ಭಾರತದಲ್ಲಿ ಹಳೇ ಎಟಿಎಮ್ ಮಶೀನ್ಗಳಿಗೆ ಹೇಳಿ ವಿದಾಯ..ಬರಲಿದೆ ಸ್ಮಾರ್ಟ್ ಎಟಿಎಮ್!!
ನಗರಗಳಲ್ಲಿ ಈಗಿರುವ ಎಟಿಎಮ್ ಮೆಶೀನ್ಗಳ ಬದಲಾಗಿ ನೂತನ ಸ್ಮಾರ್ಟ್ ಮೆಶೀನ್ಗಳನ್ನು ಬರಲಿದ್ದು ಫೇಸ್ ರೆಕಗ್ನಿಶನ್, ಬಯೋಮೆಟ್ರಿಕ್ಸ್ ಮೊದಲಾದ ಸ್ಮಾರ್ಟ್ ಫೀಚರ್ಗಳನ್ನು ಹೊಂದಿರಲಿದೆ.
ನಿಮ್ಮ ನಗರಗಳಲ್ಲಿರುವ ಎಟಿಎಮ್ ಗಳು ಹೊಸ ರೂಪ ಪಡೆಯಲು ತಯಾರಾಗಿವೆ! ಹಳೇ ಎಟಿಎಮ್ ಗಳ ಬದಲಿಗೆ ಬರಲಿದೆ ಹೊಸ ಸ್ಮಾರ್ಟ್ ಎಟಿಎಮ್ ಮೆಶೀನ್ಗಳು ಫೇಸ್ ರೆಕಗ್ನಿಶನ್, ಬಯೋಮೆಟ್ರಿಕ್ಸ್ ಮೊದಲಾದ ಸ್ಮಾರ್ಟ್ ಫೀಚರ್ಗಳೊಂದಿಗೆ. ಈ ಅತ್ಯಾಧುನಿಕ ಎಟಿಎಮ್ ಮೆಶೀನ್ಗಳ ಮೂಲಕ ಗ್ರಾಹಕರು ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದಲ್ಲದೆ ಕ್ಯಾಶ್ ಮತ್ತು ಚೆಕ್ ಗಳನ್ನು ಜಮೆ ಮಾಡಬಹುದು.

ಆದರೆ ಈ ಮೆಶೀನ್ಗಳು ನಿಜವಾದ ಅರ್ಥದಲ್ಲಿ ಸ್ಮಾರ್ಟ್ ಎನಿಸಲು ಒಂದು ಕಾರಣವೆಂದರೆ , ಈ ಮೆಶೀನ್ಗಳಲ್ಲಿ ಎಂದೂ ಹಣದ ಅಭಾವ ಉಂಟಾಗುವುದಿಲ್ಲ. ಗ್ರಾಹಕರು ಜಮೆ ಮಾಡುವ ಹಣ ಮತ್ತೆ ಹಣ ತೆಗೆದುಕೊಳ್ಳಲು ಬರುವವರಿಗೆ ವಿತರಿಸಲಾಗುತ್ತದೆ.
IANS ವರದಿಯ ಪ್ರಕಾರ, ಭಾರತದಲ್ಲಿರುವ ಬ್ಯಾಂಕ್ಗಳು ಮುಂದಿನ 3-4 ತಿಂಗಳೊಳಗೆ ಈಗಿರುವ ಎಟಿಎಮ್ ಗಳನ್ನು ನೂತನ ಸ್ಮಾರ್ಟ್ ಎಟಿಎಮ್ ಮೆಶೀನ್ಗಳಿಗೆ ಬದಲಿಸಲಿದೆ. ಈ ಸುದ್ದಿಯನ್ನು NCR ಕಾರ್ಪೊರೇಶನ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
NCR ಭಾರತದ ಎಟಿಎಮ್ ಮಾರುಕಟ್ಟೆಯಲ್ಲಿ ಶೇಕಡಾ 50% ಪಾಲುದಾರಿಕೆ ಹೊಂದಿದ್ದು, ಇಂಟರ್ಯಾಕ್ಟಿವ್ ಟೆಲ್ಲರ್ ಎಟಿಎಮ್, EMV ಕಾಂಟ್ಯಾಕ್ಟ್ ಲೆಸ್ ಎಟಿಎಮ್ ಮೊದಲಾದ ನವೀನ ಉತ್ಪನ್ನಗಳನ್ನು ಹೈದರಾಬಾದಿನಲ್ಲರುವ ತಮ್ಮ ರೀಸರ್ಚ್ ಆಂಡ್ ಡೆವೆಲಪ್ಮೆಂಟ್ ಸೆಂಟರ್ನಲ್ಲಿ ತಯಾರಿಸಿದ್ದಾರೆ.
