಬಾ ಸುಲಭವಾಗಲಿದೆ. ಜೊತೆಗೆ ಇದು ಡ್ಯುಯಲ್ ಸಿಮ್ ಕಾರ್ಡ್ ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ ಇದರಲ್ಲಿ ಕನಿಷ್ಠ ವಿನ್ಯಾಸವನ್ನು ಸೈಡ್ ಬಟನ್‌ಗಳು ಮತ್ತು ಪೋರ್ಟ್‌ಗಳ ಲಭ್ಯತೆಗೆ ವಿಸ್ತರಿಸಲಾಗಿದೆ. ಯುಎಸ್‌ಬಿ-ಸಿ ಪೋರ್ಟ್ ಹೊರತುಪಡಿಸಿ, ಫೋನ್ ಕೇವಲ ಪವರ್ ಮತ್ತು ವಾಲ್ಯೂಮ್ ಬಟನ್ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಹೆಸರಿಸದ 1.5GHz ಕ್ವಾಡ್-ಕೋರ್ CPU ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಗೂಗಲ್‌ನ ಆಂಡ್ರಾಯ್ಡ್ 9 ಆಪರೇಟಿಂಗ್ ಸಿಸ್ಟಮ್ ಅನ್ನು ಮೇಲ್ಭಾಗದಲ್ಲಿ ಕಸ್ಟಮ್ ಸ್ಕಿನ್‌ನೊಂದಿಗೆ ರನ್ ಮಾಡುತ್ತದೆ. ಹಾಗೆಯೇ 3GB RAM ಮತ್ತು 64GB ಇಂಟರ್‌ನಲ್ ಸ್ಟೋರೇಜ್ ಹೊಂದಿದ್ದು, ಮೈಕ್ರೊ SD ಕಾರ್ಡ್ ಮೂಲಕ 128GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಸೆನ್ಸಾರ್‌

ಇದು 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಪಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಹೆಚ್ಚುವರಿಯಾಗಿ, ಈ ಸಾಧನವು ಅಮೇರಿಕನ್ ಮತ್ತು ಯುರೋಪಿಯನ್ ಬ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಇವೆಲ್ಲವೂ 1,250mAh ಪಾಲಿಮರ್ ಬ್ಯಾಟರಿಯಿಂದ ಬೆಂಬಲಿತವಾಗುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್‌ ವೇಗದ ಚಾರ್ಜಿಂಗ್‌ ಬೆಂಬಲಿಸಿದೆಯಾ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಮೊನಿ

ಇನ್ನು ಈ ಮೊನಿ ಮಿಂಟ್ ಬೆಲೆ $ 150 (ಅಂದಾಜು ರೂ 11,131) ಮತ್ತು ಆರಂಭಿಕ ಕೊಡುಗೆಯಲ್ಲಿ ಸಾಧನವನ್ನು ಕ್ರೌಡ್‌ಫಂಡಿಂಗ್ ವೆಬ್‌ಸೈಟ್‌ ಇಂಡಿಗೋಗೊದಲ್ಲಿ $ 100 (ಅಂದಾಜು ರೂ 7,421) ಗೆ ನೀಡಲಾಗುತ್ತಿದೆ. $ 100 ಮುಂಚಿನ ಬರ್ಡ್‌ ಸ್ಲಾಟ್‌ಗಳ ಹೊರತಾಗಿ, ಕ್ರಮವಾಗಿ $ 115 ಮತ್ತು $ 130 ಅರ್ಲಿ ಬರ್ಡ್, ಮತ್ತು ಇಂಡಿಗೊಗೊ ವಿಶೇಷ ಸ್ಲಾಟ್‌ಗಳು ಇವೆ. ಸಾಧನವು ನವೆಂಬರ್‌ನಲ್ಲಿ ಸಾಗಾಟವನ್ನು ಪ್ರಾರಂಭಿಸುತ್ತದೆ. ನೀವು ಫೋನ್ ಖರೀದಿಸಲು ಬಯಸಿದರೆ, ನೀವು ಅದರ ಇಂಡಿಗೊಗೊ ಮೈಕ್ರೋ-ಸೈಟ್‌ಗೆ ಹೋಗಬಹುದು ಮತ್ತು ನಿಮಗಾಗಿ ಒಂದು ಮಾದರಿಯನ್ನು ಮೊದಲೇ ಬುಕ್ ಮಾಡಬಹುದು.

Best Mobiles in India

English summary
Mony Mint is claimed to be the world's smallest 4G smartphone and it comes with dual SIM card support. Here's a closer look at the device.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+