ದಿ ಹಿಂದು ಪತ್ರಿಕೆಯ ವರದಿಯ ಅನುಸಾರ NCR ಕಾರ್ಪೊರೇಶನ್ ಹೈದರಾಬಾದಿನಲ್ಲಿ 140,000 ಚದುರಡಿ ಇರುವ ಆರ್&ಡಿ ಫೆಸಿಲಿಟಿಯೊಂದನ್ನು ತೆರೆದಿದ್ದಾರೆ.ಯಾವುದೇ ಕನ್ಸ್ಯೂಮರ್ ಟ್ರ್ಯಾನ್ಸ್ಯಾಕ್ಶನ್ ಟೆಕ್ನೊಲಜಿ ಫರ್ಮ್ ಯುಎಸ್ ನ ಹೊರಗೆ ಸ್ಥಾಪಿಸಿರುವ ಅತೀ ದೊಡ್ಡ ಆರ್&ಡಿ ಫೆಸಿಲಿಟಿ ಇದಾಗಿದೆ.
ಈ ಕಂಪೆನಿಯು ಸಾಫ್ಟವೇರ್ ಸೊಲ್ಯೂಶನ್ ಗಳ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡಲು ನಿರ್ಧರಿಸಿದ್ದು ಅದನ್ನು ಹೆಚ್ಚು ಲಾಭದಾಯಕವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ಈ ಮೂಲಕ ಭಾರತೀಯರಿಗೆ ಕ್ಯಾಶ್ ಟ್ರ್ಯಾನ್ಸ್ಯಾಕ್ಶನ್ ಅನ್ನು ಸರಳವಾಗಿಸಲು ಪ್ರಯತ್ನಿಸುತ್ತಿದ್ದಾರೆ.
ನಮಗೆ ತಿಳಿದಿರುವಂತೆ ಈಗಿರುವ ಎಟಿಎಮ್ ಗಳು ಸುಮಾರು 8-10 ವರ್ಷಗಳ ಹಿಂದೆ ಸ್ಥಾಪಿಸಲಪಟ್ಟವು. ಇದರ ಬದಲಾಗಿ ನೂತನ ಸ್ಮಾರ್ಟ್ ಎಟಿಎಮ್ ಮೆಶೀನ್ಗಳು ಬಂದ ನಂತರ, ಹಳೆಯ ಮೆಶೀನ್ಗಳು ಟೈರ್-2 ಮತ್ತು ಟೈರ್-3 ನಗರಗಳಿಗೆ ವರ್ಗಾಯಿಸಲ್ಪಡುತ್ತವೆ.IANS ವರದಿಯ ಅನುಸಾರ ಡಿಮಾನಿಟೈಸೇಶನ್ ನ ಬಳಿಕ ದೇಶದಲ್ಲಿ ಎಟಿಎಮ್ ಮಾರುಕಟ್ಟೆ ಕುಸಿದಿದೆ. ಆದರೆ ಬರುವ ಕ್ವಾರ್ಟರ್ನಲ್ಲಿ ಮಾರುಕಟ್ಟೆ ಸುಧಾರಿಸುವ ಸಾಧ್ಯತೆ ಇದೆ.
NCR ಕಾರ್ಪೊರೇಶನ್ SBIBSE-0.69% ನಿಂದ 334-ಕೋಟಿ ಮೌಲ್ಯದ 7000 ಕ್ಯಾಶ್-ವೆಂಡಿಂಗ್ ಮೆಶೀನ್ಗಳನ್ನು ಇನ್ಸ್ಟಾಲ್ ಮಾಡುವ ಆರ್ಡರ್ ಪಡೆದಿದೆ. ಈಗಿರುವ ಎಟಿಎಮ್ಗಳನ್ನು ಬದಲಿಸಿ ಹೊಸ ಎಟಿಎಮ್ಗಳನ್ನು ಇನ್ಸ್ಟಾಲ್ ಮಾಡುವ ಮೂಲಕ ಮಾರುಕಟ್ಟೆ ಸುಧಾರಿಸಬಹುದು.ಕ್ಯಾಶ್ಲೆಸ್ ಆರ್ಥಿಕ ವ್ಯವಸ್ಥೆಗೆ ಮುಂದುವರೆಯಲು ಸಮಯ ಹಿಡಿಯಲಿದ್ದು ಮಾರುಕಟ್ಟೆ 9% ವಾರ್ಷಿಕ ಬೆಳವಣಿಗೆ ಕಾಣಬಹುದು.


Click it and Unblock the Notifications







